ದಿನ, ಸಮಯ ಎಲ್ಲರಿಗೂ ಒಂದೇ ಆದ್ರೂ ಜೀವನದಲ್ಲಿ ನಡೆಯುವ ಘಟನೆಗಳು ವಿಭಿನ್ನ. ಇದಕ್ಕೆ ಕಾರಣ ನಮ್ಮ ಜನ್ಮ ರಾಶಿಗಳಲ್ಲಾಗುವ ಬದಲಾವಣೆ. ನಮ್ಮ ಆರೋಗ್ಯ, ಯಶಸ್ಸು, ಸಂತೋಷ, ನೆಮ್ಮದಿ ಎಲ್ಲವೂ ನಮ್ಮ ರಾಶಿಗಳ ಮೇಲೆ ಅವಲಂಬಿತವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಕೆಲವರು ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗಾದರೆ ಇಂದಿನ (2023 ಏಪ್ರಿಲ್ 07) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭ ಎಂದು ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೀನ ಮಾಸ, ಮಹಾನಕ್ಷತ್ರ : ಅಶ್ವಿನೀ, ಮಾಸ : ಚೈತ್ರ, ಪಕ್ಷ : ಕೃಷ್ಣ, ವಾರ : ಶುಕ್ರ, ತಿಥಿ : ಪ್ರತಿಪತ್, ನಿತ್ಯನಕ್ಷತ್ರ : ಚಿತ್ರಾ, ಯೋಗ : ಹರ್ಷಣ, ಕರಣ : ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 25 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 43 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 11:02 ರಿಂದ ಮಧ್ಯಾಹ್ನ 12:35ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 03:39 ರಿಂದ 05:12ರ ವರೆಗೆಮ ಗುಳಿಕ ಕಾಲ ಬೆಳಗ್ಗೆ 07:58 ರಿಂದ 09:30ರ ವರೆಗೆ.
ಸಿಂಹ: ನಿಮ್ಮವರ ಪ್ರೀತಿ ನಿಮಗೆ ಸಿಗಲಿದೆ. ನಿಮಗೆ ಬೇಕಾದುದನ್ನು ನೀಡಬಹುದು. ಕಛೇರಿಯಲ್ಲಿ ಕಾರ್ಯದ ಒತ್ತಡವಿರಲಿದೆ. ಕಳೆದುದುದರ ಬಗ್ಗೆ ನಿಮಗೆ ದುಃಖ ಬೇಡ. ಉದ್ಯೋಗದ ಸ್ಥಳದಿಂದ ನೀವು ಹೊರಗುಳಿಯುವ ಸಾಧ್ಯತೆ ಇದೆ. ಸ್ವತಂತ್ರವಾಗಿ ಬದುಕಲು ಪ್ರಯತ್ನಿಸುವಿರಿ. ಆರೋಗ್ಯದ ಚಿಂತೆಯೊಂದು ನಿಮ್ಮನ್ನು ಕಾಡಬಹುದು. ನಿಮ್ಮ ಬಗ್ಗೆ ಕಾಳಜಿ ಮುಖ್ಯ. ಇಲ್ಲದಿದ್ದರೆ ಅನಾರೋಗ್ಯದಿಂದ ಒದ್ದಾಡುವಿರಿ. ಖರ್ಚನ್ನು ಕಡಿಮೆ ಮಾಡುವ ತಂತ್ರಗಳನ್ನು ಹೆಣೆದರೂ ಹಣನಿಲ್ಲದ ಸ್ಥಿತಿ ಇರಲಿದೆ. ಲಕ್ಷ್ಮೀನಾರಾಯಣ ಹೃದಯ ಸ್ತೋತ್ರವನ್ನು ಪಠಿಸಿ
ಕನ್ಯಾ: ದೇಶವನ್ನು ಸುತ್ತುವ ಬಯಕೆಯು ನಿಮಗೆ ಬರಲಿದೆ. ಸ್ನೇಹಿತರ ಜೊತೆ ಯೋಜನೆಯನ್ನು ರೂಪಿಸುವಿರಿ. ಅವಿದ್ಯಾವಂತರ ಸಹವಾಸದಿಂದ ನಿಮಗೆ ಮುಖಭಂಗವಾಗಲಿದೆ. ಅಪರಿಚಿತವಾದ ದೂರವಾಣಿ ಕರೆಯಿಂದ ಚಿಂತೆ ಆರಂಭವಾಗುವುದು. ಸ್ಪಷ್ಟವಾದ ಗುರಿಯ ಜೊತೆ ಹೆಜ್ಜೆ ಹಾಕಿ. ವಿದ್ಯಾರ್ಥಿಗಳು ಇನ್ನು ಹೆಚ್ಚು ಶ್ರಮವಹಿಸಬೇಕಿದೆ. ನೆನಪಿನ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಧ್ಯಾನವನ್ನೋ ಮೇಧಾಸರಸ್ವತೀ ಹವನವನ್ನೋ ಜಪವನ್ನೋ ಮಾಡಬೇಕಾದೀತು. ಪತ್ನಿಯ ಸಲಹೆಯನ್ನು ಮೀರಲಾರಿರಿ.
