ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಏಪ್ರಿಲ್ 7 ಶುಕ್ರವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೀನ ಮಾಸ, ಮಹಾನಕ್ಷತ್ರ : ಅಶ್ವಿನೀ, ಮಾಸ : ಚೈತ್ರ, ಪಕ್ಷ : ಕೃಷ್ಣ, ವಾರ : ಶುಕ್ರ, ತಿಥಿ : ಪ್ರತಿಪತ್, ನಿತ್ಯನಕ್ಷತ್ರ : ಚಿತ್ರಾ, ಯೋಗ : ಹರ್ಷಣ, ಕರಣ : ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 25 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 43 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 11:02 ರಿಂದ ಮಧ್ಯಾಹ್ನ 12:35ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 03:39 ರಿಂದ 05:12ರ ವರೆಗೆಮ ಗುಳಿಕ ಕಾಲ ಬೆಳಗ್ಗೆ 07:58 ರಿಂದ 09:30ರ ವರೆಗೆ.
ಧನುಸ್ಸು: ಉದ್ಯೋಗದಲ್ಲಿ ಒತ್ತಡವಿರಲಿದೆ ಎಂದು ಇಂದು ನೀವು ಜವಾಬ್ದಾರಿಗಳನ್ನು ತೆಗೆದುಕೊಳ್ಳಲು ಬಯಸುವುದಿಲ್ಲ. ವ್ಯವಹಾರದಲ್ಲಿ ಮೋಸಹೋಗುವಿರಿ. ನಿಮ್ಮ ತಮಾಷೆಯಿಂದ ಕೆಲವರು ನೊಂದುಕೊಳ್ಳುವ ಸಾಧ್ಯತೆಇದೆ. ಸತ್ಯವನ್ನು ನೊಇವಾಗದ ರೀತಿಯಲ್ಲಿ ಮನವರಿಕೆಮಾಡಿ. ಯಾರದೋ ಮಾತು ನಿಮಗೆ ಬೇಸರವನ್ನು ತರಿಸಬಹುದು. ಒಂದೇ ವಿಷಯವನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳಲು ಹೋಗಿ ಮನಸ್ಸನ್ನು ಗಾಯ ಮಾಡಿಕೊಳ್ಳಬೇಡಿ. ಸಂಗಾತಿಯ ನಡುವೆ ಒಂದೇ ವಿಷಯವನ್ನು ಮತ್ತೆ ಹೇಳುವುದರಿಂದ ಕಲಹವಾಗಬಹುದು.
ಮಕರ: ಕೆಲಸದಲ್ಲಿ ಆಸಕ್ತಿಯನ್ನು ಕಳೆದುಕೊಂಡು ಜಾಡ್ಯರಾಗುವಿರಿ. ಅತಿಯಾದ ಪಾನದಿಂದ ಇಂದು ಹೊರಬರುವುದು ಕಷ್ಟವಾದೀತು. ನೀವು ಉತ್ತಮ ಸಮಯವನ್ನು ಹೊಂದುವ ನಿಮ್ಮ ಸಂಗಾತಿಯನ್ನು ನೀವು ಎಷ್ಟು ಗೌರವಿಸುತ್ತೀರಿ ಮತ್ತು ಅವರ ಬಗ್ಗೆ ಚಿಂತಿಸುವುದನ್ನು ತೋರಿಸಲು ನಿಮಗೆ ಸಾಧ್ಯವಾಗುತ್ತದೆ. ಆರಾಮಾಗಿ ಬದುಕಬೇಕೆಂದು ಸಂಪತ್ತನ್ನು ಖಾಲಿ ಮಾಡಿಕೊಳ್ಳುವಿರಿ. ನಿಮ್ಮ ವಿರೋಧಿಗಳು ನಿಮ್ಮನ್ನು ಎದುರಿಸಲು ಸಿದ್ಧರಿರುವುದಿಲ್ಲ. ನಿಮ್ಮ ಸುತ್ತಲಿನವರ ಬಗ್ಗೆ ಗಮನವಿರಿಲಿ. ಒಂದು ಕಣ್ಣಿಟ್ಟಿರಿ.
ಕುಂಭ: ಇಂದು ಇನ್ನೊಬ್ಬರ ವಾಹನದಲ್ಲಿ ಓಡಾಡಬೇಕಾದ ಸ್ಥಿತಿ ಬರಲಿದೆ. ಅಲ್ಲಿ ಅನಾರೋಗ್ಯವು ಕಾಡಲಿದೆ. ಹಾಗಾಗಿ ಹೊಸವಾಹನವನ್ನು ಖರೀದಿಸುವ ಆಲೋಚಯನ್ನು ಮಾಡುವಿರಿ. ನೀವು ಇಚ್ಛೆ ಬಂದಂತೆ ಹಣವನ್ನು ಖರ್ಚು ಮಾಡಲು ಸಾಧ್ಯವಾಗುತ್ತದೆ. ನಿಮ್ಮ ಪ್ರಯತ್ನದಲ್ಲಿ ಸಾಕಷ್ಟು ಪ್ರಯತ್ನಗಳನ್ನು ಮಾಡಿದ ನಂತರ ನೀವು ಯಶಸ್ಸನ್ನು ಸಾಧಿಸುವಿರಿ. ನಿಮಗೆ ಸ್ಥಿರಾಸ್ತಿಗಳ ಮೇಲೆ ಅರಿತಾದ ವ್ಯಾಮೋಹ ಇರಲಿದೆ. ಗೌರವವು ಸಿಗುತ್ತಿಲ್ಲ ಎಂಬ ಆತಂಕವೂ ಇದೆ. ಹೊಸ ದಾರಿಗಳು ನಿಮಗೆ ಜೀವನಕ್ಕೆ ಕಾಣಿಸಿಕೊಳ್ಳಲಿವೆ. ಶಿವಾರಾಧನೆಯು ನಿಮಗೆ ಬಲವನ್ನು ಕೊಡುವುದು.
ಮೀನ: ಸ್ವಂತ ಉದ್ಯೋಗವನ್ನು ಇಟ್ಟುಕೊಂಡವರಿಗೆ ಲಾಭವಾಗಲಿದೆ. ಅದ್ಭುತ ಸಮಯಗಳು ಸಮೀಪಿಸುತ್ತಿದ್ದಂತೆ ನಿಮ್ಮ ಕೆಲಸದ ಹೊರೆ ಏರಲು ಪ್ರಾರಂಭವಾಗುತ್ತದೆ. ಮೋಜಿನ ಚಟುವಟಿಕೆಗಳಿಗೆ ಗಣನೀಯವಾಗಿ ಕಡಿಮೆ ಉಚಿತ ಸಮಯವನ್ನು ನೀಡುತ್ತದೆ. ವ್ಯವಹಾರಕ್ಕೆ ಸಂಬಂಧಿಸಿದಂತೆ ಕೆಲವು ಅನುಚಿತ ಮಾತುಗಳು ಕೇಳಿಬರಬಹುದು. ತಾಳ್ಮೆಯಿಂದ ಉತ್ತರಿಸಿ. ಅರ್ಜಿದಾರರು ಮುಂದಿನ ಸುತ್ತಿನ ಸಂದರ್ಶನಕ್ಕೂ ಹೋಗಬಹುದು. ನಿಮ್ಮ ಸಂಪಾದನೆಯು ನ್ಯಾಯಮಾರ್ಗದಲ್ಲಿ ಇರಲಿ.
-ಲೋಹಿತಶರ್ಮಾ ಇಡುವಾಣಿ