Daily Horoscope: ಉದ್ಯೋಗದಲ್ಲಿ ಬದಲಾವಣೆ, ಬಟ್ಟೆ ವ್ಯಾಪಾರಿಗಳು ಲಾಭ ಗಳಿಸಲಿದ್ದಾರೆ
ಇಂದಿನ (2023 ಏಪ್ರಿಲ್ 15) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.
ಶುಭೋದಯ ಓದುಗರೇ. ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದ್ರೆ ಇಂದಿನ (2023 ಏಪ್ರಿಲ್ 15) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೀನ ಮಾಸ, ಮಹಾನಕ್ಷತ್ರ : ರೇವತೀ, ಮಾಸ : ಚೈತ್ರ, ಪಕ್ಷ : ಕೃಷ್ಣ, ವಾರ : ಶನಿ, ತಿಥಿ : ದಶಮೀ, ನಿತ್ಯನಕ್ಷತ್ರ : ಉತ್ತರಾಷಾಢ, ಯೋಗ : ಸಾಧ್ಯ, ಕರಣ : ವಣಿಜ, ಸೂರ್ಯೋದಯ ಬೆಳಗ್ಗೆ 06-20 ಕ್ಕೆ, ಸೂರ್ಯಾಸ್ತ ಸಂಜೆ 06-44 ಕ್ಕೆ, ರಾಹು ಕಾಲ 09:26 – 10:59ರ ವರೆಗೆ, ಯಮಘಂಡ ಕಾಲ 02:06 – 03:39ರ ವರೆಗೆ, ಗುಳಿಕ ಕಾಲ 06:20 – 07:53 ರವರೆಗೆ.
ಮೇಷ: ಸಮಸ್ಯೆಗಳು ಬಂದಾಗ ಉದ್ವೇಗಕ್ಕೆ ಒಳಗಗಾದೇ ಬಗೆಹರಿಸಿಕೊಳ್ಳಿ. ರಾಜಕೀಯ ವ್ಯಕ್ತಿಗಳ ಸಹವಾಸದಿಂದ ನಿಮ್ಮ ಕಾರ್ಯಗಳು ಸಲೀಸಾಗಿ ಆಗಲಿದೆ. ಅಪಮಾನವಾಗುವ ಘಟನೆಗಳು ನಡೆಯಬಹುದು. ಬಟ್ಟೆ ವ್ಯಾಪಾರಗಳು ಲಾಭವನ್ನು ಗಳಿಸಲಿದ್ದಾರೆ. ಆರ್ಥಿಕ ಸಂಕಷ್ಟಕ್ಕೆ ನಿಮ್ಮ ಉಪಾಯಗಳನ್ನು ಆರಂಭಿಸುವಿರಿ. ಆಸ್ತಿ ವ್ಯವಹಾರದಲ್ಲಿ ಸ್ವಲ್ಪಮಟ್ಟಿಗೆ ಕಲಹಾದಿಗಳು ಆಗಿ ಬಗೆ ಹರಿಯುವುದು. ಉದ್ಯೋಗದ ಸ್ಥಳದಲ್ಲಿ ಸಹೋದ್ಯೋಗಿಗಳ ನೆರವು ಸಿಗಲಿದೆ. ಸರ್ಕಾರಿ ಕೆಲಸವು ನಿಧಾನಗತಿಯಲ್ಲಿ ಆಗಲಿದೆ. ತೃತೀಯದ ಕುಜನಿಂದ ನಿಮ್ಮ ಪರಾಕ್ರಮವು ತಿಳಿಯಲ್ಪಡುವುದು.
