ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಮಾರ್ಚ್ 28ರ ಗುರುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಈ ದಿನ ನಿಮಗೆ ಬಹಳ ಆಪ್ತರಾದವರ ಜೊತೆಗೆ ಅಭಿಪ್ರಾಯ ಭೇದಗಳು, ಮನಸ್ತಾಪಗಳು ಸೃಷ್ಟಿಯಾಗಲಿವೆ. ಮೇಲ್ನೋಟಕ್ಕೆ ಪರಿಷ್ಕಾರವೇ ಇಲ್ಲವೇನೋ ಅಂತ ಎನಿಸುವಂತೆ ಸಮಸ್ಯೆಗಳು ನಿಮಗೆ ಎದುರಾಗಲಿವೆ. ಈಗಾಗಲೇ ಒಪ್ಪಿಕೊಂಡಂತ ಕೆಲಸಗಳನ್ನು ಗಡುಗಿನೊಳಗಾಗಿ ಮುಗಿಸಿ ಕೊಡುವುದಕ್ಕೆ ಪ್ರಯತ್ನಪಡಿ. ಅತ್ಯಂತ ಕಡಿಮೆ ಸಮಯದಲ್ಲೇ ಆ ಕೆಲಸವನ್ನು ಮಾಡಿ ಮುಗಿಸಬಲ್ಲೆ ಎಂಬ ಅತಿಯಾದ ವಿಶ್ವಾಸ ಯಾವುದೇ ಕಾರಣಕ್ಕೂ ಬೇಡ. ನಿಮ್ಮಲ್ಲಿ ಕೆಲವರಿಗೆ ಈಗಾಗಲೇ ಒಪ್ಪಿಕೊಂಡಂತಹ ಕೆಲಸವೋ ಅಥವಾ ಕಾಂಟ್ರಾಕ್ಟ್ ಕೈತಪ್ಪಿ ಹೋಗುವ ಅವಕಾಶಗಳು ಹೆಚ್ಚಿವೆ. ಮುಖ್ಯವಾದ ಕಾಗದ ಪತ್ರಗಳಿಗೆ ಸಹಿ ಮಾಡಬೇಕು ಎಂದಿದ್ದಲ್ಲಿ ಕಡ್ಡಾಯವಾಗಿ ಪೂರ್ತಿಯಾಗಿ ಓದಿ ಸಹಿ ಮಾಡುವುದು ಉತ್ತಮ.
ಈ ದಿನ ಮನಸ್ಸು ಉಲ್ಲಸಿತವಾಗಿ ಇರುತ್ತದೆ. ಮಾಡುವ ಕೆಲಸದಲ್ಲೂ ಚುರುಕು, ಉತ್ಸಾಹ ಎದ್ದು ಕಾಣುತ್ತದೆ. ಈ ಹಿಂದೆ ಯಾವಾಗಲೋ ಹೂಡಿಕೆ ಮಾಡಿ, ಬಹುತೇಕ ಮರೆತೇ ಹೋಗಿದ್ದಂಥ ಇನ್ವೆಸ್ಟ್ ಮೆಂಟ್ ಈಗ ಉತ್ತಮ ರಿಟರ್ನ್ಸ್ ಕೊಡುವ ಸಾಧ್ಯತೆಗಳನ್ನು ಬಿಟ್ಟು ಕೊಡಲಿದೆ. ಈಗಾಗಲೇ ಸೈಟ್ ಇರುವಂತಹವರು ಅಲ್ಲಿ ಮನೆ ಕಟ್ಟುವ ಬಗ್ಗೆ ಸಂಗಾತಿ ಜೊತೆಗೆ ಚರ್ಚೆ ನಡೆಸಲಿದ್ದೀರಿ ಅಥವಾ ನಿಮ್ಮಲ್ಲಿ ಕೆಲವರು ಫ್ಲ್ಯಾಟ್ ಖರೀದಿ ಮಾಡುವ ಬಗ್ಗೆ ಆಲೋಚನೆ ಮಾಡಲಿದ್ದೀರಿ. ವೃತ್ತಿಯೋ ಉದ್ಯಮವೋ ವ್ಯಾಪಾರವೋ ಅಥವಾ ವ್ಯವಹಾರವೋ ಈ ದಿನ ಬರುವಂತಹ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳುವ ಬಗ್ಗೆ ಸರಿಯಾಗಿ ಆಲೋಚನೆ ಮಾಡಿ.
