AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಿನಭವಿಷ್ಯ: ಈ ರಾಶಿಯವರಿಗೆ ಇಂದು ಸವಾಲಿನ ಪರಿಸ್ಥಿತಿ ಬರಬಹುದು, ಭಯ ಬೇಡ

ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರಾಗಿದ್ದರೇ, 22 ಮೇ 2024ರ​​ ನಿಮ್ಮ ರಾಶಿಭವಿಷ್ಯ ಹೇಗಿದೆ? ನಿಮಗೆ ಶುಭ ಅಥವಾ ಅಶುಭ ದಿನವಾ? ಇಂದಿನ ಭವಿಷ್ಯದಲ್ಲಿ ನಿವು ಲಾಭದ ನಿರೀಕ್ಷೆ ಮಾಡಬಹುದಾ? ಎಂಬಿತ್ಯಾದಿ ಮಾಹಿತಿಗಳನ್ನು ಇಂದಿನ ರಾಶಿಭವಿಷ್ಯದಿಂದ ತಿಳಿದುಕೊಳ್ಳಿ.

ದಿನಭವಿಷ್ಯ: ಈ ರಾಶಿಯವರಿಗೆ ಇಂದು ಸವಾಲಿನ ಪರಿಸ್ಥಿತಿ ಬರಬಹುದು, ಭಯ ಬೇಡ
ರಾಶಿ ಭವಿಷ್ಯ
TV9 Web
| Updated By: ಕಿರಣ್ ಹನುಮಂತ್​ ಮಾದಾರ್|

Updated on: May 22, 2024 | 12:15 AM

Share

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ,  ಮೇ​​​​​ 22ರ ರಾಶಿ ಭವಿಷ್ಯದಲ್ಲಿ  ಮೇಷ ರಾಶಿಯಿಂದ ಕಟಕ ರಾಶಿಯವರೆಗೆ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ವಸಂತ ಋತು, ವೃಷಭ ಮಾಸ, ಮಹಾನಕ್ಷತ್ರ: ಕೃತ್ತಿಕಾ, ಮಾಸ: ವೈಶಾಖ, ಪಕ್ಷ: ಶುಕ್ಲ, ವಾರ: ಬುಧ, ತಿಥಿ: ಚತುರ್ದಶೀ, ನಿತ್ಯನಕ್ಷತ್ರ: ಅನೂರಾಧಾ, ಯೋಗ: ವರಿಯಾನ್, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 04 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 54 ನಿಮಿಷಕ್ಕೆ, ರಾಹು ಕಾಲ 12:29 ರಿಂದ 14:06ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 07:41ರಿಂದ ಬೆಳಗ್ಗೆ 9:17ರ ವರೆಗೆ, ಗುಳಿಕ ಕಾಲ ಬೆಳಗ್ಗೆ 10:53 ರಿಂದ 12:29ರ ವರೆಗೆ.

ಮೇಷ ರಾಶಿ :ಇಂದಿನ ಎಲ್ಲ ಕಾರ್ಯಗಳೂ ಸಮಯ ಮೀರುವ ಸಾಧ್ಯತೆ ಇದೆ. ಅಷ್ಟಾದರೂ ನಿಮ್ಮ ಪಾಲಿನದ್ದು ಸಿಕ್ಕೆ ಸಿಗುವುದು. ಸ್ನೇಹಿತರಿಂದ ಸಹಾಯವನ್ನು ಪಡೆವ ಸಾಧ್ಯತೆಯಿದೆ. ಕಛೇರಿಯಲ್ಲಿ ಸವಾಲಿನ ಪರಿಸ್ಥಿತಿ ಬರಬಹುದು, ಭಯ ಬೇಡ. ಶರೀರಕ್ಕೆ ಆದ ಘಾಸಿಯನ್ನಿ ಮದ್ದಿನ ಮೂಲಕ ಸರಿ ಮಾಡಿಕೊಳ್ಳಬಹುದು. ಮನಸ್ಸಿಗೆ ಬೇರೆ ರೀತಿಯಲ್ಲಿ ನೋಡುವ ಅವಶ್ಯಕತೆ ಇರಲಿದೆ. ನಿಮ್ಮ ಕುಟುಂಬದ ಉಳಿದ ಸದಸ್ಯರೊಂದಿಗೆ ನೀವು ಉತ್ತಮ ಸಂಬಂಧವನ್ನು ಹೊಂದಿರುತ್ತೀರಿ. ಅವರ ಸಂಪೂರ್ಣ ಬೆಂಬಲವೂ ಸಿಗಲಿದೆ. ನಿಮ್ಮ ಪ್ರೀತಿಯನ್ನು ಉಳಿಸಿಕೊಳ್ಳುವ ಪ್ರಯತ್ನಗಳು ಯಶಸ್ವಿಯಾಗುತ್ತವೆ. ದಿನದ ಕಾರ್ಯವನ್ನು ನೀವು ಅವಲೋಕಿಸಿಕೊಂಡು ಹೆಜ್ಜೆ ಇಡುವುದು ಉತ್ತಮ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಸಂದೇಹ ಬರಬಹುದು. ಸ್ನೇಹಿತರಲ್ಲಿ ಆದ ಬದಲಾವಣೆಯು ನಿಮ್ಮ ಗಮನಕ್ಕೆ ಬಾರದು.

