ಶುಭೋದಯ ಓದುಗರೇ. ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದ್ರೆ ಇಂದಿನ (2023 ಏಪ್ರಿಲ್ 29) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ : ಭರಣೀ, ಮಾಸ : ವೈಶಾಖ, ಪಕ್ಷ : ಶುಕ್ಲ, ವಾರ : ಶನಿ, ತಿಥಿ : ನವಮೀ, ನಿತ್ಯನಕ್ಷತ್ರ : ಮಘಾ, ಯೋಗ : ಅತಿಗಂಡ, ಕರಣ : ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 12 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 47 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 09:21 ರಿಂದ 10:55ರ ವರೆಗೆಮ ಯಮಘಂಡ ಕಾಲ ಮಧ್ಯಾಹ್ನ 02:04 ರಿಂದ 03:39ರ ವರೆಗೆ, ಗುಳಿಕ ಕಾಲ ಬೆಳಗ್ಗೆ 06:12 ರಿಂದ 07:47ರ ವರೆಗೆ.
ಧನು: ನೂತನ ಉದ್ಯೋಗವನ್ನು ಪ್ರಾರಂಭಿಸುವ ಅಲೋಚನೆ ಇದ್ದರೆ ಸದ್ಯ ಕೈಬಿಡಿ. ಉದ್ಯೋಗಕ್ಕೆ ಸಂಬಂಧಿಸಿದಂತೆ ಗೊಂದಲಗಳನ್ನು ಪೂರ್ಣವಾಗಿ ಸರಿ ಮಾಡಿಕೊಳ್ಳಿ. ಮಕ್ಕಳ ವಿಚಾರದಲ್ಲಿ ನಿಮಗೆ ಹೆಮ್ಮೆ ಎನಿಸಬಹುದು. ಸುಂದರವಾದ ಪುರುಷನ ಬಲೆಗೆ ಬೀಳುವಿರಿ. ಮೋಜಿನಲ್ಲಿ ಜಾಗರೂಕರಾಗಿರಿ. ಅಧಿಕವಾಗಿ ಖರ್ಚಾಗುವುದನ್ನು ನಿಲ್ಲಿಸಿ. ಧಾರ್ಮಿಕಕ್ಷೇತ್ರಗಳಿಗೆ ಭೇಟಿ ನೀಡುವ ಸಾಧ್ಯತೆ ಇದೆ. ಮನಸ್ಸು ಬಹಳ ಚಂಚಲವಾಗಲಿದ್ದು ಸಲ್ಲದ್ದರ ಬಗ್ಗೆ ಆಸೆ ಮೂಡಬಹುದು. ಹೆಚ್ಚಿನ ಸಂಪತ್ತಿಗೆ ಆಸೆ ಪಟ್ಟು ಇರುವುದನ್ನು ಕಳೆದುಕೊಳ್ಳಬಹುದು. ಸಕಾರಾತ್ಮಕ ಚಿಂತನೆಗಳು ಇರಲಿ. ಅತಿಯಾದ ಆಲೋಚನೆಯಿಂದ ಪ್ರಯೋಜನವಾಗದು.
ಮಕರ: ಇಂದು ನಿಮಗೆ ಭವಿಷ್ಯದ ಬಗ್ಗೆ ಬಹಳ ಆಲೋಚನೆ ಇರಲಿದೆ. ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಬೇಕೆನಿಸುವುದು. ಪ್ರಸಿದ್ಧ ವ್ಯಕ್ತಿಗಳು ಅನಿರೀಕ್ಷಿತವಾಗಿ ಸಿಗುವರು. ದೂರಪ್ರಯಾಣದಿಂದ ನಿಮಗೆ ತೊಂದರೆಗಳು ಕಾಣಿಸಿಕೊಳ್ಳುವುದು. ದೊಡ್ಡ ಅಪಾಯವೊಂದು ತಪ್ಪಿಹೋಗಿವುದು. ಮನೆಯಲ್ಲಿ ಕಿರಿಕಿರಿಯಾದ ಕಾರಣ ಹೊರನಡೆಯು ಸಾದ್ಯತೆ ಇದೆ. ಎಂದೋ ಮಾಡಿದ ತಪ್ಪು ಇಂದು ಬೆಳಕಿಗೆ ಬಂದು ಅವಮಾನವನ್ನು ಎದುರಿಸುವಿರಿ. ಕೃಷಿಯಲ್ಲಿ ಏನನ್ನಾದರೂ ಸಾಧಿಸಬೇಕೆನ್ನುವ ಹಂಬಲ ಇರಲಿದೆ. ಸಂಗಾತಿಯ ಜೊತೆ ಕಾಲಕಳೆಯುವಿರಿ. ತಂದೆಯಿಂದ ಅಸಮಾಧನಾವಾದೀತು. ದೈವವೇ ನಿಮ್ಮನ್ನು ಅನುಕೂಲ ವಾತಾವರಣದ ಕಡೆ ಒಯ್ಯಲಿದೆ.
