Nov 2025 Weekly Horoscope: ನಂಬರ್​​​​ನ ಮೊದಲ ವಾರದಲ್ಲಿ ಈ ರಾಶಿಗಳಿಗೆ ಶುಭಫಲ, ಇಲ್ಲಿದೆ ನೋಡಿ

ಉದ್ಯೋಗ ಭವಿಷ್ಯ: ನವೆಂಬರ್ ಮೊದಲ ವಾರ (02-12-2025ರಿಂದ 08-11-2025ರವರಗೆ) ಸ್ವಂತ ಉದ್ಯಮಕ್ಕೆ ಹೆಚ್ಚಿನ ಲಾಭ ತರಲಿದೆ. ಇತರ ವೃತ್ತಿಯವರು ಆರ್ಥಿಕ ಸಮಸ್ಯೆಗಳನ್ನು ಸಮಯೋಚಿತವಾಗಿ ನಿರ್ವಹಿಸಬೇಕು. ನಿಮ್ಮ ವರ್ತನೆ ಮತ್ತು ಕಾರ್ಯಕುಶಲತೆಯು ಭವಿಷ್ಯವನ್ನು ರೂಪಿಸುತ್ತದೆ. ಹಣಕ್ಕಿಂತ ಆರೋಗ್ಯವೇ ಮುಖ್ಯ ಎಂಬ ಮಂತ್ರ ಸದಾ ನೆನಪಿರಲಿ. ಇರುವಲ್ಲಿಯೇ ಸಂತೋಷದಿಂದಿರಿ, ನಿಮ್ಮ ಸಾಮರ್ಥ್ಯಗಳನ್ನು ಬಳಸಿಕೊಳ್ಳಿ.

Nov 2025 Weekly Horoscope: ನಂಬರ್​​​​ನ ಮೊದಲ ವಾರದಲ್ಲಿ ಈ ರಾಶಿಗಳಿಗೆ ಶುಭಫಲ, ಇಲ್ಲಿದೆ ನೋಡಿ
ಸಾಂದರ್ಭಿಕ ಚಿತ್ರ
Edited By:

Updated on: Oct 31, 2025 | 7:03 PM

02-12-2025ರಿಂದ 08-11-2025ರವರಗೆ ನವೆಂಬರ್ ಮೊದಲ ವಾರವಾಗಿದ್ದು ಸ್ವಂತ ಉದ್ಯಮಕ್ಕೆ ಹೆಚ್ಚಿನ ಲಾಭ. ಅನ್ಯಾನ್ಯ ವೃತ್ತಿಯವರು ಸಮಯ ಸಂದರ್ಭಗಳ ಆಧಾರದ ಮೇಲೆ ತಮ್ಮ ಆರ್ಥಿಕ ಸಮಸ್ಯೆಗಳನ್ನು ಹೇಳಿಕೊಳ್ಳಬೇಕು. ಎಲ್ಲರೂ ಲಾಭವನ್ನು ಪಡೆಯಲು ಸಾಧ್ಯವಿಲ್ಲ. ನಿಮ್ಮ ವರ್ತನೆ ಹಾಗೂ ಕಾರ್ಯಕುಶಲತೆಯು ಭವಿಷ್ಯವನ್ನು ನಿರ್ಧರಿಸುವುದು. ಇರುವಲ್ಲಿಯೇ ಸ್ವಚ್ಛಂದವಾಗಿ ವಿಹರಿಸಿ, ಖುಷಿಪಡಿ. ಹಣಕ್ಕಿಂತ ಆರೋಗ್ಯ ಮುಖ್ಯ ಎನ್ನುವುದು ನಿಮ್ಮ ತಲೆಯಲ್ಲಿ ಸದಾ ಇರಬೇಕಾದ ಮುಖ್ಯ‌ಮಂತ್ರ.

