Daily Horoscope: ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರ ಇಂದಿನ ರಾಶಿ ಭವಿಷ್ಯ
ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಏಪ್ರಿಲ್ 12) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.
ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಏಪ್ರಿಲ್ 12 ಬುಧವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೀನ ಮಾಸ, ಮಹಾನಕ್ಷತ್ರ : ರೇವತೀ, ಮಾಸ : ಚೈತ್ರ, ಪಕ್ಷ : ಕೃಷ್ಣ, ವಾರ : ಬುಧ, ತಿಥಿ : ಸಪ್ತಮೀ, ನಿತ್ಯನಕ್ಷತ್ರ : ಮೂಲ, ಯೋಗ : ಪರಿಘ, ಕರಣ : ಭದ್ರ, ಸೂರ್ಯೋದಯ ಬೆಳಗ್ಗೆ 06-22 ಕ್ಕೆ, ಸೂರ್ಯಾಸ್ತ ಸಂಜೆ 06-44 ಕ್ಕೆ, ರಾಹು ಕಾಲ ಮಧ್ಯಾಹ್ನ 12:33 – 02:06ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 07:55 – 09:28ರ ವರೆಗೆ, ಗುಳಿಕ ಕಾಲ ಬೆಳಗ್ಗೆ 11:00 – ಮಧ್ಯಾಹ್ನ 12:33ರ ವರೆಗೆ.
ಸಿಂಹ: ಸದಾ ಚಟುವಟಿಕೆಯಿಂದ ಇರುವ ನಿಮಗೆ ಇಂದು ಕೆಲಸವಿಲ್ಲದೇ ಅಸಮಾಧಾನವೆನಿಸಬಹುದು. ಕೆಲಸವನ್ನು ತಂದುಕೊಂಡು ಮಾಡುವಿರಿ. ಮನೆಗೆ ಬಂದವರ ಎದುರು ಜಗಳವಾಡುವಿರಿ. ಅವರೇ ನಿಮ್ಮನ್ನು ಸಮಾಧಾನ ಮಾಡಬೇಕಾದೀತು. ನಿಮ್ಮ ಮಾತನ್ನು ಎಲ್ಲರೂ ಕೇಳರು. ಕೇಳುವ ಹಾಗೆ ನಿಮ್ಮ ಮಾತಿರಲಿ. ಓಡಾಟ ಬೇಡವೆಂದು ಕುಲಕಿತ ನಿಮಗೆ ಅನಿವಾರ್ಯದ ಪ್ರಯಾಣವು ಬರಲಿದೆ. ಅದು ನಿಮ್ಮನ್ನು ಹೈರಾಣ ಮಾಡುವುದು. ಗೂಢಚರ್ಯೆಯನ್ನು ನಡೆಸುವಿರಿ.
ಕನ್ಯಾ: ಆಗಿರುವುದನ್ನು ನೆನಪಿಸಿಕೊಂಡು ಸಂಕಟಪಡುವ, ದುಃಖಿಸುವ ಅಗತ್ಯವಿಲ್ಲ. ದೇವರ ಸೃಷ್ಟಿಯಲ್ಲಿ ಎಲ್ಲವೂ ಸಹಜವೇ ಎಂಬ ಸಂಗತಿಯನ್ನು ತಿಳಿಯಿರಿ. ವಾಹನವನ್ನು ಖರೀದಿಸಲಿದ್ದು ತಂದೆಯಿಂದ ಸಾಲವನ್ನು ಪಡೆಯುವಿರಿ. ಬ್ಯಾಂಕ್ ಉದ್ಯೋಗಿಗಳಿಗೆ ಉದ್ಯೋಗದಲ್ಲಿ ಬಡ್ತಿಯಾಗಿ ಶುಭಸುದ್ದಿ ಬರುವುದು. ಯಾರನ್ನಾದರೂ ಪ್ರೀತಿಸಬೇಕಿತ್ತು ಎಂಬ ಭಾವ ನಿಮಗೆ ಬರಲಿದೆ. ಯಾರಮೇಲಾದರೂ ಪ್ರೀತಿಯು ಉಂಟಾಗಬಹುದು. ಪ್ರಜ್ಞಾಪೂರ್ವಕವಾಗಿ ಮಾಡಿದ ಕೆಲಸಕ್ಕೆ ಪಶ್ಚಾತ್ತಾಪಪಡಬೇಕಾದೀತು. ಸುಮ್ಮನೇ ಕುಳಿತು ಸಮಯವನ್ನು ವ್ಯರ್ಥಮಾಡಬೇಡಿ.
