Daily Horoscope: ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರ ಇಂದಿನ ಭವಿಷ್ಯ

ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಏಪ್ರಿಲ್​ 30) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Daily Horoscope: ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರ ಇಂದಿನ ಭವಿಷ್ಯ
ಇಂದಿನ ರಾಶಿ ಭವಿಷ್ಯ
Follow us
Rakesh Nayak Manchi
|

Updated on: Apr 30, 2023 | 6:00 AM

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಏಪ್ರಿಲ್​ 30 ಭಾನುವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ : ಭರಣೀ, ಮಾಸ : ವೈಶಾಖ, ಪಕ್ಷ : ಶುಕ್ಲ, ವಾರ : ಭಾನು, ತಿಥಿ : ದಶಮೀ, ನಿತ್ಯನಕ್ಷತ್ರ : ಪೂರ್ವಾಫಲ್ಗುಣೀ, ಯೋಗ : ಸುಕರ್ಮ, ಕರಣ : ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 11 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 47 ನಿಮಿಷಕ್ಕೆ, ರಾಹು ಕಾಲ ಸಂಜೆ 05:13 ರಿಂದ 06:48ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:30 ರಿಂದ 02:04 ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:39 ರಿಂದ 05:13ರ ವರೆಗೆ.

ಸಿಂಹ: ನಿಮ್ಮ ಉದ್ದೇಶಗಳನ್ನು ಬಿಟ್ಟುಕೊಡಬೇಡಿ. ಅದಕ್ಕೆ ಅಡ್ಡಗಾಲು ಹಾಕಿಯಾರು. ನೀವು ಏನನ್ನಾದರೂ ಪಡೆಯಲು ಪ್ರಯತ್ನಿಸಲೇ ಬೇಕು. ನಿಂತ ನೀರಾದರೆ ಕ್ರಿಮಿಗಳು ಏಳಬಹುದು. ನಿಮ್ಮ ಮೇಲಧಿಕಾರಿಗಳು ನಿಮಗೆ ಏನನ್ನೋ ಹೇಳಲಿದ್ದಾರೆ ಎಂದು ಅನ್ನಿಸಬಹುದು. ಮಕ್ಕಳ ಜೊತೆ ಕಾಲವನ್ನು ಕಳೆದು ಸಂತೋಷಪಡುವಿರಿ. ಅನಾರೋಗ್ಯವು ನಿಮ್ಮ ಅಲಕ್ಷ್ಯದಿಂದ ಹೆಚ್ಚಾಗಲಿದೆ. ಧಾರ್ಮಿಕ ಕಾರ್ಯಗಳಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ. ಉದ್ಯೋಗದ ಸ್ಥಳದಲ್ಲಿ ನಿಮ್ಮ ಶಿಸ್ತಿನ ಹಾಗೂ ವೇಗದ ಕೆಲಸವನ್ನು ಕಂಡು ಪ್ರಶಂಸಿಸುವರು. ಅಗ್ಗದ ಬೆಲೆಗೆ ವಸ್ತುವನ್ನು ಕೊಂಡು ಹಾಳು ಮಾಡಿಕೊಳ್ಳುವಿರಿ.

ಕನ್ಯಾ: ಹೊಸ ಕೆಲಸದಲ್ಲಿ ಗೊಂದಲಗಳು ಇರಬಹುದು. ಆಯ್ಕೆ ಮಾಡಿಕೊಳ್ಳುವುದು ಕಷ್ಟವಾದೀತು. ಕಾರ್ಯಗಳನ್ನು ಹಿಂಜರಿಕೆ ಇಲ್ಲದೇ ಮಾಡುವಿರಿ. ಪ್ರದರ್ಶನ. ಹಿರಿಯರ, ಅನುಭವಿಗಳ ಮಾರ್ಗದರ್ಶನವನ್ನು ಪಡೆಯಿರಿ. ದೂರದ ಮಿತ್ರರು ನಿಮಗೆ ಅಗತ್ಯವಿರುವ ಸಹಕಾರವನ್ನು ನೀಡುವರು. ಶ್ರಮದ ಕೆಲಸವು ಆಯಾಸವನ್ನು ತರಲಿದೆ‌. ಅತಿಯಾದ ಆಲಸ್ಯದಿಂದ ನಿದ್ರಿಸುವ ಮನಸ್ಸಿನಲ್ಲಿ ಇರುವಿರಿ. ನಿಮಗೆ ಇಷ್ಟವಿಲ್ಲದ ಕೆಲಸವನ್ನು ಮಾಡಏಕಾಗಿ ಬರಬಹುದು. ತಪ್ಪಿಸಿಕೊಳ್ಳಲೂ ಕಷ್ಟವಾದೀತು. ಯಾರೂ ಸಹಾಯಕ್ಕೆ ಬರಲಾರರು ಎಂಬ ಅನಾಥ ಪ್ರಜ್ಞೆ ಕಾಡಬಹುದು. ಇಂದು ಕ್ಲಿಷ್ಟಕರವಾದ ಸನ್ನಿವೇಶದಲ್ಲಿ ಇರುವಿರಿ. ಸಮಾಧನಾದಿಂದ ಎದುರಿಸಬೇಕಾಗಬಹುದು. ಹೆಚ್ಚಿನ ಆದಾಯವು ಅನಿವಾರ್ಯವಾಗಿದ್ದು, ಆದಾಯದ ಮೂಲವನ್ನು ಹುಡುಕುವಿರಿ.

