
ರಾಜಕಾರಣ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಪ್ರಾಮುಖ್ಯ ಹೆಚ್ಚಾಗಲಿದೆ. ಇಲ್ಲಿಯ ತನಕ ನೀವು ತೆಗೆದುಕೊಂಡ ಜವಾಬ್ದಾರಿಗಳು ಗುರುತಿಸಿ, ಹೆಚ್ಚಿನ ಹುದ್ದೆ ಅಥವಾ ಪದವಿ ಸಹ ನೀಡುವ ಅವಕಾಶ ಇದೆ. ನೀವು ಯಾವ ಸಮಾಜವನ್ನು ಪ್ರತಿನಿಧಿಸುತ್ತೀರೋ ಅದಕ್ಕೆ ಸಂಬಂಧಿಸಿದ ಸಂಘ- ಸಂಸ್ಥೆಗಳು ಸನ್ಮಾನ- ಗೌರವ ನೀಡುವ ಸಾಧ್ಯತೆ ಇದ್ದು, ನಿಮ್ಮ ಪ್ರಭಾ ವಲಯ ವಿಸ್ತರಣೆಗೆ ಈ ಬೆಳವಣಿಗೆ ಸಹಕಾರ ನೀಡಲಿದೆ. ಲೇವಾದೇವಿ ವ್ಯವಹಾರ ಮಾಡುತ್ತಾ ಇರುವವರು ಅದನ್ನು ಕ್ರಮೇಣ ಕಡಿಮೆ ಮಾಡಿಕೊಂಡು ಬಂದು, ಹಣವನ್ನು ವಾಪಸ್ ತೆಗೆದುಕೊಂಡು ಬೇರೆ ಕಡೆ ಹೂಡಿಕೆ ಮಾಡುವ ಬಗ್ಗೆ ಆಲೋಚನೆ ಮಾಡಲಿದ್ದೀರಿ. ನಿಮ್ಮಲ್ಲಿ ಕೆಲವರು ಮನೆಗೆ ಲಿಫ್ಟ್ ಹಾಕಿಸುವ ಬಗ್ಗೆ ವಿಚಾರಣೆ ಮಾಡಬಹುದು ಅಥವಾ ಅದಕ್ಕಾಗಿ ಅಡ್ವಾನ್ಸ್ ಮೊತ್ತವನ್ನೇ ನೀಡುವ ಅವಕಾಶ ಸಹ ಇದೆ.
ಆಹಾರ ಪದಾರ್ಥ ಸೇವನೆ ಮಾಡುವಾಗ ಸಾಮಾನ್ಯವಾಗಿ ತೆಗೆದುಕೊಳ್ಳುವ ಮುಂಜಾಗ್ರತೆಗಿಂತ ಹೆಚ್ಚಿನ ಎಚ್ಚರಿಕೆ ವಹಿಸುವುದು ಮುಖ್ಯ. ಈಗಾಗಲೇ ಬಳಸಿದ ಎಣ್ಣೆಯನ್ನೇ ಪುನಃ ಅಡುಗೆಗೆ ಬಳಸುವುದು ಅಥವಾ ಕಡಿಮೆ ಮೊತ್ತಕ್ಕೆ ಸಿಕ್ಕಂಥ ಕೆಲವು ಪದಾರ್ಥಗಳನ್ನು ತಂದು ಬಳಕೆ ಮಾಡುವುದರಿಂದ ಅನಾರೋಗ್ಯ ಸಮಸ್ಯೆ ಆಗಬಹುದು. ಇನ್ನು ನಿಮ್ಮಲ್ಲಿ ಯಾರು ಹಣ್ಣಿನ ಬೆಳೆಗಾರರು ಇದ್ದೀರಿ ಅಂಥವರಿಗೆ ನಿಮ್ಮ ವಸ್ತುಗಳ ಸಾಗಾಟಕ್ಕೆ ಸಂಬಂಧಿಸಿದಂತೆ ಅಹಿತಕರ ಬೆಳವಣಿಗೆ ಆಗಬಹುದು. ಇದೇ ವಿಚಾರವನ್ನು ನೀವು ತುಂಬ ಕಟುವಾಗಿ ಸಂಬಂಧಪಟ್ಟ ವ್ಯಕ್ತಿಗಳ ಗಮನಕ್ಕೆ ತರುವುದರಿಂದ ತಿಕ್ಕಾಟಕ್ಕೆ ಕಾರಣ ಆಗಲಿದೆ. ಉದ್ಯೋಗ ಅಥವಾ ವೃತ್ತಿ ಸ್ಥಳದಲ್ಲಿ ಏನು ಬದಲಾವಣೆ ತರಲು ನಿರ್ಧರಿಸಿರುತ್ತೀರೋ ಅದನ್ನು ಯಥಾವತ್ ಆಗಿ ಅನುಷ್ಠಾನ ಮಾಡಲು ಬೇಕಾದಂಥ ವಾತಾವರಣ ಇರುವುದಿಲ್ಲ.
