Sign In

By signing in or creating an account, you agree with Associated Broadcasting Company's Terms & Conditions and Privacy Policy.

Nithya Bhavishya: ಮೇಷ, ವೃಷಭ, ಮಿಥುನ, ಕಟಕ ರಾಶಿಗಳ ಇಂದಿನ ಭವಿಷ್ಯ ಹೀಗಿದೆ

ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಏಪ್ರಿಲ್​ 27) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Nithya Bhavishya: ಮೇಷ, ವೃಷಭ, ಮಿಥುನ, ಕಟಕ ರಾಶಿಗಳ ಇಂದಿನ ಭವಿಷ್ಯ ಹೀಗಿದೆ
ಪ್ರಾತಿನಿಧಿಕ ಚಿತ್ರImage Credit source: maharashtratimes.com
Follow us
ಗಂಗಾಧರ​ ಬ. ಸಾಬೋಜಿ
|

Updated on: Apr 27, 2023 | 5:30 AM

ಶುಭೋದಯ ಓದುಗರೇ. ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದ್ರೆ ಇಂದಿನ (2023 ಏಪ್ರಿಲ್​ 27) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ : ಅಶ್ವಿನೀ, ಮಾಸ : ವೈಶಾಖ, ಪಕ್ಷ : ಶುಕ್ಲ, ವಾರ : ಗುರು, ತಿಥಿ : ಸಪ್ತಮೀ, ನಿತ್ಯನಕ್ಷತ್ರ : ಪುಷ್ಯ, ಯೋಗ: ಧೃತಿ, ಕರಣ: ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 13 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 46 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 02:04 ರಿಂದ 03:39ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 06:13 ರಿಂದ 07:47 ವರೆಗೆ, ಗುಳಿಕ ಕಾಲ 09:22 ರಿಂದ 10:56ರ ವರೆಗೆ.

ಮೇಷ: ಇಂದು ನಿಮ್ಮ ಕೆಲಸವು ಬಹಳ ಶ್ರಮದಿಂದ ಕೂಡಿದ್ದು, ಅದಕ್ಕೆ ತಕ್ಕ ಫಲವು ಸಿಗದೇ ಇರಬಹುದು. ಉದ್ಯೋಗದಲ್ಲಿ ನಿಮಗೆ ಕೊಟ್ಟ ಜವಾಬ್ದಾರಿ ಸ್ಥಾನವವನ್ನು ನೀವಾಗಿಯೇ ಬಿಟ್ಟುಕೊಡಲಿದ್ದೀರಿ. ಖರ್ಚಿಗೆ ಇಂದು ಸ್ವಲ್ಪ ಕಡಿವಾಣ ಹಾಕುವುದು ಉತ್ತಮ. ಕೆಲಸಕಾರ್ಯಗಳು ಆಲಸ್ಯದಿಂದಾಗಿ ನಿಧಾನವಾಗಲಿದೆ. ಕುಟುಂಬದಲ್ಲಿ ನೆಮ್ಮದಿ ಇರಲಿದೆ. ಅಕಸ್ಮಾತ್ ಆಗಿ ದೊರೆತ ಅಮೂಲ್ಯವಾದ ವಸ್ತುವನ್ನು ಜೋಪಾನವಾಗಿ ಇಟ್ಟುಕೊಳ್ಳಿ. ವಾತಾವರಣವು ಬದಲಾಗಿ ಆರೋಗ್ಯದಲ್ಲಿ ವ್ಯತ್ಯಾಸವಾಗು ಸಾಧ್ಯತೆ ಇದೆ. ನಿಮ್ಮ‌ ಸಾಲವು ತೀರಲು ಬಂಧುಗಳು ಸಹಾಯ ಮಾಡುವರು. ಉದ್ವೇಗಕ್ಕೆ ಒಳಗಾಗಿ ಏನನ್ನಾದರೂ ಹೇಳಿಬಿಡಬೇಡಿ.

ವೃಷಭ: ಸ್ತ್ರೀಯರು ಇಂದು ನಿಮ್ಮ ಸಹಾಯಕ್ಕೆ ಬರುವರು‌. ಆರೋಗ್ಯದ ಮೇಲೆ ಗಮನವಿಟ್ಟು ಇಂದಿನ ಪ್ರಯಾಣವನ್ನು ಮಾಡಲು ಹೋಗಿ. ಇಷ್ಟು ದಿನದ ರಹಸ್ಯವು ಮನೆಯಲ್ಲಿ ಬಹಿರಂಗವಾದೀತು. ಇದರಿಂದ ಮನೆಯಲ್ಲಿ ಆತಂಕವಾಗಬಹುದು. ಕೇಳಿದರಷ್ಟೇ ಹೇಳಿ, ಯಾರಿಗೂ ಸುಮ್ಮನೇ ಉಪದೇಶವನ್ನು ಮಾಡಬೇಡಿ.‌ ಬಂಧುಗಳು ನಿಮ್ಮನ್ನು ಅಪಹಾಸ್ಯ ಮಾಡಿಯಾರು. ವಿದ್ಯಾರ್ಥಿಗಳು ಇಷ್ಟು ದಿನವಿದ್ದಂತೆ ಇರುವುದು ಬೇಡ. ನಿಧಾನವಾಗಿ ಮುಂದಿನ ಜೀವನದ ಜೀವನದ ಬಗ್ಗೆ ಗಮನಹರಿಸಬೇಕು. ತಾಯಿಯ ಮೇಲೆ ಇಂದು ನೀವು ಸಿಟ್ಟಾಗಬಹುದು. ಖುಷಿಯನ್ನು ನೀವು ಹಂಚಿಕೊಳ್ಳುವ ಮನಸ್ಸು ಮಾಡುವಿರಿ.

ಮಿಥುನ: ರಾಜಕೀಯ ವ್ಯಕ್ತಿಗಳು ಹೆಚ್ಚಿನ ಲಾಭವನ್ನು ಪಡೆಯಬಹುದು. ನಿಮ್ಮ ಮಾತು ಪ್ರಜೆಗಳ ಮನಸ್ಸಿಗೆ ಮುಟ್ಟಲಿದೆ. ಸಾಲವಾಗಿ ಯಾರಾದರೂ ಹಣವನ್ನು ಕೇಳಿದರೆ ಕೊಡಬೇಡಿ. ಅದು ದುರುಪಯೋಗವಾಗಿ ನಿಮಗೂ ಸಿಗದು. ಬಾಡಿಗೆ ಮನೆಯಲ್ಲಿ ಇದ್ದರೆ ಸ್ಥಾನವನ್ನು ಬದಲಾಯಿಶುವಿರಿ. ಸಂಗಾತಿಯಿಂದ ಸಂಪತ್ತು ಸಿಗಲಿದೆ. ಶ್ರದ್ಧಾ-ಭಕ್ತಿಯ ಕೊರತೆ ಇಂದು ಕಾಣಲಿದೆ. ನಿಮ್ಮ ಆಪ್ತರು ನಿಮ್ಮಿಂದ ದೂರಾಗಬಹುದು ಅಥವಾ ಅವರ ನೆನಪು ಇಂದು ಕಾಡಬಹುದು. ನೂತನ ವಸ್ತ್ರಗಳನ್ನು ಖರೀದಿಸುವ ಮನಸ್ಸು ಮಾಡುವಿರಿ. ಹೊರಗಡೆ ಸುತ್ತಾಡಲು ಇಚ್ಛಿಸುವಿರಿ. ವಿದ್ಯಾರ್ಥಿಗಳು ಆಟದಲ್ಲಿ ಹೆಚ್ಚಿನ‌ ಸಮಯ ಕಳೆಯುವಿರಿ.

ಕಟಕ: ಇಂದು ನಿಮ್ಮ ಕೆಲಸದಿಂದ ನಿಮಗೆ ಆಪಮಾನವಾಗಲಿದೆ. ಇದು ನಿಮಗೆ ಬಹಳ ಮುಜುಗರವನ್ನು ತಂದಿದ್ದು, ಸಹಿಸಿಕೊಳ್ಳುವುದು ಕಷ್ಟವಾಗುವುದು. ತಂದೆಯ ವಿಚಾರದಲ್ಲಿ ನಿಮಗೆ ಸಿಟ್ಟಬರಬಹುದು. ಸರಳವಾಗಿ ಸಿಕ್ಕ ಉದ್ಯೋಗವನ್ನು ಬಿಟ್ಟು ನಿಮ್ಮದೇ ಕಲ್ಪನೆಯ ಉದ್ಯೋಗಕ್ಕೆ ಹುಡುಕಾಟ ನಡೆಸುವಿರಿ. ಇಂದು ಮಾಡುವ ಕೆಲಸವನ್ನು ಮುಂದೂಡಬೇಡಿ. ಅದು ಎಂದೂ ಆಗದೇ ಹೊಇಗಬಹುದು. ಸತ್ಯವನ್ನು ಮುಚ್ಚಿಡುವ ಪ್ರಯತ್ನ ಮಾಡುವಿರಿ‌. ದೇವರನ್ನು ಮರೆತು ಮುಂದುವರಿಯುವ ಕಾಲವಲ್ಲ ನಿಮಗೆ. ಬೇಕಾದಷ್ಟಕ್ಕೆ ಮಾತ್ರ ಹಣವನ್ನು ಖರ್ಚುಮಾಡಿ.