ಸ್ನೇಹಿತರು ಅಥವಾ ಸಂಬಂಧಿಕರನ್ನು ನಂಬಿಕೊಂಡು ಮಾಡಿದ್ದಂತಹ ಹೂಡಿಕೆಗಳು ದೊಡ್ಡ ನಷ್ಟವನ್ನು ತರುವಂತಹ ಸಾಧ್ಯತೆಗಳು ಕಾಣಿಸಿಕೊಳ್ಳಲಿವೆ. ಇಂದಿನ ಸಂದರ್ಭದಲ್ಲಿ ಹೇಳಬೇಕು ಅಂದ್ರೆ ಇತರರ ತಪ್ಪಿನಿಂದ ನೀವು ಪಾಠ ಕಲಿಯಲೇಬೇಕಿದೆ. ಈ ದಿನ ನಿಮ್ಮ ಮನೆಗೆ ಬರುವವರು ಹಾಗೂ ಹೋಗುವವರ ಬಗ್ಗೆ ಒಂದಿಷ್ಟು ಎಚ್ಚರಿಕೆಯಿಂದ ಇದ್ದರೆ ಉತ್ತಮ. ಏಕೆಂದರೆ ಮುಖ್ಯವಾದ ವಸ್ತುಗಳು ಅದರಲ್ಲೂ ಗ್ಯಾಜೆಟ್ ಇರಬಹುದು, ಸಣ್ಣಪುಟ್ಟ ಬೆಲೆಬಾಳುವಂತಹ ವಸ್ತುಗಳಿರಬಹುದು, ಕಳುವಾಗುವಂತಹ ಸಾಧ್ಯತೆಗಳು ಹೆಚ್ಚಿವೆ. ನಿಮ್ಮದಲ್ಲದ ನಿರ್ಧಾರಕ್ಕೆ ಅಥವಾ ತಪ್ಪಿಗೆ ಬೆಲೆ ಕಟ್ಟಬೇಕಾದಂತಹ ಸನ್ನಿವೇಶಗಳು ಸೃಷ್ಟಿಯಾಗಲಿವೆ.
ನಿಮ್ಮ ಆದಾಯದಲ್ಲಿ ಭಾರಿ ಪ್ರಮಾಣದ ಇಳಿಕೆ ಕಂಡು ಬರಬಹುದು, ಇದರಿಂದ ಆತಂಕಕ್ಕೂ ಗುರಿಯಾಗಬಹುದು. ಆದರೆ ಇದು ತಾತ್ಕಾಲಿಕ ಮಾತ್ರ. ಭವಿಷ್ಯದಲ್ಲಿ ನಿಮ್ಮ ಆದಾಯವನ್ನು ತುಂಬಾ ಜಾಸ್ತಿ ಮಾಡಿಕೊಳ್ಳಬಹುದಾದಂತಹ ಅವಕಾಶಗಳು ತೆರೆದುಕೊಳ್ಳಲಿವೆ. ಅದನ್ನು ಹೇಗೆ ಸದ್ಬಳಕೆ ಮಾಡಿಕೊಳ್ಳಬೇಕು ಎಂಬುದು ನಿಮ್ಮ ಕೈಯಲ್ಲಿದೆ. ಧಾರ್ಮಿಕ ವೃತ್ತಿಯಲ್ಲಿ ಇರುವಂತಹವರಿಗೆ ದೂರಪ್ರಯಾಣ ಇದೆ. ಇದರಿಂದ ದೈಹಿಕ ಆಯಾಸ ಹಾಗೂ ಅಸ್ವಾಸ್ಥ್ಯ ಕಾಡಬಹುದು. ಶತ್ರುಗಳು ನಿಮ್ಮ ವಿರುದ್ಧ ಏನೋ ಪಿತೂರಿ ಮಾಡುತ್ತಿದ್ದಾರೆ ಎಂಬ ಸುಳಿವು ಈ ದಿನ ನಿಮಗೆ ದೊರೆಯಲಿದೆ, ಅದನ್ನು ಗಂಭೀರವಾಗಿ ಪರಿಗಣಿಸಿ, ಎದುರಿಸಲು ಮುಂಚೆಯೇ ಒಂದು ಯೋಜನೆ ರೂಪಿಸಿಕೊಳ್ಳುವುದು ಕ್ಷೇಮ.