ವೃಷಭ ರಾಶಿ :ಇಂದು ನಿಮ್ಮ ಬಳಿ ಯಾರಾದರೂ ಸಮಸ್ಯೆಗಳನ್ನು ಹೇಳುತ್ತ ಬರಬಹುದು. ಅದನ್ನು ಜಾಣ್ಮೆಯಿಂದ ಬಗೆ ಹರಿಸಿ. ನಿಮ್ಮ ಗುರಿಯನ್ನು ಸಾಧಿಸುವ ಆತ್ಮವಿಶ್ವಾಸವಿರಲಿ. ದುರಭ್ಯಾಸವನ್ನು ಬಿಡುವ ಆಲೋಚನೆ ಮಾಡುವಿರಿ. ಉನ್ನತ ಅಧಿಕಾರಿಗಳು ನಿಮಗೆ ಆಗಬೇಕಾದ ಕೆಲಸದಲ್ಲಿ ಸಹಾಯ ಮಾಡುವರು. ಭಿನ್ನಾಭಿಪ್ರಾಯಗಳನ್ನು ಮರೆತು ನಿಮ್ಮ ಸಂಬಂಧವನ್ನು ಕಾಪಾಡಿಕೊಳ್ಳುವುದು ಉತ್ತಮ‌. ಇಲ್ಲವಾದರೆ ಪರಿಸ್ಥಿತಿಯು ಮತ್ತೇನೋ ಆಗುವುದು. ಕಚೇರಿಯಲ್ಲಿನ ಸೂಕ್ಷ್ಮ ವ್ಯವಹಾರವನ್ನು ಅರ್ಥಮಾಡಿಕೊಳ್ಳಲು ಕಷ್ಟವಾಗುವುದು. ಅನಿರೀಕ್ಷಿತ ಘಟನೆಯು ನಿಮ್ಮನ್ನು ಬೆಚ್ಚಿಬೀಳಿಸುವುದು. ಹೊಸ ವ್ಯಕ್ತಿಯ ಪರಿಚಯು ನಿಮ್ಮ ಬೇಸರವನ್ನು ದೂರ ಮಾಡೀತು.‌ ನಿಮ್ಮ ಬಗ್ಗೆ ಇರುವ ಅಭಿಮಾನವನ್ನು ನೀವೇ ಕಳೆದುಕೊಳ್ಳಬಹುದು. ಹಿತಶತ್ರುಗಳಿಂದ ನಿಮ್ಮ ಕಾರ್ಯವನ್ನು ಗೊತ್ತಾಗದೇ ಮಾಡಿಸಿಕೊಳ್ಳುವಿರಿ.

