Daily Horoscope: ಇಂದು ಈ ರಾಶಿಯ ಮಹಿಳೆ ಮತ್ತು ಪತಿಯ ನಡುವೆ ಮುಸುಕಿನ ಗುದ್ದಾಟ ನಡೆಯಲಿದೆ

|

Updated on: Apr 14, 2023 | 6:00 AM

ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಏಪ್ರಿಲ್​ 14) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Daily Horoscope: ಇಂದು ಈ ರಾಶಿಯ ಮಹಿಳೆ ಮತ್ತು ಪತಿಯ ನಡುವೆ ಮುಸುಕಿನ ಗುದ್ದಾಟ ನಡೆಯಲಿದೆ
ಇಂದಿನ ರಾಶಿ ಭವಿಷ್ಯ
Image Credit source: istock
Follow us on

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಏಪ್ರಿಲ್​ 14 ಶುಕ್ರವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೀನ ಮಾಸ, ಮಹಾನಕ್ಷತ್ರ : ರೇವತೀ, ಮಾಸ : ಚೈತ್ರ, ಪಕ್ಷ : ಕೃಷ್ಣ, ವಾರ : ಶುಕ್ರ, ತಿಥಿ : ನವಮೀ, ನಿತ್ಯನಕ್ಷತ್ರ : ಉತ್ತರಾಷಾಢ, ಯೋಗ : ಸಿದ್ಧಿ, ಕರಣ : ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 20 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 44 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 10:59 ರಿಂದ 12:33ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 03:39 ರಿಂದ ಸಂಜೆ 05:12ರ ವರೆಗೆ, ಗುಳಿಕ ಕಾಲ ಬೆಳಗ್ಗೆ 07:54 ರಿಂದ 09:27ರ ವರೆಗೆ.

ಸಿಂಹ: ಆಲಸ್ಯದ ಕಾರಣ ನೀವು ಎಲ್ಲಿಗೂ ಹೋಗಲು ಇಷ್ಟಪಡುವುದಿಲ್ಲ. ಇಂದು ಪ್ರಯಾಣ ಮಾಡದ ಲೆಕ್ಕಕ್ಕೆ ಒಳ್ಳೆಯದೇ ಆಗಿದೆ. ನೀವು ಅದನ್ನು ಬದಲಾಯಿಸಲು ಹೋಗಿ ಇನ್ನೊಂದು ಸಂಕಷ್ಟವನ್ನು ತಂದುಕೊಳ್ಳುವಿರಿ. ಅನೇಕ ದಿನಗಳಿಂದ ಒಂದೇ ಖಾಯಿಲೆಯಿಂದ ಬಳಲುತ್ತಿದ್ದು ನಿಮಗೆ ಕಿರಿಕಿರಿಯು ಅತಿಯಾಗಬಹುದು. ಅನಾರೋಗ್ಯವು ನೀವು ವಿಶ್ರಾಂತಿ ಪಡೆಯುವಿರಿ. ನಿಮ್ಮ ಕಠೋರತೆ, ಒರಟುತನವು ನಿಮ್ಮವರಿಗೆ ಹಿಂಸೆಯನ್ನು ಕೊಡಬಹುದು. ಮಕ್ಕಳು ನಿಮ್ಮನ್ನು ಪ್ರಶ್ನಿಸುವರು. ನಿಮಗೆ ಸಂತೋಷವೂ ಬೇಸರೂ ಆಗಬಹುದು.

ಕನ್ಯಾ: ನಿಮ್ಮವರು ನಿಮಗೆ ಅಪಮಾನವನ್ನು ಮಾಡಬಹುದು. ಅದರಿಂದ ಬೇಸರವೂ ಆಗಬಹುದು. ಏಕಾಗ್ರತೆಯ ಕೊರತೆ ಕಾಣಬಹುದು. ಮನೆಯಲ್ಲಿ ಜಗಳವಾಡಿ ದೂರ ಹೋಗುವಿರಿ. ನಿಮ್ಮವರೇ ನಿಮಗೆ ಶತ್ರುಗಳಂತೆ ಕಾಣುವರು. ಆಟದಲ್ಲಿ ಗೆಲ್ಲಲು ಮಾಡಲು ಹೋಗಬೇಡಿ. ಭೂಮಿಯ ಖರೀದಿಗೆ ಕುಟುಂಬದವರ ಸಲಹೆಯನ್ನು ಪಡೆಯುವಿರಿ. ಸಮಾಜಕ್ಕೆ ಏನನ್ನಾದರೂ ಮಾಡಬೇಕು ಎಂಬ ಹಂಬಲವಿರಲಿದೆ. ನಿಮ್ಮ ಪ್ರಾಮಾಣಿಕತೆಯು ನಿಮಗೆ ಯಶಸ್ಸನ್ನು ತರುವುದು. ಏಕಾಂತವು ನಿಮಗಿಂದು ಇಷ್ಟವಾಗುವುದು.