ತುಲಾ: ತಂದೆ-ತಾಯಿಯರು ಒತ್ತಾಯ ಮಾಡಿದರೂ ಅವರ ಮಾತಿಗೆ ಬೆಲೆ ಕೊಡದೇ ಮನೆಯಿಂದ ದೂರಾಗುವಿರಿ. ವ್ಯಸನಿಗಳಾಗುವ ಸಾಧ್ಯತೆ ಇದೆ. ಆರೋಗ್ಯದ ವ್ಯತ್ಯಾಸದಿಂದ ಸಾಲವನ್ನು ಮಾಡುವ ಸ್ಥಿತಿಯು ಅನಿರೀಕ್ಷಿತವಾಗಿ ಎದುರಾಗಬಹುದು. ಅಪರಿಚಿತ ವ್ಯಕ್ತಿಗಳಿಂದ ಮೋಸ ಹೋಗಬಹುದು. ಸೂಕ್ತವಾದ ಕಾರ್ಯಗಳನ್ನು ಆಯ್ಕೆ ಮಾಡಿಕೊಳ್ಳಿ. ವಿದ್ಯಾರ್ಥಿಗಳು ಅಂತರ್ಜಾಲಕ್ಕೆ ಸಲುಕಿ ಒದ್ದಾಡಲಿದ್ದಾರೆ. ಚಂಚಲವಾದ ಮನಸ್ಸು ನಿಮ್ಮನ್ನು ಓದಲು ಬಿಡದು. ಅನಾಮಧೇಯ ಕರೆಗಳಿಂದ ತೊಂದರೆಯಾಗಬಹುದು. ಅವುಗಳಿಂದ ದೂರವಿರುವುದು ಉಚಿತ. ಯಾವ ವಿವರಗಳನ್ನೂ ಕೊಡಬೇಡಿ.
ವೃಶ್ಚಿಕ: ಇಷ್ಟು ದಿನ ಮನಸ್ಸಿನಲ್ಲಯೇ ಇಟ್ಟುಕೊಂಡ ಬಯಕೆಯನ್ನು ಹೊರ ಹಾಕುವಿರಿ. ನಿಮ್ಮ ಸ್ವಭಾವವು ನಿಮ್ಮವರಿಗೆ ತಿಲಕಿಯುವುದು. ಅನಿರೀಕ್ಷಿತವಾಗಿ ಬಂಧುಗಳ ಭೇಟಿಯಾಗಲಿದೆ. ಆದರೂ ನಿಮ್ಮ ಯೋಜಿತವಾದ ಕಾರ್ಯಗಳು ನಿರ್ಬಿಡೆಯಿಂದ ಸಾಗುವುದು. ಲಾಭವನ್ನು ನೋಡುತ್ತಲೇ ಕಳೆದುಕೊಳ್ಳುವಿರಿ. ನಿಮ್ಮವರ ಅನಾರೋಗ್ಯದ ನಿಮಿತ್ತ ಆಸ್ಪತ್ರೆಗೆ ಅಲೆದಾಟವಾಗಬಹುದು. ಬಂಗಾರವನ್ನು ಖರೀದಿಸಲು ಮುಂದಾಗುವಿರಿ. ನಿಮ್ಮ ಮನಸ್ಸಿಗೆ ಹಿಡಿಸಿದವರ ಜೊತೆ ಹೆಚ್ಚು ಸಮಯವನ್ನು ಕಳೆಯುವಿರಿ.
-ಲೋಹಿತಶರ್ಮಾ ಇಡುವಾಣಿ