AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Numerology Horoscope 6 September: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಸೆಪ್ಟೆಂಬರ್ 6ರ ದಿನಭವಿಷ್ಯ

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಸೆಪ್ಟೆಂಬರ್ 6ರ ಶನಿವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

Numerology Horoscope 6 September: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಸೆಪ್ಟೆಂಬರ್ 6ರ ದಿನಭವಿಷ್ಯ
Numerology
ಸ್ವಾತಿ ಎನ್​ಕೆ
| Updated By: ರಮೇಶ್ ಬಿ. ಜವಳಗೇರಾ|

Updated on: Sep 06, 2025 | 1:03 AM

Share

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ಕಣ್ಣು ಕೆಂಪಗೆ ಆಗಿ, ಉರಿ ಆಗಿ ಇನ್ ಫೆಕ್ಷನ್ ಆಗುವಂತಾಗಿ ವೈದ್ಯರ ಬಳಿ ಕಡ್ಡಾಯವಾಗಿ ಚಿಕಿತ್ಸೆ ತೆಗೆದುಕೊಳ್ಳುವಂತಾಗಲಿದೆ. ಲ್ಯಾಪ್ ಟಾಪ್, ಮೊಬೈಲ್ ಅಥವಾ ಟ್ಯಾಬ್ ಹೆಚ್ಚಿನ ಪ್ರಮಾಣದಲ್ಲಿ ಬಳಸುತ್ತಿದ್ದೀರಿ ಅಂತಾದಲ್ಲಿ ಕೂಡಲೇ ಅದರ ಬಳಕೆ ಸಮಯ ಎಷ್ಟಿದೆ ಎಂಬುದರ ಕಡೆಗೆ ಗಮನವನ್ನು ನೀಡಿ. ಇನ್ನು ನಿಮಗೆ ಬಹಳ ಹತ್ತಿರವಾದವರು, ಆಪ್ತರಿಗೆ ನಿಮ್ಮ ಸಹಾಯದ ಅಗತ್ಯ ಕಂಡುಬರಲಿದೆ. ಅದರಲ್ಲೂ ಪ್ರಭಾವಿ ವ್ಯಕ್ತಿಯೊಬ್ಬರಿಂದ ಶಿಫಾರಸು ಮಾಡಿಸುವಂತೆ ನಿಮ್ಮನ್ನು ಕೇಳಿಕೊಂಡು ಬರಬಹುದು. ಮಕ್ಕಳ ಶಿಕ್ಷಣ ಹಾಗೂ ಅವರಿಗೆ ಇರವಂಥ ಪರೀಕ್ಷೆ ಬಗ್ಗೆ ಸಂಗಾತಿ ಜೊತೆಗೆ ಚರ್ಚೆ ನಡೆಸಲಿದ್ದೀರಿ. ಮನೆಯಲ್ಲಿನ ನೀರಿನ ಶುದ್ಧತೆಯ ಬಗ್ಗೆ ಅನುಮಾನಗಳು ಮೂಡಬಹುದು. ಇದೇ ಕಾರಣಕ್ಕೆ ನೀರಿನ ಪರೀಕ್ಷೆ, ಪರಿಶೀಲನೆ ಮಾಡಿಸುವುದಕ್ಕೆ ಹಣ ಖರ್ಚಾಗಲಿದೆ. ಕರಿದ ಪದಾರ್ಥಗಳು, ಮಸಾಲೆಯುಕ್ತ ಪದಾರ್ಥಗಳಿಂದ ದೂರವಿದ್ದಲ್ಲಿ ಉತ್ತಮ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ಸಭೆ- ಸಮಾರಂಭ ಕಾರ್ಯಕ್ರಮಗಳಲ್ಲಿ ಭಾಗೀ ಆಗಲೇಬೇಕಾಗುತ್ತದೆ. ಇದು ನಿಮಗೆ ಒಂದು ಕಡೆ ಒತ್ತಡವನ್ನು ಹಾಗೂ ಮತ್ತೊಂದು ಕಡೆ ಸಂತೋಷವನ್ನು ನೀಡಲಿದೆ. ನಿಮಗೆ ಕೆಲವು ಹಳೇ ಗೆಳೆಯರು- ಗೆಳತಿಯರನ್ನು ಭೇಟಿ ಆಗುವಂಥ ಯೋಗ ಇದೆ. ಈ ಸಂದರ್ಭದಲ್ಲಿ ತೀರ್ಥ ಯಾತ್ರೆಗೆ ಯೋಜನೆಯನ್ನು ರೂಪಿಸಬಹುದು ಅಥವಾ ಪ್ರವಾಸ ಕೈಗೊಳ್ಳೋಣ ಅಂತಲೂ ಅಂದುಕೊಳ್ಳುವ ಸಾಧ್ಯತೆ ಇದೆ. ಇನ್ನು ನಿಮ್ಮಲ್ಲಿ ಯಾರು ಮಕ್ಕಳ ಮದುವೆಗೆ ಸೂಕ್ತ ಸಂಬಂಧವನ್ನು ಹುಡುಕಿಕೊಳ್ಳುತ್ತಾ ಇದ್ದೀರಿ, ಅಂಥವರಿಗೆ ಮನಸ್ಸಿಗೆ ಒಪ್ಪುವಂಥ ಸಂಬಂಧದ ಬಗ್ಗೆ ಮಾಹಿತಿ ದೊರೆಯಲಿದೆ. ಈ ದಿನ ನಿಮ್ಮಲ್ಲಿ ಕೆಲವರು ಆಹಾರ ಪದಾರ್ಥಗಳು ಅಥವಾ ಆಹಾರಕ್ಕೆ ಬಳಸುವಂಥ ಪದಾರ್ಥಗಳನ್ನು ದಾನ ನೀಡುವಂಥ ಯೋಗ ಇದೆ. ನಿಮ್ಮಲ್ಲಿ ಕೆಲವರಿಗೆ ಅಚಾನಕ್ ಆಗಿ ದೇವರ ಪೂಜಾ ಸಾಮಗ್ರಿಗಳು, ದೇವರ ವಿಗ್ರಹಗಳು ಉಡುಗೊರೆ ಅಥವಾ ಕೊಡುಗೆ ರೂಪದಲ್ಲಿ ಸಿಗುವಂಥ ಯೋಗವಿದೆ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ಗೆಳೆಯ ಅಥವಾ ಗೆಳತಿ ಮನೆಗೆ ಬೇಕಾದ ವಸ್ತುಗಳನ್ನು ಖರೀದಿ ಮಾಡುವುದಕ್ಕೆ ಅಂತ ತೆರಳಿದ ಸಂದರ್ಭದಲ್ಲಿ ನಿಮ್ಮ ಮನೆಗೆ ಬೇಕಾದ ಕೆಲವು ವಸ್ತುಗಳನ್ನು ಸಹ ಖರೀದಿಸುವ ಯೋಗ ಕಂಡುಬರುತ್ತಿದೆ. ಒಂದು ವೇಳೆ ನೀವೇನಾದರೂ ಕ್ರೆಡಿಟ್ ಕಾರ್ಡ್ ಬಳಸುತ್ತೀರಿ ಅಂತಾದಲ್ಲಿ ವೆಚ್ಚದ ಮೇಲೆ ನಿಗಾ ಇರಲಿ. ನಿಮಗೂ ಹೇಗೂ ಆತ್ಮೀಯರಲ್ಲದ ವ್ಯಕ್ತಿಯೊಬ್ಬರು ಕೇವಲ ಪರಿಚಯ ಎಂಬ ಏಕೈಕ ಕಾರಣವನ್ನು ಮುಂದು ಮಾಡಿಕೊಂಡು ನಾನಾ ಸಲಹೆ- ಸೂಚನೆಗಳನ್ನು ನೀಡುವುದಕ್ಕೆ ಶುರು ಮಾಡುತ್ತಾರೆ. ಸುಮ್ಮನಿರಿ ಎಂದು ಹೇಳಲೂ ಆಗದೆ, ಅವರು ಹೇಳಿದ್ದನ್ನೆಲ್ಲ ಕೇಳಿಸಿಕೊಳ್ಳಲು ಸಹ ಆಗದೆ ಬಹಳ ಹಿಂಸೆ ಆಗಲಿದೆ. ನಿಮ್ಮಲ್ಲಿ ಯಾರು ಮನೆಯ ಸುಣ್ಣ- ಬಣ್ಣ ಮಾಡಿಸಬೇಕು ಎಂದುಕೊಳ್ಳುತ್ತಾ ಇರುತ್ತೀರೋ ಅಂಥವರಿಗೆ ಸಂಬಂಧಪಟ್ಟವರ ಜೊತೆಗೆ ಮಾತುಕತೆ ನಡೆಸುವುದಕ್ಕೆ ಸಾಧ್ಯವಾಗಲಿದೆ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ನಿಮ್ಮಲ್ಲಿ ಕೆಲವರಿಗೆ ಪಿತ್ರಾರ್ಜಿತ ಆಸ್ತಿಯನ್ನು ಹಂಚಿಕೆ ಮಾಡುವುದಾಗಿಯೂ ಇನ್ನು ಮುಂದೆ ಸ್ವತಂತ್ರವಾಗಿ ಅಥವಾ ಪ್ರತ್ಯೇಕವಾಗಿ ಇರಬೇಕು ಎಂದು ಸೂಚಿಸುವ ಸಾಧ್ಯತೆಗಳು ಇವೆ. ಇದಕ್ಕೆ ನಿಮಗೆ ಒಪ್ಪಿಗೆ ಇದೆಯೋ ಇಲ್ಲವೋ ಸಂಗಾತಿಯಂತೂ ಒಪ್ಪಿಗೆ ಸೂಚಿಸುವಂತೆ ಹೇಳುವ ಅವಕಾಶಗಳು ಹೆಚ್ಚು. ನಿಮಗೆ ಉದ್ಯಮವನ್ನೋ ಅಥವಾ ವ್ಯವಹಾರವನ್ನೋ ಆರಂಭಿಸುವುದಕ್ಕೆ ಹಣ ನೀಡುವುದಾಗಿ ಹೇಳಿದ್ದ ಸ್ನೇಹಿತರು ಕೊನೆ ಕ್ಷಣದಲ್ಲಿ ತಮಗೆ ಕಷ್ಟವಾಗಿದೆ, ಹಣ ನೀಡುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿಬಿಡಬಹುದು ಅಥವಾ ತಕ್ಷಣಕ್ಕೆ ಸಾಧ್ಯವಿಲ್ಲ, ಕೆಲವು ತಿಂಗಳು ಅಥವಾ ದಿನಗಳ ನಂತರ ಕೊಡುವುದಾಗಿ ಹೇಳಬಹುದು. ಪೊಲೀಸ್ ಠಾಣೆ ಅಥವಾ ಕೋರ್ಟ್- ಕಚೇರಿಯಲ್ಲಿ ಬಹುತೇಕ ಬಗೆಹರಿದು ಹೋಗಿದೆ ಎಂದು ಭಾವಿಸಿದ್ದ ವ್ಯಾಜ್ಯವೊಂದು ಮತ್ತೆ ತಲೆ ಎತ್ತಬಹುದು ಎಂಬ ಬಗ್ಗೆ ನಿಮಗೆ ಮಾಹಿತಿ ದೊರೆಯಲಿದೆ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ದೇವರ ಧ್ಯಾನ, ಪೂಜೆ ಹಾಗೂ ಧಾರ್ಮಿಕ ಕಾರ್ಯಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳುವುದರಿಂದ ಮನಸ್ಸಿಗೆ ಬಹಳ ಸಮಾಧಾನ ಮೂಡಲಿದೆ. ಅಧ್ಯಾತ್ಮ ವಿಚಾರವಾಗಿ ಅತ್ಯುತ್ತಮ ಮಾರ್ಗದರ್ಶನ ನೀಡಬಲ್ಲ ವ್ಯಕ್ತಿಯೊಬ್ಬರ ಪರಿಚಯ ಆಗಲಿದೆ. ದಯಾ- ದಾಕ್ಷಿಣ್ಯ ಎಂದು ನೋಡಿ, ಬಹಳ ಕಷ್ಟದಲ್ಲಿ ಇರುವ ವ್ಯಕ್ತಿಯೊಬ್ಬರಿಗೆ ಹಣಕಾಸಿನ ಸಹಾಯ ಮಾಡಲೇಬೇಕಾದ ಸನ್ನಿವೇಶ ಸೃಷ್ಟಿ ಆಗಲಿದೆ. ಇದರಿಂದ ನಿಮಗೆ ಮೊದಮೊದಲಿಗೆ ಒತ್ತಡ ಎಂದೆನಿಸಿದರೂ ನಂತರದಲ್ಲಿ ಒಂದು ಬಗೆಯ ಸಮಾಧಾನ ದೊರೆಯಲಿದೆ. ಹಣ್ಣು ಬೆಳೆಗಾರರಿಗೆ ಆದಾಯದಲ್ಲಿ ಹೆಚ್ಚಳ ಆಗುವಂಥ ಯೋಗ ಇದೆ. ಅಕ್ಕಪಕ್ಕದಲ್ಲಿ ಇರುವಂಥ ಸಣ್ಣ ಅಳತೆಯ ಜಾಗವನ್ನು ಖರೀದಿಗೆ ಪಡೆಯುವುದಕ್ಕೆ ಪ್ರಯತ್ನಿಸುತ್ತಿರುವವರಿಗೆ ಈ ದಿನ ಶುಭ ಸುದ್ದಿ ಕೇಳುವಂಥ ಯೋಗ ಇದೆ. ಸಿಟ್ಟು ಮಾಡಿಕೊಂಡು ಮುರಿದು ಹೋಗಿದ್ದ ವ್ಯವಹಾರಗಳು ಇದ್ದಲ್ಲಿ ಅದನ್ನು ಪೂರ್ತಿಗೊಳಿಸುವುದಕ್ಕೆ ಬೇಕಾದ ವೇದಿಕೆ ನಿಮಗೆ ದೊರೆಯಲಿದೆ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ಹೇಳಿದ ಸಮಯಕ್ಕೆ ಹೇಳಿದ ಸ್ಥಳಕ್ಕೆ ಹೋಗುವುದು ಬಹಳ ಕಷ್ಟವಾಗಲಿದೆ. ನೀವು ನಿರೀಕ್ಷೆ ಕೂಡ ಮಾಡದಂಥ ಕೆಲವು ಕೆಲಸಗಳು ಬಂದು, ಕೊನೆ ಕ್ಷಣದಲ್ಲಿ ಅದನ್ನು ಪೂರ್ತಿ ಮಾಡಲೇಬೇಕಾದ ಒತ್ತಡಕ್ಕೆ ಸಿಲುಕಿಕೊಳ್ಳಲಿದ್ದೀರಿ. ಊಟ- ತಿಂಡಿ ವಿಚಾರದಲ್ಲಿ ಬಾಯಿಗೆ ರುಚಿಯೇ ಸಿಗುತ್ತಿಲ್ಲ ಎಂದೆನಿಸಲಿದ್ದು, ಇದೇ ವಿಚಾರಕ್ಕೆ ಮನೆಯಲ್ಲಿ ಜೋರು ಧ್ವನಿಯ ಮಾತುಕತೆಗಳು ಆಗುವಂಥ ಸಾಧ್ಯತೆಗಳು ಗೋಚರಿಸುತ್ತಿವೆ. ಎಲೆಕ್ಟ್ರಿಕ್ ಅಥವಾ ಎಲೆಕ್ಟ್ರಾನಿಕ್ ವಸ್ತುಗಳು ಏಕಾಏಕಿ ಕಾರ್ಯ ನಿರ್ವಹಿಸುವುದನ್ನೇ ನಿಲ್ಲಿಸಬಹುದು. ಕೈಯಲ್ಲಿ ಇರುವಂಥ ದುಡ್ಡಿನಲ್ಲಿ ಮಾಡಿ ಮುಗಿಸಬೇಕು ಎಂದು ಹೇಳಿದಂಥ ಕೆಲಸಕ್ಕೆ ಸಂಬಂಧಿಸಿದಂತೆ ಅಷ್ಟರಲ್ಲಿ ಸಾಧ್ಯವಿಲ್ಲ, ಇನ್ನೂ ಹಣ ಬೇಕಾಗಲಿದೆ ಎಂಬುದನ್ನು ಸಂಬಂಧಪಟ್ಟವರು ಬಂದು ನಿಮಗೆ ಹೇಳಲಿದ್ದಾರೆ. ಈ ವಿಚಾರವು