ಶುಭೋದಯ ಓದುಗರೇ. ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದ್ರೆ ಇಂದಿನ (2023 ಏಪ್ರಿಲ್ 7) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೀನ ಮಾಸ, ಮಹಾನಕ್ಷತ್ರ : ಅಶ್ವಿನೀ, ಮಾಸ : ಚೈತ್ರ, ಪಕ್ಷ : ಕೃಷ್ಣ, ವಾರ : ಶುಕ್ರ, ತಿಥಿ : ಪ್ರತಿಪತ್, ನಿತ್ಯನಕ್ಷತ್ರ : ಚಿತ್ರಾ, ಯೋಗ : ಹರ್ಷಣ, ಕರಣ : ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 25 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 43 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 11:02 ರಿಂದ ಮಧ್ಯಾಹ್ನ 12:35ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 03:39 ರಿಂದ 05:12ರ ವರೆಗೆಮ ಗುಳಿಕ ಕಾಲ ಬೆಳಗ್ಗೆ 07:58 ರಿಂದ 09:30ರ ವರೆಗೆ.
ಮೇಷ: ಆರೋಗ್ಯದ ವ್ಯತ್ಯಾಸದಿಂದ ಹಣವು ಬೇಕಾಗಲಿದ್ದು ಸ್ನೇಹಿತರನ್ನು ಕೇಳುವಿರಿ. ನಿಮ್ಮಅನಿವಾರ್ಯತೆಯನ್ನು ಅರಿತು ನಿಮ್ಮವರು ನಿಮಗೆ ಧನಸಹಾಯವನ್ನು ಮಾಡಲಿದ್ದಾರೆ. ಪ್ರೇಮಿಯ ಜೊತೆ ಸಂತೋಷದಿಂದ ಕಾಲವನ್ನು ಕಳೆಯುವಿರಿ. ಎಂದೋ ಮಾಡಿದ ಧನಸಹಾಯವು ಇಂದು ಧನವಾಗಿಯೇ ಹಿಂದುರುಗಿದೆ ಎಂಬುದು ನಿಮ್ಮ ನಂಬಿಕೆಯಾಗಿರಲಿದೆ. ಧಾರ್ಮಿಕ ವಿಚಾರಕ್ಕೆ ಹಣವನ್ನು ನೀಡಲಿದ್ದೀರಿ. ಸುಬ್ರಹ್ಮಣ್ಯನ ಆರಾಧನೆ ಮಾಡಿ ಸಂತೋಷದಿಂದ ಇರುವಿರಿ.
ವೃಷಭ: ಪ್ರೇಮಕ್ಕೆ ಸಂಬಂಧಿಸಿದ ಹೊಸ ದಾರಿಗಳು ತೆಗೆದುಕೊಳ್ಳುವ ಸಾಧ್ಯತೆ ಇದೆ. ಯಾರನ್ನೂ ನಂಬದ ಸ್ಥಿತಿಯಲ್ಲಿ ನೀವಿರುವಿರಿ. ಅನಿರೀಕ್ಷಿತವಾಗಿ ಬಂದ ಹಣವನ್ನು ರಕ್ಷಿಸಿಡಲು ದಾರಿಯನ್ನು ಹುಡುಕುವಿರಿ. ದೇಹಾಲಸ್ಯದಿಂದ ಹೊರಬಂದು ಸಾಧಿಸುವ ಛಲವಿರಬೇಕಾಗಿಬರಬಹುದು. ಉದ್ವೇಗಕ್ಕೆ ಒಳಗಾಗದೇ ತಾಳ್ಮೆಯಿಂದ ಎಲ್ಲವನ್ನೂ ಪಡೆಯಲು ಪ್ರಯತ್ನಿಸಿ. ಸಂಗೀತವನ್ನು ಕೇಳಬೇಕಾದ ಮನಸ್ಸು ಇರಲಿದ್ದು, ಒಂಟಿಯಾಗಿ ಇರುವಿರಿ. ಸಂಪತ್ತನ್ನು ಯಾರಿಗೂ ಕೊಡಲು ಹೋಗಬೇಡಿ.
