Nithya Bhavishya: ಈ ರಾಶಿಯವರಿಗೆ ಉದ್ಯೋಗದಲ್ಲಿ ಬಡ್ತಿ ಸಾಧ್ಯತೆ
ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಏಪ್ರಿಲ್ 29) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.
ಶುಭೋದಯ ಓದುಗರೇ. ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದ್ರೆ ಇಂದಿನ (2023 ಏಪ್ರಿಲ್ 29) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ : ಅಶ್ವಿನೀ, ಮಾಸ : ವೈಶಾಖ, ಪಕ್ಷ : ಶುಕ್ಲ, ವಾರ : ಶನಿ, ತಿಥಿ : ನವಮೀ, ನಿತ್ಯನಕ್ಷತ್ರ : ಮಘಾ, ಯೋಗ: ಅತಿಗಂಡ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 12 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 47 ನಿಮಿಷಕ್ಕೆ, ರಾಹು ಕಾಲ 09:21 ರಿಂದ 10:55ರ ವರೆಗೆ, ಯಮಘಂಡ ಕಾಲ 02:04 ರಿಂದ 03:39 ವರೆಗೆ, ಗುಳಿಕ ಕಾಲ 06:12 ರಿಂದ 07:47 ರವರೆಗೆ.
ಮೇಷ: ನೀವು ಮಾಡಲು ಹೊರಟ ಕೆಲಸದ ಮೇಲೇ ಹೆಚ್ಚು ಗಮನವಿರಲಿ. ಅನ್ಯ ವಿಚಾರದಲ್ಲಿ ನೀವು ತಲೆ ಹಾಕಿ ಮುಖ್ಯ ಕೆಲಸವನ್ನು ಮರೆಯಬಹುದು. ಉದ್ಯೋಗದ ಸ್ಥಳದಲ್ಲಿ ನಿಮ್ಮ ಕುರಿತು ಮೇಲಧಿಕಾರಿಗಳು ಮಾತನಾಡಿಕೊಂಡಾರು. ತಪ್ಪು ನಡೆಯದೇ ಇದ್ದಾಗ ಅದಕ್ಕೆ ಹೆದರಬೇಕಾದ ಅವಶ್ಯಕತೆ ಇಲ್ಲ. ನಿಮ್ಮ ಕೆಲಸವನ್ನು ಸುಲಭಗೊಳಿಸುವ ವಿಧಾನವನ್ನು ಕಂಡುಕೊಳ್ಳಿ. ಸ್ನೇಹಿತರ ಜೊತೆ ಆಪ್ತಸಮಾಲೋಚನೆ ನಡೆಯಲಿದೆ. ಉದ್ಯೋಗದಲ್ಲಿ ಮೇಲಿನ ಹಂತಕ್ಕೆ ಹೋಗುವ ಸಾಧ್ಯತೆ ಇದೆ. ನಿಮ್ಮವರ. ಸಹಕಾರವನ್ನು ಸ್ಮರಿಸಿಕೊಳ್ಳಿ. ಕೃತಜ್ಞತೆ ಇರಲಿ.
ವೃಷಭ: ಕೆಟ್ಟವರ ಸಹವಾಸದಿಂದ ಕೆಟ್ಟ ಹೆಸರೇ ಬರಲಿದೆ. ಕೆಸರಿನ ಜೊತೆ ಸರಸವಾಡಿದರೂ ವಿರಸವಾಡಿದರೂ ಕೆಸರಾಗುವುದು ನಿಮ್ಮದೇ ಶರೀರ. ಮನೆಯ ಕಾರ್ಯದಲ್ಲಿ ನೀವು ಭಾಗಿಯಾಗುವಿರಿ. ನಿಗದಿತ ಸಮಯಕ್ಕೆ ನಿಮ್ಮ ಕೆಲಸಗಳು ಮುಗಿಯದು. ಮುಂದೆ ಮಾಡಿದರಾಯಿತು ಎಂಬ ಮಾನಸಿಕ ಸ್ಥಿತಿಯನ್ನು ಬಿಡುವುದು ಒಳ್ಳೆಯದು. ತಂದೆಯಿಂದ ಹಿತವಚನವು ಸಿಗಬಹುದು. ಹಳೆಯ ಸ್ನೇತರು ದೂರವಾಣಿಯ ಮೂಲಕ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಾರು.ತಾಳ್ಮೆಯಿಂದ ಕೇಳಿ. ಸಾಧ್ಯವಾದರೆ ಸಲಹೆ ಕೊಡಿ. ಅವರಿಗೆ ಬೇಸರವಾಗುವಂತೆ ನೋಡಿಕೊಳ್ಳಬೇಡಿ.
ಮಿಥುನ: ಕಛೇರಿಯಲ್ಲಿಯೇ ಅಥವಾ ಕಛೇರಿಯ ಕೆಲಸಕ್ಕೇ ಹೆಚ್ಚಿನ ಸಮಯವನ್ನು ವ್ಯಯಮಾಡುವಿರಿ. ಕುಟುಂಬದಲ್ಲಿ ನಿಮ್ಮ ಬಗ್ಗೆ ಆಡಿಕೊಂಡಾರು. ಸಹೋದ್ಯೋಗಿಗಳು ನಿಮ್ಮ ಮೇಲೆ ಕೆಲಸದ ಭಾರವನ್ನು ಹೊರಿಸಬಹುದು. ನಿಮ್ಮ ನೋವನ್ನು ಸಂಗಾತಿಯ ಜೊತೆ ಹಂಚಿಕೊಳ್ಳಿ. ಮನೆಗೆ ಬಂದ ಅತಿಥಿಗಳ ಜೊತೆ ಸಮಯವನ್ನು ಕಳೆಯುವಿರಿ. ಬುದ್ಧಿವಂತಿಕೆಯನ್ನು ಪ್ರದರ್ಶಿಸಲು ಹೋಗಿ ದಡ್ಡರಾಗುವಿರಿ. ವಿದ್ಯಾರ್ಥಿಗಳು ಶಿಕ್ಷಕರ ಸಹಾಯವನ್ನು ಪಡೆದು ಮುಂದಿನ ಓದಿನ ಬಗ್ಗೆ ಗಮನಹರಿಸಬಹುದು. ಕೆಲಸವು ಅಪೂರ್ಣವಾಗಿ ನೀವು ಆದಷ್ಟು ಬೇಗ ಮುಗಿಸುವ ತವಕದಲ್ಲಿ ಇರುತ್ತೀರಿ.
ಕಟಕ: ಮಕ್ಕಳಿಂದ ನಿಮಗೆ ಸಂತೋಷದ ಸುದ್ದಿ ಬರಬಹುದು. ಹೂಡಿಕೆಯನ್ನು ಮಾಡಿ ಹಣವನ್ನು ಉಳಿಸಿಕೊಳ್ಳುವುದು ಉತ್ತಮ. ಇಂದಿನ ಒತ್ತಡವನ್ನು ಚೆನ್ನಾಗಿ ನಿಭಾಯಿಸಬಲ್ಲಿರಿ. ದುರಭ್ಯಾಸದಿಂದ ದೂರವಿರಲು ಯತ್ನಿಸಿ. ಸಹವಾಸದಿಂದ ತೊಂದರೆಯಾದೀತು. ಉದ್ಯೋಗವನ್ನು ಬಿಡುವ ಮನಸ್ಸಾಗಬಹುದು. ಸುಂದರವಾದ ಪ್ರದೇಶಕ್ಕೆ ಹೋಗಬೇಕೆನ್ನುವ ಬಯಕೆ ಇರಲಿದೆ. ಚಂಚಲವಾದ ಮನಸ್ಸಿಗೆ ಧ್ಯಾನವೊಂದೆ ಪರಿಹಾರ. ಕೃಷಿಯು ನಿಮಗೆ ಇಷ್ಟವಾದ ವಿಷಯವಾಗಿದ್ದು ಅತ್ತ ಗಮನಹರಿಸುವಿರಿ. ನಿಮ್ಮ ಕಷ್ಟಕ್ಕೆ ಬಂದವರು ಆಪ್ತರಾಗಬಹುದು. ಮನೆಯ ಕೆಲಸವು ನಿಧಾನವಾಗಿ ಸಾಗಬಹುದು. ಯಾವುದನ್ನೇ ಆದರೂ ಸಾಮರ್ಥ್ಯದಷ್ಟೇ ಸೇವಿಸಿ. ಇಲ್ಲವಾದರೆ ಅಜೀರ್ಣವಾದೀತು.