ಮೇಷ ರಾಶಿ :

ನವೆಂಬರ್ ತಿಂಗಳ ಮೊದಲ ವಾರದಲ್ಲಿ ನೀವು ಕೆಲಸದಲ್ಲಿ ಹೊಸ ಪ್ರಾಜೆಕ್ಟ್‌ಗಳನ್ನು ಪಡೆದು ಹೊಸ ಸವಾಲುಗಳನ್ನೂ ಎದುರಿಸಬೇಕಾಗುವುದು. ಕರ್ಮಾಧಿಪತಿ ದ್ವಾದಶದಲ್ಲಿ ಇರುವ ಕಾರಣ ನೀವು ಅದನ್ನು ಧೈರ್ಯದಿಂದ ನಿಭಾಯಿಸುತ್ತೀರಿ. ಮೇಲಧಿಕಾರಿಗಳು ನಿಮ್ಮ ಪ್ರತಿಭೆಯನ್ನು ಮೆಚ್ಚವರು. ಹಳೆಯ ಪ್ರಯತ್ನಗಳಿಗೆ ಉನ್ನತಿಯು ದೊರೆಯುವ ಸಾಧ್ಯತೆ ಇದೆ. ವ್ಯವಹಾರದಲ್ಲಿ ಹೊಸ ಹೂಡಿಕೆ ಆಲೋಚಿಸುತ್ತಿದ್ದರೆ, ಇದು ಸೂಕ್ತ ಸಮಯ. ಆದರೆ ಆತುರಾತುರವಾಗಿ ಏನನ್ನೂ ಮಾಡುವುದು ಬೇಡ.

ವೃಷಭ ರಾಶಿ :

ಈ ವಾರ ನಿಮ್ಮ ಸ್ಥಿರತೆ ಮತ್ತು ಶಾಂತತೆಯೇ ಯಶಸ್ಸಿನ ಮೂಲಮಂತ್ರ. ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಗಳಿಂದ ಉತ್ತಮ ಸಹಕಾರ ಸಿಗುತ್ತದೆ. ಇರುವ ಹೊಣೆಗಾರಿಕೆಯನ್ನು ಹೊಸ ಹೊಣೆಗಾರಿಕೆಯ ಜೊತೆ ನಿಭಯಿಸಬೇಕು. ಅವನ್ನು ಜಾಣ್ಮೆಯಿಂದ ಮಾಡುವಿರಿ. ಹಣಕಾಸಿನ ವಿಷಯಗಳಲ್ಲಿ ಲಾಭದಾಯಕ ಸಮಯ. ವಿಶೇಷವಾಗಿ ಹಿಂದಿನ ಹೂಡಿಕೆಗಳು ಹೆಚ್ಚಿನ ಫಲ ನೀಡುತ್ತವೆ. ಕರ್ಮಾಧಿಪತಿ ಏಕಾದಶದಲಿದ್ದು ಬ್ಯಾಂಕಿಂಗ್ ಉದ್ಯೋಗದವರಿಗೆ ಶುಭಫಲ. ವ್ಯವಹಾರಿಕ ವ್ಯಕ್ತಿಗಳಿಗೆ ಹೊಸ ಒಪ್ಪಂದಗಳ ಸಾಧ್ಯತೆ.

ಮಿಥುನ ರಾಶಿ :

ಈ ರಾಶಿಯವರಿಗೆ ಮೊದಲ ವಾರ ಬುದ್ಧಿವಂತಿಕೆ ಮತ್ತು ಸಂವಹನ ಕೌಶಲಗಳೇ ಈ ವಾರ ನಿಮ್ಮನ್ನು ಉನ್ನತ ಮಟ್ಟಕ್ಕೆ ತಲುಪಿಸುತ್ತವೆ. ನಿಮ್ಮ ಐಡಿಯಾಗಳು ಸಂಸ್ಥೆಯ ಅಭಿವೃದ್ಧಿಗೆ ನಿಮ್ಮ ಏಳ್ಗೆಗೂ ದಾರಿಯಾಗಬಹುದು. ಮಾಧ್ಯಮ ಹಾಗೂ ಮಾರ್ಕೆಟಿಂಗ್ ಕ್ಷೇತ್ರದಲ್ಲಿ ವ್ಯವಹಾರ ಚುರುಕಾಗಿರುವ ವಾರ. ಉದ್ಯೋಗಾಧಿಪತಿ ದ್ವಿತೀಯದಲ್ಲಿ ಇದ್ದು ಹೊಸ ಕೌಶಲ್ಯ ಕಲಿಯಲು ಸಮಯ ವಿನಿಯೋಗಿಸಿದರೆ, ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ತಂದರೆ ಲಾಭ. ಆದರೆ ಅತಿಯಾದ ಕೆಲಸದ ಒತ್ತಡದಿಂದ ದೈಹಿಕ ಶ್ರಮ ಹೆಚ್ಚಾಗಲಿದ್ದು, ವಿಶ್ರಾಂತಿಯೂ ಅಗತ್ಯವಿರಲಿದೆ.

