ಶುಭೋದಯ ಓದುಗರೇ. ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದ್ರೆ ಇಂದಿನ (2023 ಏಪ್ರಿಲ್ 3) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೀನ ಮಾಸ, ಮಹಾನಕ್ಷತ್ರ : ಅಶ್ವಿನೀ, ಮಾಸ : ಚೈತ್ರ, ಪಕ್ಷ : ಶುಕ್ಲ, ವಾರ : ಸೋಮ, ತಿಥಿ : ತ್ರಯೋದಶೀ, ನಿತ್ಯನಕ್ಷತ್ರ : ಮಘಾ, ಯೋಗ : ಗಂಡ, ಕರಣ : ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 28 ನಿಮಿಷಕ್ಕೆ, ಸೂರ್ಯಾಸ್ತ 06 ಗಂಟೆ 43 ನಿಮಿಷಕ್ಕೆ. ರಾಹು ಕಾಲ 07:59 ರಿಂದ 09:32ರ ವರೆಗೆ, ಯಮಘಂಡ ಕಾಲ 11:04 ರಿಂದ 12:36ರ ವರೆಗೆ, ಗುಳಿಕ ಕಾಲ 02:08ರಿಂದ 03:40ರ ವರೆಗೆ.
ಮೇಷ: ಆಲೋಚಿಸದೇ ಎಂತಹ ಮಾತುಗಳನ್ನೂ ಆಡಬೇಡಿ. ಸಮಯವನ್ನು ವ್ಯರ್ಥ ಮಾಡದೆ ನಿಮ್ಮ ಕಾರ್ಯ ಸಾಧನೆ ಮಾಡುವುದು ಒಳ್ಳೆಯದು. ಅನಿರೀಕ್ಷಿತವಾಗಿ ಸ್ನೇಹಿತರ ಭೇಟಿ ಇಂದು ನಿಮಗೆ ಆಗಲಿದೆ. ಅನ್ಯರ ಮಾತಿಗೆ ಬಲಿಯಾಗಬೇಡಿ. ಉದ್ಯೋಗಸ್ಥ ಮಹಿಳೆಯರಿಗೆ ವರ್ಗಾವಣೆಯಾಗಲಿದೆ. ಪ್ರೇಮಾಂಕುರವಾಗಲಿದೆ. ನಿಮ್ಮ ಪ್ರೇಮ ದೀರ್ಘವಾಗಿ ಇರುವಂತೆ ನೋಡಿಕೊಳ್ಳಿ. ಮನಸ್ಸಿಗೆ ನೋವನ್ನು ಕೊಡಬೇಡಿ. ದೀರ್ಘಕಾಲ ಸ್ನೇಹವು ಸಂಬಂಧವಾಗುವ ಸಾಧ್ಯತೆ ಇದೆ.
ವೃಷಭ: ಕೈಗೊಂಡ ಕಾರ್ಯಗಳು ಸಫಲವಾಗಲಿವೆ. ಎಂದೋ ಆದ ಕಾರ್ಯವನ್ನು ನೆನೆಸಿಕೊಂಡು ಸಂಕಟಪಡುವಿರಿ. ಸಂಗಾತಿಗಳ ನಡುವೆ ಕಲಹವು ಹೆಚ್ಚಾಗುವುದು. ಇಬ್ಬರೂ ಸ್ವಂತಿಕೆಯನ್ನು ಬಿಟ್ಟಕೊಡಲು ಮನಸ್ಸು ಮಾಡದೇ ಒಣಜಂಭವನ್ನೇ ಮುಂದುವರಿಸುವಿರಿ. ಓಡಾಟದಿಂದ ಆಯಾಸವಾಗಲಿದೆ. ಮಕ್ಕಳ ಜೊತೆ ಕಾಲ ಕಳೆಯುವ ಮನಸ್ಸಿದ್ದರೂ ಸಮಯವಾಗದು. ನಿಮ್ಮ ನಂಬಿಕೆಗೆ ಘಾಸಿಯಾಗುವ ಸಾಧ್ಯತೆ ಇದೆ. ನಿಮ್ಮ ಪೌರುಷವನ್ನು ತೋರಿಸಲು ಹೋಗಬೇಡಿ.
