Nitya Bhavishya: ಮೇಷ, ವೃಷಭ, ಮಿಥುನ, ಕಟಕ ರಾಶಿಗಳ ಫಲ, ಭವಿಷ್ಯ ಹೀಗಿದೆ

| Updated By: ರಮೇಶ್ ಬಿ. ಜವಳಗೇರಾ

Updated on: Mar 16, 2023 | 6:45 AM

2023 ಮಾರ್ಚ್ 16 ಗುರುವಾರದ ನಿಮ್ಮ ರಾಶಿ ಫಲ ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

Nitya Bhavishya: ಮೇಷ, ವೃಷಭ, ಮಿಥುನ, ಕಟಕ ರಾಶಿಗಳ ಫಲ, ಭವಿಷ್ಯ ಹೀಗಿದೆ
ಪ್ರಾತಿನಿಧಿಕ ಚಿತ್ರ
Image Credit source: drikpanchang.com
Follow us on

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಮಾರ್ಚ್ 16 ಗುರುವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1945, ಶುಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಕುಂಭ ಮಾಸ, ಮಹಾನಕ್ಷತ್ರ : ಪೂರ್ವಾಭಾದ್ರ, ಮಾಸ : ಫಾಲ್ಗುಣ, ಪಕ್ಷ : ಕೃಷ್ಣ, ವಾರ : ಗುರು, ತಿಥಿ : ನವಮೀ, ನಿತ್ಯನಕ್ಷತ್ರ : ಪೂರ್ವಾಷಾಢ, ಯೋಗ : ವ್ಯತಿಪಾತ್, ಕರಣ : ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 41 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 41 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ14:12 – 15:42ರ ವರೆಗೆ, ಯಮಘಂಡ ಕಾಲ ಬೆಳಗ್ಗೆ06:41 – 08:112ರವರೆಗೆ, ಗುಳಿಕ ಕಾಲ ಬೆಳಗ್ಗೆ09:41 – 11:11ರ ವರೆಗೆ.

ಮೇಷ: ಇಂದು ಪ್ರಮುಖ ವ್ಯಕ್ತಿಗಳ ಸಂಬಂಧವು ಆಗಲಿದೆ. ನಿಮ್ಮ ಹವ್ಯಾಸವು ಆರ್ಥಿಕಮೂಲವಾಗಿ ಬದಲಾಗಲಿದೆ. ನಿಮ್ಮ ಕ್ರಿಯಾತ್ಮಕತೆ ಬೆಳೆಯಲಿದೆ. ನಿಮ್ಮ ಅದ್ಭುತ ಪ್ರತಿಭೆಯಿಂದ ಅನೇಕ ಉತ್ತಮ ಕೆಲಸಗಳನ್ನು ಮಾಡಲು ಸಾಧ್ಯವಾಗುತ್ತದೆ. ನಿಮ್ಮ ಆಲೋಚನೆಗಳು ನಿಮ್ಮ ವ್ಯಕ್ತಿತ್ವವನ್ನು ಪರಿಚಯಿಸುವಂತೆ ಮಾಡುತ್ತವೆ. ಹಿರಿಯರ ಅನುಭವದಿಂದ ಪ್ರಯೋಜನ ಪಡೆಯಲಿದ್ದೀರಿ. ಅನಗತ್ಯ ವಾದಗಳು ಕುಟುಂಬದವರಲ್ಲಿ ಮಾಡಬೇಡಿ‌. ಹಿರಿಯರು‌ ನೊಂದಾರು. ಸೋಮಾರಿಗಳಾಗಿ ಸಮಯ ವ್ಯರ್ಥ ಮಾಡುವುದರಿಂದ ನಿಮ್ಮ ಕಾರ್ಯಗಳು ಹಿಂದುಳಿಯುವುವು.

