
23-11-2025ರಿಂದ 29-11-2025ರವರಗೆ ನವೆಂಬರ್ ನಾಲ್ಕನೇ ವಾರವಾಗಿದ್ದು (Weekly Horoscope) ಲಾಭವೇ ಮೂಲ ಉದ್ದೇಶವಾದರೆ ಕೆಲವು ದಿನದಲ್ಲಿ ಅದು ನಿಂತುಹೋಗುವುದು ಅಥವಾ ಕೆಲಸವು ಬೇಸರವಾಗುವುದು. ಸಿಕ್ಕಿದ್ದನ್ನು ಸಂತೋಷದಿಂದ ಬಳಸುವ, ಉದ್ಯಮವನ್ನು ಹವ್ಯಾಸವಾಗಿ ಮಾಡಿದಾಗ ಸಾಧ್ಯ. ಕರ್ಮಾಧಿಪತಿ ಗುರುವಿನ ರಾಶಿಯಲ್ಲಿರುವ ಕಾರಣ ಉದ್ಯೋಗ ಫಲಿಸುತ್ತದೆ. ಆದರೆ ಅತಿಗಂಭೀರವಾಗಿ ನೋಡದೇ ಆನಂದದಿಂದ ಕರ್ತವ್ಯ ನಿಷ್ಠರಾಗಿ ಮುನ್ನಡೆಯಬೇಕು.
ನಾಲ್ಕನೆಯ ಈ ವಾರ ನಿಮ್ಮ ಕರ್ತವ್ಯನಿಷ್ಠೆ ಮತ್ತು ದೃಢತೆ ಮೇಲಾಧಿಕಾರಿಗಳ ಗಮನ ಸೆಳೆಯುತ್ತದೆ. ದೀರ್ಘಕಾಲದಿಂದ ಬಾಕಿಯಾಗಿದ್ದ ಕೆಲಸಕ್ಕೆ ಈ ವಾರ ಸುಗಮ ದಾರಿ ದೊರೆಯುವ ಸಾಧ್ಯತೆ ಇದೆ. ಸಹೋದ್ಯೋಗಿಗಳೊಂದಿಗೆ ಹೊಂದಾಣಿಕೆ ಉತ್ತಮವಾಗಿರುವುದರಿಂದ ಕಾರ್ಯಗತವಾಗಿದೆ. ಹಣಸಂಬಂಧಿತ ವಿಷಯಗಳಲ್ಲಿ ಜಾಗರೂಕತೆ ಅಗತ್ಯ.
ಎರಡನೇ ರಾಶಿಯವರಿಗೆ ಈ ವಾರ ನಿಮಗೆ ಹೊಸ ಜವಾಬ್ದಾರಿಗಳು ವಹಿಸಿಕೊಳ್ಳುವ ಅವಕಾಶ ದೊರೆಯಬಹುದು. ನಿಧಾನವಾದರೂ ದೃಢವಾದ ಪ್ರಗತಿ ಕಂಡುಬರುತ್ತದೆ. ಕೆಲಸದ ಸ್ಥಳದಲ್ಲಿ ಶಾಂತಚಿತ್ತದಿಂದ ನಡೆದುಕೊಂಡರೆ ಅನುಕೂಲ. ಹಣಕಾಸಿನ ವ್ಯವಹಾರಗಳಲ್ಲಿ ಅತಿಯಾದ ವೆಚ್ಚವನ್ನು ತಪ್ಪಿಸಿಕೊಳ್ಳಬೇಕು.
ನವೆಂಬರ್ ತಿಂಗಳ ನಾಲ್ಕನೇ ವಾರ ಈ ರಾಶಿಗೆ ನಿಮ್ಮ ಮಾತಿನ ಹೊಳಪು ಮತ್ತು ಚಾತುರ್ಯ ಪ್ರಮುಖ ಪಾತ್ರವನ್ನುವಹಿಸುತ್ತದೆ. ಸಭೆಗಳು, ಮಾತುಕತೆಗಳು ಹಾಗೂ ನಿರ್ಧಾರಕಾರಿ ಚರ್ಚೆಗಳಲ್ಲಿ ನಿಮ್ಮ ಅಭಿಪ್ರಾಯ ಗೆಲುವು ಸಾಧಿಸಬಹುದು. ಬರವಣಿಗೆ, ಬೋಧನೆ, ಸಂವಹನಕ್ಕೆ ಸಂಬಂಧಿತ ಕ್ಷೇತ್ರಗಳಿಗೆ ಇದು ಅತ್ಯಂತ ಅನುಕೂಲಕರ ವಾರ.