ಮಿಥುನ: ಇಂದು ಹೇಳಿಕೊಳ್ಳಲಾಗದ, ಅನುಭವಿಸಲೂ ಆಗದ ಆಪತ್ತಗಳು ಬರಲಿವೆ. ವಿದ್ಯಾರ್ಥಿಗಳು ಪರೀಕ್ಷೆಯನ್ನು ನಿರಾತಂಕವಾಗಿ ಎದುರಿಸುವ ಧೈರ್ಯವನ್ನು ಮಾಡುವರು. ಕೋಪದಿಂದ ಯಾವ ಕಾರ್ಯ ಸಾಧನೆಗಳು ನಿಮ್ಮಿಂದ ಆಗದು. ತಾಳ್ಮೆಯನ್ನು ಬೆಳೆಸಿಕೊಳ್ಳಬೇಕಿದೆ. ಸ್ವತಂತ್ರವಾಗಿ ಆಲೋಚಿಸಿ ಕಾರ್ಯವನ್ನು ಮಾಡಿ. ಕಛೇರಿಯಲ್ಲಿ ನಿಮಗೆ ಪ್ರಶಂಸೆಯು ಸಿಗಲಿದೆ. ಸ್ನೇಹಿತರಿಂದ ಉಪಕಾರವನ್ನು ಬಯಸಲಿದ್ದೀರಿ. ದೈವಭಕ್ತಿಯು ಹೆಚ್ಚಾಗಲಿದೆ.
ಕರ್ಕ: ಪತಿಯ ನಡವಳಿಯಿಂದ ನಿಮಗೆ ಬೇಸರವಾಗಲಿದೆ. ಯಾರ ಬಳಿಯೂ ಹೇಳದೇ ಸುಮ್ಮನಾಗುವಿರಿ. ವೃತ್ತಿಯಲ್ಲಿ ಆದ ಬದಲಾವಣೆಯಿಂದ ನಿಮ್ಮನ್ನು ಕೈಬಿಡಬಹುದು. ಆರ್ಥಿಕವಾಗಿ ದುರ್ಬಲಾಗಿದ್ದ ನಿಮಗೆ ಇದು ಗಾಯದ ಮೇಲೆ ಬರೆ ಎಳೆದಂತೆ ಆಗಲಿದೆ. ಮಕ್ಕಳು ಕೆಟ್ಟ ಮಾರ್ಗವನ್ನು ಅನುಸರಿಸುವುದನ್ನು ಕಂಡರೂ ಏನನ್ನೂ ಹೇಳಲಾಗದ ಸ್ಥಿತಿಯು ಇರಲಿದೆ. ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಫೈಲ್ ಆಗುವ ಭೀತಿ ಇರಲಿದೆ. ಮನೆಯಲ್ಲಿ ಧೈರ್ಯವನ್ನು ತುಂಬುವ ಕೆಲಸವಾಗಬೇಕಿದೆ.
