Nitya Bhavishya: ಧನು, ಮಕರ, ಕುಂಭ, ಮೀನಾ ರಾಶಿಯವರ ಇಂದಿನ ಭವಿಷ್ಯ ಹೀಗಿದೆ

|

Updated on: Mar 09, 2023 | 6:30 AM

2023 ಮಾರ್ಚ್ 9 ಗುರುವಾರ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

Nitya Bhavishya: ಧನು, ಮಕರ, ಕುಂಭ, ಮೀನಾ ರಾಶಿಯವರ ಇಂದಿನ ಭವಿಷ್ಯ ಹೀಗಿದೆ
ಪ್ರಾತಿನಿಧಿಕ ಚಿತ್ರ
Image Credit source: pipanews.com
Follow us on

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಮಾರ್ಚ್ 9 ಗುರುವಾರ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1945, ಶುಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಕುಂಭ ಮಾಸ, ಮಹಾನಕ್ಷತ್ರ: ಪೂರ್ವಾಭಾದ್ರ, ಮಾಸ: ಫಾಲ್ಗುಣ, ಪಕ್ಷ: ಕೃಷ್ಣ, ವಾರ:ಗುರು, ತಿಥಿ: ದ್ವಿತೀಯಾ, ನಿತ್ಯನಕ್ಷತ್ರ: ಹಸ್ತಾ, ಯೋಗ: ಗಂಡ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 45 ನಿಮಿಷಕ್ಕೆ, ಸೂರ್ಯಾಸ್ತ ಬೆಳಗ್ಗೆ 06 ಗಂಟೆ 40 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 02: 13 ರಿಂದ ಮಧ್ಯಾಹ್ನ 03:42ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 06:46 ರಿಂದ ಬೆಳಗ್ಗೆ 08:15ರ ವರೆಗೆ, ಗುಳಿಕ ಕಾಲ ಬೆಳಗ್ಗೆ 09:45 ರಿಂದ 11:14ರ ವರೆಗೆ.

ಧನು: ಅನವಶ್ಯಕ ವೆಚ್ಚವು ಇಂದಾಗಲಿದೆ. ಗಮನಿಸಿಕೊಂಡು ನಿಯಂತ್ರಿಸಿ. ಹೆಚ್ಚು ಕೋಪವನ್ನು ತೋರಿಸಲಿದ್ದೀರಿ‌. ಯಾರ ಒತ್ತಾಯಕ್ಕೋ ಮಣಿದು ನಿಮ್ಮ ನಿರ್ಧಾರಗಳನ್ನು ಬದಲಿಸಿಕೊಳ್ಳಬೇಡಿ. ದೀಪದ ಬುಡ ಎಂದಿಗೂ ಕತ್ತಲಾಗಿರುತ್ತದೆ. ಇನ್ನೊಂದು ದೀಪವನ್ನು ಹಚ್ಚಿ. ಕತ್ತಲೆ ದೂರವಾಗುತ್ತದೆ. ಹಿಡಿದ ಕೆಲಸವನ್ನು ಬಿಡದೆ ಮುನ್ನಡೆಸುವ ಜಾಯಮಾನವು ನಿಮ್ಮ ಇಂದಿನ ಯಶಸ್ಸಿನ ಗುಟ್ಟುಗಳಲ್ಲೊಂದು. ಎಂತಹ ಸಂದರ್ಭದಲ್ಲಿಯೂ ಉದ್ವೇಗಕ್ಕೆ ಒಳಗಾಗಬೇಡಿ. ಎದೆ ನೋವು ಕಾಣಿಸಿಕೊಂಡೀತು. ಶಸ್ತ್ರಚಿಕಿತ್ಸೆಯವರೆಗೂ ಹೋಗಬಹುದಿ. ನಾಗನಿಗೆ ಹಾಲೆರೆದು ಪ್ರದಕ್ಷಿಣೆ ಬನ್ನಿ. ಇಂದು ಹುಟ್ಟಿದ ಪ್ರೇಮವು ಕೆಲವೇ ದಿನದಲ್ಲಿ ಸಾಯುತ್ತದೆ.

