Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 16ರ ದಿನಭವಿಷ್ಯ

| Updated By: ಗಂಗಾಧರ​ ಬ. ಸಾಬೋಜಿ

Updated on: Dec 16, 2022 | 6:00 AM

ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಈಗಾಗಲೇ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಡಿಸೆಂಬರ್ 16ರ ಶುಕ್ರವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 16ರ ದಿನಭವಿಷ್ಯ
ಪ್ರಾತಿನಿಧಿಕ ಚಿತ್ರ
Follow us on

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಈಗಾಗಲೇ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಡಿಸೆಂಬರ್ 16ರ ಶುಕ್ರವಾರದ ದಿನ ಭವಿಷ್ಯ (horoscope) ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

  1. ಜನ್ಮಸಂಖ್ಯೆ 1: ನಿಮಗೆ ಗೌರವ ನೀಡುತ್ತಿದ್ದವರು ಯಾಕೋ ನಿರ್ಲಕ್ಷ್ಯ ಮಾಡುವುದಕ್ಕೆ ಆರಂಭಿಸಿದ್ದಾರೆ ಎಂಬ ಭಾವನೆ ದಟ್ಟವಾಗುತ್ತದೆ. ದೂರ ಪ್ರಯಾಣ ಮಾಡಬೇಕಿರುವವರು ನಿಮ್ಮ ಟಿಕೆಟ್ ಹಾಗೂ ಅದಕ್ಕೆ ಸಂಬಂಧಿಸಿದ ದಾಖಲಾತಿಗಳು, ಸಮಯ ಮತ್ತಿತರ ಮಾಹಿತಿಗಳನ್ನು ಇನ್ನೊಮ್ಮೆ ನೋಡಿಕೊಳ್ಳಿ. ಹತ್ತಾರು ಜನ ಇರುವ ಕಡೆ ಫೋನ್‌ನಲ್ಲಿ ನಿಮ್ಮ ಖಾಸಗಿ ವಿಚಾರಗಳನ್ನು ಮಾತನಾಡಬೇಡಿ.
  2. ಜನ್ಮಸಂಖ್ಯೆ 2: ಕಲೆ, ವಕೀಲಿಕೆ, ಸಾರ್ವಜನಿಕ ಸಂಪರ್ಕ ಕ್ಷೇತ್ರದಲ್ಲಿ ಇರುವವರಿಗೆ ಇಂದು ಮಹತ್ವದ ದಿನವಾಗಿರುತ್ತದೆ. ಯಾವುದನ್ನೂ ಗೊಂದಲ ಮಾಡಿಕೊಳ್ಳಬೇಡಿ. ಕಡ್ಡಿ ತುಂಡಾದಂತೆ ಮಾತನಾಡಿ. ಈ ದಿನ ನಿಮಗೆ ಕುತ್ತಿಗೆ ನೋವು ಕಾಡಬಹುದು. ಬಹಳ ಸಮಯ ಕೂತು ಕೆಲಸ ಮಾಡುವವರು, ಬಗ್ಗಿ ನಿಂತು ಕೆಲಸ ಮಾಡುವವರಿಗೆ ಎಚ್ಚರಿಕೆ ಅಗತ್ಯ.
  3. ಜನ್ಮಸಂಖ್ಯೆ 3: ಕಮಿಷನ್ ವ್ಯವಹಾರ ಮಾಡುವವರಿಗೆ ಗಂಡಾಗುಂಡಿ ಮಾಡುವಂಥ ಆಸಾಮಿ ತಗುಲಿಕೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ಈ ದಿನದ ವ್ಯವಹಾರದಲ್ಲಿ ಸ್ಪಷ್ಟತೆ ಹಾಗೂ ಪಾರದರ್ಶಕತೆ ಇರುವ ಹಾಗೆ ನೋಡಿಕೊಳ್ಳಿ. ಇನ್ನು ಸಮಯಕ್ಕೆ ಸರಿಯಾಗಿ ಊಟ- ತಿಂಡಿ ಮಾಡಿ. ಗ್ಯಾಸ್ಟ್ರಿಕ್ ಸಮಸ್ಯೆ ಇರುವವರಿಗೆ ಅದು ಉಲ್ಬಣ ಆಗಬಹುದು.