ಸಿಂಹ: ದೈವದಲ್ಲಿ ಶ್ರದ್ಧೆ- ಭಕ್ತಿಗಳು ಕಡಿಮೆಯಾಗಲಿವೆ. ಬಂಧು ಬಳಗದವರಲ್ಲಿ ತಾಳ್ಮೆಯಿಂದ ವ್ಯವಹರಿಸಿ. ಆಸ್ತಿಯ ವಿಚಾರಕ್ಕಾಗಿ ಅಲೆದಾಟವಿರಲಿದೆ. ಇದರಿಂದ ಸಿಟ್ಟಗೊಳ್ಳಲೂಬಹುದು. ನಿಮ್ಮ ಸಮಸ್ಯೆಯನ್ನು ಹಿರಿಯರ ಜೊತೆ ಅಥವಾ ನಂಬಿಕಸ್ಥರ ಜೊತೆ ಹಂಚಿಕೊಳ್ಳಿ. ಮರಿಹಾರವು ಸಿಕ್ಕೀತು. ಇಲ್ಲವೇ ಸಮಾಧಾನವಾದರೂ ದೊರೆಯುವುದು. ನಿಮ್ಮ ಪಾರದರ್ಶಕ ವ್ಯವಹಾರವು ಇಷ್ಟವಾಗುವುದು. ಅವಿವಾಹಿತರಿಗೆ ವಿವಾಹ ಯೋಗವು ಬರಲಿದೆ.
ಕನ್ಯಾ: ನಿಮಗಿಂದು ಬೇಸರವಾಗುವ ಸಾಧ್ಯತೆ ಇದೆ. ಪೂರ್ವನಿಯೋಜಿತ ವಿಷಯಗಳಿಂದ ಸಫಲತೆಯನ್ನು ಕಾಣಲಿದ್ದೀರಿ. ವಿನಾಕಾರಣ ಚರ್ಚೆಗಳಿಗೆ ಅವಕಾಶವನ್ನು ಕೊಡಬೇಡಿ. ಅದು ಗಂಭೀರವಾಗಿ ಮತ್ತೇನನ್ನೋ ಮಾಡೀತು. ನೂತನ ಮಿತ್ರರ ಭೇಟಿ ಆಗವುದು. ಸೂಕ್ಷ್ಮ ವಿಚಾರಗಳನ್ನು ತಾಳ್ಮೆಯಿಂದ ನಿರ್ವಹಿಸುವುದು ಒಳ್ಳೆಯದು. ಅಪರಿಚಿತರ ಜೊತೆ ಸಲುಗೆ ಬೇಡ. ದಿನಚರ್ಯೆಯನ್ನು ಬದಲಿಸಿಕೊಳ್ಳುವುದು ಒಳ್ಳೆಯದು. ಮಗನಿಗೆ ಕುಟುಂಬ ಜವಾಬ್ದಾರಿಯನ್ನು ಕೊಡಲು ಆಲೋಚಿಸುವಿರಿ.
ತುಲಾ: ಉದ್ಯೋಗದ ಸ್ಥಾನದಲ್ಲಿ ಪ್ರಶಂಸೆಗಳು ಇರಲಿವೆ. ನಿಮಗೆ ಕೃತ್ರಿಮವನ್ನು ಮಾಡಿಸಿದ್ದಾರೆ ಎಂಬ ಭೀತಿ ಪುನಃ ಪುನಃ ಕಾಡಬಹುದು. ಪ್ರತಿ ನಿತ್ಯವೂ ಸಣ್ಣ ರೋಗಗಳು ಕಾಣಿಸಿಕೊಳ್ಳಬಹುದು. ನಿಮಗಿಂದ ಅನಿರೀಕ್ಷಿತ ಸ್ಥಾನಮಾನ, ಗೌರವಗಳು ಸಿಗುವ ಸೂಚನೆ ಸಿಗಲಿದೆ. ಬೇರೆಯವರ ಮೇಲೆ ಉಂಟಾದ ತಪ್ಪು ತಿಳಿವಳಿಕೆಯು ದೂರಾಗುವುದು. ಸಂಗಾತಿಯೊಂದಿಗೆ ಹೆಚ್ಚು ಕಾಲ ಕಳೆಯಲಿದ್ದೀರಿ. ಅತಿಯಾದ ಕಾರ್ಯಗಳಿಂದ ಮಾನಸಿಕವಾಗಿ ಕುಗ್ಗುವಿರಿ. ನಿಮ್ಮ ವಸ್ತುಗಳನ್ನು ವಿದೇಶಕ್ಕೆ ಕಳುಹಿಸಲಿದ್ದೀರಿ.
