ತುಮಕೂರು-ಬೆಂಗಳೂರು ಮೆಟ್ರೋ ಸಂಪರ್ಕ ಯೋಜನೆ: ಕೇಂದ್ರದ ಅನುಮತಿಗೆ ರಾಜ್ಯ ಸರ್ಕಾರ ಪತ್ರ!
ತುಮಕೂರಿನ ದಶಕಗಳ ಕನಸಾದ ಮೆಟ್ರೋ ಯೋಜನೆ ನನಸಾಗುವ ಹೊಸ್ತಿಲಲ್ಲಿದ್ದು, ಡಿಪಿಆರ್ ಪೂರ್ಣಗೊಂಡ ಬೆನ್ನಲ್ಲೇ ರಾಷ್ಟ್ರೀಯ ಹೆದ್ದಾರಿ ಬಳಕೆಯ ಅನುಮತಿಗೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಪತ್ರ ಬರೆದಿದೆ. ಪಿಪಿಪಿ ಮಾದರಿಯಲ್ಲಿ ನಿರ್ಮಾಣವಾಗಲಿರುವ ಈ ಯೋಜನೆಗೆ ದೇಶ-ವಿದೇಶಿ ಕಂಪನಿಗಳು ಹೂಡಿಕೆಗೆ ಆಸಕ್ತಿ ತೋರಿಸಿದ್ದು, ನೆಲಮಂಗಲ, ದಾಬಸ್‌ಪೇಟೆ ಮಾರ್ಗದಲ್ಲಿ ವಾಣಿಜ್ಯ ಚಟುವಟಿಕೆಗೆ ಅವಕಾಶ ನೀಡಲಾಗುತ್ತದೆ.

ಮುಖ್ಯಾಂಶಗಳು
- ತುಮಕೂರು ಮೆಟ್ರೋ ಯೋಜನೆಗೆ ರಾಷ್ಟ್ರೀಯ ಹೆದ್ದಾರಿ ಬಳಕೆಗೆ ಕೇಂದ್ರಕ್ಕೆ ಪತ್ರ.
- ಯೋಜನೆಗೆ ಅಗತ್ಯವಿರುವ ಸಂಪೂರ್ಣ ಡಿಪಿಆರ್ (DPR) ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣ.
- ಪಿಪಿಪಿ (PPP) ಮಾದರಿಯಲ್ಲಿ ಜಾರಿಯಾಗಲಿದ್ದು ದೇಶ-ವಿದೇಶಿ ಕಂಪನಿಗಳಿಂದ ಹೂಡಿಕೆಗೆ ಆಸಕ್ತಿ.
ತುಮಕೂರು, ಆಗಸ್ಟ್ 16: ಜಿಲ್ಲೆಯ ನಿವಾಸಿಗಳ ದಶಕಗಳ ಕನಸಾದ ‘ತುಮಕೂರು-ಬೆಂಗಳೂರು ಮೆಟ್ರೋ ಸಂಪರ್ಕ ಯೋಜನೆ’ ನನಸಾಗುವ ಹೊಸ್ತಿಲಿಗೆ ಬಂದು ತಲುಪಿದೆ. ಯೋಜನೆಯ ಯೋಜನಾ ವರದಿ (DPR) ಪೂರ್ಣಗೊಂಡ ಬೆನ್ನಲ್ಲೇ, ಮುಂದಿನ ಹಂತದ ಪ್ರಕ್ರಿಯೆಗಳಿಗಾಗಿ ರಾಜ್ಯ ಸರ್ಕಾರವು ಡಿಪಿಆರ್ ಸಹಿತ ಕೇಂದ್ರ ಸರ್ಕಾರಕ್ಕೆ ಅಧಿಕೃತ ಪತ್ರ ಬರೆದಿದೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಮೆಟ್ರೋ ಮಾರ್ಗ
ಪ್ರಸ್ತಾವಿತ ತುಮಕೂರು ಮೆಟ್ರೋ ಮಾರ್ಗವನ್ನು ರಾಷ್ಟ್ರೀಯ ಹೆದ್ದಾರಿಯ ಮೀಡಿಯನ್ (ಮಧ್ಯಭಾಗ) ಹಾಗೂ ಮೇಲ್ಭಾಗದಲ್ಲಿ ನಿರ್ಮಿಸಲು ಯೋಜಿಸಲಾಗಿದೆ. ಹೆದ್ದಾರಿ ಮೇಲ್ಭಾಗದಲ್ಲಿ ಮೆಟ್ರೋ ಪಿಲ್ಲರ್‌ಗಳನ್ನು ನಿರ್ಮಿಸಲು ಭಾರತ ಸರ್ಕಾರದ (ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ) ಅನುಮತಿ ಅಗತ್ಯವಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ಕ್ರಮ ಕೈಗೊಂಡಿದೆ.
