Daily Horoscope: ಧನು, ಮಕರ, ಕುಂಭ, ಮೀನ ರಾಶಿಯವರ ಏಪ್ರಿಲ್ 27ರ ಭವಿಷ್ಯ ಹೀಗಿದೆ
ನೀವು ಧನು, ಮಕರ, ಕುಂಭ, ಮೀನ ರಾಶಿಯವರೇ? ಹಾಗಿದ್ದರೆ ಇಂದಿನ (2023 ಏಪ್ರಿಲ್ 27) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.
ಶುಭೋದಯ ಓದುಗರೇ. ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದ್ರೆ ಇಂದಿನ (2023 ಏಪ್ರಿಲ್ 27) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.
ಧನು: ನಿಮ್ಮ ನಡವಳಿಕೆಯಿಂದ ಮೇಲಧಿಕಾರಿಗಳಿಗೆ ಅಸಮಾಧಾನವಾಗಲಿದೆ. ನಿಮ್ಮ ಸ್ಪಷ್ಟ ನಿರ್ಧಾರವನ್ನು ಮನೆಯಲ್ಲಿ ಹೇಳಿ. ಗೊಂದಲವನ್ನು ಮಾಡಿಕೊಂಡು ಇರಬೇಡಿ. ನಿಮ್ಮ ಪ್ರೇಮ ವಿಚಾರವನ್ನು ಕೇಳಿ ಮನೆಯಲ್ಲಿ ಆಶ್ಚರ್ಯವಾಗಬಹುದು. ಅವರು ಇದನ್ನು ಒಪ್ಪದೇ ಇರಬಹುದು. ಅದಕ್ಕಾಗಿ ನಿಮ್ಮದೇ ನಿರ್ಧಾರವನ್ನು ತೆಗೆದುಕೊಳ್ಳಬೇಡಿ. ವಾತಾವರಣ ತಿಳಿಯಾದಮೇಲೆ ಆ ಬಗ್ಗೆ ಚರ್ಚಿಸಿ. ನಿಮ್ಮ ಬುದ್ಧಿವಂತಿಕೆಯ ಪ್ರದರ್ಶನವನ್ನು ಮಾಡಬೇಡಿ. ಹಾಸ್ಯಕ್ಕೆ ಆಸ್ಪದವಾದೀತು. ನೀವಿಂದು ಅಪರಿಚಿತರಿಗೆ ಸಹಾಯಮಾಡಲಿದ್ದೀರಿ.
ಮಕರ: ಕುಟುಂಬದ ಸಮಸ್ಯೆಯನ್ನು ಬಗೆಹರಿಸಲಾಗದೇ ಇಂದು ಕೈಚೆಲ್ಲಿ ಕುಳಿತುಕೊಳ್ಳುವಿರಿ. ಹಣದ ವಿಚಾರದಲ್ಲಿ ನಿಮ್ಮನ್ನು ವಂಚಿಸುವರು. ನಿಮ್ಮ ತಪ್ಪೇ ನಿಮಗೆ ಮುಳ್ಳದೀತು. ಸ್ತ್ರೀಯರಿಗೆ ವಿನಾಕಾರಣ ಅಪವಾದ ಬಂದೀತು. ಹೊಸ ಕೆಲಸದ ಉತ್ಸಾಹದಲ್ಲಿ ಇರುವಿರಿ. ನೂತನ ವಾಹನವನ್ನು ಖರೀದಿಸಿದ ಖುಷಿ ಇರಲಿದೆ. ಸಂಗಾತಿಯ ಜೊತೆ ಇಂದು ಕಛೇರಿಯ ವಿಚಾರವನ್ನು ಹಂಚಿಕೊಳ್ಳುವಿರಿ. ನಿಮಗಿಷ್ಟವಾದ ಖಾದ್ಯವನ್ನು ತಿನ್ನುವ ಮನಸ್ಸಾದೀತು. ಸಹೋದರರ ನಡುವೆ ಮನೆಯ ಬಗ್ಗೆ ಚರ್ಚಿಸುವಿರಿ. ದಿನದ ಕೊನೆಯಲ್ಲಿ ಸಂತೃಪ್ತಿ ಇರಲಿದೆ. ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿಕೊಳ್ಳಿ.