  4. ಜನ್ಮಸಂಖ್ಯೆ 4: ನೀವಾಗಿಯೇ ವಹಿಸಿಕೊಂಡಿದ್ದ ಜವಾಬ್ದಾರಿ ಇತರರಿಗೆ ನಿಮ್ಮ ಮೇಲೆ ಗೌರವ ಜಾಸ್ತಿ ಆಗುವಂತೆ ಮಾಡುತ್ತದೆ. ಚಿನ್ನದ ಕೆತ್ತನೆ, ಕುಸುರಿ ಇಂಥ ಕೆಲಸ ಮಾಡುವವರಿಗೆ ಆದಾಯ ಜಾಸ್ತಿ ಆಗುವಂಥ ಒಪ್ಪಂದ ಏರ್ಪಡಬಹುದು. ಸ್ನೇಹಿತರ ಸಲಹೆಯಿಂದ ಲಾಭ ಆಗುವ ಸಾಧ್ಯತೆಗಳು ಹೆಚ್ಚಿವೆ.
  5. ಜನ್ಮಸಂಖ್ಯೆ 5: ಈ ಹಿಂದೆ ನಿಮ್ಮಿಂದ ಅನುಕೂಲ ತೆಗೆದುಕೊಂಡವರು ಈ ದಿನ ನಿಮ್ಮ ನೆರವಾಗುವ ಅವಕಾಶ ಇದೆ. ಆದರೆ ನಿಮಗೆ ತಾಳ್ಮೆ ಅಗತ್ಯ. ಎಲ್ಲ ಬಾಗಿಲುಗಳು ಮುಚ್ಚಿಹೋದವು ಎಂದು ಧೃತಿಗೆಡಬೇಡಿ. ಇಂದು ನಿಮ್ಮ ಸಮಯಸ್ಫೂರ್ತಿ ಹೇಗಿರುತ್ತದೆ ಎಂಬುದರ ಮೇಲೆ ನೆಮ್ಮದಿ, ಸಂತೋಷ ಅವಲಂಬಿಸಿರುತ್ತದೆ.
  6. ಜನ್ಮಸಂಖ್ಯೆ 6: ದಿನ ಬಹುಪಾಲು ಸಮಯ ಬಜೆಟ್‌ ಲೆಕ್ಕಾಚಾರದಲ್ಲಿ ಕಳೆಯುವಂತಾಗಬಹುದು. ಮುಖ್ಯವಾಗಿ ನಿಮಗೆ ಖರ್ಚಿನ ಅಂದಾಜು ಸಿಗಬೇಕಿರುತ್ತದೆ. ಯಾರಿಗಾಗಿ, ಯಾವುದಕ್ಕಾಗಿ ಖರ್ಚು ಮಾಡುತ್ತಿದ್ದೀರಿ ಎಂಬ ಚಿತ್ರಣ ಬೇಕಾಗಿರುತ್ತದೆ. ಸೀರೆ, ಸುಗಂಧದ್ರವ್ಯದಂಥ ವ್ಯವಹಾರದಲ್ಲಿ ತೊಡಗಿರುವವರಿಗೆ ಲಾಭದ ಪ್ರಮಾಣ ಕಡಿಮೆ ಆಗಬಹುದು.
  7. ಜನ್ಮಸಂಖ್ಯೆ 7: ವಾಹನ ಚಾಲಕರು, ಚಿತ್ರಮಂದಿರಗಳಲ್ಲಿ ಕೆಲಸ ಮಾಡುವವರು, ಮಾಧ್ಯಮ ಕ್ಷೇತ್ರದಲ್ಲಿ ಇರುವವರಿಗೆ ಹೊಸ ಹೊಸ ಜನರ ಪರಿಚಯ ಆಗಲಿದೆ. ನಿಮ್ಮ ಭವಿಷ್ಯದ ಪ್ರಾಜೆಕ್ಟ್‌ಗಳ ಬಗ್ಗೆ ಇವರ ಜತೆ ಮಾಹಿತಿ ಹಂಚಿಕೊಳ್ಳಲಿದ್ದೀರಿ. ಸಾಧ್ಯವಾದಷ್ಟೂ ಕುಟುಂಬ ಸದಸ್ಯರಿಗೆ ಸಮಯ ನೀಡುವುದಕ್ಕೆ ಪ್ರಯತ್ನಿಸಿ.
  8. ಜನ್ಮಸಂಖ್ಯೆ 8: ಪಾರ್ಟಿ, ಔಟಿಂಗ್, ಪ್ರಯಾಣ ಅಂತ ಹೆಚ್ಚಿನ ಹಣ ಖರ್ಚಾಗುವ ಯೋಗ ಈ ದಿನ ನಿಮ್ಮದು. ಸಂತೋಷದಿಂದ ಇರುವಿರಾದರೆ ಖರ್ಚಾಗಲಿ ಬಿಡಿ, ನೀವು ಸಹ ಹಾಗೇ ಯೋಚಿಸುತ್ತೀರಾ ಅಲ್ಲವಾ? ಭವಿಷ್ಯದಲ್ಲಿ ನಿಮಗೆ ಸಿಗಲಿರುವ ಉತ್ತಮ ಹುದ್ದೆಯೊಂದರ ಬಗ್ಗೆ ಮಾಹಿತಿ ಅಥವಾ ಸುಳಿವು ಸಿಗಲಿದೆ.
  9. ಜನ್ಮಸಂಖ್ಯೆ 9: ಹೊಸ ವಿಷಯದ ಕಲಿಕೆಗೆ ಸಾಮಗ್ರಿ ಅಥವಾ ಸಂಪನ್ಮೂಲ ದೊರೆಯಲಿದೆ. ದಿಢೀರನೇ ಬೇರೆಯವರ ಮಾರ್ಗದರ್ಶನ ಸಿಕ್ಕು, ನಿಮ್ಮ ಶ್ರಮ ಕಡಿಮೆ ಆಗಲಿದೆ. ವಿದ್ಯಾರ್ಥಿಗಳು ಬಹಳ ಸಂತೋಷದಿಂದ ಸಮಯ ಕಳೆಯಲಿದ್ದೀರಿ. ಹೆಣ್ಣುಮಕ್ಕಳು ಅಡುಗೆ ಮಾಡುವಾಗ ರುಚಿಯ ಕಡೆಗೆ ನಿಗಾ ಮಾಡಿ. ಅದೇ ವಿಷಯಕ್ಕೆ ಜಗಳಾಗುವ ಸಾಧ್ಯತೆ ಇದೆ.

ಲೇಖನ: ಎನ್‌.ಕೆ.ಸ್ವಾತಿ