ಕರ್ಕಾಟಕ ರಾಶಿ :

ಈ ವಾರ ನಿಮಗೆ ಕಳೆದ ವಾರದ ಒತ್ತಡಗಳಿಂದ ಮುಕ್ತವಾಗುವ ಪ್ರೆಶ್ ಎನಿಸುವುದು. ಕೆಲಸದ ಸ್ಥಿರತೆಗೆ ಇದೂ ಮುಖ್ಯ ಕಾರಣ. ಹಳೆಯ ಪ್ರಯತ್ನಗಳು ಫಲ ನೀಡುತ್ತವೆ. ವಿಶೇಷವಾಗಿ ನೀವು ಕಳೆದ ತಿಂಗಳಿನಲ್ಲಿ ಪ್ರಾರಂಭಿಸಿದ ಯೋಜನೆಗಳು ಫಲಕಾರಿ. ಉದ್ಯೋಗಾಧಿಪತಿ ಸ್ವಸ್ಥಾನದಲ್ಲಿ ಇರುವುದರಿಂದ ಹೊಸ ಉದ್ಯೋಗವನ್ನು ಹುಡುಕುತ್ತಿದ್ದವರಿಗೆ ಉತ್ತಮ ಪ್ರಾಪ್ತಿಯೂ ಆಗುವುದು. ಮನೆಯ ಸದಸ್ಯರ ಬೆಂಬಲವು ನಿಮ್ಮ ಆತ್ಮವಿಶ್ವಾಸ ಹೆಚ್ಚಿಸುತ್ತದೆ. ಸರ್ಕಾರಿ ಉದ್ಯೋಗದಲ್ಲಿ ಇದ್ದವರಿಗೆ, ಆಡಳಿತ ಕ್ಷೇತ್ರದವರಿಗೆ ಉತ್ತಮ ಸಮಯ.

ಸಿಂಹ ರಾಶಿ :

ರಾಶಿ ಚಕ್ರದ ಐದನೇ ರಾಶಿಗೆ ಈ ವಾರ ನಿಮಗೆ ನಾಯಕತ್ವ ಪ್ರದರ್ಶನ ಮಾಡಲು ಅವಕಾಶ ಸಿಗುತ್ತದೆ. ಹೊಸ ಪ್ರಾಜೆಕ್ಟ್‌ಗಳು ಅಥವಾ ತಂಡದ ನೇತೃತ್ವ ನಿಮಗೆ ಬರಬಹುದು. ನಿಮ್ಮ ಮಾತಿನ ಪ್ರಭಾವದಿಂದ ಜನರು ಪ್ರೇರಿತರಾಗುತ್ತಾರೆ. ಅಧಿಕಾರಿಗಳು ನಿಮ್ಮ ಕೆಲಸವನ್ನು ಮೆಚ್ಚುತ್ತಾರೆ. ಆದರೆ ಅಹಂಕಾರ ಅಥವಾ ಅತಿವಿಶ್ವಾಸ ತೋರಿಸಬೇಡಿ. ಅದು ತಂಡದ ಸಂಬಂಧ ಹಾಳುಮಾಡಬಹುದು. ಉದ್ಯಮಿಗಳಿಗೆ ಹೊಸ ವ್ಯವಹಾರ ಒಪ್ಪಂದ ಸಾಧ್ಯ.