ಸಂತಾನಕ್ಕೆ ಪ್ರಯತ್ನ ಮಾಡುತ್ತಾ ಇರುವವರಿಗೆ ಉತ್ತಮ ಬೆಳವಣಿಗೆ ಆಗುವ ದಿನ ಇದಾಗಿರುತ್ತದೆ. ಸ್ವಂತ ಮನೆ ಕಟ್ಟಬೇಕು ಎಂದು ಗಟ್ಟಿಯಾದ ಪ್ರಯತ್ನ ಮಾಡುತ್ತಾ ಇರುವವರಿಗೆ ಸಾಲ ಅಥವಾ ಬೇರೆ ಯಾವುದೇ ರೀತಿಯ ಹಣಕಾಸಿನ ಹೊಂದಾಣಿಕೆ ಮಾಡಿಕೊಳ್ಳಲು ಸಾಧ್ಯವಾಗಲಿದೆ. ಇನ್ನು ಈಗಾಗಲೇ ಬ್ಯಾಂಕ್ ಅಥವಾ ಮತ್ತಿತರ ಮೂಲಗಳಿಂದ ಪ್ರಯತ್ನ ಮಾಡುತ್ತಾ ಇದ್ದಲ್ಲಿ ಸಕಾರಾತ್ಮಕ ಪ್ರತಿಕ್ರಿಯೆ ದೊರೆಯಲಿದೆ. ಚಾಲಕ ವೃತ್ತಿಯಲ್ಲಿ ಇರುವವರಿಗೆ ಬಿಡುವಿಲ್ಲದಷ್ಟು ಕೆಲಸಗಳು ಮೈ ಮೇಲೆ ಬರಲಿವೆ. ದೇವತಾ ಕಾರ್ಯಗಳ ಆಯೋಜನೆ, ಅದಕ್ಕಾಗಿ ಜನರ ಸಂಘಟನೆಯಲ್ಲಿ ತೊಡಗಿದ್ದಲ್ಲಿ ಸಮಾಧಾನಕರ ಬೆಳವಣಿಗೆ ಕಾಣಬಹುದು. ಸೌಂದರ್ಯ ವರ್ಧಕಗಳನ್ನು ಬಳಸುವಾಗ ಮಾತ್ರ, ಅದರಲ್ಲೂ ಹೊಸ ಬ್ರ್ಯಾಂಡ್ ಮೊದಲ ಸಲಕ್ಕೆ ತಂದಿದ್ದೀರಿ ಅಂತಾದಲ್ಲಿ ಆಲೋಚಿಸಿ ಬಳಸಿ. ಏಕೆಂದರೆ ಇದರಿಂದ ಚರ್ಮದ ಅಲರ್ಜಿ ಆಗಿಬಿಡಬಹುದು.