ವೃಷಭ: ವೈದ್ಯಕೀಯ ವಿದ್ಯಾರ್ಥಿಗಳಿಗೆ ಹೆಚ್ಚು ಶ್ರಮವಹಿಸಬೇಕಾದೀತು. ಉದ್ಯೋಗದಲ್ಲಿ ಹೆಚ್ಚು ಬದಲಾವಣೆಯಾಗುವ ಸಾಧ್ಯತೆ ಇದೆ. ಸ್ವತಂತ್ರವಾಗಿ ತೀರ್ಮಾನವನ್ನು ತೆಗದುಕೊಳ್ಳಲು ಕಷ್ಟವಾದರೂ ನೀವೇ ತೆಗೆದುಕೊಳ್ಳಿ. ನಿಮ್ಮ ಇಚ್ಛೆಗೆ ಅನುಸಾರವಾಗಿಯೂ ಕುಟುಂಬದಲ್ಲಿ ನಡೆದುಕೊಳ್ಳುವರು. ಹಣಕಾಸಿನ ವಿಚಾರದಲ್ಲಿ ನಿಮ್ಮ ನಿರೀಕ್ಷೆ ಸುಳ್ಳಾಗದು. ಇಂದು ಕಷ್ಟಕರವಾಗಿದ್ದರೂ ಪ್ರಯಾಣವನ್ನು ಮಾಡಲೇ ಬೇಕಾಗಿದೆ. ಸರ್ಕಾರಿ ನೌಕರಿಗೆ ಇಷ್ಟವಿಲ್ಲದ ಸ್ಥಳಕ್ಕೆ ವರ್ಗಾವಣೆ ಆಗಲಿದೆ. ದ್ವಾದಶದ ರಾಹುವು ಅನಾರೋಗ್ಯದಿಂದ ಸಂಪತ್ತನ್ನು ಖಾಲಿ ಮಾಡಿಸುವನು. ಸುಬ್ರಹ್ಮಣ್ಯನ ಸ್ತೋತ್ರ ಮಾಡಿ.
ಮಿಥುನ: ನಿಮ್ಮ ಪ್ರಯತ್ನಕ್ಕೆ ಯೋಗ್ಯವಾದ ಫಲವು ಸಿಗಬಹುದು. ವೃತ್ತಿಯಲ್ಲಿ ಹೆಚ್ಚಿನ ಪ್ರಗತಿ ಇರಲಿದೆ. ದುಡುಕಿನ ನಿರ್ಧಾರದಿಂದ ದುಃಖಪಡಬೇಕಾದೀತು. ಶತ್ರುಗಳು ನಿಮ್ಮ ಸಂಪತ್ತನ್ನು ಕರಗಿಸಲು ತಂತ್ರವನ್ನು ಹೆಣೆಯಬಹುದು. ನೂತನ ಯಂತ್ರೋಪಕರಣವನ್ನು ಖರೀದಿಸಲಿದ್ದೀರಿ. ಬಾಕಿ ಇರುವ ಕೆಲಸವನ್ನು ಇಂದೇ ಮಾಡಿ ಮುಗಿಸಿಕೊಳ್ಳಿ. ಹೊಸ ಕೆಲಸಗಳತ್ತ ನಿಮ್ಮ ಮನಸ್ಸು ಹರಿಯುವುದು. ಇಂದಿನ ಕಛೇರಿಯ ಕೆಲಸದಲ್ಲಿ ಪೂರ್ಣ ಮನಸ್ಸು ಇರಲಾರದು. ದ್ವಾದಶದ ಶುಕ್ರನು ನಿಮಗೆ ಅಲ್ಪ ಅನುಕೂಲಕರನಲ್ಲ.