ಕುಂಭ: ನೀವಂದುಕೊಂಡ ಉದ್ಯೋಗವು ಸಿಗದೇ ಹೋಗಬಹದು. ಅನಿರೀಕ್ಷಿತ ಪ್ರಯಾಣವನ್ನು ಮಾಡಬೇಕಾಗಬಹುದು. ಮಕ್ಕಳಿಂದ ಸಂತೋಷವಾಗಲಿದೆ. ತಿರುಗಾಟದಿಂದ ಏನಾದರೂ ಅನಾಹುತವಾಗಬಹದು. ಮಾತುಗಳನ್ನು ಆಡಿವಾಗ ಎಚ್ಚರವಿರಲಿ. ಏನನ್ನಾದರೂ ಹೇಳಿ ಅಪಹಾಸ್ಯಕ್ಕೆ ಸಿಲುಕಬೇಡಿ. ಬಲವಂತವಾಗಿ ಯಾರನ್ನೂ ನಿಮ್ಮವರನ್ನಾಗಿ ಮಾಡಿಕೊಳಗಳಬೇಡಿ. ಬೇರೆಯವರ ಬಗ್ಗೆ ಮಾತನಾಡುವ ಮೊದಲು ನಿಮ್ಮ ಬಗ್ಗೆ ಸರಿಯಾದ ತಿಳಿವಳಿಕೆ ಇರಲಿ. ಮಕ್ಕಳ ವಿಚಾರದಲ್ಲಿ ನೀವು ತೋರುವ ಅನಾದರದಿಂದ ಕುಟುಂಬದಲ್ಲಿ ವಿವಾದವು ಹುಟ್ಟಿಕೊಳ್ಳಬಹುದು. ನಡೆದಾಡುವ ಹಾದಿಗಳು ಒಂದೇ ರೀತಿ ಇರದು ಎನ್ನುವುದು ಗಮನದಲ್ಲಿಟ್ಟುಕೊಳ್ಳಿ.
ಮೀನ: ಬುದ್ಧಿಪೂರ್ವಕವಾಗಿ ನೀವಿಂದು ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸುವಿರಿ. ನಿಮಗಿರುವ ಗೊಂದಲವನ್ನು ಪರಿಹರಿಸಲು ನಿಮಗೆ ನೂರಾರು ಮಾರ್ಗಗಳು ಇರಲಿವೆ. ತಾಯಿ ಅಥವಾ ತಾಯಿಯ ಕಡೆಯಿಂದ ಬೇಕಾದ ಸಹಾಯವು ನಿಮಗೆ ಸಿಗುವುದು. ಉದ್ಯೋಗದಲ್ಲಿ ಸ್ವಲ್ಪ ಆಲಸ್ಯ ವಿರಲಿದೆ. ಸಂಗಾತಿಯ ನೋವಿನಲ್ಲಿ ಭಾಗಿಯಾಗಿ. ಅವರಿಗೆ ನೆಮ್ಮದಿ ಸಿಕ್ಕೀತು. ಹಿರಿಯರ ಉಪದೇಶವನ್ನು ಕೇಳುವಿರಿ. ದೇವತಾದರ್ಶನವನ್ನು ಪಡೆಯುವುದು ಉತ್ತಮ. ದಾಂಪತ್ಯದಲ್ಲಿ ಕಲಹವಿದ್ದರೂ ತಣ್ಣಗಾಗಿ ಹೊಂದಾಣಿಕೆಯಿಂದ ಮುಂದುವರಿಯುವಿರಿ. ಅವಿವಾಹಿತರಿಗೆ ಶುಭವಾರ್ತೆ ಬರಲಿದೆ.
-ಲೋಹಿತಶರ್ಮಾ ಇಡುವಾಣಿ