ತುಲಾ: ವಾಹನವನ್ನು ಖರೀದಿಸಿ ಹೊಸ ಉದ್ಯೋಗವನ್ನು ಆರಂಭಿಸಬಹುದು. ಪತ್ನಿಯು ನಿಮ್ಮ ಉದ್ಯೋಗಕ್ಕೆ ಸಹಕಾರ ಕೊಡುವಳು. ಆಲಂಕಾರಿಕ ವಸ್ತುವಿನ‌ಮೇಲೆ ಹೆಚ್ಚು ಆಸಕ್ತಿ ಇರುವುದು. ಬೆಂಕಿಯಿಂದ ಸ್ವಲ್ಪ ದೂರವಿರಿ ಅಥವಾ ಜಾಗರೂಕರಾಗಿರಿ. ನಿಮ್ಮವರ ಬಗ್ಗೆ ನಿಮಗೆ ತಿಳಿವಳಿಕೆ ಬಹಳ ಕಡಿಮೆ ಇದ್ದು ಏನನ್ನೂ ಹೇಳಬೇಡಿ. ವಿದ್ಯುದುಪಕರಣದಿಂದ ಹಣವು ವ್ಯಯವಾಗಲಿದೆ. ದುಃಸ್ವಪ್ನವು ನಿಮಗೆ ಚಿಂತನೆಯನ್ನು ಕೊಡುವುದು‌ ಸಂಬಂಧಗಳ ಬೆಲೆಯನ್ನು ಅರಿಯಲಿದ್ದೀರಿ. ಕುತೂಹಲಕ್ಕೆ ಏನನ್ನಾದರೂ ಮಾಡಲು ಹೋಗಿ ತೊಂದರೆಗೆ ಸಿಕ್ಕಿಕೊಳ್ಳುವಿರಿ.

ವೃಶ್ಚಿಕ: ಇತ್ತಸಂಬಂಧವಾದ ತುರಿಕೆ ಬರಬಹುದು. ಮಕ್ಕಳಿಂದ ನಿಮಗೆ ಶುಭವಾರ್ತಯು ಇರಬಹುದು. ಮುಸುಕಿನ ಗುದ್ದಾಟ ನಿಮ್ಮ ಮತ್ತು ಪತಿಯ ನಡುವೆ ನಡೆಯತ್ತದೆ. ಹಿತಶತ್ರುಗಳು ಅರಿತುಕೊಳ್ಳಿ‌ ನಿಮಗೆ ಹೆಚ್ಚು ಸಮಯಬೇಕಾಗದು. ಇಂದಿನ‌ ಪ್ರಯಾಣವು ನಿಮಗೆ ಆಯಾಸವನ್ನು ಕೊಡುತ್ತದೆ. ನಿಮಗೆ ಕೆಲವರು ಆಮಿಷವನ್ನು ತೋರಿಸುವರು. ಅದಕ್ಕೆ ಬಲಿಯಾಗಿ ಸಂಪತ್ತನ್ನು ಕಳೆದುಕೊಳ್ಳಬೇಡಿ. ದೇವರ ಉತ್ಸವಗಳಲ್ಲಿ ಭಾಗಿಯಾಗುವಿರಿ. ನಿಮ್ಮ ಮಾತು ಸ್ಪಷ್ಟವಾಗಿದ್ದರೂ ಅಪಾರ್ಥಕ್ಕೆ ಕಾರಣವಾಗಲಿದೆ. ಕೃಷಿಯನ್ನು ನೀವು ಇಷ್ಟಪಡುವುದಿಲ್ಲ.

-ಲೋಹಿತಶರ್ಮಾ ಇಡುವಾಣಿ