ವೃಷಭ: ಇಂದು ಕೆಲವು ಆಸೆಗಳನ್ನು ಈಡೇರಿಸಲು ದಾರಿ ಸಿಗಲಿದೆ. ವ್ಯಾಪಾರದಲ್ಲಿ ಲಾಭದ ಹೊಸ ದಾರಿಗಳು ಸಿಗಬಹುದು. ಸಾಧ್ಯತೆಗಳು ಕಾಣಿಸಿಕೊಳ್ಳುತ್ತವೆ. ಮನೆಯಲ್ಲಿ ಉತ್ತಮ ವಾತಾವರಣ ಇರುತ್ತದೆ. ದಾನ ಧರ್ಮದಲ್ಲಿ ಹೆಚ್ಚಿನ ಆಸಕ್ತಿಯು ಇಂದು ಇರಲಿದೆ. ಸಹೋದರರ ವರ್ತನೆಯು ನಿಮ್ಮ ಮನಸ್ಸಿಗೆ ಬೇಸರವನ್ನು ತರಬಹುದು. ಆರ್ಥಿಕವಾಗಿ ನೀವು ಸಬಲರಾಗುವ ದಿನ. ಒಳ್ಳೆಯ ಅವಕಾಶಗಳು ಸಿಗಲಿದೆ. ವೇಗದಿಂದ ಕೆಲಸವನ್ನು ಮಾಡಿ ಕಾರ್ಯಹಾನಿಯನ್ನು ಮಾಡಿಕೊಳ್ಳಬೆ. ಮಕ್ಕಳ ನಡವಳಿಕೆಯಿಂದ ನೋವು ಉಂಟಾಗಲಿದೆ‌.

ಮಿಥುನ: ಇಂದು ಹೆಚ್ಚಿನ ಖರ್ಚುಗಳು ಆಗಬಹುದು. ನಿಮ್ಮ ಉತ್ತಮವಾದ ಆದಾಯದ ಕಾರಣ ಅದರ ಬಾಧೆ ನಿಮಗೆ ತಟ್ಟದು. ಧೈರ್ಯವು ಹೆಚ್ಚಾಗಿ ಇರಲಿದೆ‌. ಇಂದು ಚಿಂತನಶೀಲರಾಗಿ ಇರುವಿರಿ. ಹೊಸ ಭರವಸೆಗಳು ಸಂತೋಷವನ್ನು ತರುತ್ತವೆ. ಸೇವೆ ಮತ್ತು ದಾನದಲ್ಲಿ ಆಸಕ್ತಿ ಹೆಚ್ಚಾಗಲಿದೆ. ಹೊಸತಾದ ಸಂಪರ್ಕಗಳಿಂದ ಪ್ರಯೋಜನವನ್ನು ಪಡೆಯುವಿರಿ. ನಿಮ್ಮ ಕೆಲಸಗಳಿಗೆ ಸಂಗಾತಿಯ ಬೆಂಬಲ ಇರುತ್ತದೆ. ಉತ್ತಮ ಆರೋಗ್ಯ ಇರುತ್ತದೆ. ಕಾಲುಗಳು ಮತ್ತು ಸ್ನಾಯುಗಳಲ್ಲಿ ನೋವು ಇರುತ್ತದೆ.

ಕಟಕ: ವೃತ್ತಿಜೀವನದಲ್ಲಿ ಇಂದು ಅನುಕೂಲಕರ ವಾತಾವರಣ ಇರಲಿದೆ. ವ್ಯಾಪಾರದಲ್ಲಿ ಉನ್ನತಿ ಹಾಗೂ ಕಾರ್ಯದ ವಿಸ್ತರಣೆಯು ಸಂತೋಷವನ್ನು ತರುತ್ತದೆ. ನಿಮ್ಮ ಕೀರ್ತಿಯನ್ನು ಹೆಚ್ಚುಗೊಳಿಸಲಿದೆ‌. ಹಳೆಯ ಹೂಡಿಕೆಯು ಸೂಕ್ತವಾದ ಸಮಯಕ್ಕೆ ಬಂದೊದಗುತ್ತದೆ. ಬುದ್ಧಿವಂತಿಕೆಯು ಬೆಳೆಯುತ್ತದೆ. ಈ ಸಮಯದಲ್ಲಿ ಮಾನಸಿಕ ಗೊಂದಲವೂ ಹೆಚ್ಚಾಗಬಹುದು. ಆರ್ಥಿಕ ಪರಿಸ್ಥಿತಿ ಉತ್ತಮವಾಗಿರಲಿದೆ. ಕೆಲಸ ಮಾಡುವವರ ಪ್ರಭಾವ ಹೆಚ್ಚಾಗಲಿದೆ. ಕಾರ್ಯದ ಸ್ಥಳದಲ್ಲಿ ಕೆಲವು ಹಿನ್ನಡೆಗಳು ಆಗಲಿವೆ. ಮುಂದು ಯಶಸ್ಸಿನ ದಾರಿ ಸಿಗುತ್ತದೆ.