ಕರ್ಕ: ನಿಮ್ಮ ಕರ್ಮಗಳು ಇತರರಿಗೆ ಮಾದರಿಯಾದೀತು. ಯಾರ ಮಧ್ಯದಲ್ಲಿಯೂ ನೀವು ವಾದದ ನಿರ್ಣಾಯಕರಾಗಿ ಹೋಗಬೇಡಿ. ಸಂಗಾತಿಯ ತಪ್ಪುಗಳನ್ನು ಹೇಳುವ ರೀತಿಯಲ್ಲಿ ಹೇಳಿ. ನೋವಾಗದ ರೀತಿಯಲ್ಲಿ ಹೇಳಿದರೆ ಸಂಬಂಧವು ಚೆನ್ನಾಗಿರುವುದು. ಇರುವುದರಲ್ಲಿ ತೃಪ್ತಿ ಇರಲಿ. ಅತಿಯಾದ ಅಸೆಯಿಂದ ಇರುವುದೂ ನಷ್ಟವಾದೀತು. ಮಕ್ಕಳ ಸಂತೋಷದಲ್ಲಿ ಭಾಗಿಯಾಗುವಿರಿ. ನಿಮ್ಮ ಬಗ್ಗೆ ಇರುವ ಪ್ರಶಂಸೆಯು ಕೆಲಸಕ್ಕೆ ಉತ್ತೇಜಕವಾದೀತು. ಆಗದವರಿಗೆ ನೀವು ಇಂದು ಸಹಾಯ ಮಾಡಲಿದ್ದೀರಿ. ಶತ್ರುವಿನ ಆಗಲಿಕೆಯಿಂದ ಸಂತೋಷವಾಗುವುದು. ಅನಾರೋಗ್ಯದಿಂದ ಷಷ್ಠಾಧಿಪತಿಯು ನವಮದಲ್ಲಿರುವುದರಿಂದ ಬಹಳ ಅನುಕೂಲ ಎನ್ನಲಾಗದು. ಧಾರ್ಮಿಕ ಆಚರಣೆ ಹಾಗು ದೇವರ ಆರಾಧನೆ ಮುಖ್ಯ.
ಸಿಂಹ: ಕಳ್ಳರ ಭೀತಿಯು ಕಾಡಬಹುದು. ಮೋಸ ಹೋಗಲೂಬಹುದು. ಅನಾರೋಗ್ಯಕ್ಕೆ ಕಾರಣವು ಸಿಗದೇ ವಿವಿಧ ಔಷಧಗಳನ್ನು ಮಾಡುವಿರಿ. ನಿಮಗೆ ಇತ್ತಿಚೆಗೆ ಸಣ್ಣ ಸಣ್ಣ ಕ್ಲೇಶಗಳು ಆಗುತ್ತಿದ್ದು ಅದನ್ನು ತಿಳಿದುಕೊಳ್ಳಲು ಜ್ಯೋತಿಷಿಗಳ ಭೇಟಿ ಮಾಡಿ ಕೂಲಂಕಷವಾಗಿ ತಿಳಿದುಕೊಳ್ಳಿ. ಪ್ರಣಯಪ್ರಸಂಗದಲ್ಲಿ ಆಕಸ್ಮಿಕ ತಿರುವು ನಿಮಗೆ ಸಂತೋಷವನ್ನು ತೆಬಹುದು. ಮನಸ್ಸು, ಬುದ್ಧಿಗಳನ್ನು ನಿಶ್ಚಲಗೊಳಿಸಿ. ಬಹಳ ಚಂಚಲವಾದ ಮನಸ್ಸನ್ನು ಶುಭವಾದ ಕಾರ್ಯದಲ್ಲಿ ಜೋಡಿಸಿ. ಅಷ್ಟಮದಲ್ಲಿರುವ ಸೂರ್ಯನಿಂದ ಜ್ವರಾದಿಗಳು ಬರಬಹುದು. ಔಷಧೋಪವಾರದಿಂದ ಅದು ನಿವಾರಯಾಗಲಿದೆ.
