
ನಿಮ್ಮಲ್ಲಿ ಕೆಲವರಿಗೆ ಈ ದಿನದ ಆರಂಭ ಅಷ್ಟೇನೂ ಚೆನ್ನಾಗಿರುವುದಿಲ್ಲ. ಆ ಕಾರಣಕ್ಕಾಗಿ ಎಂದಿನ ಉತ್ಸಾಹದಲ್ಲಿ ನೀವು ಕಂಡುಬರುವುದಿಲ್ಲ. ಉದ್ಯೋಗ ಅಥವಾ ವೃತ್ತಿಗೆ ಸಂಬಂಧಿಸಿದಂತೆ ಅಂದುಕೊಳ್ಳದ ಕೆಲವು ಫಲಿತಾಂಶ ಬರುವುದರಿಂದ ವಿಚಲಿತರಾಗುವಂತೆ ಆಗಲಿದೆ. ಸ್ವಲ್ಪ ದೂರದ ಸ್ಥಳಕ್ಕೆ ತೆರಳಿ ಏಕಾಂಗಿಯಾಗಿ ಸಮಯ ಕಳೆಯೋಣ ಎಂದೆನಿಸಲಿದೆ. ಸರ್ಕಾರದ ಮಟ್ಟದಲ್ಲಿ ಆಗಬೇಕಾದ ಕಾಗದ- ದಾಖಲೆ ಪತ್ರಗಳ ವ್ಯವಹಾರ ಸಲೀಸಾಗಿ ಆಗಲಿದೆ. ಇದಕ್ಕೆ ನಿಮ್ಮ ಪ್ರಭಾವ- ಪ್ರಯತ್ನ ಸಹಾಯ ಮಾಡಲಿದೆ.
ಪ್ಲಾನಿಂಗ್- ಪರಿಶ್ರಮ ಜತೆಯಾಗಿ ಅತ್ಯುತ್ತಮ ಫಲಿತಾಂಶ ದೊರೆಯಲಿದೆ. ದಂಪತಿ ಮಧ್ಯೆ ಸಂತೋಷಕರವಾದ ಸಮಯವನ್ನು ಕಳೆಯುವ ಯೋಗ ಇದೆ. ನಿಮ್ಮ ಬಳಿ ಎಷ್ಟು ಹಣ ಇದೆಯೋ ಅಷ್ಟಕ್ಕೆ ಮಾತ್ರ ಸೀಮಿತಗೊಳ್ಳಿ. ಕಡಿಮೆ ಬಡ್ಡಿ- ದೀರ್ಘಾವಧಿ ಹೀಗೆ ಏನೇ ಆಕರ್ಷಣೆಗಳು ಇದ್ದರೂ ಸಾಲ ಪಡೆದುಕೊಳ್ಳಬೇಡಿ. ಖಾಸಗಿ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುವವರು ಅದೆಷ್ಟೇ ಸಣ್ಣ ಪ್ರಮಾಣದ ಕೆಲಸವಾದರೂ ನೀವೇ ಪೂರ್ಣಗೊಳಿಸುವುದು ಉತ್ತಮ. ನಿಮ್ಮ ಜವಾಬ್ದಾರಿಯನ್ನು ಬೇರೆಯವರಿಗೆ ವರ್ಗಾವಣೆ ಮಾಡಬೇಡಿ.
ನಿಮ್ಮ ಕೆಲಸ- ಜವಾಬ್ದಾರಿ ಅಷ್ಟಕ್ಕೆ ಮಾತ್ರ ಸೀಮಿತ ಮಾಡಿಕೊಳ್ಳಿ. ಸ್ನೇಹ- ಕರುಣೆ ಹೀಗೆ ಭಾವನಾತ್ಮಕವಾಗಿ ತಳುಕು ಹಾಕಿಕೊಂಡು, ಇತರರಿಗೆ ನೆರವು ನೀಡಲು ಮುಂದಾದಲ್ಲಿ ಆ ನಂತರ ಪಡಿಪಾಟಲು ಪಡುವಂತೆ ಆಗುತ್ತದೆ. ಉಳಿತಾಯದ ಉದ್ದೇಶಕ್ಕೆ ಖರೀದಿ ಮಾಡಿಟ್ಟಿದ್ದ ಚಿನ್ನ ಅಥವಾ ಬೆಳ್ಳಿಯನ್ನು ಮಾರಾಟ ಮಾಡಿ, ಸದ್ಯದ ಹಣಕಾಸಿನ ಅಗತ್ಯವನ್ನು ಪೂರೈಸಿಕೊಳ್ಳಲು ಚಿಂತನೆ ಮಾಡುತ್ತೀರಿ. ಮ್ಯೂಚುವಲ್ ಫಂಡ್ ನಲ್ಲಿ ಹಣ ಹೂಡಿಕೆ ಮಾಡಿದವರಿಗೆ ಲಾಭ ಸಿಗಲಿದೆ. ಪ್ರಾಫಿಟ್ ಬುಕ್ಕಿಂಗ್ ಗೆ ನಿರ್ಧಾರ ಮಾಡುತ್ತೀರಿ.
ಲೇಖನ- ಸ್ವಾತಿ ಎನ್.ಕೆ.