Daily Horoscope: ಧನು, ಮಕರ, ಕುಂಭ, ಮೀನ ರಾಶಿಯವರ ಇಂದಿನ ಭವಿಷ್ಯ

|

Updated on: Apr 30, 2023 | 6:25 AM

ನೀವು ಧನು, ಮಕರ, ಕುಂಭ, ಮೀನ ರಾಶಿಯವರೇ? ಹಾಗಿದ್ದರೆ ಇಂದಿನ (2023 ಏಪ್ರಿಲ್​ 30) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Daily Horoscope: ಧನು, ಮಕರ, ಕುಂಭ, ಮೀನ ರಾಶಿಯವರ ಇಂದಿನ ಭವಿಷ್ಯ
ಇಂದಿನ ರಾಶಿ ಭವಿಷ್ಯ
Follow us on

ಶುಭೋದಯ ಓದುಗರೇ. ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದ್ರೆ ಇಂದಿನ (2023 ಏಪ್ರಿಲ್ ​30) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ : ಭರಣೀ, ಮಾಸ : ವೈಶಾಖ, ಪಕ್ಷ : ಶುಕ್ಲ, ವಾರ : ಭಾನು, ತಿಥಿ : ದಶಮೀ, ನಿತ್ಯನಕ್ಷತ್ರ : ಪೂರ್ವಾಫಲ್ಗುಣೀ, ಯೋಗ : ಸುಕರ್ಮ, ಕರಣ : ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 11 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 47 ನಿಮಿಷಕ್ಕೆ, ರಾಹು ಕಾಲ ಸಂಜೆ 05:13 ರಿಂದ 06:48ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:30 ರಿಂದ 02:04 ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:39 ರಿಂದ 05:13ರ ವರೆಗೆ.

ಧನು: ನೇರವಾದ ಮಾತುಗಳಿಂದ ಬೇರೆಯವರಿಗೆ ನೋವುಂಟಾಗಬಹುದು. ಹೇಳಬೇಕಾದುದನ್ನು ಹೇಳುವರೀತಿಯಲ್ಲಿಯೇ ಹೇಳಿ ಮೇಲಿನಿಂದ ಬಿದ್ದು ಪೆಟ್ಟು‌‌ಮಾಡಿಕೊಳ್ಳಬಹುದು. ಓರ್ವ ಅಪರಿಚಿತ ಪುರುಷನನ್ನು ನೀವಿಂದು ಪ್ರೀತಿಸಲು ಆರಂಭಿಸುವಿರಿ. ಅನಗತ್ಯ ಚರ್ಚೆಗಳಿಗೆ ಅವಕಾಶವನ್ನು ನೀಡಿ ವೈಮನಸ್ಯವನ್ನು ತಂದುಕೊಳ್ಳಬೇಡಿ. ನಿಮ್ಮ ವ್ಯಕ್ತಿತ್ವವನ್ನು ಕಂಡು ಕೆಲವರು ಅನವಶ್ಯಕ ಸಲಹೆಗಳನ್ನು ಕೊಡಲು ಬರಬಹುದು. ಪ್ರತ್ಯುತ್ತರಗಳನ್ನು ನೀಡುವ ಅವಶ್ಯಕತೆ ಇಲ್ಲ. ವಿದ್ಯಾರ್ಥಿಗಳು ಶ್ರದ್ಧೆಯಿಂದ ಓದುವ ಮನಸ್ಸು ಮಾಡುವರು. ಇಂದು ದೇಹಾಲಸ್ಯವಿದ್ದು ವಿಶ್ರಾಂತಿಯನ್ನು ಪಡೆಯುವಿರಿ.

ಮಕರ: ಇಂದು ನಿಮ್ಮ ಸಂಸಾರದ ಬಗ್ಗೆ ಯಾರ ಬಳಿಯಾದರೂ ಹಂಚಿಕೊಳ್ಳಬಯಸುವಿರಿ. ಬದಲಾವಣೆಯನ್ನು ಇಷ್ಟಪಡಲಿದ್ದೀರಿ ನೀವಿಂದು. ಮನೆಯಲ್ಲಿ ಅಗತ್ಯ ಇರುವ ಕೆಲಸಗಳನ್ನು ಮಾಡಿ ಮುಗಿಸುವಿರಿ. ಒತ್ತಡವನ್ನು ನಿಭಾಯಿಸುವ ಕಲೆ ನಿಮಗೆ ಸಿದ್ಧಿಸಿದ್ದು ಅದನ್ನು ಚೆನ್ನಾಗಿ ನಿರ್ವಹಿಸಬಲ್ಲಿರಿ. ಧಾರ್ಮಿಕ ಕಾರ್ಯಗಳಲ್ಲಿ ಇಂದು ನೀವು ಭಾಗವಹಿಸುವಿರಿ. ಪುಣ್ಯಸ್ಥಳಗಳಿಗೆ ಹೋದರೆ ಮನಸ್ಸಿಗೆ ಸಂತೋಷವಾಗಲಿದೆ. ಅವಿವಾಹಿತರಿಗೆ ವಿವಾಹ ಭಾಗ್ಯದ ಸೂಚನೆ ಸಿಗಬಹುದು. ನಿಮ್ಮ ಸಮಯೋಚಿತ ಪೂರ್ವಾಲೋಚನೆಯಿಂದ ನೀವಿಂದು ದೊಡ್ಡ ಅಪಾಯದಿಂದ ನೀವು ಹೊರಬರಲಿದ್ದೀರಿ. ಸತ್ಯವನ್ನು ಮುಚ್ಚಿಡಲು ಹೋಗಬೇಡಿ. ಮುಂದೆ ಅದೇ ದೊಡ್ಡ ಕಂಟಕವಾದೀತು. ನೀವು ಪ್ರೇಮಿಗಳಿಗೆ ದೂರವಾಗುವ ಸಾಧ್ಯತೆ ಇದೆ.