ವೃಶ್ಚಿಕ: ಮನೆಯಿಂದ ದೂರವಿರುವ ನೀವು ಮನೆಗೆ ಬರಬೇಕೆನಿಸುವುದು. ದುಶ್ಚಟಕ್ಕೆ ಸಿಕ್ಕಿಕೊಳ್ಳುವ ಸಾಧ್ಯತೆ ಇದೆ. ಸಹವಾಸ ಮಾಡುವಾಗ ಎಚ್ಚರವಿರಲಿ. ಆರೋಗ್ಯದ ಸಣ್ಣ ಸಮಸ್ಯೆಯನ್ನೂ ಸಹ ನಿರ್ಲಕ್ಷ್ಯ ಮಾಡಬೇಡಿ. ಭವಿಷ್ಯಕ್ಕೆಂದು ತೆಗೆದಿಟ್ಟ ಸಂಪತ್ತು ಇಂದೇ ಖಾಲಿಯಾಗಬಹುದು. ವೈವಾಹಿಕ ಜೀವನವು ಸುಖ ಶಾಂತಿಯಿಂದ ತುಂಬಿರುತ್ತದೆ. ನೀವಿಂದು ಸಹೋದ್ಯೋಗಿ ಹಾಗೂ ಸಂಬಂಧಿಕರ ಬೆಂಬಲವನ್ನು ಪಡೆದು ಕೆಲಸವನ್ನು ಪೂರ್ಣಗೊಳಿಸುವಿರಿ.
ಧನುಸ್ಸು: ಇಂದು ನಿಮಗೆ ಅಧಿಕ ಖರ್ಚಿನ ದಾರಿಗಳೇ ಕಾಣಲಿವೆ. ಉದ್ಯೋಗದ ನಿಮಿತ್ತ ದೂರದ ಊರಿಗೆ ಪ್ರಯಾಣ ಮಾಡಲಿದ್ದೀರಿ. ಸೋಲುವ ಭೀತಿಯಿಂದ ಕುಗ್ಗುವಿರಿ. ಬಂಧುಗಳಿಗೆ ಮಾತಿನಿಂದ ಬೇಸರ ಮೂಡಿಸುವಿರಿ. ತಲೆನೋವು ನಿಮಗೆ ಬಹಳ ಸಮಸ್ಯೆಯನ್ನು ಕೊಡಲಿದೆ. ಎಲ್ಲವನ್ನೂ ಗುಪ್ತವಾಗಿ ಇಡಲು ಪ್ರಯತ್ನಿಸುವಿರಿ. ಮನೆಯ ವಿರೋಧದ ನಡುವೆಯೂ ನೀವು ಮಾಡಬೇಕಾದ ಕೆಲಸವನ್ನು ಮಾಡುವಿರಿ. ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಳ್ಳುವಿರಿ.
ಮಕರ: ವ್ಯವಹಾರದಲ್ಲಿ ವ್ಯತ್ಯಾಸವಾದ ಕಾರಣ ನೆಮ್ಮದಿ ಇಲ್ಲದೇ ಅದೇ ಚಿಂತಯಲ್ಲಿ ಇರುವಿರಿ. ಸ್ಥಾನದಿಂದ ಚ್ಯುತರಾಗುವ ಭಯವಿರಲಿದೆ. ಆರ್ಥಿಕ ಅಭಿವೃದ್ಧಿಗೆ ಗಟ್ಟಿತನದ ನಿರ್ಧಾರಗಳು ಅವಶ್ಯಕ. ಅಪರೂಪದ ಅತಿಥಿಗಳು ಮನೆಗೆ ಆಗಮಿಸುವರು. ಮನೆಯಲ್ಲಿ ಸಂತಸವಿರಲಿದೆ. ಮಕ್ಕಳು ಇಂದು ಸ್ವತಂತ್ರವಾಗಿ ಇರುವರು. ಬಾಲ್ಯವನ್ನು ನಿಮ್ಮ ಆಪ್ತ ಗೆಳೆಯರ ಜೊತೆ ಹಂಚಿಕೊಳ್ಳುವಿರಿ. ಪ್ರಕೃತಿಯ ಜೊತೆ ಕಾಲವನ್ನು ಕಳೆಯಲು ಮನಸ್ಸಾಗಲಿದೆ. ಹತ್ತಿರದ ಊರಿಗೆ ಪ್ರಯಾಣ ಮಾಡುವಿರಿ.