ಮಿಥುನ: ವಿದೇಶಕ್ಕೆ ಹೋಗಲು ಹುನ್ನಾರ ಮಾಡಿಕೊಂಡಿದ್ದೀರಿ. ನಿಮಗೆ ಅಲ್ಲಿನ ವಾತಾವರಣವು ಸರಿಯಾಗುವುದೇ ಎಂಬ ಮಾಹಿತಿಯನ್ನು ಒಡೆದುಕೊಳ್ಳಿ. ಮನೆಯಲ್ಲಿ ಇರುವ ವಿದ್ಯುಪಕರಣದಿಂದ ನಷ್ಟವಾಗಬಹುದು. ತಮಾಷೆಗೆ ಶುರುವಾದ ಮಾತು ಬಂಧುಗಳ ನಡುವೆ ಕಲಹವನ್ನು ಎಬ್ಬಿಸಬಹುದು. ದೇವಾಲಯದ ಆವರಣದಲ್ಲಿ ಅಥವಾ ಪವಿತ್ರ ಸ್ಥಳಗಳಲ್ಲಿ ಹೆಚ್ಚು ಕಾಲವನ್ನು ಕಳೆಯುವಿರಿ. ಅಧಿಕಶ್ರಮವು ಇಂದು ವ್ಯರ್ಥವಾಗುವುದು. ಪರೀಕ್ಷೆಯ ಕಾಲಕ್ಕೆ ನೀವು ಸಿದ್ಧರಾಗಬೇಕಿದೆ.
ಕಟಕ: ಎಲ್ಲವನ್ನೂ ಕ್ರಮಬದ್ಧಗೊಳಿಸುವ ನಿಮ್ಮ ಆಲೋಚನೆ ಸರಿಯೇ. ಆದರೆ ಅದನ್ನು ಕ್ರಮಬದ್ಧಬಾಗಿ ಹೇಳುವುದೂ ನಿಮ್ಮ ಕೈಯಲ್ಲಿದೆ. ಎಲ್ಲರನ್ನೂ ವಿರೋಧ ಕಟ್ಟಿಕೊಳ್ಳುವ ಕೆಲಸಕ್ಕೆ ಹೋಗುವಿರಿ. ಇಂದು ಜಗತ್ತಿನ ವೈಶಾಲ್ಯ ಅರ್ಥವಾಗಬಹುದು. ಕಾರ್ಯಗಳು ಸಫಲವಾಯಿತೆಂಬ ಸಂತೋಷವಿಂದು ಇರಲಿದೆ. ಹಿರಿಯರನ್ನು ಅಲಕ್ಷ್ಯಿಸದೇ ಪ್ರೀತ್ಯಾದರಗಳಿಂದ ನೋಡಿಕೊಳ್ಳಿ. ನಿಮ್ಮ ಉದ್ದೇಶವನ್ನು ತಪ್ಪಿಸುವ ಸಲಹೆಗಳು ಬರಬಹುದು. ದೇವಿಯ ಸ್ತೋತ್ರವನ್ನು ಮಾಡಿ.