ಕುಂಭ: ಸ್ನೇಹಿತರ ಜೊತೆ ಸೇರಿ ಖರ್ಚನ್ನು ಮಾಡುವಿರಿ. ಯಾರಾದರೂ ನಿಮ್ಮನ್ನು ಅಳೆಯಬಹುದು. ಅದಕ್ಕೆ ಸರಿಯಾಗಿ ಉತ್ತರಿಸಿ. ಆನಾರೋಗ್ಯವು ನಿಧಾನವಾಗಿ ಗುಣಮುಖವಾಗುವುದು. ಅಗೌರವ ಸಿಗುವ ಕಡೆ ಸುಮ್ಮನೆ ಹೋಗಬೇಡಿ. ಆಸ್ತಿಯ ವಿಚಾರದಲ್ಲಿ ಯಾರೋ ಮಧ್ಯಸ್ತಿಕೆ ವಹಿಸಿಕೊಳ್ಳಲು ಬರಬಹುದು. ಕಛೇರಿಯಲ್ಲಿ ಕೊಟ್ಟ ಜವಾಬ್ದಾರಿಯನ್ನು ನಿಭಾಯಿಸಲು ಕಷ್ಟವಾದೀತು. ಪಿತ್ತಕ್ಕೆ ಸಂಬಧಿಸಿದ ದೋಷವು ಕಾಣಿಸುವುದು. ಇನ್ನೊಬ್ಬರನ್ನು ನೋಡಿ ಕರುಬುವ ಅವಸ್ಥೆ ಒಳ್ಳೆಯದಲ್ಲ. ನಿಮ್ಮ ಸ್ವಂತಿಕೆ ನಿಮ್ಮದಾಗಿರಲಿ. ಹನುಮಾನ್ ಚಾಲೀಸ್ ಪಠಣವು ನಿಮಗೆ ಧೈರ್ಯವನ್ನೂ ಕಾರ್ಯದಲ್ಲಿ ಉತ್ಸಾಹವನ್ನು ತುಂಬುವುದು.
ಮೀನ: ಸಲ್ಪ ಅಂತರದಲ್ಲಿ ನಿಮಗೆ ಸಿಗಬೇಕಾದ ಆಸ್ತಿಯು ಬೇರೆಯವರ ಕೈ ಸೇರುವುದು. ವಾಹನ ರಿಪೇರಿಗೆ ಹಣವು ಖರ್ಚಾಗಬಹುದು. ನಿಮ್ಮದಲ್ಲದ ವಸ್ತುಗಳನ್ನು ಇಟ್ಟುಕೊಳ್ಳುವುದು ಒಳ್ಳೆಯದಲ್ಲ. ಅವರಿಗೆ ಕೊಟ್ಟುಬಿಡಿ. ಮತ್ತೂ ಅತಿಯಾದ ಅನಗತ್ಯ ಬಯಕೆಯೂ ನಿಮ್ಮ ನಿತ್ಯ ಜೀವನಕ್ಕೆ ಒಳ್ಳೆಯದಲ್ಲ. ಅವಶ್ಯಕತೆಗಳನ್ನು ಪೂರೈಸಿಕೊಳ್ಳ ನಿಮ್ಮ ಹಣದ ವಿನಿಯೋಗವಾಗಲಿ. ಲಾಭಾಧಿಪತಿಯು ವ್ಯಯದಲ್ಲಿದ್ದು ಹಣವನ್ನು ನಿಲ್ಲದಂತೆ ಮಾಡುವನು. ನಿಮಗೆ ಯಾರಾದರೂ ಏನಾದರೂ ಮಾಡಿಸಿದ್ದಾರೇನೋ ಎನ್ನುವ ಅನುಮಾನವೂ ಕಾಡಬಹುದು. ಮೃತ್ಯುಂಜಯನನ್ನು ಆರಾಧಿಸಿ. ಸಂಕಷ್ಟಗಳು ಕಡಿಮೆಯಾದಾವು.