ಡಿಸಿಎಂ ಪರಮೇಶ್ವರ್ ಹೇಳಿದ್ದೇನು?
ಪಿಪಿಪಿ ಮಾಡೆಲ್; ಹೂಡಿಕೆದಾರರ ಆಸಕ್ತಿ
ವಿಶೇಷವೆಂದರೆ, ಈ ಯೋಜನೆಯು ಕೇಂದ್ರ ಸರ್ಕಾರದ ಹಣಕಾಸಿನ ನೆರವನ್ನು ಅವಲಂಬಿಸದೇ ಸಂಪೂರ್ಣವಾಗಿ ಪಿಪಿಪಿ (Public-Private Partnership) ಮಾದರಿಯಲ್ಲಿ ಕೈಗೆತ್ತಿಕೊಳ್ಳಲಾಗುತ್ತಿದೆ. ಯೋಜನೆಗೆ ಹೂಡಿಕೆ ಮಾಡುವ ಕಂಪನಿಗಳಿಗೆ ಮೆಟ್ರೋ ನಿಲ್ದಾಣಗಳು ಹಾಗೂ ಹೆದ್ದಾರಿ ಪಕ್ಕದಲ್ಲಿ ವಾಣಿಜ್ಯ (Commercial) ಚಟುವಟಿಕೆಗಳನ್ನು ನಡೆಸಲು ಜಮೀನು ನೀಡಲು ನಿರ್ಧರಿಸಲಾಗಿದೆ. ಹೂಡಿಕೆದಾರರು ನೆಲಮಂಗಲ, ದಾಬಸ್‌ಪೇಟೆ ಹಾಗೂ ತುಮಕೂರು ಭಾಗಗಳಲ್ಲಿ ವಾಣಿಜ್ಯ ಚಟುವಟಿಕೆಗಳ ಮೂಲಕ ಆದಾಯ ಕಂಡುಕೊಳ್ಳಲು ಯೋಜನೆ ರೂಪಿಸಲಾಗಿದೆ.
ಈಗಾಗಲೇ ದೇಶ ಮತ್ತು ವಿದೇಶದ ಪ್ರಮುಖ ಕಂಪನಿಗಳು ಈ ಯೋಜನೆಯಲ್ಲಿ ಹೂಡಿಕೆ ಮಾಡಲು ತೀವ್ರ ಆಸಕ್ತಿ ತೋರಿಸಿವೆ. ಕೇಂದ್ರ ಸರ್ಕಾರದಿಂದ ರಾಷ್ಟ್ರೀಯ ಹೆದ್ದಾರಿ ಬಳಕೆಯ ಅನುಮತಿ ಸಿಗುತ್ತಿದ್ದಂತೆಯೇ, ಸರ್ಕಾರ ಸೂಕ್ತ ಪರಿಶೀಲನೆ ನಡೆಸಿ ಮುಂದಿನ ಹಂತದ ಟೆಂಡರ್ ಪ್ರಕ್ರಿಯೆಗೆ ಚಾಲನೆ ನೀಡಲಿದೆ. ಟೆಂಡರ್ ಪ್ರಕ್ರಿಯೆ ಮುಗಿದ ತಕ್ಷಣವೇ ಸ್ಥಳದಲ್ಲಿ ಕಾಮಗಾರಿ ಆರಂಭವಾಗಲಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