ಸಿಂಹ: ನಿಮ್ಮವರ ಪ್ರೀತಿ ನಿಮಗೆ ಸಿಗಲಿದೆ. ನಿಮಗೆ ಬೇಕಾದುದನ್ನು ನೀಡಬಹುದು. ಕಛೇರಿಯಲ್ಲಿ ಕಾರ್ಯದ ಒತ್ತಡವಿರಲಿದೆ. ಕಳೆದುದುದರ ಬಗ್ಗೆ ನಿಮಗೆ ದುಃಖ ಬೇಡ. ಉದ್ಯೋಗದ ಸ್ಥಳದಿಂದ ನೀವು ಹೊರಗುಳಿಯುವ ಸಾಧ್ಯತೆ ಇದೆ. ಸ್ವತಂತ್ರವಾಗಿ ಬದುಕಲು ಪ್ರಯತ್ನಿಸುವಿರಿ. ಆರೋಗ್ಯದ ಚಿಂತೆಯೊಂದು ನಿಮ್ಮನ್ನು ಕಾಡಬಹುದು. ನಿಮ್ಮ ಬಗ್ಗೆ ಕಾಳಜಿ ಮುಖ್ಯ. ಇಲ್ಲದಿದ್ದರೆ ಅನಾರೋಗ್ಯದಿಂದ ಒದ್ದಾಡುವಿರಿ. ಖರ್ಚನ್ನು ಕಡಿಮೆ ಮಾಡುವ ತಂತ್ರಗಳನ್ನು ಹೆಣೆದರೂ ಹಣನಿಲ್ಲದ ಸ್ಥಿತಿ ಇರಲಿದೆ. ಲಕ್ಷ್ಮೀನಾರಾಯಣ ಹೃದಯ ಸ್ತೋತ್ರವನ್ನು ಪಠಿಸಿ
ಕನ್ಯಾ: ದೇಶವನ್ನು ಸುತ್ತುವ ಬಯಕೆಯು ನಿಮಗೆ ಬರಲಿದೆ. ಸ್ನೇಹಿತರ ಜೊತೆ ಯೋಜನೆಯನ್ನು ರೂಪಿಸುವಿರಿ. ಅವಿದ್ಯಾವಂತರ ಸಹವಾಸದಿಂದ ನಿಮಗೆ ಮುಖಭಂಗವಾಗಲಿದೆ. ಅಪರಿಚಿತವಾದ ದೂರವಾಣಿ ಕರೆಯಿಂದ ಚಿಂತೆ ಆರಂಭವಾಗುವುದು. ಸ್ಪಷ್ಟವಾದ ಗುರಿಯ ಜೊತೆ ಹೆಜ್ಜೆ ಹಾಕಿ. ವಿದ್ಯಾರ್ಥಿಗಳು ಇನ್ನು ಹೆಚ್ಚು ಶ್ರಮವಹಿಸಬೇಕಿದೆ. ನೆನಪಿನ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಧ್ಯಾನವನ್ನೋ ಮೇಧಾಸರಸ್ವತೀ ಹವನವನ್ನೋ ಜಪವನ್ನೋ ಮಾಡಬೇಕಾದೀತು. ಪತ್ನಿಯ ಸಲಹೆಯನ್ನು ಮೀರಲಾರಿರಿ.
ತುಲಾ: ಸಂಪತ್ತನ್ನು ಹೂಡಿಕೆ ಮಾಡಲು ಅನೇಕ ಕಡೆಗಳಿಂದ ದೂರವಾಣಿಗಳು ಬರಬಹುದು. ಯಾವುದನ್ನೂ ಲೆಕ್ಕಕ್ಕೆ ತೆಗೆದುಕೊಳ್ಳದೇ ಸುಮ್ಮನಿರಿ. ನೂತನ ವಸ್ತ್ರಗಳನ್ನು ಧರಿಸಿ ಆನಂದಿಸುವಿರಿ. ಸಂಬಂಧಗಳ ನಡುವೆ ಇರುವ ವೈಮನಸ್ಯವು ದೂರವಾಗುವುದು. ನೆಮ್ಮದಿಯ ನೆಟ್ಟುಸಿರನ್ನು ನೀವು ಬಿಡುವಿರಿ. ಸಂಗಾತಿಯ ಒತ್ತಾಯಕ್ಕೆ ಮಣಿದು ನೀವಿಂದು ವಾಹನವನ್ನು ಖರೀದಿಸುವಿರಿ. ನೂತನವಾದ ಸಂಬಂಧಗಳು ಆಗಲಿವೆ. ಮನೆಯಲ್ಲಿ ವಿವಾಹನಿಶ್ಚಯಕ್ಕೆ ಬಹಳ ಕಾತರದಿಂದ ಕಾಯುತ್ತಿರುವಿರಿ.