ಇದನ್ನೂ ಓದಿ: ಕರ್ನಾಟಕ ಖ್ಯಾತ ಜ್ಯೋತಿಷಿ ಹೇಳಿದಂತೆ ಮುಖ್ಯಮಂತ್ರಿ ಆಗುವ ಯೋಗ ಯಾರಿಗಿದೆ? ಇಲ್ಲಿದೆ ಒಗಟು ಬಿಡಿಸುವ ಪ್ರಯತ್ನ

ಕನ್ಯಾ ರಾಶಿ :

ಆರನೇ ರಾಶಿಯವರಿಗೆ ಈ ವಾರ ಕೆಲಸದ ಸ್ಥಳದಲ್ಲಿ ಸವಾಲುಗಳು ಸಣ್ಣದಾದರೂ ಬಹಳ ಚಿಂತನೆಯಿಂದ ಎದುರಿಸಬೇಕು. ಎಲ್ಲ ಸಮಸ್ಯೆಗಳಿಗೂ ಪರಿಹಾರ ಸಿಗುತ್ತದೆ. ಉದ್ಯೋಗಾಧಿಪತಿ ದ್ವಿತೀಯದಲ್ಲಿದ್ದು ಅಂಕಿ-ಅಂಶ, ಲೆಕ್ಕಪತ್ರ, ವೈದ್ಯಕೀಯ ಕ್ಷೇತ್ರದಲ್ಲಿ ಯಶಸ್ಸು ಪ್ರಾಪ್ತಿ. ನಿಮ್ಮ ಯೋಜನೆಗಳು ಫಲ ನೀಡುವ ಹಾದಿಯಲ್ಲಿ ಇರುವುದು. ಆದರೆ ಅತಿಯಾದ ಚಿಂತೆಯಿಂದ ದೂರವಿರಿ. ಸಮಯ ಮತ್ತು ಶ್ರಮ ಎರಡನ್ನೂ ಸಮತೋಲನದಲ್ಲಿ ಇರಿಸಿಕೊಳ್ಳಿ.

ತುಲಾ ರಾಶಿ :

ನವೆಂಬರ್ ತಿಂಗಳ ಈ ವಾರದಲ್ಲಿ ನಿಮ್ಮ ವೃತ್ತಿಯಲ್ಲಿ ತೋರುವ ಮನೋಹರ ನಡೆವಳಿಕೆಗಳು ಸಮತೋಲನದಲ್ಲಿ ಇರಲಿ. ಕಲೆ, ವಿನ್ಯಾಸ, ಕಾನೂನು, ಸಾಮಾಜಿಕ ಕಾರ್ಯದಲ್ಲಿ ವಾಹಕರಾಗಿ ಕಾರ್ಯ ಮಾಡುವವರಿಗೆ ಅತ್ಯುತ್ತಮ ವಾರ. ಕೆಲಸದ ಸ್ಥಳದಲ್ಲಿ ಒತ್ತಡ ಇರುತ್ತಾದರೂ, ನೀವು ಸೌಹಾರ್ದದಿಂದ ನಿರ್ವಹಿಸುತ್ತೀರಿ. ಮೇಲಧಿಕಾರಿಗಳ ವಿಶ್ವಾಸ ಗಳಿಸುವ ಸಮಯವೂ ಇದೇ ಆಗಿದೆ. ಹೊಸ ಅವಕಾಶಗಳು ಬಾಗಿಲಲ್ಲಿ ಕಾದಿವೆ.