ಕುಂಭ: ನೀವೇ ಮಾಡಿಕೊಂಡ ತಪ್ಪು ಕೆಲಸವು ಇಂದು ನಿಮಗೆ ಗೊತ್ತಾಗುವುದು. ಆರೋಗ್ಯದ ಕಡೆ ಹೆಚ್ಚಿನ ಗಮನವಹಿಸಿ. ಮನೆಯಲ್ಲಿ ತಂದೆ ಮತ್ತು ಮಗನ ನಡುವೆ ವಾಗ್ವಾದಗಳು ನಡೆಯುವುದು. ಮಕ್ಕಳಿಗೆ ಸರಿಯಾದ ಮಾರ್ಗದರ್ಶನದ ಕೊರತೆಯಿಂದ ತಪ್ಪು ದಾರಿಯಲ್ಲಿ ಸಾಗುವರು. ಅನಿರೀಕ್ಷಿತ ಧನಾಗಮನವಾಗಲಿದೆ. ನಿಮ್ಮ ಆಪ್ತರ ಬಗ್ಗೆ ಇಲ್ಲದ ಸಲ್ಲದ ಮಾತುಗಳು ಬರಲಿದೆ. ಪ್ರಯಾಣದ ವಿಚಾರದಲ್ಲಿ ನಿಮಗೆ ಮಾನಸಿಕ ನೆಮ್ಮದಿ ಸಿಗಲಾರದು. ನಿಮ್ಮ ಜ್ಞಾನವನ್ನು ಗುರುತಿಸುವರು. ತೈಲದೀಪವನ್ನು ಶನೈಶ್ಚರನಿಗೆ ಸಂಕಷ್ಟ ನಿವಾರಣೆಯಾಗಲಿ ಎಂಬ ಸಂಕಲ್ಪದ ಜೊತೆ ಬೆಳಗಿ.
ಮೀನ: ಇಂದು ತಾಯಿಯ ಜೊತೆ ಶತ್ರುತ್ವವನ್ನು ಬೆಳೆಸಿಕೊಳ್ಳುವವರಿದ್ದೀರಿ. ಇದು ಒಳ್ಳೆಯದಲ್ಲ. ಮಕ್ಕಳು ನಿಮ್ಮ ಮಾತನ್ನು ಹೇಳುವುದಿಲ್ಲ ಎಂಬ ಭಾವವಿದೆ. ಇತರರಿಗೆ ಒಳ್ಳೆಯದನ್ನು ಮಾಡುವ ಕಾರ್ಯಕ್ಕೆ ಪ್ರತಿಫಲವು ನಿಮಗೆ ಸಿಗಲಿದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಹಿನ್ನಡೆಯಾಗಲಿದೆ. ಸಾಲಬಾಧೆಯಿಂದ ಮುಕ್ತರಾಗಲು ಬಯಸುವಿರಿ. ಉದ್ಯೋಗವನ್ನು ಬದಲಾಯಿಸಲಿದ್ದೀರಿ. ಮನಸ್ಸು ಬಹಳ ಚಾಂಚಲ್ಯವಾಗಿರಲಿದೆ.
ಲೋಹಿತಶರ್ಮಾ ಇಡುವಾಣಿ – 8762924271 (what’s app only)
Published On - 5:00 am, Mon, 3 April 23