ಮಿಥುನ ರಾಶಿ :ನಿಮ್ಮ ಸ್ನೇಹಿತರಿಗೆ ನಿಮ್ಮಿಂದ ಹೆಚ್ಚಿನ ಸಲಹೆ ಬೇಕಾಗಬಹುದು, ಕೊಡಿ. ಅದು ಅವರ ಸಾಮರ್ಥ್ಯಕ್ಕೆ ಸರಿಯಾಗಿರಲಿ. ನಿಮಗೆ ಅತೃಪ್ತಿಯ ಭಾವವು ಕಾಡಲಿದೆ. ಪಕ್ಕದರ ಪರಿಚಯವು ಸ್ನೇಹವಾಲಿದೆ. ಇಂದೇ ಶುಭದಿನವೆಂದು ನಿಮ್ಮ ದಿನಚರಿಯನ್ನು ಬದಲಾಯಿಸಿಕೊಳ್ಳುವಿರಿ. ವಸ್ತ್ರಗಳನ್ನು ಖರೀದಿ ಮಾಡುವ ಸಂಭ್ರಮದಲ್ಲಿ ಇರುವಿರಿ. ಕಛೇರಿಯಲ್ಲಿ ಸಂತೋಷದ ವಾತಾವರಣ ಇದ್ದು ನಿಮಗೆ ಕೆಲಸವನ್ನು ಮಾಡಲು ಅನುಕೂಲವಾಗುವುದು. ಇಷ್ಟು ದಿನ ಮಾತಮಾಡದೇ ಇರುವವರು ಇಂದು ಮಾತನಾಡುವರು. ನಿಮ್ಮ ಆಸಕ್ತಿಯ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಅತ್ತ ಕಡೆ ಹೆಚ್ಚು ಪ್ರಯತ್ನಿಸಿ. ಮಿತ್ರರ ಸಹಯೋಗದಿಂದ ಭೂಮಿಯ ಖರೀದಿಯನ್ನು ಮಾಡುವಿರಿ. ಹಿಂದೆ ಮಾಡಿದ ಕಾರ್ಯಕ್ಕಾಗಿ ಇಂದು ಒಳ್ಳೆಯ ಫಲವು ದೊರೆಕಿದ ಸಂತೋಷದಲ್ಲಿ ಇರುವಿರಿ.

ಕಟಕ ರಾಶಿ :ನಿಮ್ಮ ಕೋಪವನ್ನು ಕಡಿಮೆ ಮಾಡಿಕೊಳ್ಳಲು ಪ್ರಾಣಾಯಾಮ ಅಥವಾ ಧ್ಯಾನವನ್ನು ಮಾಡುವುದು ಉತ್ತಮ. ನಿಮಗೆ ಪ್ರಿಯವಾದದ್ದನ್ನು ಪಡೆದುಕೊಳ್ಳುವಿರಿ. ಬಹಳ ಕಾಲದಿಂದ ಮಾಡುತ್ತಿರುವ ಕೆಲಸಕ್ಕೆ ಉತ್ತಮ ಫಲಿತಾಂಶ ದೊರೆಯಲಿದೆ. ಪ್ರೀತಿಯನ್ನು ಮನೆಯಲ್ಲಿ ಒಪ್ಪಿಕೊಳ್ಳದೇ ಸಮಸ್ಯೆ ಆದೀತು. ಆಪ್ತರ ಮಾತನ್ನು ಕೇಳಬೇಕೆಂದು ಅನ್ನಿಸಬಹುದು. ಸ್ವಾತಂತ್ರ್ಯವನ್ನು ಬಯಸುವಿರಿ. ನಿಮ್ಮ ಅವ್ಯಕ್ತ ಭೀತಿಯನ್ನು ನೀವು ಹೊರಹಾಕದಿದ್ದರೂ ಅರಿವಿಗೆ ಬರುವುದು. ಬಂಧುಗಳ ಆರೋಗ್ಯದ ವಿಚಾರಣೆಗೆ ತಿರುಗಾಟ ಮಾಡಬೇಕಾಗುವುದು. ನಿಮ್ಮ ಬಗ್ಗೆ ಯಾರಾದರೂ ಹಗುರವಾಗಿ ಮಾತನಾಡುವರು. ಮನೆಯಲ್ಲಿ ಧಾರ್ಮಿಕ ಕಾರ್ಯಗಳಿಂದ ಶಾಂತಿ ಲಭಿಸುವುದು. ಯಾರಾದರೂ ನಿಮ್ಮನ್ನು ಹುಡುಕಿಕೊಂಡು ಬಂದು ನಿಮ್ಮಿಂದ ಸಲಹೆಯನ್ನು ಪಡೆಯಬಹುದು.