Daily Horoscope: ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರ ಇಂದಿನ ರಾಶಿ ಭವಿಷ್ಯ

|

Updated on: Apr 27, 2023 | 6:00 AM

ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಏಪ್ರಿಲ್​ 27) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Daily Horoscope: ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರ ಇಂದಿನ ರಾಶಿ ಭವಿಷ್ಯ
ಇಂದಿನ ರಾಶಿ ಭವಿಷ್ಯ
Follow us on

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಏಪ್ರಿಲ್​ 27 ಗುರುವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ : ಅಶ್ವಿನೀ, ಮಾಸ : ವೈಶಾಖ, ಪಕ್ಷ : ಶುಕ್ಲ, ವಾರ : ಗುರು, ತಿಥಿ : ಸಪ್ತಮೀ, ನಿತ್ಯನಕ್ಷತ್ರ : ಪುಷ್ಯ, ಯೋಗ: ಧೃತಿ, ಕರಣ: ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 13 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 46 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 02:04 ರಿಂದ 03:39ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 06:13 ರಿಂದ 07:47 ವರೆಗೆ, ಗುಳಿಕ ಕಾಲ 09:22 ರಿಂದ 10:56ರ ವರೆಗೆ.

ಸಿಂಹ: ನೀವಿಂದು ಕೋಪವನ್ನು ನಿಯಂತ್ರಣಕ್ಕೆ ತರುವುದು ಬಹಳ ಮುಖ್ಯ.‌ಅಜಾಗರೂಕರಾಗಿರಬೇಡಿ. ನಿಮ್ಮನ್ನು ಹತ್ತಾರು ಕಣ್ಣುಗಳು ಗಮನಿಸುತ್ತಿರುತ್ತವೆ. ಮಾತಿನ ವೇಗವನ್ನು ಕಡಿಮೆ ಮಾಡಿಕೊಳ್ಳುವುದು ಉತ್ತಮ. ಮಕ್ಕಳು ಸ್ವತಂತ್ರರು ಎಂದು ಅವರನ್ನು ಸ್ವಚ್ಛೆಯಿಂದ ಇರಲು ಬಿಡಬೇಡಿ. ಅವರ ಮೇಲೆ ಗಮನವಿರಲಿ. ಹೆಚ್ಚಿನ ಜವಾಬ್ದಾರಿಗಳು ಬರುವ ಸಾಧ್ಯತೆ ಇದ್ದರೂ ಹಿತಶತ್ರುಗಳು ಅದನ್ನು ತಪ್ಪಿಸಿಬಿಟ್ಟಾರು.
ಸಂಪಾದನೆಗೆ ದಾರಿಗಳು ಅನೇಕವಿದ್ದರೂ ನೀವು ಉತ್ತಮವಾದ ಒಂದನ್ನು ಆರಿಸಿಕೊಂಡು ಮುಂದುವರಿಯಿರಿ. ಯಶಸ್ಸು ಸಿಗಲಿದೆ. ಒಳ್ಳೆಯದರಲ್ಲಿಯೂ ಕೆಟ್ಟದ್ದನ್ನು ಹುಡುಕುತ್ತ ಇರಬೇಡಿ.

ಕನ್ಯಾ: ಕಷ್ಟದಿಂದ ಸಂಪಾದಿಸಿದ ಹಣದ ಸ್ವಲ್ಪ ಭಾಗವು ಖರ್ಚಾಗಲಿದೆ. ಹಣವೊಂದೇ ಮುಖ್ಯ ಎನ್ನುವ ನಿರ್ಧಾರಕ್ಕೆ ಬರುವುದು ಸರಿಯಲ್ಲ. ನಿಮಗೆ ಪ್ರವಾಸ ಮಾಡಬೇಕೆಂಬ ಆಸೆ ಇದ್ದು ಕಾಲವು ಸರಿದುಹೋಗಿರುತ್ತದೆ. ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಕೊಳ್ಳುವವರಿದ್ದೀರಿ. ಮಾತಿನ ಬಗ್ಗೆ ಆದಷ್ಟು ಗಮನವಿರಲಿ. ಏನನ್ನಾದರೂ ಹೇಳಿ ಅಪಮಾನಕ್ಕೆ ಸಿಲುಕಬಹುದು. ಕಾಲಕ್ಕೆಂದು ಕುಳಿತುಕೊಳ್ಳಬೇಡಿ. ಮಾಡಬೇಕಾದುದನ್ನು ಮಾಡಿ ಮುಗಿಸಿ. ಮನೆಯಲ್ಲಿಯೇ ಕುಳಿತು ಬೇಸರವಾದೀತು. ಪ್ರತಿಕಾರ ಬುದ್ಧಿಯನ್ನು ಬಿಡುವುದು ಉತ್ತಮ.‌ ನಿಮ್ಮ ಕೆಲಸದ ಕಡೆ ಗಮನ ಹೆಚ್ಚಿರಲಿ.

