Horoscope Today: ಧನು, ಮಕರ, ಕುಂಭ, ಮೀನಾ ರಾಶಿಯವರ ಮಾ.27ರ ರಾಶಿ ಭವಿಷ್ಯ ಹೀಗಿದೆ

|

Updated on: Mar 27, 2023 | 6:15 AM

ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಮಾರ್ಚ್ 27) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Horoscope Today: ಧನು, ಮಕರ, ಕುಂಭ, ಮೀನಾ ರಾಶಿಯವರ ಮಾ.27ರ ರಾಶಿ ಭವಿಷ್ಯ ಹೀಗಿದೆ
ನಿತ್ಯಭವಿಷ್ಯ
Follow us on

ಸೋಮವಾರ ಶುಭದಿನ. ಬಿಲ್ವಪತ್ರಿ ಪ್ರಿಯ ಶಂಭೋ ಶಂಕರನ ದಿನವಾಗಿದ್ದು, ಶಿವನ ಆರಾಧನೆಗೆ ಬಹಳ ಯೋಗ್ಯವಾಗಿದೆ. ಓಂ ನಮಃ ಶಿವಾಯ ಎಂಬ ಮಂತ್ರವು ಬಹಳ ಶೇಷ್ಠವಾಗಿದೆ. ಪ್ರತಿ ದಿನ ಸೂರ್ಯ, ಚಂದ್ರ ಹುಟ್ಟುತ್ತಾರೆ. ಭೂಮಿ ತಿರುಗುತ್ತಿರುತ್ತೆ. ಪ್ರತಿಯೊಬ್ಬರ ಜೀವನವು ನಡೆಯುತ್ತಲೇ ಇರುತ್ತೆ. ದಿನ, ಸಮಯ ಎಲ್ಲರಿಗೂ ಒಂದೇ ಆದ್ರೂ ಜೀವನದಲ್ಲಿ ನಡೆಯುವ ಘಟನೆಗಳು ವಿಭಿನ್ನ. ಇದಕ್ಕೆ ಕಾರಣ ನಮ್ಮ ಜನ್ಮ ರಾಶಿಗಳಲ್ಲಾಗುವ ಬದಲಾವಣೆ. ನಮ್ಮ ಆರೋಗ್ಯ, ಯಶಸ್ಸು, ಸಂತೋಷ, ನೆಮ್ಮದಿ ಎಲ್ಲವೂ ನಮ್ಮ ರಾಶಿಗಳ ಮೇಲೆ ಅವಲಂಬಿತವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಕೆಲವರು ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗಾದರೆ ಇಂದಿನ (2023 ಮಾರ್ಚ್ 27) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭ ಎಂದು  ತಿಳಿದುಕೊಳ್ಳಿ.

ಧನು: ಸಾಲಬಾಧೆಯು ನಿಮ್ಮನ್ನು ಅತಿಯಾಗಿ ಕಾಡಲಿದೆ. ಅಷ್ಟೇ ಅಲ್ಲದೇ ಸಾಲ ಕೊಟ್ಟವರೂ ನಿಮ್ಮನ್ನು ದಿನವೂ ಕೇಳುವರು. ಮಾತನ್ನು ಆಡುವಾಗ ಪದಗಳ ಮೇಲೆ ಗಮನವಿರಲಿ. ಕೆಲವು ಪದಗಳೂ ನಿಮ್ಮ ಜೊತೆ ವೈಮನಸ್ಯವನ್ನು ತರುವುದು. ಪತ್ನಿಯಿಂದ ಅವಮಾನಕ್ಕೆ ಒಳಗಾಗಬೇಕಾಗಿಬರಬಹುದು. ಭವಿಷ್ಯದ ಕುರಿತು ಆಲೋಚನೆಯಲ್ಲಿ ಮಗ್ನರಾಗಿರುತ್ತೀರಿ. ಮಕ್ಕಳ ವಿದ್ಯಾಭ್ಯಾಸಕ್ಕೆ ಸಂಬಂಧಪಟ್ಟಂತೆ ನಿಮ್ಮಲ್ಲಿ ಒಂದಿಷ್ಟು ಗೊಂದಲಗಳು ಇರಬಹುದು. ವಿವಾಹವಾಗಲು ಬಹಳ ಆತುರಪಡುವಿರಿ. ಗೋಗ್ರಾಸವನ್ನು ಕೊಟ್ಟು ನಿಮ್ಮ ಕಾರ್ಯವನ್ನು ಸುಗಮಗೊಳಿಸಿಕೊಳ್ಳಿ.