ಕನ್ಯಾ: ಇಬ್ಬರ ನಡುವಿನ ಕಲಹದಲ್ಲಿ ತುಪ್ಪವನ್ನು ಸುರಿಯುವ ಕೆಲಸಕ್ಕೆ ಹೋಗಬೇಡಿ. ಹತ್ತಿಕೊಂಡ ಬೆಂಕಿ ಆರುವತನಕ ಕಾಯಬೇಕು. ಕಾಲವು ಕೂಡಿಬಂದಾಗ ಎಲ್ಲವೂ ತನ್ನಿಂದ ತಾನೇ ಆಗುತ್ತದೆ. ನಿಮ್ಮ ಪ್ರಯತ್ನದಿಂದಲೇ ಎಲ್ಲವೂ ಸಿದ್ಧಿಸಬೇಕು ಎನ್ನುವುದು ಮೂರ್ಖತನ. ಜನರೊಡನೆ ಬಾಂಧವ್ಯವನ್ನು ಚೆನ್ನಾಗಿ ಇಟ್ಟುಕೊಳ್ಳಿ. ಅವರ ಸಹಾಯ ಮುಂದೊಂದುದಿನ ಬೇಕಾದೀತು. ನಿಮ್ಮ ಗುರಿಯ ಬಗ್ಗೆ ಅಸ್ಪಷ್ಟತೆ ಇರಲಿ. ಮಕ್ಕಳಿಂದ ಸಂತೋಷವು ಸಿಗಲಿದೆ. ಗುರುಗಳನ್ನು ಭೇಟಿಯಾಗಲಿದ್ದೀರಿ. ಮಾತನ್ನು ಚೆನ್ನಾಗಿ ಬಲ್ಲವರಾಗಿದ್ದರು ಕಟುವಾದ ಮಾತುಗಳನ್ನು ಆಡಬೇಡಿ. ಅಷ್ಟಮದ ರಾಹುವು ಶಾರೀರಿಕ ದೋಷಗಳನ್ನು ಹೊರಹಾಕುವನು.
ತುಲಾ: ಇಂದಿನ ನಿಮ್ಮ ನಡೆ ಬಹಳ ಗೌಪ್ಯವಾಗಿದ್ದು ನಿಮ್ಮ ಹೆಜ್ಜೆಯನ್ನು ಯಾರೂ ಗುರುತಿಸಲಾರರು. ಕೃಷಿಯು ನಿಮಗೆ ಹಿಡಿಸದ ಕೆಲಸವಾದರೂ ಅದನ್ನು ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾದೀತು. ಪುಣ್ಯನದಿಗಳ ಸಂಗಮಸ್ಥಳಕ್ಕೆ ಹೋಗಿ ಸ್ನಾನ ಮಾಡಿ ಬನ್ನಿ. ಸರ್ಕಾರಿ ಉದ್ಯೋಗಿಗಳಿಗೆ ಬಹಳ ದಿನಗಳ ಅನಂತರ ಶುಭವಾರ್ತೆಯು ಬರಲಿದೆ. ಮುಖದಲ್ಲಿ ಮಂದಹಾಸ ಶರೀರದಲ್ಲಿ ಉತ್ಸಾಹ ಹೆಚ್ಚಾಗುವ ಸುದ್ದಿಯು ಇದಾಗಲಿದೆ. ಪರಿಚಿತ ವ್ಯಕ್ತಿಯೊಡನೆಯೇ ಕಲಹವಾಗಲಿದೆ. ಇನ್ನೊಬ್ಬರ ಮಾತಿಗೆ ಕಿವಿಗೊಟ್ಟು ನಿಮ್ಮದನ್ನು ಕಳೆದುಕೊಳ್ಳುವ ಕೆಲಸಕ್ಕೆ ಕೈ ಹಾಕಬೇಡಿ. ಶುಕ್ರನು ಅಷ್ಟಮದಲ್ಲಿ ತನ್ನ ಗೃಹದಲ್ಲಿ ಇದ್ದು ಸ್ತ್ರೀಯರ ಕಾರಣಕ್ಕೆ ಅಥವಾ ಸ್ತ್ರೀಸಂಬಂಧದ ವಿಚಾರಕ್ಕೆ ಹಣವನ್ನು ನಷ್ಟ ಮಾಡಿಸುವನು.