ಮಕರ: ಅಪರೂಪಕ್ಕೆ ಸಿಕ್ಕ ಸ್ನೇಹಿತರು ನಿಮ್ಮ ಬಳಿ ಹಣವನ್ನು ಖಾಲಿ‌ಮಾಡಿಸುವರು. ದಾಂಪತ್ಯಜೀವನವು ಜೀವನ್ಮರಣದ ಮಧ್ಯದಲ್ಲಿ ಒದ್ದಾಗುತ್ತಿದ್ದು ಬದುಕಿಸಿಕೊಳ್ಳಿ. ಇನ್ನೊಂದು ಜೀವವನ್ನು ಗರ್ಭದಲ್ಲಿ ಹೊತ್ತಿರುವವರು ನಡಿಗೆಯಲ್ಲೂ ಮನಸ್ಸಿನಲ್ಲೂ ಮಾತಿನಲ್ಲೂ ಎಚ್ಚರ, ಸಮಾಧಾನದಿಂದ ಇರಿ. ನಿಮ್ಮ ನ್ಯೂನತೆಗಳನ್ನು ಇನ್ನೊಬ್ಬರಿಗೆ ಹೇಳಬೇಡಿ. ಅವರು ಬಾಯಿಗೆ ಸಿಕ್ಕ ರಸಗವಳದಂತೆ ಚಪ್ಪರಿಸಿ ಸೇವಿಸುತ್ತಿರುತ್ತಾರೆ. ನಿರುದ್ಯೋಗದ ಸಮಸ್ಯೆ ಕಾಡುತ್ತಿದ್ದರೆ ವಿಘ್ನಗಳನ್ನು ಸಂಹರಿಸುವ ಗಣಪತಿಯನ್ನು ಪೂಜಿಸಿ ಉದ್ಯೋಗದ ಹುಡುಕಾಟಕ್ಕೆ ತೆರಳಿ.

ಕುಂಭ: ನಿಮ್ಮ ಗಟ್ಟಿಯಾದ ಸಂಕಲ್ಪವು ಯಶಸ್ಸಿನ ಗುಟ್ಟೂ ಆಗಿರಲಿದೆ. ಹಣವನ್ನು ಗಳಿಸುವ ಆಸೆಯು ತೀರ್ವವಾಗಿದ್ದರೂ ಸಫಲವಾಗುವುದಿಲ್ಲ‌. ಸಾಲದ ವಿಚಾರ ಬಂದರೆ ಮೌನವಹಿಸಿ, ಎದ್ದು ಹೋಗಿ ಅಥವಾ ವಿಷಯಾಂತರಿಸಿ. ಕಲಹಕ್ಕೆ ದಾರಿ ಮಾಡಿ ಕೊಡಬೇಡಿ. ಪಿತ್ರಾರ್ಜಿತ ಸಂಪತ್ತು ನಿಮಗೆ ಇಂದು ಉಪಯೋಗಕ್ಕೆ ಬರಲಿದೆ. ಸಂಗಾತಿಯು ನಿಮ್ಮ ಮೇಲೆ ಬೇಸರಗೊಂಡಾನು. ಇಂದು ನಿಮಗೆ ಸಿಗುವ ಸಂಪತ್ತು ನಿಮ್ಮ ಶ್ರಮಕ್ಕೆ ಅನುಸಾರವಾಗಿ ಸಿಗಲಿದೆ. ಬರೆವಣಿಗೆ ಅಥವಾ ಮಾತಿನಿಂದ‌ ನಿಮಗೆ ಕೀರ್ತಿಯು ಲಭಿಸುವುದು. ಆರೋಗ್ಯವು ಚೆನ್ನಾಗಿರಲಿದೆ. ಶನೈಶ್ಚರನ ಜಪ ಮಾಡಿ.

ಮೀನ: ಬದುಕು ಸುಂದರವಾದ ಮನೆಯ ಕಿಟಕಿ ಇದ್ದಂತೆ. ತೆರೆದರೆ ಬೆಳಕು, ತೆರೆಯದಿದ್ದರೆ ಕತ್ತಲು ಇರುತ್ತದೆ ಎನ್ನುವುದನ್ನು ಅರಿತುಕೊಳ್ಳಿ. ಆಯ್ಕೆಯನ್ನು ನೀವೇ ಮಾಡಿ. ಹಾಗೆಯೇ ಶ್ರಮಪಟ್ಟರೆ ಸುಖ, ಶ್ರಮಪಡದಿದ್ದರೆ ಕಷ್ಟ. ವಿವೇಚನೆಯನ್ನು ಮೀರಿ ಕೆಲಸವನ್ನು ಮಾಡಬೇಡಿ. ಜೀವನದಲ್ಲಿ ಮನುಷ್ಯ ಎಷ್ಟು ನೋವು ಅವಮಾನ ಪಡುತ್ತಾನೋ, ಅಷ್ಟೇ ಚೆನ್ನಾಗಿ ಬದುಕುತ್ತಾನೆ ಎಂಬುದು ಸತ್ಯವಿಚಾರವಾಗಿದೆ. ಛಲವನ್ನು ಇಟ್ಟುಕೊಳ್ಳಿ. ಬದಲಾವಣೆಯೇ ಶಾಶ್ವತ ಎನ್ನುವ ವಾಕ್ಯವನ್ನು ಸ್ಮರಿಸುತ್ತ ಮುಂದಡಿಯಿಡಿ. ನೆಮ್ಮದಿ ನಿಮ್ಮೆದುರು ಇರಲಿದೆ. ಸಹಜತೆಗೆ ಹೆಚ್ಚು ಒತ್ತು ಕೊಡುವಿರಿ. ಶಿವಪಂಚಾಕ್ಷರಸ್ತೋತ್ರವನ್ನು ಪಠಿಸಿ.

ಲೋಹಿತಶರ್ಮಾ ಇಡುವಾಣಿ