ನಿಮಗೆ ಬೇಸರ ಹಾಗೂ ಆತಂಕ ಎರಡೂ ಉಂಟು ಮಾಡಲಿವೆ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ಇಷ್ಟು ದಿನ ನಿಮ್ಮ ನಿರ್ಧಾರಗಳು ಹಾಗೂ ಸಲಹೆಗಳಿಗೆ ಒಂದಲ್ಲಾ ಒಂದು ಆಕ್ಷೇಪ- ಅಸಮಾಧಾನ ಹೇಳುತ್ತಿದ್ದವರು ಈ ದಿನ ಬಹಳ ಬದಲಾವಣೆ ಆದಂತೆ ಕಂಡುಬರಲಿದ್ದಾರೆ. ನೀವು ಹೇಳುತ್ತಿರುವುದು ಸರಿಯಾಗಿದೆ, ಹಾಗೇ ಮಾಡೋಣ ಎಂದೆನ್ನುವುದಕ್ಕೆ ಶುರು ಮಾಡಲಿದ್ದಾರೆ. ಪ್ರೀತಿ- ಪ್ರೇಮದಲ್ಲಿ ಇರುವವರು ಮನೆಯಲ್ಲಿ ಈ ವಿಚಾರವನ್ನು ತಿಳಿಸಿಬಿಡೋಣ ಎಂದುಕೊಳ್ಳುವ ಸಾಧ್ಯತೆ ಹೆಚ್ಚಿದೆ. ಇದನ್ನು ಮಾಹಿತಿ ಎಂದು ತಿಳಿಸುವುದಕ್ಕಿಂತ ಅಭಿಪ್ರಾಯ ಎಂಬಂತೆ ಹೇಳುವ ಅವಕಾಶಗಳು ಹೆಚ್ಚಿವೆ. ಯಾರು ಲಾರಿ ಚಾಲಕರಾಗಿ ಕಾರ್ಯ ನಿರ್ವಹಿಸುತ್ತಿದ್ದೀರಿ ಅಂಥವರ ನಿಷ್ಠೆ- ಪ್ರಾಮಾಣಿಕತೆಗೆ ಮಾಲೀಕರಿಂದ ಒಳ್ಳೆ ತಾರೀಫು ಸಿಗಲಿದೆ. ಜೊತೆಗೆ ಒಂದು ವೇಳೆ ಹಣಕಾಸಿನ ಅಗತ್ಯವಿದ್ದು, ಅದರ ಬಗ್ಗೆ ಹೇಳಿಕೊಂಡಿದ್ದಲ್ಲಿ ಆ ಹಣವನ್ನು ನೀಡುವುದಾಗಿಯೂ ಹೇಳುವ ಯೋಗ ಕಂಡುಬರುತ್ತಿದೆ. ಉದ್ಯೋಗಸ್ಥ ಮಹಿಳೆಯರಿಗೆ ಮನೆಯಲ್ಲಿನ ಕೆಲಸದ ಒತ್ತಡವೂ ಸೇರಿಕೊಂಡು ಸುಸ್ತು- ದಣಿವು ವಿಪರೀತ ಕಾಡಲಿದೆ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ಇಷ್ಟು ದಿನ ಏನೋ ತಪ್ಪಾಗಿ ಹೋಯಿತು, ಇನ್ನು ಮುಂದೆ ಹಾಗಾಗದಂತೆ ಎಚ್ಚರಿಕೆ ವಹಿಸೋಣ ಎಂದು ಪಾರ್ಟನರ್ ಜತೆಗೋ ಅಂದರೆ ವ್ಯವಹಾರ- ಉದ್ಯಮದಲ್ಲಿ ನಿಮ್ಮ ಜತೆಯಾಗಿ ಇರುವವರು ಜೊತೆಗೆ ರಾಜೀ ಮಾಡಿಕೊಳ್ಳುವುದಕ್ಕೆ ವೇದಿಕೆ ದೊರೆಯಲಿದೆ. ನಿಮ್ಮಲ್ಲಿ ಯಾರು ಕಮಿಷನ್ ಆಧಾರದಲ್ಲಿ ವ್ಯವಹಾರ ಮಾಡುತ್ತಿದ್ದೀರಿ ಅಂಥವರಿಗೆ ದೀರ್ಘಾವಧಿಗೆ ಆಗುವಂಥ ಕೆಲಸಗಳು ದೊರೆಯುವ ಸೂಚನೆಗಳಿವೆ. ಇನ್ನು ಸ್ನೇಹಿತರು- ಸಂಬಂಧಿಕರು