ಧನಿಷ್ಠಾ ನಕ್ಷತ್ರದಲ್ಲಿ ಸಂಚರಿಸುವ ಸೂರ್ಯನಿಂದ ಯಾವ ರಾಶಿಗಳ ಅನಿಷ್ಟ ದೂರ?
ಸೂರ್ಯನು ಫೆಬ್ರವರಿ 6 ರಿಂದ 19 ರವರೆಗೆ ಧನಿಷ್ಠಾ ನಕ್ಷತ್ರದಲ್ಲಿ ಸಂಚರಿಸಲಿದ್ದಾನೆ. ಈ ಸಂಚಾರವು ರಾಶಿಗಳ ಮೇಲೆ ಶುಭ, ಅಶುಭ ಮತ್ತು ಮಿಶ್ರ ಫಲಗಳನ್ನು ನೀಡಲಿದೆ. ಕೆಲವು ರಾಶಿಗಳಿಗೆ ವೃತ್ತಿ, ಆರ್ಥಿಕ ಮತ್ತು ಆತ್ಮವಿಶ್ವಾಸದಲ್ಲಿ ಪ್ರಗತಿ ಸಿಗಲಿದೆ. ಇನ್ನು ಕೆಲವು ರಾಶಿಗಳು ಆರೋಗ್ಯ ಮತ್ತು ಹಣಕಾಸಿನ ವಿಷಯದಲ್ಲಿ ಎಚ್ಚರಿಕೆ ವಹಿಸಬೇಕು. ಅಶುಭ ಫಲಗಳನ್ನು ತಗ್ಗಿಸಲು ಸೂರ್ಯಾಷ್ಟಕ ಪಠಣ ಮತ್ತು ಶಿವನಿಗೆ ಜಲಾಭಿಷೇಕ ಸಹಕಾರಿ.

ಸೂರ್ಯನು ಎಲ್ಲ ಗ್ರಹಗಳಿಗೂ ಮೂಲ. ಎಲ್ಲ ಬೆಳಕಿಗೂ ಮೂಲ. ಅಷ್ಟೇ ಅಲ್ಲ ಮನುಷ್ಯನಿಗೆ ಆತ್ಮಬಲ, ಆತ್ಮವಿಶ್ವಾಸ ಚೆನ್ನಾಗಿರಬೇಕಾದರೆ ಸೂರ್ಯನ ಅನುಗ್ರಹವಿಲ್ಲದೇ ಸಾಧ್ಯವಾಗದು. ಯಾರ ಬಳಿ ಎಂತಹ ಸಂಪತ್ತಿದ್ದರೂ ಅದನ್ನು ನಿರ್ವಹಣೆ ಮಾಡುವ ಆತ್ಮವಿಶ್ವಾಸ ಅವರಲ್ಲಿ ಇಲ್ಲವಾದರೆ ಪ್ರಯೋಜನವಾಗದು. ಹಾಗಾಗಿ ಸೂರ್ಯ ಗತಿ ಮುಖ್ಯ.
ಸೂರ್ಯನು ಮಕರ ರಾಶಿಯ ಧನಿಷ್ಠ ನಕ್ಷತ್ರದಲ್ಲಿ ಫೆಬ್ರವರಿ ಆರರಿಂದ ಹತ್ತೊಂಬತ್ತರವರೆಗೆ ಸಂಚರಿಸುವನು. ಮಂಗಳನ ಅಧಿಪತ್ಯವಿರುವ ಈ ಧನಿಷ್ಠಾ ನಕ್ಷತ್ರವು ಸೂರ್ಯನ ತೇಜಸ್ಸಿನೊಂದಿಗೆ ಸೇರಿ ಮಿಶ್ರ ಫಲಗಳನ್ನು ನೀಡುತ್ತದೆ. ವಿವಿಧ ರಾಶಿಗಳ ಮೇಲೆ ಇದರ ಪ್ರಭಾವ ಹೀಗಿದೆ:
ಶುಭ ಫಲ ರಾಶಿಗಳು
ಮೇಷ:
ವೃತ್ತಿಜೀವನದಲ್ಲಿ ಅತ್ಯುನ್ನತ ಸ್ಥಾನ ಲಭಿಸಲಿದೆ. ಸರ್ಕಾರಿ ಕೆಲಸಗಳಲ್ಲಿ ಲಾಭ ಮತ್ತು ಸಮಾಜದಲ್ಲಿ ಗೌರವ ಹೆಚ್ಚುತ್ತದೆ.