ಈ ವಾರ ಮನಸ್ಸಿನಲ್ಲಿ ಸ್ವಲ್ಪ ಚಂಚಲತೆ ಕಂಡರೂ ಕೆಲಸದಲ್ಲಿ ಪರಿಣಾಮವಿಲ್ಲ. ಹಳೆಯ ಕಾರ್ಯಗಳಿಗೆ ಕ್ರಮವಾಗಿ ಪರಿಹಾರ ಸಿಗುತ್ತದೆ. ಈ ವಾರ ಇತರರ ಮಾರ್ಗದರ್ಶನವು ಸ್ವಲ್ಪ ಉಪಯೋಗಕರವಾಗಲಿದೆ. ಹಣಕಾಸಿನಲ್ಲಿ ಅನವಶ್ಯಕ ವೆಚ್ಚ ಇಲ್ಲದಂತೆ ಗಮನಹರಿಸಬೇಕು.
ಈ ವಾರ ನಿಮ್ಮ ನಾಯಕತ್ವ ಗುಣಗಳು ಸ್ಪಷ್ಟವಾಗಿ ತೋರುತ್ತವೆ. ಕಾರ್ಯಸ್ಥಳದಲ್ಲಿ ಗೌರವ ಹೆಚ್ಚಳದ ಸೂಚನೆ ಕಾಣುತ್ತದೆ. ಈ ವಾರ ದಾಖಲೆ ನಿರ್ವಹಿಸುವವರಿಗೆ ಹೊಸ ಜವಾಬ್ದಾರಿ ಅಥವಾ ಪ್ರಶಂಸೆ ದೊರೆಯಬಹುದು. ಆದಾಗ್ಯೂ, ಅಹಂಭಾದಿಂದ ದೂರವಿರಬೇಕು. ಹಣಕಾಸಿನಲ್ಲಿ ಸ್ಥಿರತೆ.
ಆರನೇ ರಾಶಿಯವರಿಗೆ ಈ ವಾರ ಸೂಕ್ಷ್ಮತೆಯುಳ್ಳ ಕೆಲಸಗಳಲ್ಲಿ ನೀವು ಅಚ್ಚುಕಟ್ಟಾಗಿ ಯಶಸ್ವಿಯಾಗಿ ಮಾಡುವಿರಿ. ಲೆಕ್ಕಾಚಾರ, ಸಂಶೋಧನೆ, ಪರಿಶೀಲನೆಗೆ ಸಂಬಂಧಿತ ಕಾರ್ಯಗಳಿಗೆ ಇದು ಅತ್ಯಂತ ಶುಭಕರ ಕಾಲ. ಈ ವಾರ ಕೆಲವು ಸಹೋದ್ಯೋಗಿಗಳ ಸಹಕಾರ ದೊರೆತು ಕಾರ್ಯಸಾಧನೆ ಸುಲಭಗೊಳ್ಳುತ್ತದೆ.
ಉದ್ಯೋಗದಲ್ಲಿ ಉಪಕಾರಕ್ಕೆ ಪ್ರತ್ಯುಪಕಾರವೇ ಈ ವಾರದ ನಿಮ್ಮ ಪ್ರಮುಖ ಶಕ್ತಿ. ಸಹಭಾಗಿತ್ವದ ಕೆಲಸಗಳಲ್ಲಿ ಒಳ್ಳೆಯ ಫಲ ಒಲಿಯುತ್ತದೆ. ಹೊಸ ಕಲಿಕೆಯ ಆಸಕ್ತಿ ಹೆಚ್ಚುತ್ತದೆ. ಎರಡರ ಆದಾಯದ ಮೂಲ ಇರುವವರಿಗೆ ಲಾಭಕರ ವಾರ. ಯಾವುದೇ ಏರಿಳಿತಗಳು ನಕಾತಕರಾತ್ಮಕ ಪರಿಣಾಮವನ್ನು ಉಂಟುಮಾಡದು.
ಈ ವಾರ ಕೆಲಸದ ಸ್ಥಳದಲ್ಲಿ ಸಣ್ಣ–ಪುಟ್ಟ ವಿರೋಧದ ಲಕ್ಷಣ ಕಂಡರೂ, ನಿಮ್ಮ ದೃಢತೆ ಮತ್ತು ಕಾರ್ಯಪಟುತ್ವದಿಂದ ಅದನ್ನು ಸುಲಭವಾಗಿ ಇಲ್ಲವಾಗುವುದು. ಆತ್ಮವಿಶ್ವಾಸವೇ ಇದನ್ನು ಮಾಡಿಸುತ್ತದೆ. ಹಣಕಾಸಿನಲ್ಲಿ ಹಳೆಯ ಬಾಕಿ ವಸೂಲಿಯಾಗುವ ಸಾಧ್ಯತೆ. ಉದ್ಯೋಗ ಪಡೆಯಲು ಮನವೊಲಿಸುವಿರಿ.