ಕುಂಭ: ಮಕ್ಕಳ ವಿಚಾರವಾಗಿ ಬ್ಯಾಂಕ್ ನಲ್ಲಿ ಸಾಲಮಾಡಬೇಕಾಗಿಬರಬಹುದು. ಮಾಡಬೇಕಾಗಬಹುದು. ಮಾತಿಗೆ ಬೆಲೆಯು ಕಡಿಮೆಯಾದೀತು. ನಿಮ್ಮನ್ನು ನೀವು ಆದ್ಯಂತವಾಗಿ ನೋಡಿಕೊಳ್ಳಿ. ತಪ್ಪುಗಳಿದ್ದರೆ ಅದನ್ನು ಒಪ್ಪಿಕೊಂಡು ಮುನ್ನಡೆಯಿರಿ. ಆರ್ಥಿಕವಾಗಿ ಸಬಲರಾಗಲು ಸಂಗಾತಿ ಜತೆ ಚರ್ಚೆ ನಡೆಸಲಿದ್ದೀರಿ. ಬಂಧುಗಳ ಭೇಟಿಯಿಂದ ಸಂತೋಷವಾಗಲಿದೆ. ಪ್ರಯಾಣದ ಸುಖವೂ ಇರಲಿದೆ. ದಾಂಪತ್ಯದಲ್ಲಿ ಅನ್ಯೋನ್ಯತೆ ಇರಲಿದೆ. ಸರಳತೆಯನ್ನು ರೂಢಿಸಿಕೊಳ್ಳುವಿರಿ. ಎಲ್ಲವನ್ನೂ ಅನುಮಾನ ಕನ್ನಡಕವನ್ನು ಹಾಕೊಕೊಂಡು ನೋಡಬೇಡಿ. ಬರಲಿರುವ ಜವಾಬ್ದಾರಿಯನ್ನು ಜಾಣತನದಿಂದ ತಪ್ಪಿಸಿಕೊಳ್ಳುವಿರಿ.

ಮೀನ: ಇಂದು ನೀವು ಧೈರ್ಯದಿಂದ, ಹೆದರದೇ ಕೆಲಸ ಮಾಡುವಿರಿ. ನಿಮ್ಮ ವಿರುದ್ಧ ಮಾತನಾಡುವವರಿಗೆ ಯೋಗ್ಯವಾದ ಉತ್ತರವನ್ನು ಕೊಡುವಿರಿ. ಉದ್ಯೋಗದಲ್ಲಿ ವಿಶ್ವಾಸಾರ್ಹವಾಗಿ ಕೆಲಸವನ್ನು ನಿರ್ವಹಿಸಿ. ಪರರ ಹಣದ ವಿಚಾರದಲ್ಲಿ ಪಾದರ್ಶಕತೆ ಇರಲಿ. ಶಾಂತಚಿತ್ತರಾಗಿ ಯೋಚಿಸಿ. ನಿಮ್ಮ ಆಯ್ಕೆಗಳು ಸರಿಯಾಗಿರಲಿ. ಇಷ್ಟವಿಲ್ಲದಿದ್ದರೂ ಕೆಲಸಗಳನ್ನು ಮಾಡಬೇಕಾಗಬಹುದು. ಕಲಾವಿದರಿಗೆ ಉತ್ತಮ‌ ಅವಕಾಶಗಳು ಸಿಗಲಿವೆ. ದ್ವೇಷವನ್ನು ಬೆಳೆಸಿಕೊಳ್ಳಬೇಡಿ. ಜ್ವರದಂಥ ಆರೋಗ್ಯ ಸಮಸ್ಯೆಗಳು ಬರಬಹುದು. ಯಾರ ಬಗ್ಗೆಯೂ ಪೂರ್ವಾಗ್ರಹಬುದ್ಧಿಯನ್ನು ಬಿಡುವುದು ಒಳ್ಳೆಯದು.

-ಲೋಹಿತಶರ್ಮಾ ಇಡುವಾಣಿ