ತುಲಾ: ಆಪ್ತರ ಜೊತೆ ಹಣದ ವಿಚಾರವಾಗಿ ಕಲಹವಾಗಲಿದೆ. ಬಂಗಾರವನ್ನು ಪತ್ನಿಗೋಸ್ಕರ ಖರೀದಿಸುವಿರಿ. ಮೋಸಗಾರರು ನಿಮ್ಮ ಜೊತೆಗೇ ಇರುವರು, ಗುರುತಿಸಿಕೊಳ್ಳಿ. ಅನಿವಾರ್ಯವಾಗಿ ಸಾಲಮಾಡಬೇಕಾದ ಸ್ಥಿತಿ ಬರಲಿದೆ. ಉದ್ಯೋಗದ ಸ್ಥಳದಲ್ಲಿ ಸಹೋದ್ಯೋಗಿಗಳು ಸಹಾಯ ಮಾಡುವರು. ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಗೊಂದಲ ಉಂಟಾಗಬಹುದು. ನಿಮ್ಮ ತಪ್ಪಿಗೆ ಮತ್ಯಾರನ್ನೋ ತೋರಿಸುವಿರಿ. ಆರೋಗ್ಯವು ಹದ ತಪ್ಪಬಹುದು. ಮನೆಯಲ್ಲಿ ಸೂಕ್ತವಾದ ಚಿಕಿತ್ಸೆ ಮಾಡಿ. ಧನ್ವಂತರಿಯ ಸ್ರೋತ್ರ ಮಾಡಿ ಔಷಧವನ್ನು ಸ್ವೀಕರಿಸಿ.

ವೃಶ್ಚಿಕ: ನಿಮ್ಮ ಭೂಮಿಯು ಸರ್ಕಾರದ ಪಾಲಾಗಬಹುದು. ಅಧಿಕಾರಿಗಳು ನಿಮ್ಮ ಆದಾಯವನ್ನು, ವೃತ್ತಿಯನ್ನು ವಿಚಾರಿಸಯಾರು. ಸರಿಯಾದ ಮಾಹಿತಿ ನೀಡಿ. ಇನ್ನೊಬ್ಬರ ಬಗ್ಗೆ ನಿಮ್ಮ ಭಾವನೆಯನ್ನು ಬದಲಿಸಿಕೊಳ್ಳುವುದು ಉತ್ತಮ. ನಿಮಗೆ ಸಲ್ಲದ ಮಾತುಗಳು ನಿಮ್ಮೆದುರು ಮಕ್ಕಳು ಆಡಬಹುದು. ಉದ್ವೇಗದಿಂದ ಏನನ್ನಾದರೂ ಹೇಳಲು ಹೋಗಬೇಡಿ. ನಿಮ್ಮನ್ನು ಅನ್ಯರಂತೆ ಕಂಡಾರು. ಬೆಳಗಿನಿಂದ ಕೆಲಸ ಮಾಡುತ್ತಿದ್ದರೂ ಇನ್ನೂ ಮುಗಿದಿಲ್ಲ ಆತಂಕ ಇರಲಿದೆ. ಏಕಾಂತವನ್ನು ಇಂದು ಬಹಳ‌ ಇಷ್ಟಪಡುವಿರಿ.‌ ಉದ್ಯೋಗದಿಂದ ಬಂದವರೇ ಉದ್ಯಾನವನಕ್ಕೆ ಹೋಗಿ ಧ್ಯಾನಸ್ಥರಾಗುವಿರಿ.