ಒಂಭತ್ತನೇ ರಾಶಿಯವರಿಗೆ ಈ ವಾರ ಹೊಸ ಕಾರ್ಯಾರಂಭೀಸುವ ತವಕವಿರಲಿದ್ದು ಪೂರ್ಣ ಸಿದ್ಧತೆಯಾಗಿಲ್ಲಬೆಂಬ ಹಿಂಜರಿಕೆಯೂ ಇರುವುದು. ಈ ವಾರ ಪ್ರವಾಸಕ್ಕೆ ಸಂಬಂಧಿಸಿದ ಅಥವಾ ಜವಾಬ್ದಾರಿಯ ಯೋಜನಾ ಕಾರ್ಯಗಳಿಗೆ ಅನುಕೂಲಕರ. ಹಿರಿಯರಿಂದ ಉತ್ತೇಜನ ದೊರೆತು ಕೆಲಸಕ್ಕೆ ಮತ್ತಷ್ಟು ದಿಕ್ಕು ಸಿಗುತ್ತದೆ. ಹಣಕಾಸಿನಲ್ಲಿ ಸಣ್ಣ ಮೈ ಮರೆವು ಉಂಟಾಗುವುದು.
ನವೆಂಬರ್ ತಿಂಗಳ ಕೊನೆಯ ಈ ವಾರ ನಿಧಾನಗತಿಯ ಪ್ರಗತಿಯಾದರೂ ದೀರ್ಘಾವಧಿಯಲ್ಲಿ ಯಶಸ್ಸಿದೆ ಎಂಬ ಸಮಾಧಾನವೂ ಬರಲಿದೆ. ಅನುಭವಿಗಳ ಆಪ್ತರ ಜೊತೆ ನಡೆದ ಸಂಭಾಷಣೆ ನಿಮ್ಮ ಭವಿಷ್ಯಕ್ಕೆ ಮಾರ್ಗದರ್ಶಕ. ಹಣಕಾಸಿನಲ್ಲಿ ಸಂಗ್ರಹಿಸುವ ಮನೋಭಾವ ಬಲಗೊಳ್ಳುತ್ತದೆ.
ಇದನ್ನೂ ಓದಿ: ಡಿಸೆಂಬರ್ 26ರ ನಂತರ ಜಾಗತಿಕ ಮಟ್ಟದಲ್ಲಿ ಅಲ್ಲೋಲ ಕಲ್ಲೋಲ; ಕರ್ನಾಟಕದ ಖ್ಯಾತ ಜ್ಯೋತಿಷಿ ಸ್ಫೋಟಕ ಭವಿಷ್ಯ
ಈ ವಾರ ನೀವಾಗಿಯೇ ಏನನ್ನೂ ಹೇಳಿಕೊಳ್ಳದಿದ್ದರೂ ನಿಮ್ಮ ಕೃತಿಯಿಂದ ಎಲ್ಲವೂ ಗೊತ್ತಾಗಲಿದೆ. ವಿಜ್ಞಾನ, ವಿನ್ಯಾಸ, ಸಂಶೋಧನೆ ಕ್ಷೇತ್ರದವರಿಗೆ ಇದು ಶ್ರೇಷ್ಠವಾದ ವಾರ. ಸ್ವತಂತ್ರವಾಗಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳು. ಹಲವು ಕ್ಷೇತ್ರದವರ ಜೊತೆ ಒಪ್ಪಂದ ಮಾಡಿಕೊಳ್ಳಲು ಸಿದ್ಧತೆ ನಡೆಸುವಿರಿ. ಪಡೆಯಬೇಕಾದರೆ ಬಿಡುವುದೂ ಮುಖ್ಯ. ಇದನ್ನು ಚಾಣಾಕ್ಷತನದಿಂದ ನಿಭಾಯಿಸುವಿರಿ.
ಈ ವಾರ ಸಂದರ್ಭದ ಕಾರಣಕ್ಕೆ ಮನೋಭಾವ ಅಲುಗಾಡುವ ಸಂಭವವಿದ್ದರೂ ಅದಕ್ಕೂ ಮಿಗಿಲಾದುದನ್ನು ಊಹಿಸಿಕೊಳ್ಳುವಿರಿ. ಕಲೆ, ಸಾಹಿತ್ಯಗಳ ಕೃಷಿ ಮಸಡುವವರಿಗೆ ಒಳ್ಳೆಯ ಸಮಯ. ವಿದೇಶಕ್ಕೆ ಸಂಬಂಧಿಸಿದ ಕೆಲಸಗಳಲ್ಲಿ ಅನೂಕೂಲತೆ. ಹಣದಲ್ಲಿ ನಿಧಾನವಾದ ಪ್ರಗತಿ, ನೆಮ್ಮದಿ ಕೂಡ ಜೊತೆಗಿರಲಿದೆ. ಒಂದು ಒಡಂಬಡಿಕೆಯಿಂದ ಮತ್ತೊಂದು ತಪ್ಪಿ ಹೋಗದಂತೆ ಎಚ್ಚರಿಕೆ ಬೇಕು.
– ಲೋಹಿತ ಹೆಬ್ಬಾರ್ – 8762924271 (what’s app only)
ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