ವೃಶ್ಚಿಕ: ನಿಮಗೆ ಇಂದು ಕೆಲವು ಸೂಚನೆಗಲಕು ನಿಮ್ಮ ಕಾರ್ಯಕ್ಕೆ ಅನುಕೂಲತೆಗಳನ್ನು ಸೂಚಿಸಬಹುದು. ಅದನ್ನು ಗಮನಿಸಿಕೊಂಡು ಕಾರ್ಯಪ್ರವೃತ್ತರಾಗಿ. ಆರೋಗ್ಯವಾಗಿದೆ ಎಂದುಕೊಂಡ ಖಾಯಿಲೆಯು ಇಂದು ಪುನಃ ಕಾಣಿಸಿಕೊಳ್ಳಲಿದೆ. ವೈದ್ಯರ ಭೇಟಿ ಮಾಡಿ ಬೇಕಾದ ಔಷಧೋಪಚಾರಗಳನ್ನು ಮಾಡುವುದು ಒಳ್ಳೆಯದು. ನಿದ್ರಾಭಂಗವಾಗಿ ಮನಸ್ಸು ಜಾಡ್ಯವಾಗಲಿದೆ. ಆರ್ಥಿಕಸ್ಥಿತಿಯು ತಕ್ಕಮಟ್ಟಿಗೆ ಸುಧಾರಿಸಲಿದೆ. ಬೇರೆ ಕೆಲಸಕ್ಕೆ ಅರ್ಜಿ ಹಾಕಿದ್ದರೆವಿಂದು ಪೋನ್ ಬರಲಿದೆ. ಎದ್ದು ಶುಚಿಯಾಗಿ ಗಣಪತಿಗೆ ದೂರ್ವಾಪತ್ರವನ್ನು ನೀಡಿ.
ಧನುಸ್ಸು: ಉದ್ಯೋಗದಲ್ಲಿ ಒತ್ತಡವಿರಲಿದೆ ಎಂದು ಇಂದು ನೀವು ಜವಾಬ್ದಾರಿಗಳನ್ನು ತೆಗೆದುಕೊಳ್ಳಲು ಬಯಸುವುದಿಲ್ಲ. ವ್ಯವಹಾರದಲ್ಲಿ ಮೋಸಹೋಗುವಿರಿ. ನಿಮ್ಮ ತಮಾಷೆಯಿಂದ ಕೆಲವರು ನೊಂದುಕೊಳ್ಳುವ ಸಾಧ್ಯತೆಇದೆ. ಸತ್ಯವನ್ನು ನೊವಾಗದ ರೀತಿಯಲ್ಲಿ ಮನವರಿಕೆಮಾಡಿ. ಯಾರದೋ ಮಾತು ನಿಮಗೆ ಬೇಸರವನ್ನು ತರಿಸಬಹುದು. ಒಂದೇ ವಿಷಯವನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳಲು ಹೋಗಿ ಮನಸ್ಸನ್ನು ಗಾಯ ಮಾಡಿಕೊಳ್ಳಬೇಡಿ. ಸಂಗಾತಿಯ ನಡುವೆ ಒಂದೇ ವಿಷಯವನ್ನು ಮತ್ತೆ ಹೇಳುವುದರಿಂದ ಕಲಹವಾಗಬಹುದು.
ಮಕರ: ಕೆಲಸದಲ್ಲಿ ಆಸಕ್ತಿಯನ್ನು ಕಳೆದುಕೊಂಡು ಜಾಡ್ಯರಾಗುವಿರಿ. ಅತಿಯಾದ ಪಾನದಿಂದ ಇಂದು ಹೊರಬರುವುದು ಕಷ್ಟವಾದೀತು. ನೀವು ಉತ್ತಮ ಸಮಯವನ್ನು ಹೊಂದುವ ನಿಮ್ಮ ಸಂಗಾತಿಯನ್ನು ನೀವು ಎಷ್ಟು ಗೌರವಿಸುತ್ತೀರಿ ಮತ್ತು ಅವರ ಬಗ್ಗೆ ಚಿಂತಿಸುವುದನ್ನು ತೋರಿಸಲು ನಿಮಗೆ ಸಾಧ್ಯವಾಗುತ್ತದೆ. ಆರಾಮಾಗಿ ಬದುಕಬೇಕೆಂದು ಸಂಪತ್ತನ್ನು ಖಾಲಿ ಮಾಡಿಕೊಳ್ಳುವಿರಿ. ನಿಮ್ಮ ವಿರೋಧಿಗಳು ನಿಮ್ಮನ್ನು ಎದುರಿಸಲು ಸಿದ್ಧರಿರುವುದಿಲ್ಲ. ನಿಮ್ಮ ಸುತ್ತಲಿನವರ ಬಗ್ಗೆ ಗಮನವಿರಿಲಿ. ಒಂದು ಕಣ್ಣಿಟ್ಟಿರಿ.
