Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ನವೆಂಬರ್ 20ರ ದಿನಭವಿಷ್ಯ

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ನವೆಂಬರ್ 20ರ ಗುರುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. ಈ ದಿನ ನಿಮಗೆ ಶುಭವಾಗಲಿದೆಯೇ ಅಥವಾ ಸವಾಲುಗಳಿವೆಯೇ ಎಂದು ತಿಳಿದುಕೊಳ್ಳಿ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ನವೆಂಬರ್ 20ರ ದಿನಭವಿಷ್ಯ
ದಿನ ಭವಿಷ್ಯ
Edited By:

Updated on: Nov 20, 2025 | 12:28 AM

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1):

ನಿಮ್ಮಲ್ಲಿ ಇರುವಂಥ ನಾಯಕತ್ವದ ಗುಣಗಳು ಇತರರಿಗೂ ಅನುಭವಕ್ಕೆ ಬರುವಂಥ ದಿನ ಇದಾಗಿರುತ್ತದೆ. ಉದ್ಯೋಗಸ್ಥರಾಗಿದ್ದಲ್ಲಿ ನೀವು ಕೆಲಸ ಮಾಡುವ ಸ್ಥಳ- ಕಚೇರಿಯಲ್ಲಿ ನಿಮ್ಮ ನಿರ್ಧಾರಗಳು ಮತ್ತು ಸಲಹೆಗಳಿಗೆ ಮನ್ನಣೆ ಸಿಗಲಿದೆ. ಹೊಸ ಜವಾಬ್ದಾರಿಗಳನ್ನು ನೀವು ನಿರ್ವಹಿಸಬೇಕಾಗಲಿದ್ದು, ಆರ್ಥಿಕವಾಗಿಯೂ ಸದೃಢರಾಗುವಿರಿ. ದೀರ್ಘಕಾಲದ ಸಾಲವೊಂದು ತೀರಿಸುವ ಸಾಧ್ಯತೆ ಇದೆ. ಕೌಟುಂಬಿಕ ವಿಚಾರಗಳಲ್ಲಿ ನಡೆಯುವಂಥ ಮಾತುಕತೆಗಳಲ್ಲಿ ನೀವೇ ಮುಂದೆ ನಿಂತು ಸಮಸ್ಯೆಗಳನ್ನು ಬಗೆಹರಿಸುವಿರಿ. ಇನ್ನು ನಿಮ್ಮ ಆತ್ಮವಿಶ್ವಾಸ ಹೆಚ್ಚಿರುತ್ತದೆ. ಆದರೆ ನೆನಪಲ್ಲಿ ಇರಬೇಕಾದದ್ದು ಏನೆಂದರೆ, ನಿಮ್ಮ ಆತ್ಮವಿಶ್ವಾಸ ಕೆಲವೊಮ್ಮೆ ಅಹಂಕಾರದಂತೆ ಅಥವಾ ಇತರರ ಮೇಲಿನ ಅತಿಯಾದ ನಿಯಂತ್ರಣದಂತೆ ಕಾಣಿಸಬಹುದು. ಬೇರೆಯವರ ಅಭಿಪ್ರಾಯಗಳನ್ನು ಸಹ ಮುಕ್ತ ಮನಸ್ಸಿನಿಂದ ಆಲಿಸಿ. ಒಂದು ವಿಚಾರಕ್ಕೆ ಅದು ಆಗಲೇಬೇಕು ಎಂದು ವಿಪರೀತ ಪಟ್ಟು ಹಿಡಿದು ಕೂರುವುದು ಒಳ್ಳೆಯದಲ್ಲ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2):