ವೃಶ್ಚಿಕ ರಾಶಿ :

ಕುಜಾಧಿಪತ್ಯದ ರಾಶಿಗೆ ಈ ವಾರ ಕೆಲಸದಲ್ಲಿ ಗಂಭೀರ ನಿಮ್ಮದೇ ಆದ ಮಹತ್ತ್ವ ವೈಶಿಷ್ಟ್ಯವನ್ನು ತೋರಿಸುತ್ತೀರಿ. ಹೊಸ ಯೋಜನೆಗಳು ನಿಮ್ಮ ಕೈಯಲ್ಲಿ ಬದಲಾವಣೆಯಾಗುತ್ತಲೇ ಇರುತ್ತವೆ. ಉದ್ಯೋಗಾಧಿಪತಿ ದ್ವಾದಶ ಸ್ಥಾನದಲ್ಲಿ ಇರುವ ಕಾರಣ ಸಂಶೋಧನೆ, ತನಿಖೆ, ಮನೋವಿಜ್ಞಾನ, ತಂತ್ರಜ್ಞಾನ ಕ್ಷೇತ್ರದವರಿಗೆ ಉತ್ತಮ ಪ್ರಗತಿ. ಸಹೋದ್ಯೋಗಿಗಳ ವಿಶ್ವಾಸ ಗಳಿಸಿ, ಆದರೆ ನಿಮ್ಮ ಕಾರ್ಯಗಳನ್ನು ಅತಿಯಾಗಿ ಹಂಚಿಕೊಳ್ಳಬೇಡಿ. ಹಣಕಾಸಿನ ವಿಷಯಗಳಲ್ಲಿ ಸೂಕ್ಷ್ಮ ನಿರ್ಧಾರ ತೆಗೆದುಕೊಳ್ಳಿ.

ಧನು ರಾಶಿ :

ಈ ವಾರ ಗುರುವಿನ ಆಧಿಪತ್ಯದ ಈ ರಾಶಿಗೆ ಹೊಸ ಅವಕಾಶಗಳು ನಿಮ್ಮ ಮುಂದೆ ತೆರೆದುಕೊಳ್ಳುವುದು. ವಿದೇಶಿ ಸಂಪರ್ಕ, ಪ್ರವಾಸ ಅಥವಾ ತರಬೇತಿ ಸಂಬಂಧಿತ ಕೆಲಸಗಳಲ್ಲಿ ಯಶಸ್ಸು. ಹೊಸ ವಿಚಾರವನ್ನು ಕಲಿಯಲು ಉತ್ಸಾಹ ಹೆಚ್ಚುತ್ತದೆ. ವಿದ್ಯಾರ್ಥಿಗಳು ಶಿಕ್ಷಕರಿಂದ ಅನೇಕ ಉತ್ತಮ ಅಂಶಗಳನ್ನು ಕಲಿಯುವರು. ತಮ್ಮ ಉದ್ಯೋಗಕ್ಕೆ ಅಳವಡಿಸಿಕೊಳ್ಳುವ ಚಿಂತನೆಯನ್ನೂ ಮಾಡುವರು. ನಿಮ್ಮ ದೃಷ್ಟಿಕೋನ ಮತ್ತು ಪ್ರೇರಣೆ ಇತರರಿಗೆ ಮಾದರಿ ಆಗುತ್ತದೆ. ಪ್ರಮೋಷನ್ ಗೆ ಆಸಕ್ತಿ ಇಲ್ಲದಿದ್ದರೂ ಅಧಿಕಾರ ನಿಮ್ಮನ್ನು ಸೆಳೆಯುವುದು.

ಮಕರ ರಾಶಿ :