ವೃಶ್ಚಿಕ: ಸಮಯವನ್ನು ಮಾಡಿಕೊಂಡು ತಂದೆ ಹಾಗೂ ತಾಯಿಯರನ್ನು ಭೇಟಿಯಾಗಿ ಬನ್ನಿ. ಅವರ ಮಾತುಗಳು ನಿಮಗೆ ಸಂಕಟವನ್ನು ತಂದರೂ ಅವರ ಮನಸ್ಸು ಹಗುರಾಗುವುದು. ನಿಯಮಿತ ಕಾರ್ಯಗಳನ್ನು ಮಾಡುತ್ತ ಸಂತೋಷವಾಗಿ ಇರುವಿರಿ. ನೀವು ಆಡಲಿರುವ ಮಾತುಗಳು ಪರ್ವತದಷ್ಟು ಇದ್ದರೂ ಕೇಳಿಸಿಕೊಳ್ಳುವ ಮನಸ್ಸಿನ, ಕಿವಿಯ ಕೊರತೆ ಕಾಣಿಸಲಿದೆ. ಅವಕಾಶಗಳನ್ನು ಬಿಟ್ಟುಕೊಡುವುದು ಔದಾರ್ಯವಲ್ಲ, ಆಲಸ್ಯವಾಗುವುದು. ಸ್ವರಾಶ್ಯಧಿಪತಿಯು ಅಷ್ಟಮದಲ್ಲಿದ್ದು ಸಣ್ಣ ಪುಟ್ಟ ಗಾಯಗಳನ್ನು ಮಾಡಿಸುವನು.
ಧನುಸ್ಸು: ಎಲ್ಲರ ಜೊತೆ ಬೆರೆಯಬೇಕು ಎನ್ನುವ ಇಚ್ಛೆ ಇದ್ದರೂ ನಿಮ್ಮನ್ನು ಸೇರಿಕೊಳ್ಳದೇ ಇರುವರು. ಕೆಲಸವೂ ಇಲ್ಲದೇ ಸುಮ್ಮನೆಯೂ ಇರಲಾಗದೇ ಸುತ್ತಾಡುವಿರಿ. ಎಂದಿನ ಉತ್ಸಾಹವಿಲ್ಲದೇ ಇಂದು ಇರದು. ಆತ್ಮೀಯರ ಮಾತು ನಿಮಗೆ ಕಹಿ ಎನ್ನಿಸಲೂಬಹುದು. ಉದ್ಯೋಗವನ್ನು ಅರಸಿ ನೀವು ನಗರಕ್ಕೆ ಹೋಗುವಿರಿ. ದೇಹ ಆರೋಗ್ಯವಾಗಿದ್ದರೂ ಮನಸ್ಸು ನಿಮ್ಮನ್ನು ಕಟ್ಟಿಹಾಕುವುದು. ವಿದ್ಯಾರ್ಥಿಗಳು ಭವಿಷ್ಯದ ಬಗ್ಗೆ ಚಿಂತೆ ಇಲ್ಲದೇ ಆರಾಮಾಗಿ ಇರುವರು. ನೀವು ಸೇವಿಸುವ ಔಷಧವು ವಿಪರೀತ ಪರಿಣಾಮವಾಗಬಹುದು. ಪ್ರೇಮವು ಕಾಮಾವಾಗಿಯೂ ಪರಿವರ್ತನೆ ಆಗಬಹುದು.
ಮಕರ: ನಿಮಗೆ ಇನ್ನೊಬ್ಬರ ವ್ಯಕ್ತಿತ್ವ ಇಷ್ಟವಾಗದಿದ್ದರೆ ಅವರ ಬಳಿಯೇ ಹೇಳಿ. ಅದನ್ನು ಯಾರದೋ ಸಮೀಪ ಸಲ್ಲದ ಮಾತುಗಳನ್ನು ಆಡಿ ಅವರ ಮಾನವನ್ನು ಕಳೆಯಬೇಡಿ. ಅನಿರೀಕ್ಷಿತವಾಗಿ ಬಂದ ಹಣವನ್ನು ಜೇಬಿಗೆ ಇಳಿಸಿಕೊಳ್ಳಬೇಡಿ. ತನ್ನದಲ್ಲ ಎಂಬ ಭಾವದಲ್ಲಿ ಇರಿ. ದಾಂಪತ್ಯದ ಕಲಹದಲ್ಲಿ ಮಕ್ಕಳು ನಿಮ್ಮ ಪರವಾಗಿ ಇರುವರು.ಕಣ್ಣಿನ ತೊಂದರೆಯು ಸ್ವಲ್ಪ ಕಡಿಮೆ ಆದಂತೆ ತೋರುತ್ತದೆ. ನಿಮ್ಮ ಹಣವು ಕರಗುವ ಬಗ್ಗೆ ಚಿಂತೆ ಆಗಲಿದೆ. ನಿಮ್ಮ ಬಗ್ಗೆ ಆಡಿಕೊಳ್ಳುತ್ತಿರುವವರು ಸುಮ್ಮನಾಗುವರು. ವಾಹನದ ಮೇಲಿನ ವ್ಯಾಮೋಹ ಕಡಿಮೆಯಾಗುವುದು. ತಂದೆಯಿಂದ ನಿಮಗೆ ಗೌರವ ಸಿಗಬಹುದು.