ಕ್ರಿಯೇಟಿವ್ ಮತ್ತು ಕಲೆಗೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ಇಂದು ಉತ್ತಮ ದಿನವಾಗಿರುತ್ತದೆ. ಭಾವನಾತ್ಮಕ ನಿರ್ಧಾರಗಳಿಂದ ಸಾಧ್ಯವಾದಷ್ಟೂ ದೂರವಿರಿ. ಪಾಲುದಾರಿಕೆ ವ್ಯವಹಾರದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಮೂಡಬಹುದು. ದೊಡ್ಡ ಮೊತ್ತದ ಹೂಡಿಕೆ ಮಾಡುವ ಮುನ್ನ ತಜ್ಞರ ಸಲಹೆ ತೆಗೆದುಕೊಳ್ಳುವುದು ಅಗತ್ಯ ಎಂಬುದು ಗಮನದಲ್ಲಿ ಇರಲಿ. ನಿಮ್ಮ ಭಾವನೆಗಳಿಗೆ ಸಣ್ಣ ಸಣ್ಣ ಸಂಗತಿಗಳು ಸಹ ಘಾಸಿ ಮಾಡಬಹುದು. ಆದ್ದರಿಂದ ಯಾವುದೇ ವ್ಯಕ್ತಿ ಅಥವಾ ವಿಷಯವನ್ನು ತುಂಬ ಹಚ್ಚಿಕೊಳ್ಳಬೇಡಿ. ಕುಟುಂಬದೊಂದಿಗೆ ಸಮಯ ಕಳೆಯುವುದರಿಂದ ನೆಮ್ಮದಿ ಸಿಗುತ್ತದೆ. ಸಣ್ಣ ವಿಷಯಗಳಿಗೂ ಅತಿಯಾಗಿ ಚಿಂತಿಸುವುದನ್ನು ತಪ್ಪಿಸುವುದಕ್ಕಾಗಿ ನಿಮಗೆ ಬರುವಂಥ ಆಲೋಚನೆಗಳನ್ನು ಬರೆದಿಡುವ ಅಭ್ಯಾಸ ಮಾಡಿ. ಇದನ್ನು ಈ ದಿನದ ಮಟ್ಟಿಗೆ ಮಾಡಿದರೂ ಸಾಕು.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3):

ನಿಮ್ಮಲ್ಲಿ ಯಾರು ಶಿಕ್ಷಣ, ಬ್ಯಾಂಕಿಂಗ್ ಅಥವಾ ಕನ್ಸಲ್ಟಿಂಗ್ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಾ ಇದ್ದೀರಿ, ಅಂಥವರಿಗೆ ಯಶಸ್ಸು ಸಿಗಲಿದೆ. ನಿಮ್ಮ ತಿಳಿವಳಿಕೆ- ಅನುಭವ- ಜ್ಞಾನಕ್ಕೆ ಹಾಗೂ ಅದರ ಸರಿಯಾದ ಬಳಕೆಗೆ ಉತ್ತಮವಾದ ಪ್ರತಿಫಲ ದೊರೆಯಲಿದೆ. ವ್ಯಾಪಾರದ ವಿಸ್ತರಣೆ ವಿಚಾರಕ್ಕೆ ಸಂಬಂಧಿಸಿದಂತೆ ನೀವು ಕೈಗೊಳ್ಳುವ ಪ್ರಯಾಣವು ಲಾಭದಾಯಕ ಆಗಲಿದೆ. ಅತಿಯಾದ ಖರ್ಚು ಮಾಡುವ ಪ್ರವೃತ್ತಿಯನ್ನು ನಿಯಂತ್ರಿಸಿಕೊಳ್ಳುವುದು ಮುಖ್ಯ. ಧಾರ್ಮಿಕ ಚಟುವಟಿಕೆಗಳಲ್ಲಿ ನಿಮ್ಮ ಆಸಕ್ತಿ ಹೆಚ್ಚುತ್ತದೆ. ಗುರು ಸಮಾನರಾದ ವ್ಯಕ್ತಿಗಳನ್ನು ಈ ದಿನ ಭೇಟಿಯಾಗುವ ಸಾಧ್ಯತೆ ಇದೆ. ಕುಟುಂಬದಲ್ಲಿ ಸೌಹಾರ್ದ ವಾತಾವರಣ ಇರುತ್ತದೆ. ನೀವು ಸಾಮಾನ್ಯವಾಗಿಯೇ ಇತರರಿಗೆ ಸಲಹೆಗಳನ್ನು ನೀಡಲು ಬಯಸುತ್ತೀರಿ. ಈ ದಿನ ಅವರಾಗಿಯೇ ಕೇಳಿದಾಗ ಮಾತ್ರ ಸಲಹೆ ನೀಡಿ ಮತ್ತು ಇತರರ ಪರ್ಸನಲ್ ಸ್ಪೇಸ್ ಅನ್ನು ಗೌರವಿಸಿ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4):