ತುಲಾ: ಸಣ್ಣ ಪುಟ್ಟ ಅಪಘಾತಗಳು ಆಗಬಹುದು. ಯಾವುದಕ್ಕೂ ಪ್ರಯಾಣದಲ್ಲಿ ಜಾಗರೂಕರಾಗಿ. ನಡೆದಾಡುವಾಗಲೂ ಸುತ್ತ ನೋಡಿಕೊಂಡು ಹೆಜ್ಜೆ ಇಡಿ. ನಿರಪರಾಧಿಯಾಗಲು ಸಮಯವನ್ನೂ ತೆಗದೆಕೊಳ್ಳಬೇಕಾದೀತು. ನಿಮ್ಮ ಮೇಲಧಿಕಾರಿಗಳನ್ನು ಚೆನ್ನಾಗಿ ಇರಿಸಿಕೊಳ್ಳಿ.‌ ಅವರ ಕಾರ್ಯಗಳನ್ನು ಅಚ್ಚುಕಟ್ಟಾಗಿ ಮಾಡಿಕೊಡಿ. ಉನ್ನತ ಹುದ್ದೆಗೆ ಹೋಗುವ ಅವಕಾಶವಿರಬಹುದು. ತಾಳ್ಮೆಯಿಂದ ಕಾರ್ಯದಲ್ಲಿ ತೊಡಗಿದರೆ ಕೆಲಸವು ಮುಕ್ತಾಯವಾದಂತೆ. ಇಂದು ನಿಮಗೆ ಜನರಿಂದ ಪ್ರಶಂಸೆ ಸಿಗಬಹುದು. ವಸ್ತ್ರಗಳ ಖರೀದಿಯಲ್ಲಿ ನೀವು ಮಗ್ನರಾಗುವಿರಿ. ವಿದ್ಯಾರ್ಥಿಗಳು ಕಲಿಕೆಯಲ್ಲಿ ಆಸಕ್ತಿಯನ್ನು ತೋರಿಸುವರು. ಅದಕ್ಕೆ ಬೇಕಾದ ವ್ಯವಸ್ಥೆಯನ್ನು ಮಾಡಿ.

ವೃಶ್ಚಿಕ: ಇಂದು ಏಕಾಗ್ರತೆಯ ಕೊರತೆ ಕಾಳಿಸಲಿದೆ. ವಿವಾಹಕ್ಕೆ ಸಂಬಂಧಿಸಿದಂತೆ ಬೇಸರವಾಗಿ ಮನೆಯಲ್ಲಿ ಕಲಹವು ಆಗಬಹುದು. ನಿಮ್ಮ ಮಾತಿನಿಂದ ಮನೆಯವರಲ್ಲಿ ಆತಂಕದ ವಾತಾವರಣವೂ ಸೃಷ್ಟಿಯಾಗಬಹುದು. ನಿಮಗೆ ಸಂಬಂಧಿಸಿದ ವಿಚಾರಗಳಿಗೆ ಮಾತ್ರ ನಿಮ್ಮ ವ್ಯವಹಾರಗಳಿರಲಿ. ಇಲ್ಲವಾದರೆ ಅಪಮಾನಕ್ಕೆ ಒಳಗಾಗಬೇಕಾದೀತು. ಬೇಸರದ ಮನಸ್ಸನ್ನು ಮನೆಯವರಿಗೆ ತೋರಿಸಬೇಡಿ. ಮನೆಯಿಂದ ದೂರವಿರುವ ಆಲೋಚನೆಯನ್ನು ಮಾಡುವಿರಿ. ಯೋಗ್ಯವಾದ ಮಾತುಗಳಿಂದ ಕಾರ್ಯಗಳಲ್ಲಿ ಯಶಸ್ಸು ಲಭಿಸಲಿದೆ. ಮನೆಯನ್ನು ಇಂದು ಬದಲಾಯಿಸುವಿರಿ. ಕೆಲಸಗಳು ನಿಧಾನಗತಿಯಲ್ಲಿ ಸಾಗಲಿವೆ. ಮಿತ್ರರಿಂದ ಆಪತ್ಕಾಲದಲ್ಲಿ ಸಹಕಾರ ಸಿಗಲಿದೆ.

-ಲೋಹಿತಶರ್ಮಾ ಇಡುವಾಣಿ

ಬಿಗ್ ಬಾಸ್ ಮನೆಯಲ್ಲಿ ಕೊನೇ ವಾರ ಊಟ ಸೇರಲ್ಲ: ವಿನ್ನರ್ ನಿಖಿಲ್ ಅನುಭವ
ಬಿಗ್ ಬಾಸ್ ಮನೆಯಲ್ಲಿ ಕೊನೇ ವಾರ ಊಟ ಸೇರಲ್ಲ: ವಿನ್ನರ್ ನಿಖಿಲ್ ಅನುಭವ
ಕ್ಲಾಸ್​ ನಡೆಯುವಾಗಲೇ 3ನೇ ಮಹಡಿಯಿಂದ ಹಾರಿದ ಕಾಲೇಜು ವಿದ್ಯಾರ್ಥಿ
ಕ್ಲಾಸ್​ ನಡೆಯುವಾಗಲೇ 3ನೇ ಮಹಡಿಯಿಂದ ಹಾರಿದ ಕಾಲೇಜು ವಿದ್ಯಾರ್ಥಿ
ಶ್ರೀರಾಮುಲು ಕಾಂಗ್ರೆಸ್ ಸೇರ್ತಾರಾ? ರಾಜಕೀಯ ಗುಟ್ಟು ಬಿಚ್ಚಿಟ್ಟ ಹಳೇ ಕುಚಿಕು
ಶ್ರೀರಾಮುಲು ಕಾಂಗ್ರೆಸ್ ಸೇರ್ತಾರಾ? ರಾಜಕೀಯ ಗುಟ್ಟು ಬಿಚ್ಚಿಟ್ಟ ಹಳೇ ಕುಚಿಕು
ವ್ಯಕ್ತಿತ್ವದಲ್ಲಿ ಉತ್ತಮ ಈ ತ್ರಿವಿಕ್ರಮ: ಗೆಲುವಿನ ಸೂಚನೆ ಕೊಟ್ಟ ಬಿಗ್ ಬಾಸ್
ವ್ಯಕ್ತಿತ್ವದಲ್ಲಿ ಉತ್ತಮ ಈ ತ್ರಿವಿಕ್ರಮ: ಗೆಲುವಿನ ಸೂಚನೆ ಕೊಟ್ಟ ಬಿಗ್ ಬಾಸ್
ಶ್ರೀರಾಮುಲು ಕಾಂಗ್ರೆಸ್​ಗೆ ಕಳುಹಿಸಲು ಅವರೇ ಪ್ರಯತ್ನಿಸ್ತಿರಬಹುದು: ಡಿಕೆಶಿ
ಶ್ರೀರಾಮುಲು ಕಾಂಗ್ರೆಸ್​ಗೆ ಕಳುಹಿಸಲು ಅವರೇ ಪ್ರಯತ್ನಿಸ್ತಿರಬಹುದು: ಡಿಕೆಶಿ
9 ವಿಕೆಟ್ ಕಬಳಿಸಿ ದಾಖಲೆ ಬರೆದ ಸಿದ್ಧಾರ್ಥ್ ದೇಸಾಯಿ
9 ವಿಕೆಟ್ ಕಬಳಿಸಿ ದಾಖಲೆ ಬರೆದ ಸಿದ್ಧಾರ್ಥ್ ದೇಸಾಯಿ
ಮುಡಾ ಹಗರಣದಲ್ಲಿ ಕ್ಲೀನ್​ಚಿಟ್; ಸಿಎಂ ರಿಯಾಕ್ಷನ್ ಇದು
ಮುಡಾ ಹಗರಣದಲ್ಲಿ ಕ್ಲೀನ್​ಚಿಟ್; ಸಿಎಂ ರಿಯಾಕ್ಷನ್ ಇದು
ರಥೋತ್ಸವದ ವೇಳೆ ವಿಟ್ಲದಲ್ಲಿ ದೇವರ ಮೂರ್ತಿ, ಅರ್ಚಕರಿಗೆ ಬಡಿದ ಡ್ರೋನ್​
ರಥೋತ್ಸವದ ವೇಳೆ ವಿಟ್ಲದಲ್ಲಿ ದೇವರ ಮೂರ್ತಿ, ಅರ್ಚಕರಿಗೆ ಬಡಿದ ಡ್ರೋನ್​
ಜಿಂಕೆಯ ವೇಗ, ಹದ್ದಿನ ಕಣ್ಣು... ನಿತೀಶ್ ಕುಮಾರ್ ರೆಡ್ಡಿ ಸೂಪರ್ ಕ್ಯಾಚ್
ಜಿಂಕೆಯ ವೇಗ, ಹದ್ದಿನ ಕಣ್ಣು... ನಿತೀಶ್ ಕುಮಾರ್ ರೆಡ್ಡಿ ಸೂಪರ್ ಕ್ಯಾಚ್
ಬಿಗ್ ಬಾಸ್ ಮನೆಗೆ ನುಗ್ಗಿದ ಅಭಿಮಾನಿಗಳು; ಭಯಬಿದ್ದ ಸ್ಪರ್ಧಿಗಳು
ಬಿಗ್ ಬಾಸ್ ಮನೆಗೆ ನುಗ್ಗಿದ ಅಭಿಮಾನಿಗಳು; ಭಯಬಿದ್ದ ಸ್ಪರ್ಧಿಗಳು