ಎಲ್ಲರಿಗೂ ಸಮ್ಮತಿ ಆಗುವ ವಿಚಾರ- ವಿಷಯವನ್ನು ಎದುರಿಗೆ ಇಡಲು ಯಶಸ್ಸು ಕಾಣುತ್ತೀರಿ. ಉದ್ಯೋಗ ಸ್ಥಳದಲ್ಲಿ ಇಲ್ಲಿಯ ತನಕ ಇರುವಂಥ ಅಭಿಪ್ರಾಯ ಭೇದಗಳು ದೂರವಾಗುವ ಸಾಧ್ಯತೆಗಳಿವೆ. ನಾಜೂಕಾದ ಸನ್ನಿವೇಶಗಳಲ್ಲಿ ನೀವು ಜನರನ್ನು ಸಂಭಾಳಿಸಿದ ರೀತಿಗೆ ಮೇಲಧಿಕಾರಿಗಳು ಹಾಗೂ ಸಹೋದ್ಯೋಗಿಗಳಿಂದ ಮೆಚ್ಚುಗೆ ವ್ಯಕ್ತ ಆಗಲಿದೆ. ನಿಮ್ಮಲ್ಲಿ ಯಾರು ಈಜು ತರಬೇತುದಾರರಾಗಿ ಕಾರ್ಯ ನಿರ್ವಹಿಸುತ್ತಾ ಇದ್ದೀರೋ ಅಂಥವರಿಗೆ ಆದಾಯದಲ್ಲಿ ಹೆಚ್ಚಳ ಆಗುವುದಕ್ಕೆ ಮಾರ್ಗಗಳು ತೆರೆದುಕೊಳ್ಳಲಿವೆ. ದ್ವಿಚಕ್ರ ವಾಹನವೋ ಅಥವಾ ಕಾರನ್ನೋ ಖರೀದಿ ಮಾಡಬೇಕು ಎಂದು ಅಂದುಕೊಳ್ಳುತ್ತಾ ಇದ್ದಲ್ಲಿ ಯಾವ ಕಂಪನಿಯದು ಹಾಗೂ ಬಣ್ಣದ್ದು ಮತ್ತು ಯಾವ ಸಮಯಕ್ಕೆ ಖರೀದಿ ಮಾಡಬೇಕು ಎಂಬುದನ್ನು ಆಖೈರು ಮಾಡಿಕೊಂಡು, ಮುಂದುವರಿಯುತ್ತೀರಿ. ಸ್ನೇಹಿತರ ಸಹಾಯ ಸಹ ನಿಮಗೆ ದೊರೆಯಲಿದೆ.
ಈಗಾಗಲೇ ಹಣ ನೀಡಿ, ಮನೆಗೆ ಇನ್ನೇನು ಆ ವಸ್ತು ಬರಬೇಕು ಎಂದು ಕಾತುರದಿಂದ ಕಾಯುತ್ತಾ ಇರುತ್ತೀರೋ ಅದು ಒಂದಲ್ಲಾ ಒಂದು ಕಾರಣಕ್ಕೆ ತಡ ಆಗುತ್ತಾ ಮನಸ್ಸಿಗೆ ಬೇಸರ ಉಂಟು ಮಾಡಲಿದೆ. ಸಂಬಂಧಪಟ್ಟ ವ್ಯಕ್ತಿಗೋ ಸಂಸ್ಥೆಗೋ ಜೋರು ಧ್ವನಿಯಲ್ಲಿ ಎಚ್ಚರಿಕೆ ನೀಡಲಿದ್ದೀರಿ. ನಿಮ್ಮಲ್ಲಿ ಯಾರು ಹೋಟೆಲ್ ಅಥವಾ ರೆಸ್ಟೋರೆಂಟ್ ನಡೆಸುತ್ತಾ ಇದ್ದೀರೋ ಅಂಥವರು ವ್ಯವಹಾರದ ಸ್ವಲ್ಪ ಭಾಗವನ್ನು ಮಾರಾಟ ಮಾಡಿ, ನಿಮಗೆ ಇರುವ ಒತ್ತಡವನ್ನೋ ಅಥವಾ ಸಾಲವನ್ನೋ ಕಡಿಮೆ ಮಾಡುವುದಕ್ಕೆ ಆಲೋಚಿಸುವ ಸಾಧ್ಯತೆ ಇದೆ. ಪಾಲುದಾರಿಕೆಗೆ ಪ್ರಯತ್ನ ಮಾಡುತ್ತಾ ಇರುವವರಿಗೆ ಅದುಕೊಂಡ ಸಮಯಕ್ಕೆ ನಿರೀಕ್ಷೆ ಮಾಡಿದಂಥ ವ್ಯಕ್ತಿ ಅಥವಾ ಸಂಸ್ಥೆ ಜೊತೆಗೆ ವ್ಯವಹಾರ ಕುದುರುವ ಸೂಚನೆ ದೊರೆಯಲಿದೆ. ಷೇರು ಮಾರುಕಟ್ಟೆಯಲ್ಲಿ ಈಗಾಗಲೇ ಹಣ ಹೂಡಿಕೆ ಮಾಡಿರುವವರು ಸ್ವಲ್ಪ ಮೊತ್ತವನ್ನಾದರೂ ಹಿಂಪಡೆಯುವ ನಿರ್ಧಾರ ಮಾಡುತ್ತೀರಿ.