ಭವಿಷ್ಯದ ಬಗ್ಗೆ ಆಲೋಚಿಸಿ, ಅದರ ಕಡೆಗೆ ನೀವು ಮಾಡಿದ ಕೆಲಸದ ಫಲವಾಗಿ ಈ ಹಿಂದಿನ ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ತಾಂತ್ರಿಕ ಕ್ಷೇತ್ರ, ರಾಜಕೀಯ ಅಥವಾ ರಿಯಲ್ ಎಸ್ಟೇಟ್‌ನಲ್ಲಿ ಕಾರ್ಯ ನಿರ್ವಹಿಸುವವರು ಉತ್ತಮ ಯಶಸ್ಸು ಕಾಣುವಿರಿ. ಆದರೆ ಹಣಕಾಸಿನ ನಿರ್ವಹಣೆಯಲ್ಲಿ ಸ್ಪಷ್ಟತೆ ಇರಿಸಿಕೊಳ್ಳಿ. ನಿಮ್ಮಲ್ಲಿ ಕೆಲವರಿಗೆ ಅನಿರೀಕ್ಷಿತವಾಗಿ ಅಡೆತಡೆಗಳು ಎದುರಾಗಬಹುದು. ಸರ್ಕಾರದಿಂದ ನೋಟಿಸ್ ನೀಡುವ ಸಾಧ್ಯತೆ ಇದೆ. ಇನ್ನು ನಿಮ್ಮ ಆಪ್ತ ಸ್ನೇಹಿತರೊಂದಿಗೆ ಸಣ್ಣ ಮಟ್ಟದಲ್ಲಾದರೂ ವಿವಾದಗಳು ಉಂಟಾಗಬಹುದು. ಯಾವುದೇ ಕಾರಣಕ್ಕೂ ಆರೋಗ್ಯ ವಿಚಾರದಲ್ಲಿ ನಿರ್ಲಕ್ಷ್ಯ ಬೇಡ. ಏಕೆಂದರೆ ಇದೇ ವಿಚಾರಕ್ಕೆ ನಿಮ್ಮ ಮನಸ್ಸಿನ ಆತಂಕ ಹೆಚ್ಚಾಗಬಹುದು. ಅನಗತ್ಯವಾದ ಆತಂಕ ಮತ್ತು ಅಸುರಕ್ಷತೆ ಭಾವ ಕಾಡಬಹುದು. ನಿಮ್ಮ ಆಲೋಚನೆಗಳು ವಾಸ್ತವಕ್ಕೆ ಹತ್ತಿರವಾಗಿವೆಯೇ ಅಥವಾ ಕೇವಲ ಊಹೆಯೇ ಎಂಬುದನ್ನು ವಿಶ್ಲೇಷಣೆ ಮಾಡಿ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5):