ಮಕರ: ಇಂದು ನಿನಗೆ ಹಣಕಾಸಿಗೆ ಸಂಬಂಧಿಸಿದ ತೊಂದರೆಗಳು ಬರಲಿದ್ದು ಅದನ್ನು ಮಿತ್ರರ ಸಹಾಯದಿಂದ ಎದುರಿಸುವಿರಿ. ಮನೆಯಲ್ಲಿ ಧಾರ್ಮಿಕ ಕಾರ್ಯಗಳು ನಡೆಯಲಿವೆ. ಇಂದು ವಾಹನದ ಸಮಯವು ವ್ಯತ್ಯಾಸವಾದ್ದರಿಂದ ನಡೆಯಬೇಕಾಗ ಸ್ಥಿತಿ ಬರಬಹುದು. ತಂದೆಯ ಜೊತೆ ಉಂಟಾದ ಮನಸ್ತಾಪದಿಂದ ಕಂಗೆಡಲಿದ್ದೀರಿ. ಮಾತುಗಾರರಾಗಿದ್ದರೆ ಒಳ್ಳೆಯ ಅವಕಾಶಗಳು ಸಿಗಲಿವೆ. ಮೋಸದಿಂದ ನಿಮ್ಮ ಹಣವು ಕಳೆದುಹೋಗುವುದು. ರಾಜಕೀಯ ಕ್ಷೇತ್ರದಲ್ಲಿ ನಿಮಗೆ ಗೌರವಗಳು ಸಿಗಲಿವೆ. ನಿಮ್ಮ ಪ್ರೇಮಪ್ರಕರಣವು ಗಂಭೀರಸ್ಥಿತಿಯನ್ನು ತಲುಪಲಿದೆ. ತಾಳ್ಮೆಯಿಂದ ವ್ಯವಹರಿಸಿ, ಸರಿ ಮಾಡಿಕೊಳ್ಳಿ. ಶನೈಶ್ಚರ ದೇವಾಲಯಕ್ಕೆ ಹೋಗಿ ಎಳ್ಳೆಣ್ಣೆಯ ದೀಪವನ್ನು ಬೆಳಗಿ ಬನ್ನಿ.

ಕುಂಭ: ನೀವು ಸ್ವಂತ ಉದ್ಯೋಗವನ್ನು ಹೊಂದಿದ್ದರೆ ಇಂದು ನೀವು ಲಾಭವನ್ನು ಗಳಿಸಬಹುದಾಗಿದೆ. ಹತ್ತಾರು ವಿಚಾರಗಳಲ್ಲಿ ಆಸಕ್ತಿಯನ್ನು ಹೊಂದುವಿರಿ. ಮಹಿಳೆಯರಿಂದ ನಿಮಗೆ ವಿರೋಧವು ಬರಬಹುದು. ಇಂದು ನೀವು ಬಯಸಿದ್ದನ್ನು ಪಡೆದುಕೊಳ್ಳುವ ತವಕದಲ್ಲಿ ಇರುವಿರಿ. ಅತಿಯಾದ ಆತುರದಲ್ಲಿ ಅನಾಹುತವನ್ನು ಮಾಡಿಕೊಳ್ಳುವ ಸಾಧ್ಯತೆ ಇದೆ. ಹೊರಗಡೆಗೆ ಊಟಕ್ಕೆ ಹೋಗಲಿದ್ದೀರಿ. ಸಂಪನ್ಮೂಲಗಳನ್ನು ರಕ್ಷಿಸಿಕೊಳ್ಳುವ ಪ್ರಯತ್ನ ಮಾಡುವಿರಿ. ಕುಟುಂಬದವರ ಜೊತೆ ಸಮಯವನ್ನು ಕಳೆಯುವಿರಿ. ಉಮಾಸಹಿತನಾದ ಶಿವನ ದೇವಾಲಯಕ್ಕೆ ಹೋಗಿ ಅಭಿಷೇಕ ಮಾಡಿಸಿ.

ಮೀನ: ಪಾಲುದಾರಿಕೆಯ ವಿಚಾರದಲ್ಲಿ ಹೆಜ್ಜೆಯನ್ನು ಜಾಗರೂಕತೆಯಿಂದ ಇಡಿ. ನೀವು ಅಂದುಕೊಂಡ ರೀತಿಯಲ್ಲಿ ನಡೆಯದೇ ವಿರುದ್ಧವಾಗಿ ನಡೆಯುವುದನ್ನು ಕಂಡು ನಿರಾಸೆಗೊಳ್ಳುವಿರಿ. ಆರೋಗ್ಯವು ಕೈ ಕೊಡಬಹುದು. ತುರ್ತು ಆಹಬೇಕಾದ ಕೆಲಸಗಳಿಗೆ ತೊಂದರೆಯಾಗಬಹುದು. ಧನಪ್ರಾಪ್ತಿಯು ಆಗುವಂತೆ ಇದ್ದರೂ ಆಗದೇ ಕೈತಪ್ಪಿ ಹೋಗಬಹುದು. ವಿವಾಹಸಮಾರಂಭದಲ್ಲಿ ನಿಮ್ಮ ಉಪಸ್ಥಿತಿಯು ಇರಲಿದೆ. ವಿಶ್ವಾಸಘಾತದಿಂದ ನೋವಾಗಲಿದೆ. ನಿಮ್ಮ ಆಶೀರ್ವಾದವನ್ನು ಪಡೆಯಲು ಮೊಮ್ಮಕ್ಕಳು ಬರಬಹುದು. ಮಕ್ಕಳಿಂದ ಪ್ರಶಂಸೆಯು ಸಿಗಲಿದೆ. ಅತ್ಯಾಪ್ತರ ಜೊತೆ ಕಾಲವನ್ನು ಕಳೆಯುವಿರಿ.

-ಲೋಹಿತಶರ್ಮಾ ಇಡುವಾಣಿ