ನಿಮ್ಮಲ್ಲಿ ಯಾರು ಮಾರಾಟ- ಜಾಹೀರಾತು ಇಂಥ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಾ ಇದ್ದೀರಿ ಅಂಥವರಿಗೆ ಟಾರ್ಗೆಟ್ ತಲುಪುವುದಕ್ಕೆ ಬೇಕಾದ ಸನ್ನಿವೇಶದ ಅನುಕೂಲ ಒದಗಿ ಬರಲಿದೆ. ಈ ಹಿಂದೆ ನಿಮ್ಮ ಜೊತೆ ವ್ಯವಹಾರ ಮಾಡಿದ ವ್ಯಕ್ತಿಗಳು ಅನಿರೀಕ್ಷಿತವಾಗಿ ನಿಮ್ಮನ್ನೇ ಹುಡುಕಿಕೊಂಡು ಬರಲಿದ್ದಾರೆ. ವಿವಾಹಕ್ಕೆ ಪ್ರಯತ್ನ ಮಾಡುತ್ತಾ ಇರುವವರಿಗೆ ದಿಢೀರ್ ಆಗಿ ವಿವಾಹ ನಿಶ್ಚಯ ಆಗುವ ಯೋಗ ಇದೆ. ಅನಾಯಾಸವಾಗಿ ದೊರೆಯುವ ರೆಫರೆನ್ಸ್ ನಿಂದ ವಿವಾಹ ವಿಚಾರಗಳಲ್ಲಿ ಒಳ್ಳೆ ಬೆಳವಣಿಗೆ ಆಗಲಿದೆ. ನಿಮ್ಮಲ್ಲಿ ಕೆಲವರಿಗೆ ಮನೆಗೆ ಹೊಂದಿಕೊಂಡೇ ಇರುವಂಥ ಅಥವಾ ಬಹಳ ಹತ್ತಿರದಲ್ಲಿ ಇರುವ ಸೈಟು ಅಥವಾ ಜಮೀನಿನ ಮಾರಾಟದ ಬಗ್ಗೆ ಗಮನಕ್ಕೆ ಬರಲಿದೆ. ಅದರ ಖರೀದಿಗೆ ನೀವು ಸಹ ಉತ್ಸಾಹ ತೋರಲಿದ್ದು, ಸಂಬಂಧ ಪಟ್ಟ ವ್ಯಕ್ತಿಗಳಿಗೆ ನಿಮ್ಮ ಇರಾದೆಯನ್ನು ತಿಳಿಸುವ ಸಾಧ್ಯತೆ ಇದೆ.