ಎಲ್ಲ ಕೆಲಸಗಳಿಗೆ ವೇಗವನ್ನು ನೀಡಬೇಕು ಎಂಬ ಮನಸ್ಥಿತಿ ನಿಮ್ಮದಾಗಿರುತ್ತದೆ. ಒಂದೇ ಸಮಯಕ್ಕೆ ಹಲವು ಕೆಲಸಗಳನ್ನು ನಿರ್ವಹಿಸುವುದರಲ್ಲಿ ತೊಡಗಿಕೊಳ್ಳುತ್ತೀರಿ. ವ್ಯಾಪಾರ- ವ್ಯವಹಾರ ಅಥವಾ ಇನ್ಯಾವುದೇ ಹೊಸ ಒಪ್ಪಂದಗಳಿಗೆ ಸಹಿ ಹಾಕಲು ಅಥವಾ ಮಾತುಕತೆ ನಡೆಸಲು ಸೂಕ್ತ ಸಮಯ ಆಗಿರುತ್ತದೆ. ನಿಮ್ಮಲ್ಲಿ ಕೆಲವರಿಗೆ ವ್ಯಾಪಾರದಲ್ಲಿ ಲಾಭಾಂಶ ಹೆಚ್ಚಲಿದೆ. ಪ್ರಯಾಣದ ಮೂಲಕವಾಗಿ ವರಮಾನಕ್ಕೆ ದಾರಿ ಆಗುವ ಸಾಧ್ಯತೆ ಇದೆ. ನಿಮ್ಮ ಮಾತಿನ ಚಾತುರ್ಯದಿಂದ ಯಾವುದೇ ಸಮಸ್ಯೆಯನ್ನು ನಿವಾರಿಸಿಕೊಳ್ಳುವಿರಿ. ಹಳೆಯ ಸ್ನೇಹಿತರ ಭೇಟಿ ಸಾಧ್ಯತೆ ಇದ್ದು, ಇದರಿಂದ ಕೆಲವು ಅನುಕೂಲ ಆಗಲಿದೆ. ಈ ದಿನದ ಕೊನೆಯಲ್ಲಿ ಮಾನಸಿಕ ಹಾಗೂ ದೈಹಿಕ ದಣಿವು ಹೆಚ್ಚಾಗಿರುತ್ತದೆ. ಮುಖ್ಯವಾದ ಕೆಲಸಗಳು ಯಾವ್ಯಾವು ಇವೆ ಎಂಬುದರ ಒಂದು ಪಟ್ಟಿ ಮಾಡಿಟ್ಟುಕೊಂಡು, ಅದಕ್ಕಾಗಿ ನಿಮ್ಮ ಶಕ್ತಿಯನ್ನು ಉಳಿಸಿಕೊಳ್ಳಿ. ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ಸಾಧಕ-ಬಾಧಕಗಳನ್ನು ಪರಿಶೀಲಿಸಿ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6):

ನಿಮ್ಮಲ್ಲಿ ಯಾರು ಕಲೆ, ಅಲಂಕಾರಿಕ ವಸ್ತುಗಳು, ಮನರಂಜನೆ ಅಥವಾ ಐಷಾರಾಮಿ ಉತ್ಪನ್ನಗಳ ಮಾರಾಟ ಕ್ಷೇತ್ರದಲ್ಲಿ ಕಾರ್ಯ ನಿರ್ವಹಣೆ ಮಾಡುತ್ತೀರಿ, ಅಂಥವರಿಗೆ ಲಾಭದ ಪ್ರಮಾಣದಲ್ಲಿ ಹೆಚ್ಚಳ ಆಗಲಿದೆ. ನಿಮ್ಮಲ್ಲಿ ಕೆಲವರಿಗೆ ದೀರ್ಘಾವಧಿಗೆ ದೊಡ್ಡ ಆರ್ಡರ್ ಗಳು ದೊರೆಯಬಹುದು. ಐಟಿ- ಬಿಪಿಒ ಕ್ಷೇತ್ರದಲ್ಲಿ ಉದ್ಯೋಗ ಮಾಡುವವರಿಗೆ ಕಚೇರಿಯಲ್ಲಿ ಸಹೋದ್ಯೋಗಿಗಳಿಂದ ಸಂಪೂರ್ಣ ಬೆಂಬಲ ದೊರೆಯಲಿದೆ. ಲೇವಾದೇವಿ ವ್ಯವಹಾರ ಮಾಡುವವರಿಗೆ ಸ್ಪಷ್ಟತೆ ಇರಲಿ. ಪ್ರೀತಿಪಾತ್ರರೊಂದಿಗೆ ಉತ್ತಮ ಬಾಂಧವ್ಯ ಇರಲಿದ್ದು, ಕಿರು ಪ್ರವಾಸಕ್ಕೆ ತೆರಳುವ ಯೋಗವಿದೆ. ಮನೆಯಲ್ಲಿ ಇರುವ ಕೆಲವು ವಸ್ತುಗಳನ್ನು ಮಾರಾಟ ಮಾಡಿ, ಅದರ ಬದಲಿಗೆ ಹೊಸತನ್ನು ಖರೀದಿಸುವ ಬಗ್ಗೆ ಆಲೋಚನೆ ಮಾಡುವಿರಿ. ನೀವು ಸಾಮಾನ್ಯವಾಗಿ ಎಲ್ಲರನ್ನೂ ಖುಷಿಯಾಗಿಡಲು ಪ್ರಯತ್ನಿಸುತ್ತೀರಿ. ಆದರೆ ಈ ದಿನ ನಿಮ್ಮ ಅಗತ್ಯಗಳ ಕಡೆಗೆ ಸಹ ಗಮನ ಹರಿಸುವುದು ಮುಖ್ಯವಾಗುತ್ತದೆ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7):