ಕುಂಭ: ಇಂದು ಇನ್ನೊಬ್ಬರ ವಾಹನದಲ್ಲಿ ಓಡಾಡಬೇಕಾದ ಸ್ಥಿತಿ ಬರಲಿದೆ. ಅಲ್ಲಿ ಅನಾರೋಗ್ಯವು ಕಾಡಲಿದೆ. ಹಾಗಾಗಿ ಹೊಸವಾಹನವನ್ನು ಖರೀದಿಸುವ ಆಲೋಚಯನ್ನು ಮಾಡುವಿರಿ. ನೀವು ಇಚ್ಛೆ ಬಂದಂತೆ ಹಣವನ್ನು ಖರ್ಚು ಮಾಡಲು ಸಾಧ್ಯವಾಗುತ್ತದೆ. ನಿಮ್ಮ ಪ್ರಯತ್ನದಲ್ಲಿ ಸಾಕಷ್ಟು ಪ್ರಯತ್ನಗಳನ್ನು ಮಾಡಿದ ನಂತರ ನೀವು ಯಶಸ್ಸನ್ನು ಸಾಧಿಸುವಿರಿ. ನಿಮಗೆ ಸ್ಥಿರಾಸ್ತಿಗಳ ಮೇಲೆ ಅರಿತಾದ ವ್ಯಾಮೋಹ ಇರಲಿದೆ. ಗೌರವವು ಸಿಗುತ್ತಿಲ್ಲ ಎಂಬ ಆತಂಕವೂ ಇದೆ. ಹೊಸ ದಾರಿಗಳು ನಿಮಗೆ ಜೀವನಕ್ಕೆ ಕಾಣಿಸಿಕೊಳ್ಳಲಿವೆ. ಶಿವಾರಾಧನೆಯು ನಿಮಗೆ ಬಲವನ್ನು ಕೊಡುವುದು.
ಮೀನ: ಸ್ವಂತ ಉದ್ಯೋಗವನ್ನು ಇಟ್ಟುಕೊಂಡವರಿಗೆ ಲಾಭವಾಗಲಿದೆ. ಅದ್ಭುತ ಸಮಯಗಳು ಸಮೀಪಿಸುತ್ತಿದ್ದಂತೆ ನಿಮ್ಮ ಕೆಲಸದ ಹೊರೆ ಏರಲು ಪ್ರಾರಂಭವಾಗುತ್ತದೆ. ಮೋಜಿನ ಚಟುವಟಿಕೆಗಳಿಗೆ ಗಣನೀಯವಾಗಿ ಕಡಿಮೆ ಉಚಿತ ಸಮಯವನ್ನು ನೀಡುತ್ತದೆ. ವ್ಯವಹಾರಕ್ಕೆ ಸಂಬಂಧಿಸಿದಂತೆ ಕೆಲವು ಅನುಚಿತ ಮಾತುಗಳು ಕೇಳಿಬರಬಹುದು. ತಾಳ್ಮೆಯಿಂದ ಉತ್ತರಿಸಿ. ಅರ್ಜಿದಾರರು ಮುಂದಿನ ಸುತ್ತಿನ ಸಂದರ್ಶನಕ್ಕೂ ಹೋಗಬಹುದು. ನಿಮ್ಮ ಸಂಪಾದನೆಯು ನ್ಯಾಯಮಾರ್ಗದಲ್ಲಿ ಇರಲಿ.
-ಲೋಹಿತಶರ್ಮಾ ಇಡುವಾಣಿ