ನೆವೆಂಬರ್ ನ ಮೊದಲ ವಾರದಲ್ಲಿ ನಿಮಗೆ ಕೆಲಸದ ಒತ್ತಡ ಹೆಚ್ಚಿದ್ದರೂ, ನಿಮ್ಮ ಶಿಸ್ತಿನಿಂದ ಎಲ್ಲವನ್ನು ನಿಭಾಯಿಸುತ್ತೀರಿ. ಅಧಿಕಾರಿಗಳು ನಿಮ್ಮ ಶ್ರಮ ಮತ್ತು ಶ್ರದ್ಧೆಯನ್ನು ಗುರುತಿಸುತ್ತಾರೆ. ಉದ್ಯೋಗಸಧಿಪತಿ ಸ್ವಸ್ಥಾನದಲ್ಲಿ ಇದ್ದುದರಿಂದ ಹಣಕಾಸಿನ ವೃದ್ಧಿ ಸಾಧ್ಯ. ಹಳೆಯ ಯೋಜನೆಗಳಿಂದ ನಿಧಾನವಾಗಿ ಫಲ ಪಡೆಯುವಿರಿ. ವ್ಯವಹಾರಿಕ ವ್ಯಕ್ತಿಗಳಿಗೆ ಹೊಸ ಹೂಡಿಕೆಗಳಿಂದ ಲಾಭ. ಆರೋಗ್ಯದ ಕಡೆ ಸ್ವಲ್ಪ ಗಮನ ಇರಲಿ.

ಕುಂಭ ರಾಶಿ :

ರಾಶಿ ಚಕ್ರದ ಹನ್ನೊಂದನೇ ರಾಶಿಯವರಿಗೆ ಈ ವಾರ ತರಬೇತಿಯಿಂದ ಉಂಟಾದ ನಿಮ್ಮ ಆಲೋಚನೆಗಳು ಹೊಸ ದಿಕ್ಕು ತೋರಿಸುತ್ತವೆ. ಉದ್ಯೋಗಾಧಿಪತಿ ಸ್ವಸ್ಥಾನದಲ್ಲಿದ್ದು ತಂತ್ರಜ್ಞಾನ, ಸಂಶೋಧನೆ, ಆವಿಷ್ಕಾರ, ವಿಜ್ಞಾನ ಕ್ಷೇತ್ರದವರಿಗೆ ಅಭಿವೃದ್ಧಿ ಕೊಡಿಸುವನು. ಯೋಜನೆಗಳಲ್ಲಿ ನಿಮ್ಮದು ಪಾತ್ರ ಪ್ರಮುಖವಾಗಿರುವುದು. ಪ್ರಜ್ಞಾವಂತರ ತಂಡದ ಸಹಕಾರದಿಂದ ವೇಗವಾಗಿ ಕೆಲಸ ಮುಗಿಸಲು ಸಾಧ್ಯ. ಅನಭವದಿಂದ ಬಂದ ಯೋಜನೆಯನ್ನು ವ್ಯಕ್ತಪಡಿಸಲಾರಿರಿ.

ಮೀನ ರಾಶಿ :

ಗುರುವಿನ ಆಧಿಪತ್ಯದ ಈ ರಾಶಿಗೆ ತಿಂಗಳ ಮೊದಲ ವಾರ ನಿಮ್ಮ ಕಲಾತ್ಮಕ ಮತ್ತು ಮಾನವೀಯ ಗುಣಗಳು ಪ್ರಕಟವಾಗುತ್ತವೆ. ಉದ್ಯೋಗಾಧಿಪತಿ ಪಂಚಮದಲ್ಲಿ ಉಚ್ಚನಾಗಿದ್ದು ಕಲೆ, ಸಂಗೀತ, ಸೇವಾ, ಶಿಕ್ಷಣ ಕ್ಷೇತ್ರದಿಂದ ಪ್ರಶಂಸೆಯನ್ನು ಕೊಡಿಸುವನು. ಹಳೆಯ ಕೆಲಸಗಳಲ್ಲಿ ಹೊಸ ಬದಲಾವಣೆಗಳು ಮಾಡಿಕೊಳ್ಳುವಿರಿ. ವೃತ್ತಿಯಲ್ಲಿ ಭಾವನಾತ್ಮಕ ನಿರ್ಧಾರಗಳಿಗೆ ಅವಕಾಶ ಕೊಡದೇ ಬುದ್ಧಿವಂತಿಕೆ ಬಳಸಿ. ನಿಮ್ಮ ನಿಷ್ಠೆ ಎಲ್ಲರ ಮೆಚ್ಚುವರು.

– ಲೋಹಿತ ಹೆಬ್ಬಾರ್ – 8762924271 (what’s app only)

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