ತುಲಾ: ಸಂಪತ್ತನ್ನು ಹೂಡಕೆ ಮಾಡಲು ಅನೇಕ ಕಡೆಗಳಿಂದ ದೂರವಾಣಿಗಳು ಬರಬಹುದು. ಯಾವುದನ್ನೂ ಲೆಕ್ಕಕ್ಕೆ ತೆಗೆದುಕೊಳ್ಳದೇ ಸುಮ್ಮನಿರಿ. ನೂತನ ವಸ್ತ್ರಗಳನ್ನು ಧರಿಸಿ ಆನಂದಿಸುವಿರಿ. ಸಂಬಂಧಗಳ ನಡುವೆ ಇರುವ ವೈಮನಸ್ಯವು ದೂರವಾಗುವುದು. ನೆಮ್ಮದಿಯ ನೆಟ್ಟುಸಿರನ್ನು ನೀವು ಬಿಡುವಿರಿ. ಸಂಗಾತಿಯ ಒತ್ತಾಯಕ್ಕೆ ಮಣಿದು ನೀವಿಂದು ವಾಹನವನ್ನು ಖರೀದಿಸುವಿರಿ. ನೂತನವಾದ ಸಂಬಂಧಗಳು ಆಗಲಿವೆ. ಮನೆಯಲ್ಲಿ ವಿವಾಹನಿಶ್ಚಯಕ್ಕೆ ಬಹಳ ಕಾತರದಿಂದ ಕಾಯುತ್ತಿರುವಿರಿ.
ವೃಶ್ಚಿಕ: ನಿಮಗೆ ಇಂದು ಕೆಲವು ಸೂಚನೆಗಲಕು ನಿಮ್ಮ ಕಾರ್ಯಕ್ಕೆ ಅನುಕೂಲತೆಗಳನ್ನು ಸೂಚಿಸಬಹುದು. ಅದನ್ನು ಗಮನಿಸಿಕೊಂಡು ಕಾರ್ಯಪ್ರವೃತ್ತರಾಗಿ. ಆರೋಗ್ಯವಾಗಿದೆ ಎಂದುಕೊಂಡ ಖಾಯಿಲೆಯು ಇಂದು ಪುನಃ ಕಾಣಿಸಿಕೊಳ್ಳಲಿದೆ. ವೈದ್ಯರ ಭೇಟಿ ಮಾಡಿ ಬೇಕಾದ ಔಷಧೋಪಚಾರಗಳನ್ನು ಮಾಡುವುದು ಒಳ್ಳೆಯದು. ನಿದ್ರಾಭಂಗವಾಗಿ ಮನಸ್ಸು ಜಾಡ್ಯವಾಗಲಿದೆ. ಆರ್ಥಿಕಸ್ಥಿತಿಯು ತಕ್ಕಮಟ್ಟಿಗೆ ಸುಧಾರಿಸಲಿದೆ. ಬೇರೆ ಕೆಲಸಕ್ಕೆ ಅರ್ಜಿ ಹಾಕಿದ್ದರೆವಿಂದು ಪೋನ್ ಬರಲಿದೆ. ಎದ್ದು ಶುಚಿಯಾಗಿ ಗಣಪತಿಗೆ ದೂರ್ವಾಪತ್ರವನ್ನು ನೀಡಿ.
-ಲೋಹಿತಶರ್ಮಾ ಇಡುವಾಣಿ