ಸಿಂಹ ರಾಶಿ :
ಶತ್ರುಗಳ ಮೇಲೆ ಜಯ ಸಿಗಲಿದೆ. ಹಳೆಯ ಸಾಲಗಳಿಂದ ಮುಕ್ತಿ ದೊರೆತು, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಕಾಣುವಿರಿ.
ವೃಶ್ಚಿಕ ರಾಶಿ :
ಆತ್ಮವಿಶ್ವಾಸ ಮತ್ತು ಧೈರ್ಯ ಹೆಚ್ಚಾಗುತ್ತದೆ. ಸಣ್ಣ ಪ್ರವಾಸಗಳಿಂದ ವ್ಯಾಪಾರದಲ್ಲಿ ಹೆಚ್ಚಿನ ಲಾಭವನ್ನು ನಿರೀಕ್ಷಿಸಬಹುದು.
ಧನು ರಾಶಿ :
ಭಾಗ್ಯೋದಯದ ಕಾಲ. ಬಾಕಿ ಇದ್ದ ಹಣ ಕೈಸೇರಲಿದೆ ಮತ್ತು ಕುಟುಂಬದಲ್ಲಿ ಆರ್ಥಿಕ ಸ್ಥಿರತೆ ಕಂಡುಬರುತ್ತದೆ. ಅಶುಭ/ಎಚ್ಚರಿಕೆ ವಹಿಸಬೇಕಾದ ರಾಶಿಗಳು
ಮಿಥುನ ರಾಶಿ :
ಅಷ್ಟಮ ಸ್ಥಾನದ ಪ್ರಭಾವದಿಂದ ಆರೋಗ್ಯದಲ್ಲಿ ಏರುಪೇರಾಗಬಹುದು. ವಾಹನ ಚಾಲನೆ ಮಾಡುವಾಗ ಮತ್ತು ಹಣಕಾಸಿನ ವಿಚಾರದಲ್ಲಿ ಜಾಗರೂಕತೆ ಅಗತ್ಯ.
ಕರ್ಕಾಟಕ ರಾಶಿ :
ವೈವಾಹಿಕ ಜೀವನದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಮೂಡಬಹುದು. ಪಾಲುದಾರಿಕೆ ವ್ಯವಹಾರದಲ್ಲಿ ಪಾರದರ್ಶಕತೆ ಇರಲಿ.
ಕುಂಭ ರಾಶಿ :
ಹನ್ನೆರಡನೇ ಮನೆಯಲ್ಲಿ ಸೂರ್ಯನಿರುವುದರಿಂದ ಅನಗತ್ಯ ಖರ್ಚುಗಳು ಹೆಚ್ಚಾಗಲಿವೆ. ಕಣ್ಣಿನ ಆರೋಗ್ಯದ ಬಗ್ಗೆ ಗಮನಹರಿಸಿ.
ತುಲಾ ರಾಶಿ :
ತಾಯಿಯ ಆರೋಗ್ಯದಲ್ಲಿ ಏರುಪೇರಾಗುವ ಸಂಭವವಿದೆ. ಆಸ್ತಿ ವಿಚಾರದಲ್ಲಿ ಗಡಿಬಿಡಿಯ ನಿರ್ಧಾರಗಳು ಬೇಡ.
ಇದನ್ನೂ ಓದಿ: ವಿರುದ್ಧ ದಿಕ್ಕಿನಲ್ಲಿ ಸಂಚರಿಸುವ ಕೇತುವಿನಿಂದ ಯಾರಿಗೆ ಯಾವ ಫಲ?
ಮಿಶ್ರ ಫಲ ರಾಶಿಗಳು
ವೃಷಭ, ಕನ್ಯಾ, ಮಕರ ಮತ್ತು ಮೀನ ರಾಶಿಯವರಿಗೆ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ಹೊಸ ಜವಾಬ್ದಾರಿಗಳು ಬಂದರೂ ಸರಿಯಾದ ಯೋಜನೆಯಿಂದ ಯಶಸ್ಸು ಗಳಿಸಬಹುದು.
ದೋಷ ಪರಿಹಾರಕ್ಕೆ ಈ ಅವಧಿಯಲ್ಲಿ ಪ್ರತಿ ದಿನ ಸೂರ್ಯಾಷ್ಟಕ ಪಠಿಸುವುದು ಅಥವಾ ಶಿವನಿಗೆ ಜಲಾಭಿಷೇಕ ಮಾಡುವುದು ಅಥವಾ ಮಾಡಿಸುವುದು ಅಶುಭ ಫಲಗಳನ್ನು ತಗ್ಗಿಸಲು ಸಹಕಾರಿ ಆಗುವುದು.
– ಲೋಹಿತ ಹೆಬ್ಬಾರ್
ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
