AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Daily Horoscope: ಈ ರಾಶಿಯವರಿಗೆ ಸಾಡೇಸಾಥ್ ಶನಿಯು ಇಂದು ಸ್ವಲ್ಪಮಟ್ಟಿಗೆ ತೊಂದರೆ ಕೊಡುವನು

ನೀವು ಧನು, ಮಕರ, ಕುಂಭ, ಮೀನ ರಾಶಿಯವರೇ? ಹಾಗಿದ್ದರೆ ಇಂದಿನ (2023 ಏಪ್ರಿಲ್​ 14) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Daily Horoscope: ಈ ರಾಶಿಯವರಿಗೆ ಸಾಡೇಸಾಥ್ ಶನಿಯು ಇಂದು ಸ್ವಲ್ಪಮಟ್ಟಿಗೆ ತೊಂದರೆ ಕೊಡುವನು
ಇಂದಿನ ರಾಶಿ ಭವಿಷ್ಯImage Credit source: istock
Rakesh Nayak Manchi
|

Updated on: Apr 14, 2023 | 6:20 AM

Share

ಶುಭೋದಯ ಓದುಗರೇ. ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದ್ರೆ ಇಂದಿನ (2023 ಏಪ್ರಿಲ್​ 14) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೀನ ಮಾಸ, ಮಹಾನಕ್ಷತ್ರ : ರೇವತೀ, ಮಾಸ : ಚೈತ್ರ, ಪಕ್ಷ : ಕೃಷ್ಣ, ವಾರ : ಶುಕ್ರ, ತಿಥಿ : ನವಮೀ, ನಿತ್ಯನಕ್ಷತ್ರ : ಉತ್ತರಾಷಾಢ, ಯೋಗ : ಸಿದ್ಧಿ, ಕರಣ : ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 20 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 44 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 10:59 ರಿಂದ 12:33ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 03:39 ರಿಂದ ಸಂಜೆ 05:12ರ ವರೆಗೆ, ಗುಳಿಕ ಕಾಲ ಬೆಳಗ್ಗೆ 07:54 ರಿಂದ 09:27ರ ವರೆಗೆ.

ಧನುಸ್ಸು: ಯಾವುದನ್ನೂ ಕಷ್ಟ ಎಂದುಕೊಂಡರೆ ಯಾವಾಗಲೂ ಕಷ್ಟವೇ. ಅದನ್ನು ಸರಳವಾಗಿಸುವ ವಿಧಾನವನ್ನು ಕಂಡುಕೊಳ್ಳಿ. ಹಣಕಾಸಿನ ವಿಚಾರದಲ್ಲಿ ಹಿನ್ನಡೆಯಾಗುವ ಸಾಧ್ಯತೆ ಇದೆ. ಪಿರ್ತಾರ್ಜಿತ ಆಸ್ತಿಗೆ ಸಂಬಂಧಿಸಿದಂತೆ ಕಲಹವಾಗಬಹುದುಗಬಹುದು. ಅನಿರೀಕ್ಷಿತವಾಗಿ ಅತಿಥಿಗಳು ಆಗಮನದಿಂದ ಸಂತೋಷವಾಗಲಿದೆ. ನೀವು ನಡೆದುಕೊಳ್ಳುವ ರೀತಿಯು ಕೆಲವರಿಗೆ ಆದರ್ಶವಾಗಬಹುದು. ಸ್ವಲ್ಪ ಅಂತರದಲ್ಲಿ ನಿಮಗೆ ದೊಡ್ಡ ಅಪಾಯವು ತಪ್ಪಿಹೋಗಬಹುದು. ಮಕ್ಕಳ ಜೊತೆ ಹೆಚ್ಚು ಸಮಯವನ್ನು ಕಳೆಯಬಹುದು.

ಮಕರ: ನಕಾರಾತ್ಮಕ ಆಲೋಚನೆಯನ್ನು ಬಲವಂತವಾಗಿ ಕಡಿಮೆ ಮಾಡಿ. ಇಲ್ಲವಾದರೆ ನಿಮಗೆ ಸಂತೋಷವೇ ಇರದಾಗುತ್ತದೆ. ನಿಮ್ಮ ಉದ್ಯೋಗಕ್ಕೆ ಬಂಧುಗಳ ಬೆಂಬಲವನ್ನು ಇರಬಹುದು. ಆರ್ಥಿಕ ಸಂಕಷ್ಟವೆಂದು ಚಿಂತೆಗೆ ಒಳಗಾದರೆ ತೊಂದರೆಯಾದೀತು. ಎಂದೋ ಮರೆತ ಹಾಡು ಇಂದು ನೆನಪಾಗಿ ಸಂತೋಷವಾಗುವುದು. ಕೆಲಸವನ್ನು ಸಮರ್ಥವಾಗಿ ಮುಗಿಸಿದ ಸಂತೋಷವಿರಲಿದೆ. ವಿದೇಶದ ಕಂಪೆನಿಯು ನಿಮ್ಮನ್ನು ಕೆಲಸಕ್ಕೆ ಕರೆಯಬಹುದು. ನಿಮ್ಮನ್ನು ಇಷ್ಟಪಟ್ಟವರು ಇಂದು ದೂರಾಗಬಹುದು.