ವೇದ ಅಧ್ಯಯನ ಮಾಡುತ್ತಿರುವವರು, ವೃತ್ತಿಯಲ್ಲಿ ಪುರೋಹಿತರು, ಜ್ಯೋತಿಷಿಗಳು ಅಥವಾ ದೇವಸ್ಥಾನದ ಪಾರುಪತ್ತೆ ನೋಡಿಕೊಳ್ಳುತ್ತಾ ಇರುವವರಿಗೆ ದೀರ್ಘಾವಧಿ ಜವಾಬ್ದಾರಿಗಳು ಹುಡುಕಿ ಬರಲಿವೆ. ನಿಮ್ಮಲ್ಲಿ ಯಾರು ವಿವಾಹ ವಯಸ್ಕರು ಇದ್ದೀರಿ ಹಾಗೂ ಮದುವೆಗೆ ಪ್ರಯತ್ನವನ್ನೂ ಮಾಡುತ್ತಾ ಇದ್ದೀರಿ ಅಂಥ ಕೆಲವರಿಗೆ ವಯಸ್ಸಿನಲ್ಲಿ ಸ್ವಲ್ಪ ಹಿರಿಯರಾದವರ ಮೇಲೆ ಪ್ರೀತಿ ಮೂಡಬಹುದು ಹಾಗೂ ಮನಸ್ಸಿನ ಇಂಗಿತವನ್ನು ಸಂಬಂಧಿಸಿದ ವ್ಯಕ್ತಿಗಳ ಎದುರಿಗೆ, ಕುಟುಂಬದವರಿಗೆ ತಿಳಿಸುವ ನಿರ್ಧಾರ ಮಾಡುತ್ತೀರಿ. ಇನ್ನು ಕೆಲವರು ಮನೆಗೆ ಲಾಕರ್, ಡಿಜಿಟಲ್ ಲಾಕ್, ಸಿಸಿ ಟವಿ ಕ್ಯಾಮೆರಾ ಖರೀದಿ ಮಾಡುವ ಯೋಗ ಕಂಡು ಬರುತ್ತಿದೆ. ಕುಟುಂಬ ಸದಸ್ಯರು ಸೇರಿ ಮನೆಯಲ್ಲಿ ನಡೆಯಬೇಕಾದ ಶುಭ ಕಾರ್ಯಗಳ ಆಯೋಜನೆ ಜವಾಬ್ದಾರಿ ನಿಮಗೇ ವಹಿಸುವ ಸಾಧ್ಯತೆ ಇದೆ. ಆರಂಭದಲ್ಲಿ ಇದು ನಿಮಗೆ ಒತ್ತಡ ಎನಿಸಬಹುದು.
ಯಾರದೋ ಮಾತು ಕೇಳಿಕೊಂಡು, ಅದನ್ನೇ ಸತ್ಯ ಎಂದುಕೊಂಡು ತಂದೆ- ತಾಯಿ, ಸೋದರ- ಸೋದರಿಯರ ಜೊತೆ ವಾದ ವಾಗ್ವಾದ ಮಾಡಿಕೊಳ್ಳುವ ಸಾಧ್ಯತೆ ಇದೆ. ನಿಮ್ಮ ಮನಸ್ಸಲ್ಲಿ ಬಂದ ತಕ್ಷಣ ಆ ವಿಚಾರ ಸ್ಪಷ್ಟ ಮಾಡಿಕೊಂಡು ಬಿಡಬೇಕು ಎಂದು ಹೊರಡಬೇಡಿ. ಯಾವುದೇ ಕಾರಣಕ್ಕೂ ಉದ್ವೇಗ ಅಥವಾ ಉದ್ರೇಕ ಒಳ್ಳೆಯದಲ್ಲ. ಫಲಿತಾಂಶ ಸಹ ತರುವುದಿಲ್ಲ. ನಿಮ್ಮ ಆದಾಯದಲ್ಲಿ ಇಳಿಕೆ ಆಯಿತು ಅಂತಲೋ ಹೂಡಿದ ಬಂಡವಾಳ ಮಾಡಿದ ಯೋಜನೆಗಳು ಕೈ ಹಿಡಿಯುತ್ತಿಲ್ಲ ಎಂಬ ಸಿಟ್ಟನ್ನೋ ಇನ್ಯಾರ ಮೇಲೋ ತೀರಿಸಿಕೊಳ್ಳುವುದು ಸರಿಯಲ್ಲ. ಸಂಗಾತಿ ಮಾತನ್ನು ಎಷ್ಟು ಕೇಳಬೇಕು ಮತ್ತು ಎಷ್ಟು ಕೇಳಿಸಿಕೊಳ್ಳಬೇಕು ಎಂಬ ಬಗ್ಗೆ ಕೂಡ ವಿವೇಚನೆ ಮುಖ್ಯ. ವ್ಯಾಪಾರಿಗಳಿಗೆ ಹೇಳಿದ ಸಮಯಕ್ಕೆ ಹಣ ಹಿಂತಿರುಗಿಸುವುದು ಕಷ್ಟ ಆಗಬಹುದು ಎಂಬ ಸುಳಿವು ಸಿಗಲಿದ್ದು, ಆ ಹಣ ಹಿಂತಿರುಗಿಸಲು ಬೇಕಾದ ವ್ಯವಸ್ಥೆ ಮಾಡುವ ಕಡೆಗೆ ಲಕ್ಷ್ಯವನ್ನು ನೀಡಿ.
ನೀವು ವಹಿಸಿದ ಎಚ್ಚರಿಕೆ, ತೆಗೆದುಕೊಂಡ ಸಮಯೋಚಿತ ತೀರ್ಮಾನಗಳು ಭವಿಷ್ಯದಲ್ಲಿ ದೊಡ್ಡ ಅನುಕೂಲ ಮಾಡಿಕೊಡುವ ಸುಳಿವು ದೊರೆಯಲಿದೆ. ನಿಮ್ಮಿಂದ ಸಹಾಯ ಆಗಲೇಬೇಕು ಎಂಬ ನಿರೀಕ್ಷೆ ಇಟ್ಟುಕೊಂಡು ಬರುವ ಸ್ನೇಹಿತರು- ಸಂಬಂಧಿಕರಿಗೆ ಸಾಧ್ಯವಾದಷ್ಟು ನೆರವು ನೀಡಲಿದ್ದೀರಿ. ನಿಮ್ಮಲ್ಲಿ ಕೆಲವರು ಮಾಸ್ಟರ್ ಚೆಕ್ ಅಪ್ ಮಾಡಿಸಿಕೊಳ್ಳಲು ನಿರ್ಧಾರ ಮಾಡುತ್ತೀರಿ. ಆರೋಗ್ಯ ವಿಚಾರಕ್ಕೆ ಹೆಚ್ಚು ಗಮನ ನೀಡಲಿದ್ದೀರಿ. ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದಂತೆ ಹಣ ಹೊಂದಾಣಿಕೆ ಮಾಡಲು ಮ್ಯೂಚುವಲ್ ಫಂಡ್ಸ್ ಅಥವಾ ಷೇರು ಅಥವಾ ಡಿಜಿಟಲ್ ರೂಪದಲ್ಲಿ ಮಾಡಿದ್ದ ಚಿನ್ನದ ಹೂಡಿಕೆಯನ್ನು ವಾಪಸ್ ತೆಗೆದುಕೊಳ್ಳುವ ಸಾಧ್ಯತೆ ನಿಮ್ಮಲ್ಲಿ ಕೆಲವರಿಗೆ ಇದೆ. ವೈದ್ಯಕೀಯ ವೃತ್ತಿಯಲ್ಲಿ ಇರುವವರು ಸ್ವಂತ ಕ್ಲಿನಿಕ್ ಅಥವಾ ಆಸ್ಪತ್ರೆ ಆರಂಭ ಮಾಡುವ ಬಗ್ಗೆ ಹಿತೈಷಿಗಳ ಜತೆ ಚರ್ಚೆ ನಡೆಸಲಿದ್ದೀರಿ.
ಲೇಖನ- ಎನ್.ಕೆ.ಸ್ವಾತಿ