Daily Horoscope: ಧನು, ಮಕರ, ಕುಂಭ, ಮೀನಾ ರಾಶಿಯವರ ಇಂದಿನ ರಾಶಿ ಭವಿಷ್ಯ ಹೀಗಿದೆ

ನೀವು ಧನು, ಮಕರ, ಕುಂಭ, ಮೀನಾ ರಾಶಿಯವರೇ? ಹಾಗಿದ್ದರೆ ಇಂದಿನ (2023 ಏಪ್ರಿಲ್​ 03) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Daily Horoscope: ಧನು, ಮಕರ, ಕುಂಭ, ಮೀನಾ ರಾಶಿಯವರ ಇಂದಿನ ರಾಶಿ ಭವಿಷ್ಯ ಹೀಗಿದೆ
ಇಂದಿನ ರಾಶಿ ಭವಿಷ್ಯImage Credit source: freepik
Follow us
Rakesh Nayak Manchi
|

Updated on: Apr 03, 2023 | 5:50 AM

ದಿನ, ಸಮಯ ಎಲ್ಲರಿಗೂ ಒಂದೇ ಆದ್ರೂ ಜೀವನದಲ್ಲಿ ನಡೆಯುವ ಘಟನೆಗಳು ವಿಭಿನ್ನ. ಇದಕ್ಕೆ ಕಾರಣ ನಮ್ಮ ಜನ್ಮ ರಾಶಿಗಳಲ್ಲಾಗುವ ಬದಲಾವಣೆ. ನಮ್ಮ ಆರೋಗ್ಯ, ಯಶಸ್ಸು, ಸಂತೋಷ, ನೆಮ್ಮದಿ ಎಲ್ಲವೂ ನಮ್ಮ ರಾಶಿಗಳ ಮೇಲೆ ಅವಲಂಬಿತವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಕೆಲವರು ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗಾದರೆ ಇಂದಿನ (2023 ಏಪ್ರಿಲ್​ 03) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭ ಎಂದು  ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೀನ ಮಾಸ, ಮಹಾನಕ್ಷತ್ರ : ಅಶ್ವಿನೀ, ಮಾಸ : ಚೈತ್ರ, ಪಕ್ಷ : ಶುಕ್ಲ, ವಾರ : ಸೋಮ, ತಿಥಿ : ತ್ರಯೋದಶೀ, ನಿತ್ಯನಕ್ಷತ್ರ : ಮಘಾ, ಯೋಗ : ಗಂಡ, ಕರಣ : ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 28 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 43 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 07:59 ರಿಂದ 09:32ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 11:04 ರಿಂದ 12:36ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 02:08 ರಿಂದ 03:40ರ ವರೆಗೆ.

ಧನುಸ್ಸು: ಇಂದು ನಿಮಗೆ ಅಧಿಕ ಖರ್ಚಿನ‌ ದಾರಿಗಳೇ ಕಾಣಲಿವೆ. ಉದ್ಯೋಗದ ನಿಮಿತ್ತ ದೂರದ ಊರಿಗೆ ಪ್ರಯಾಣ ಮಾಡಲಿದ್ದೀರಿ. ಸೋಲುವ ಭೀತಿಯಿಂದ ಕುಗ್ಗುವಿರಿ. ಬಂಧುಗಳಿಗೆ ಮಾತಿನಿಂದ ಬೇಸರ ಮೂಡಿಸುವಿರಿ. ತಲೆನೋವು ನಿಮಗೆ ಬಹಳ ಸಮಸ್ಯೆಯನ್ನು ಕೊಡಲಿದೆ. ಎಲ್ಲವನ್ನೂ ಗುಪ್ತವಾಗಿ ಇಡಲು ಪ್ರಯತ್ನಿಸುವಿರಿ. ಮನೆಯ ವಿರೋಧದ ನಡುವೆಯೂ ನೀವು ಮಾಡಬೇಕಾದ ಕೆಲಸವನ್ನು ಮಾಡುವಿರಿ. ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಳ್ಳುವಿರಿ.