ಕುಂಭ: ನಕಾರಾತ್ಮಕ ಪ್ರತಿಕ್ರಿಯೆಯನ್ನು ಕೊಟ್ಟು ಎಲ್ಲರ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆ ಇದೆ. ಅಧಿಕಾರದ ಆಮಿಷಕ್ಕೆ ತುತ್ತಾಗಿ ಇಲ್ಲದ ಕೆಲಸವನ್ನು ಮಾಡಬೇಕಾಗಬಹುದು. ಅಪಾಯವೆನಿಸಿದ ಕಡೆ ದೂರವಿರುವುದು ಉತ್ತಮ. ಸಂಗಾತಿಯ ಕೋಪವನ್ನು ಪ್ರೀತಿಯ ಮಾತಿನಿಂದ ಕಡಿಮೆ ಮಾಡಿ. ಉದ್ಯೋಗಿಗಳು ಬಹಳ ಪರಿಶ್ರಮದಿಂದ ಲಾಭವನ್ನು ಪಡೆಯಬೇಕಾಗಿದೆ. ಮಾಡಲು ಸಾಧ್ಯವಾಗುವ ಕೆಲಸಕ್ಕೆ ಕಾರಣವನ್ನು ಹುಡುಕುತ್ತ ಅವಕಾಶವಂಚಿತರಾಗಬೇಡಿ. ನೆಮ್ಮದಿಯು ಕೆಡಲು ಮಾರ್ಗಗಳು ಹಲವು ಇದ್ದರೂ ಅಲ್ಲಿ ಒಳ್ಳೆಯದನ್ನು ಆರಿಸಿಕೊಳ್ಳಿ.
ಮೀನ: ನಿಮ್ಮ ಮೇಲೆ ವಿಶ್ವಾಸವು ಮೂಡುವ ದಿನವಾಗಿದೆ. ಅದನ್ನು ಉಳಿಸಿಕೊಳ್ಳುವ ಪ್ರಯತ್ನವನ್ನೂ ಅನವರತ ಮಾಡಬೇಕಾದ ಸ್ಥಿತಿಯೂ ಇದೆ. ಕೃತಕವಾಗಿ ಬರುವ ಧಾರ್ಮಿಕ ಶ್ರದ್ಧೆಯಿಂದ ಯಾವ ಪರಿಣಾಮವಾಗದು. ನಿಮ್ಮ ಅನುಕೂಲಕ್ಕೆ ತಕ್ಕ ನಿಯಮಗಳನ್ನು ಬೇರೆಯವರ ಮೇಲೆ ಹೇರಬೇಡಿ. ಆಹಾರದ ಕ್ರಮದಲ್ಲಿ ವ್ಯತ್ಯಾಸವಾಗಿ ರೋಗಾದಿಗಳು, ನೋವು ಬರಬಹುದು. ನಿಮಗೆ ಸಹಕಾರ ನೀಡದವರೆಲ್ಲ ಕೆಟ್ಟವರಲ್ಲ. ಅಗೈ ಹುಣ್ಣನ್ನು ನೋಡಲು ಕನ್ನಡಿಯ ಅವಶ್ಯಕತೆ ಇರಲಾರದು. ಅವರವರ ತಪ್ಪುಗಳನ್ನು ತಿದ್ದಿಕೊಂಡರೆ ಮನಸ್ತಾಪವು ಯಾರ ಮಧ್ಯದಲ್ಲಿಯೂ ಬಾರದು ಎಂಬದು ತಿಳಿದಿರಲಿ.
ಲೋಹಿತಶರ್ಮಾ ಇಡುವಾಣಿ – 8762924271 (what’s app only)