ನಿಮಗೆ ಕೆಲವು ಕ್ಲೈಂಟ್ಸ್ ಗಳನ್ನು ಕರೆತರಬಹುದು. ಹಳೇ ಬಾಕಿ ಉಳಿಸಿಕೊಂಡು ಈಗ- ಆಗ ಎಂದು ಆಟವಾಡಿಸುತ್ತಿದ್ದ ವ್ಯಕ್ತಿಯೊಬ್ಬರು ಹಣದ ಬದಲಿಗೆ ಪರ್ಯಾಯವಾಗಿ ಬೆಲೆ ಬಾಳುವ ಹಾಗೂ ಉಪಯೋಗಕ್ಕೆ ಬರುವಂಥ ವಸ್ತುಗಳನ್ನು ನೀಡುವುದಾಗಿ ಹೇಳಬಹುದು. ದೂರ ಪ್ರಯಾಣ ಮಾಡುವಂಥ ಸಾಧ್ಯತೆಗಳು ಕಂಡುಬರುತ್ತಿದ್ದು, ಇದನ್ನು ಮಾಡಿ ಬಂದ ನಂತರದಲ್ಲಿ ನಿಮ್ಮ ಮನಸ್ಸಿನಲ್ಲಿ ಇರುವಂಥ ಕೆಲವು ಗೊಂದಲಗಳು ನಿವಾರಣೆ ಆಗುತ್ತವೆ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ವಿವಾಹದ ಆಚೆಗೆ ಮನಸ್ಸು ವಾಲದಂತೆ ಎಚ್ಚರಿಕೆಯನ್ನು ವಹಿಸಿ. ನಾನು ನಿರ್ಧರಿಸಿದ್ದು, ಮಾಡಿದ ಕೆಲಸಗಳು ಎಲ್ಲವೂ ಸರಿ, ಹಾಗೂ ಅವೇ ಸರಿಯಾದದ್ದು ಎಂಬ ಹಠ ಮಾಡುವುದಕ್ಕೆ ಹೋಗಬೇಡಿ. ವಿದೇಶಗಳಲ್ಲಿ ವ್ಯಾಸಂಗ ಮಾಡಬೇಕು ಎಂದು ತೆರಳಿದವರು ಅಲ್ಲಿಯೇ ತಾತ್ಕಾಲಿಕವಾಗಿ ಕೆಲಸಕ್ಕೆ ಪ್ರಯತ್ನ ಮಾಡಿದಲ್ಲಿ ದೊರೆಯುವ ಅವಕಾಶಗಳು ಹೆಚ್ಚಿವೆ. ಇನ್ನು ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ಅನ್ನು ಪಿಒಎಸ್ (ಪಾಯಿಂಟ್ ಆಫ್ ಸೇಲ್ಸ್) ನಲ್ಲಿ ಸ್ವೈಪ್ ಮಾಡುತ್ತೀರಿ ಎಂದಾದಲ್ಲಿ ಭದ್ರತೆ ವಿಚಾರದಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಎಚ್ಚರಿಕೆಯನ್ನು ವಹಿಸುವುದು ಮುಖ್ಯವಾಗುತ್ತದೆ. ಇತರರ ಬಗ್ಗೆ ಬಹಳ ಆಸ್ಥೆ ವಹಿಸಿ, ಅವರಿಗೆ ಸಹಾಯ ಮಾಡುವ ಪ್ರಯತ್ನದಲ್ಲಿ ನಿಮಗೆ ಕೆಲವು ಅನನುಕೂಲಗಳು ಆಗುವ ಸಾಧ್ಯತೆ ಇದೆ. ನಿಮ್ಮಲ್ಲಿ ಕೆಲವರು ಮನೆಗೆ ಮಂಚ, ಹೊಸ ಹಾಸಿಗೆ ಹಾಗೂ ದಿಂಬು ಇಂಥದ್ದನ್ನು ತರುವ ಸಾಧ್ಯತೆಗಳಿವೆ.

ಲೇಖನ- ಎನ್‌.ಕೆ.ಸ್ವಾತಿ

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