ಮಕರ: ವ್ಯವಹಾರದಲ್ಲಿ ವ್ಯತ್ಯಾಸವಾದ ಕಾರಣ ನೆಮ್ಮದಿ ಇಲ್ಲದೇ ಅದೇ ಚಿಂತಯಲ್ಲಿ ಇರುವಿರಿ. ಸ್ಥಾನದಿಂದ ಚ್ಯುತರಾಗುವ ಭಯವಿರಲಿದೆ. ಆರ್ಥಿಕ ಅಭಿವೃದ್ಧಿಗೆ ಗಟ್ಟಿತನದ ನಿರ್ಧಾರಗಳು ಅವಶ್ಯಕ. ಅಪರೂಪದ ಅತಿಥಿಗಳು ಮನೆಗೆ ಆಗಮಿಸುವರು. ಮನೆಯಲ್ಲಿ ಸಂತಸವಿರಲಿದೆ. ಮಕ್ಕಳು ಇಂದು ಸ್ವತಂತ್ರವಾಗಿ ಇರುವರು. ಬಾಲ್ಯವನ್ನು ನಿಮ್ಮ ಆಪ್ತ ಗೆಳೆಯರ ಜೊತೆ ಹಂಚಿಕೊಳ್ಳುವಿರಿ. ಪ್ರಕೃತಿಯ ಜೊತೆ ಕಾಲವನ್ನು ಕಳೆಯಲು ಮನಸ್ಸಾಗಲಿದೆ. ಹತ್ತಿರದ ಊರಿಗೆ‌ ಪ್ರಯಾಣ ಮಾಡುವಿರಿ.

ಕುಂಭ: ನೀವೇ ಮಾಡಿಕೊಂಡ ತಪ್ಪು ಕೆಲಸವು ಇಂದು ನಿಮಗೆ ಗೊತ್ತಾಗುವುದು. ಆರೋಗ್ಯದ ಕಡೆ ಹೆಚ್ಚಿನ ಗಮನವಹಿಸಿ. ಮನೆಯಲ್ಲಿ ತಂದೆ‌ ಮತ್ತು ಮಗನ‌ ನಡುವೆ ವಾಗ್ವಾದಗಳು ನಡೆಯುವುದು. ಮಕ್ಕಳಿಗೆ ಸರಿಯಾದ ಮಾರ್ಗದರ್ಶನದ ಕೊರತೆಯಿಂದ ತಪ್ಪು ದಾರಿಯಲ್ಲಿ ಸಾಗುವರು. ಅನಿರೀಕ್ಷಿತ ಧನಾಗಮನವಾಗಲಿದೆ. ನಿಮ್ಮ ಆಪ್ತರ ಬಗ್ಗೆ ಇಲ್ಲದ ಸಲ್ಲದ ಮಾತುಗಳು ಬರಲಿದೆ. ಪ್ರಯಾಣದ ವಿಚಾರದಲ್ಲಿ ನಿಮಗೆ ಮಾನಸಿಕ ನೆಮ್ಮದಿ ಸಿಗಲಾರದು. ನಿಮ್ಮ ಜ್ಞಾನವನ್ನು ಗುರುತಿಸುವರು. ತೈಲದೀಪವನ್ನು ಶನೈಶ್ಚರನಿಗೆ ಸಂಕಷ್ಟ ನಿವಾರಣೆಯಾಗಲಿ ಎಂಬ ಸಂಕಲ್ಪದ‌ ಜೊತೆ ಬೆಳಗಿ.

ಮೀನ: ಇಂದು ತಾಯಿಯ ಜೊತೆ ಶತ್ರುತ್ವವನ್ನು ಬೆಳೆಸಿಕೊಳ್ಳುವವರಿದ್ದೀರಿ. ಇದು ಒಳ್ಳೆಯದಲ್ಲ. ಮಕ್ಕಳು ನಿಮ್ಮ ಮಾತನ್ನು ಹೇಳುವುದಿಲ್ಲ ಎಂಬ ಭಾವವಿದೆ. ಇತರರಿಗೆ ಒಳ್ಳೆಯದನ್ನು ಮಾಡುವ ಕಾರ್ಯಕ್ಕೆ ಪ್ರತಿಫಲವು ನಿಮಗೆ ಸಿಗಲಿದೆ‌. ಮಕ್ಕಳ ವಿದ್ಯಾಭ್ಯಾಸದಲ್ಲಿ ಹಿನ್ನಡೆಯಾಗಲಿದೆ. ಸಾಲಬಾಧೆಯಿಂದ ಮುಕ್ತರಾಗಲು ಬಯಸುವಿರಿ. ಉದ್ಯೋಗವನ್ನು ಬದಲಾಯಿಸಲಿದ್ದೀರಿ. ಮನಸ್ಸು ಬಹಳ ಚಾಂಚಲ್ಯವಾಗಿರಲಿದೆ.

-ಲೋಹಿತಶರ್ಮಾ ಇಡುವಾಣಿ