ನೀವು ನಿರೀಕ್ಷೆ ಮಾಡದ ರೀತಿಯಲ್ಲಿ ಯಶೋಕೀರ್ತಿಯನ್ನು ಈ ದಿನ ಪಡೆಯಲಿದ್ದೀರಿ. ಈ ಹಿಂದೆ ನೀವು ಯಾವಾಗಲೋ ಮಾಡಿದ್ದ ಸಹಾಯವನ್ನು ನೆನಪಿಟ್ಟುಕೊಂಡು, ಈ ದಿನ ಕೆಲವರು ನಿಮಗೆ ನೆರವನ್ನು ನೀಡಲಿದ್ದಾರೆ. ನೀವು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದ ಕೆಲಸವೊಂದು ಭಾರಿ ಪ್ರಮಾಣದಲ್ಲಿ ಯಶಸ್ಸು ಕಂಡು, ಸಹೋದ್ಯೋಗಿಗಳು ಅಚ್ಚರಿಪಡಲಿದ್ದಾರೆ. ನಿಮ್ಮಲ್ಲಿ ಕೆಲವರು ಈಗಿರುವ ಕೆಲಸವನ್ನು ಬಿಟ್ಟು ಸ್ವಂತ ಉದ್ಯಮ ಅಥವಾ ವ್ಯವಹಾರ ಅಥವಾ ವ್ಯಾಪಾರವನ್ನು ಶುರು ಮಾಡಬೇಕು ಅಂದುಕೊಂಡಿದ್ದಲ್ಲಿ ಆ ನಿರ್ಧಾರವನ್ನು ಮುಂದಕ್ಕೆ ಹಾಕುವುದಕ್ಕೆ ತೀರ್ಮಾನ ಮಾಡಲಿದ್ದೀರಿ. ಕುಟುಂಬ ಸದಸ್ಯರಿಗಾಗಿ ಒಡವೆ, ವಸ್ತ್ರಗಳನ್ನು ಖರೀದಿ ಮಾಡುವುದಕ್ಕೆ ಹಣ ಖರ್ಚು ಮಾಡಲಿದ್ದೀರಿ, ಇದರಿಂದ ಮನಸ್ಸಂತೋಷ ಸಿಗಲಿದೆ.