ನಿಮ್ಮ ಇನ್ ಟ್ಯೂಷನ್ ಮೂಲಕ ಬರುವಂಥ ವಿಚಾರಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡಿ. ಅದರ ವಿರುದ್ಧವಾಗಿ ನಡೆದುಕೊಳ್ಳದೇ ಇರುವುದು ಉತ್ತಮ. ಸಂಶೋಧನೆ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಮತ್ತು ಅಧ್ಯಾತ್ಮ ಕ್ಷೇತ್ರದಲ್ಲಿ ಇರುವವರಿಗೆ ಕೆಲವು ಪ್ರಾಜೆಕ್ಟ್ ಗಳಲ್ಲಿ ಯಶಸ್ಸು ದೊರೆಯಲಿದೆ. ದೀರ್ಘಕಾಲದಿಂದ ಇದ್ದ ಹಣಕಾಸಿನ ವಿಚಾರಗಳಲ್ಲಿನ ವ್ಯಾಜ್ಯಗಳು ಇತ್ಯರ್ಥ ಆಗಬಹುದು ಅಥವಾ ಆ ಬಗ್ಗೆ ಸೂಚನೆಯಾದರೂ ದೊರೆಯಲಿದೆ. ವೃತ್ತಿ ಅಥವಾ ಉದ್ಯೋಗ ಮಾಡುವ ಸ್ಥಳದಲ್ಲಿ ಗೊಂದಲದ ಸ್ಥಿತಿ ಇರಲಿದೆ. ಏಕಾಂತದಲ್ಲಿ ಸಮಯ ಕಳೆಯಲು ಹಾಗೂ ತೀರಾ ಗಂಭೀರವಾದ ವಿಚಾರಗಳ ಅಂತಿಮ ನಿರ್ಧಾರಕ್ಕಾಗಿ ಗಹನವಾದ ಆಲೋಚನೆಗಳಲ್ಲಿ ತೊಡಗಿಕೊಳ್ಳುವಿರಿ. ವಿದೇಶ ಪ್ರಯಾಣಕ್ಕೆ ತೆರಳುವುದಕ್ಕೆ ಪ್ರಯತ್ನಿಸುತ್ತಿರುವವರಿಗೆ ಶುಭ ಸುದ್ದಿ ಕೇಳಲಿದೆ. ಈ ದಿನ ಓವರ್ ಥಿಂಕಿಂಗ್ ನಿಮ್ಮ ಬಹುಪಾಲು ಸಮಯವನ್ನು ತೆಗೆದುಕೊಳ್ಳಲಿದೆ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8):