ಕುಂಭ: ನಿಮ್ಮ ಇಂದಿನ ಕೆಲಸದಿಂದ ಅಧಿಕಾರಿಗಳು ಸಂತೋಷಪಡುವಿರಿ. ನಿಮಗೆ ಹೆಚ್ಚಿನ ಸ್ಥಾನವೂ ಸಿಗಬಹುದು. ನ್ಯಾಯಾಲಯದಲ್ಲಿ ಇಂದು ನಿಮಗೆ ಜಯ ಸಿಗುವುದೋ ಇಲ್ಲವೋ ಎಂಬ ಬಗ್ಗೆ ಅನುಮಾನವಿರಲಿದೆ. ಪ್ರಾಮಾಣಿಕ ವ್ಯವಹಾರಕ್ಕೆ ಇಂದು ಫಲವು ಸಿಗಬಹುದು. ವಿದ್ಯಾರ್ಥಿಗಳಿಗೆ ಪರೀಕ್ಷೆಯ ಭಯವು ದೂರಾಗುವುದು. ಯಾರನ್ನೋ ನಂಬಿ ಮೋಸ ಹೋಗಬಹುದು. ಫಲಾಪೇಕ್ಷೆಯಿಲ್ಲದೇ ಕರ್ತವ್ಯಗಳನ್ನು ಮಾಡಿರಿ. ಸಂತೋಷವಿರಲಿದೆ. ಹೆಚ್ಚು ಸಮಯವನ್ನು ಕುಟುಂಬದೊಂದಿಗೆ ಕಳೆಯುವಿರಿ. ಆಲೋಚನೆ ಮಾಡುವಷ್ಟರಲ್ಲಿ ಕೆಲಸವೇ ಮುಗಿಯಬಹುದು.

ಮೀನ: ನಿಮ್ಮ ಕಾರ್ಯಕೌಶಲಕ್ಕೆ ನಿಬ್ಬರಗಾಗುವರು. ಒಂದೇ ವಿಚಾರವನ್ನು ಕೇಳಿ ಮನಸ್ಸು ಭಾರವಗಲಿದೆ. ಸ್ವಂತ ಉದ್ಯೋಗವನ್ನು ನಡೆಸಲು ಕಷ್ಟವೆಂದು ಅನ್ನಿಸಬಹುದು. ಭೋಗಜೀವನಕ್ಕೆ ಇಂದು ಹೆಚ್ಚು ಒತ್ತು ನೀಡುವಿರಿ. ಇನ್ನೊಬ್ಬರಿಗೆ ಬೋರೆನಿಸುವಷ್ಟು ಮಾತನಾಡುವಿರಿ. ಹಿಂದಿನ ಆಚರಣೆಯ ಬಗ್ಗೆ ನಿಮಗೆ ಪ್ರೀತಿ ಬಂದು ಅದನ್ನು ಆಚರಿಸುವ ಮನಃಸ್ಥಿತಿ ಇರಲಿದೆ. ಗುರು ಹಾಗೂ ಸೂರ್ಯರು ದ್ವೀತಿಯಕ್ಕೆ ಹೋಗುವ ಸ್ಥಿಯಲ್ಲಿ ಇದ್ದಾರೆ. ಪರಿಶ್ರಮದಿಂದ ಸ್ವಲ್ಪ ಸಂಪತ್ತು ಬರಬಹುದು. ಸಾಡೇಸಾಥ್ ಶನಿಯು ನಿಮಗೆ ಸ್ವಲ್ಪಮಟ್ಟಿಗೆ ತೊಂದರೆ ಕೊಡುವನು. ಆದಷ್ಟು ಗುರುದರ್ಶನ, ಶನಿ ಸ್ತೋತ್ರವನ್ನು ಪಠಿಸಿ.

-ಲೋಹಿತಶರ್ಮಾ ಇಡುವಾಣಿ

ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಬಿಗ್​ಬಾಸ್​ಗೆ ಸಂಕಷ್ಟ; ಶೋ ಹಾಗೂ ನಟ ಸುದೀಪ್ ವಿರುದ್ಧ ದೂರು ದಾಖಲು
ಬಿಗ್​ಬಾಸ್​ಗೆ ಸಂಕಷ್ಟ; ಶೋ ಹಾಗೂ ನಟ ಸುದೀಪ್ ವಿರುದ್ಧ ದೂರು ದಾಖಲು
ಉಚ್ಛಾಟಿತ ಶಾಸಕ ಯತ್ನಾಳ್​ ಸಂಪರ್ಕದಲ್ಲಿದ್ಯಾ BJP ಹೈಕಮಾಂಡ್​?
ಉಚ್ಛಾಟಿತ ಶಾಸಕ ಯತ್ನಾಳ್​ ಸಂಪರ್ಕದಲ್ಲಿದ್ಯಾ BJP ಹೈಕಮಾಂಡ್​?
ತಮ್ಮ ಬಟ್ಟೆ ಬಗ್ಗೆ ಅಶ್ಲೀಲ ಕಾಮೆಂಟ್​ ಮಾಡಿದವರಿಗೆ ತಿರುಗೇಟು ಕೊಟ್ಟ ಶಾಸಕಿ
ತಮ್ಮ ಬಟ್ಟೆ ಬಗ್ಗೆ ಅಶ್ಲೀಲ ಕಾಮೆಂಟ್​ ಮಾಡಿದವರಿಗೆ ತಿರುಗೇಟು ಕೊಟ್ಟ ಶಾಸಕಿ
ಯೂಟ್ಯೂಬ್​​ನಲ್ಲಿರೋ ಟಾಕ್ಸಿಕ್’ ಟೀಸರ್​​ನ ಆ ದೃಶ್ಯಕ್ಕೆ ಬೀಳುತ್ತಾ ಕತ್ತರಿ?
ಯೂಟ್ಯೂಬ್​​ನಲ್ಲಿರೋ ಟಾಕ್ಸಿಕ್’ ಟೀಸರ್​​ನ ಆ ದೃಶ್ಯಕ್ಕೆ ಬೀಳುತ್ತಾ ಕತ್ತರಿ?