ಈ ದಿನ ಬಂಧುಗಳು ಸ್ನೇಹಿತರ ಜೊತೆಗೂಡಿ ತುಂಬಾ ಸಂತೋಷದಿಂದ ಸಮಯ ಕಳೆಯುವಂತಹ ಯೋಗ ನಿಮ್ಮ ಪಾಲಿಗೆ ಇದೆ. ನೀವು ನಿರೀಕ್ಷೆ ಕೂಡ ಮಾಡದ ರೀತಿಯಲ್ಲಿ ಆದಾಯದ ಮೂಲಗಳು ಜಾಸ್ತಿಯಾಗಲಿವೆ. ನಿಮ್ಮಲ್ಲಿ ಯಾರು ಖಾಸಗಿ ಕಂಪನಿಗಳಲ್ಲಿ ಕಾರ್ಯನಿರ್ವಹಿಸುತ್ತೀರೋ ಅಥವಾ ಮ್ಯಾನೇಜ್ ಮೆಂಟ್ ಮಟ್ಟದ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತೀರೋ ಅಂತಹವರಿಗೆ ಪದೋನ್ನತಿ ದೊರೆಯುವಂತಹ ಸುಳಿವು ದೊರೆಯಲಿದೆ. ಆದರೆ ಈ ದಿನ ನಿಮಗೆ ಪ್ರಮುಖ ಎಚ್ಚರಿಕೆ ಏನೆಂದರೆ, ಎತ್ತರದ ಸ್ಥಳಗಳಲ್ಲಿ ನಿಂತು ಕೆಲಸ ಮಾಡುವಂತಹವರು ಅಥವಾ ಕೆಲಸಗಳ ಪರಿಶೀಲನೆ ಮಾಡುವಂಥವರು ಮಾಮೂಲಿ ದಿನಕ್ಕಿಂತ ಜಾಸ್ತಿ ಎಚ್ಚರಿಕೆಯನ್ನು ವಹಿಸಿ.
ಸೋದರ ಸಂಬಂಧಿಗಳ ಮನೆಗಳಲ್ಲಿನ ಶುಭ ಕಾರ್ಯ ಅಥವಾ ದೇವತಾ ಕಾರ್ಯಗಳಿಗೆ ನೀವು ಓಡಾಟ ಮಾಡಬೇಕಾಗಿ ಬರಲಿದೆ. ಏಕಕಾಲಕ್ಕೆ ಹಲವರು, ಅದು ಸ್ನೇಹಿತರಿರಬಹುದು ಅಥವಾ ಸಂಬಂಧಿಕರು ಇರಬಹುದು ನಿಮ್ಮ ಬಳಿ ಹಣಕಾಸಿನ ನೆರವನ್ನು ಕೇಳಿಕೊಂಡು ಬರಬಹುದು. ಈಗಾಗಲೇ ಕೆಲಸ ಮಾಡಿಕೊಟ್ಟಿಯಾಗಿದೆ, ಅದರಿಂದ ಹಣ ಬಾಕಿ ಬರಬೇಕಿದೆ ಎಂದಿದ್ದಲ್ಲಿ ಈ ದಿನ ಪ್ರಯತ್ನ ಪಟ್ಟರೆ ಅದು ಬರುವ ಸಾಧ್ಯತೆಗಳಿವೆ. ಯಾವುದೇ ಮುಖ್ಯ ಕೆಲಸಕ್ಕಾಗಿ ಮನೆಯಿಂದ ಹೊರಡುವ ಮೊದಲಿಗೆ ನೀವು ಗುರುಗಳಾಗಿ ಭಾವಿಸುವಂತಹವರನ್ನು ಮನಸ್ಸಿನಲ್ಲಿ ಒಮ್ಮೆ ಸ್ಮರಣೆ ಮಾಡಿ ಹೊರಡಿ.