ಪೇಪರ್ ವರ್ಕ್, ಬಜೆಟ್ ಮಾಡಿ ಇಷ್ಟು ಸಮಯ ನೀವು ಪಟ್ಟ ಶ್ರಮ ಮತ್ತು ಕಾಯ್ದುಕೊಂಡಿದ್ದಂಥ ತಾಳ್ಮೆಗೆ ಈ ದಿನ ಪ್ರತಿಫಲ ದೊರೆಯಲಿದೆ. ಹೂಡಿಕೆ, ಭೂಮಿ ವ್ಯವಹಾರ ಅಥವಾ ಕಾನೂನು ವಿಷಯಗಳಲ್ಲಿ ನಿಮಗೆ ಯಶಸ್ಸು ಸಿಗಲಿದೆ. ನೀವು ವಹಿಸಿಕೊಂಡಂಥ ಹೊಸ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸುವಿರಿ. ಇನ್ನು ಹಣಕಾಸಿನ ವ್ಯವಹಾರಗಳಲ್ಲಿ ಪಾರದರ್ಶಕತೆ ಇರಲಿ. ಆಮೇಲೆ ಹೇಳಿದರಾಯಿತು ಎಂಬ ಧೋರಣೆ ಯಾವುದೇ ಕಾರಣಕ್ಕೂ ಬೇಡ. ಮನೆಯಲ್ಲಿನ ಹಿರಿಯರ ಆರೋಗ್ಯದಲ್ಲಿ ಸಮಸ್ಯೆಗಳು ಇದ್ದಲ್ಲಿ ಅದು ಸುಧಾರಿಸಲಿದೆ. ವರ್ಕ್- ಲೈಫ್ ಮಧ್ಯೆ ಸಮತೋಲನ ಕಾಯ್ದುಕೊಳ್ಳಿ. ಕೆಲಸದ ಒತ್ತಡ ಮತ್ತು ಜವಾಬ್ದಾರಿಯ ಭಾರ ಹೆಚ್ಚಾಗಬಹುದು. ನಿಮ್ಮ ಕೆಲಸಗಳನ್ನು ವಿಂಗಡಿಸಿಕೊಂಡು, ಒಂದೊಂದಾಗಿ ನಿಭಾಯಿಸಿ. ಎಲ್ಲವನ್ನೂ ಒಂದೇ ಸಮಯಕ್ಕೆ ಮಾಡುವ ಹಾಗೂ ನಾನೇ ಮಾಡಬೇಕು ಎಂಬ ಧೋರಣೆ ಬೇಡ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9):

ಈ ದಿನ ನಿಮ್ಮ ಎನರ್ಜಿ ಮತ್ತು ಉತ್ಸಾಹದಿಂದ ಬಹಳ ಚೆನ್ನಾಗಿ ಇರುತ್ತದೆ ಹಾಗೂ ಇದೇ ಕಾರಣದಿಂದ ನೀವು ಮಾಡುವ ಕೆಲಸದಲ್ಲಿ ಯಶಸ್ಸು ಸಿಗಲಿದೆ. ನೀವಾಗಿಯೇ ವಹಿಸಿಕೊಂಡ ಜವಾಬ್ದಾರಿಗಳಲ್ಲಿ ತೋರಿದ ನಾಯಕತ್ವ ಗುಣಗಳು ಮೇಲಧಿಕಾರಿಗಳು ಹಾಗೂ ಸಂಬಂಧಪಟ್ಟವರ ಮೆಚ್ಚುಗೆ ಗಳಿಸುತ್ತವೆ. ನೀವು ಮಾಡುತ್ತಿರುವ ವ್ಯಾಪಾರ- ವ್ಯವಹಾರದಲ್ಲಿ ಲಾಭ ಇರಲಿದೆ. ಭೂಮಿ ಅಥವಾ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ ಕೆಲಸಗಳನ್ನು ಮಾಡುವವರಿಗೆ ಶುಭ ದಿನ. ನಿಮ್ಮ ರಕ್ತಸಂಬಂಧಿಗಳಿಂದ ಕೆಲವು ತೊಂದರೆಗಳು ಆಗಬಹುದು. ಅವರಿಂದ ಆಗಬಹುದಾದ ಸಮಸ್ಯೆಗಳ ಬಗ್ಗೆ ಜಾಗ್ರತೆಯಿಂದ ಇರಬೇಕು. ನಿಮ್ಮ ಕೋಪ ಮತ್ತು ಆಕ್ರಮಣಕಾರಿ ಧೋರಣೆಯನ್ನು ನಿಯಂತ್ರಿಸುವುದು ಬಹಳ ಮುಖ್ಯ. ವಿವಾದ ಆಗಬಹುದು ಎಂದು ಕಂಡುಬಂದ ಸಂದರ್ಭದಲ್ಲಿ ಯಾವುದೇ ಪ್ರತಿಕ್ರಿಯೆ ನೀಡುವ ಮೊದಲು ಆಲೋಚಿಸಿ, ಮಾತನಾಡಿ. ದೈಹಿಕ ವ್ಯಾಯಾಮದಿಂದ ಮಾನಸಿಕ ಒತ್ತಡ ಕಡಿಮೆ ಆಗಲಿದೆ.

ಲೇಖನ- ಎನ್‌.ಕೆ.ಸ್ವಾತಿ