ಆಧ್ಯಾತ್ಮಿಕ ವಿಚಾರಗಳು ಈ ದಿನ ಬಹಳ ಪ್ರಾಮುಖ್ಯ ಪಡೆಯುತ್ತವೆ. ನಿಮ್ಮಲ್ಲಿ ಕೆಲವರು ಕುಟುಂಬದವರ ಜೊತೆಗೂಡಿ ತೀರ್ಥಕ್ಷೇತ್ರಗಳಿಗೆ ತೆರಳುವುದಕ್ಕೆ ಯೋಜನೆಯನ್ನು ರೂಪಿಸಲಿದ್ದೀರಿ. ಇನ್ನು ಮಕ್ಕಳ ಭವಿಷ್ಯದ ವಿಚಾರವಾಗಿ ಸಂಗಾತಿ ಜೊತೆಗೆ ಚರ್ಚೆ ಮಾಡಲಿದ್ದೀರಿ. ಪ್ರಭಾವಿಗಳ ಸಹಾಯದಿಂದ ಸರ್ಕಾರಿ ಮಟ್ಟದ ಕೆಲಸ ಕಾರ್ಯಗಳು ಸುಲಭವಾಗಿ ಆಗುವಂತಹ ಸಾಧ್ಯತೆಗಳಿವೆ. ವ್ಯಾಪಾರ ಅಥವಾ ಸ್ವಂತ ಉದ್ಯಮವನ್ನು ಮಾಡುತ್ತಿರುವಂತಹವರು ಅವುಗಳ ವಿಸ್ತರಣೆಗಾಗಿ ಹಣಕಾಸನ್ನು ಹೊಂದಾಣಿಕೆ ಮಾಡಿಕೊಳ್ಳುವ ಬಗ್ಗೆ ಯೋಜನೆಯನ್ನು ರೂಪಿಸಲಿದ್ದೀರಿ. ಉದ್ಯೋಗ ಬದಲಾವಣೆ ಮಾಡಬೇಕು ಎಂದಿರುವವರಿಗೆ ಸ್ನೇಹಿತರ ಮೂಲಕ ಅವಕಾಶಗಳ ಬಗ್ಗೆ ತಿಳಿದು ಬರಲಿದೆ.
ಪರಿಸ್ಥಿತಿ, ಸನ್ನಿವೇಶ, ವ್ಯಕ್ತಿಗಳು ಎಲ್ಲರೂ- ಎಲ್ಲವೂ ನಿಮ್ಮ ವಿರುದ್ಧ ಕೆಲಸ ಮಾಡುತ್ತಿದೆಯೇನೋ ಎಂದು ಈ ದಿನ ಬಲವಾಗಿ ನಿಮಗೆ ಅನಿಸಲಿದೆ. ನೀವಾಗಿಯೇ ಮಾಡಿಕೊಂಡ ಕೆಲವು ಕಟ್ಟುಪಾಡುಗಳನ್ನು ಮುರಿಯುವುದು ಅನಿವಾರ್ಯ ಎಂಬಂತಾಗುತ್ತದೆ. ಜೊತೆಗೆ ಈ ಹಿಂದೆ ಯಾವಾಗಲೋ ನಿಮ್ಮಿಂದ ಆದ ತಪ್ಪಿಗೆ ಒಂದೋ ದೂಷಣೆಗೆ ಗುರಿಯಾಗಬೇಕಾಗುತ್ತದೆ ಅಥವಾ ದಂಡವನ್ನು ತೆರಬೇಕಾಗುತ್ತದೆ. ಬೇರೆಯವರ ಒಳತಿಗಾಗಿ ನೀವು ನೀಡಿದ ಸಲಹೆ ಅಥವಾ ಆ ಸಂದರ್ಭಕ್ಕೆ ಸೂಕ್ತವಾದಂತಹ ಮಾರ್ಗೋಪಾಯಗಳನ್ನು ತಪ್ಪಾಗಿ ಗ್ರಹಿಸುವಂತಹ ಸಾಧ್ಯತೆಗಳು ಹೆಚ್ಚಿವೆ. ಉದ್ಯೋಗ ಸ್ಥಳದಲ್ಲಿ ನಿಮ್ಮ ಪಾಲಿನ ಜವಾಬ್ದಾರಿಗಳನ್ನು ಯಾವುದೇ ಕಾರಣಕ್ಕೂ ಇನ್ನೊಬ್ಬರಿಗೆ ವರ್ಗಾವಣೆ ಮಾಡಬೇಡಿ.
ಲೇಖನ- ಎನ್.ಕೆ.ಸ್ವಾತಿ