
ಇತರರ ನಡುವಿನ ಭಿನ್ನಾಭಿಪ್ರಾಯ ಶಮನಕ್ಕೆ ನಿಮಗೆ ಆಹ್ವಾನ ಬಂದರೂ ಹೋಗಬೇಡಿ; ಅವರು ತಮ್ಮ ನಿರೀಕ್ಷೆಯನ್ನು ನಿಮ್ಮ ಮೇಲೆ ಹೇರಬಹುದು. ಹಣದ ವಿಷಯದಲ್ಲಿ ಜಾಣತನ ತೋರಿದರೆ ಬಾಕಿ ವ್ಯವಹಾರಗಳು ಸುಧಾರಣೆಯ ಹಾದಿಗೆ ಬರುತ್ತವೆ. ಪ್ರೀತಿಯಲ್ಲಿ ಇರುವವರು ಮನದ ಮಾತುಗಳನ್ನು ನೇರವಾಗಿ ಹೇಳಿದರೆ ವಿಶ್ವಾಸ ಗಟ್ಟಿಯಾಗುತ್ತದೆ. ಮದುವೆ ಬಗ್ಗೆ ಯೋಚಿಸುತ್ತಿರುವವರಿಗೆ ಕುಟುಂಬದ ಅನುಮೋದನೆ ಸಿಗುವ ಸೂಚನೆಗಳಿವೆ. ಕುಟುಂಬದಲ್ಲಿ ಉಂಟಾಗುವ ಸಣ್ಣ ಉದ್ವಿಗ್ನತೆಯು ಸಹನೆ ಮತ್ತು ಸಮತೋಲನದಿಂದ ಕಡಿಮೆಯಾಗುತ್ತದೆ. ಉದ್ಯೋಗ ಸ್ಥಳದಲ್ಲಿ ನಿಮ್ಮ ನಿಲುವು ಸ್ಪಷ್ಟವಾಗಿದ್ದರೆ ಒತ್ತಡ ಕಡಿಮೆಯಾಗುತ್ತದೆ.
ಸ್ನೇಹಿತರು ಹಾಗೂ ಸಂಬಂಧಿಗಳೊಂದಿಗೆ ಇರುವ ಅಂತರ ನಿಧಾನವಾಗಿ ಕಡಿಮೆಯಾಗುತ್ತದೆ; ನೀವು ತೋರಿಸುವ ಮೃದು ಧೋರಣೆ ಮನೆಯಲ್ಲಿಯ ವಾತಾವರಣವನ್ನೂ ಸುಧಾರಿಸುತ್ತದೆ. ಈ ಹಿಂದಿನ ಅಸಮಾಧಾನಗಳನ್ನು ಬಿಟ್ಟು ಸಂಭಾಷಣೆ ಪುನರ್ ಆರಂಭವಾಗುವುದು ಮನಸಿಗೆ ನೆಮ್ಮದಿ ನೀಡುತ್ತದೆ. ಹಣದ ಹರಿವು ಸಾಮಾನ್ಯವಾಗಿದ್ದರೂ ಲೆಕ್ಕಾಚಾರದಲ್ಲಿ ಜಾಗರೂಕತೆ ಅವಶ್ಯಕ. ಪ್ರೀತಿಯಲ್ಲಿ ಇರುವವರಿಗೆ ಇಂದು ಮನದ ಮಾತು ಹಂಚಿಕೊಳ್ಳಲು ಸೂಕ್ತ ಸಮಯ ಆಗಿರುತ್ತದೆ. ಮದುವೆಗೆ ಯೋಚಿಸುವವರಿಗೆ ಹೊಸ ಮಾತುಕತೆಗಳು ಶುಭ ಸೂಚನೆ ನೀಡುತ್ತವೆ. ಕೆಲಸದಲ್ಲಿ ನಿಮ್ಮ ಅಭಿಪ್ರಾಯಕ್ಕೆ ಮಹತ್ವ ಸಿಗುತ್ತದೆ.
ಸಂಕೀರ್ಣ ವಿಷಯಗಳನ್ನು ಬಹಳ ಸರಳವಾಗಿ ವಿವರಿಸುವ ನಿಮ್ಮ ಕೌಶಲ ಇಂದು ಹೆಚ್ಚು ಮೆಚ್ಚುಗೆ ಪಡೆಯುತ್ತದೆ. ಉದ್ಯೋಗ ಸ್ಥಳದಲ್ಲಿ ನಿಮಗೆ ಬೇಕಿದ್ದ ಪರಿಕರಗಳು ಅಥವಾ ಸಂಪನ್ಮೂಲಗಳು ದೊರೆಯುವುದರಿಂದ ಕೆಲಸದ ವೇಗ ಹೆಚ್ಚಾಗುತ್ತದೆ. ಹಣಕಾಸಿನಲ್ಲಿ ನಿಯಮಿತ ಸಂಗ್ರಹಕ್ಕೆ ಒತ್ತು ಕೊಡುತ್ತೀರಿ; ರೆಕರಿಂಗ್ ಡೆಪಾಸಿಟ್ ಅಥವಾ ಮ್ಯೂಚುವಲ್ ಫಂಡ್‌ನ ಎಸ್‌ಐಪಿ ಬಗ್ಗೆ ಈಗ ತೆಗೆದುಕೊಳ್ಳುವ ನಿರ್ಧಾರ ಭವಿಷ್ಯಕ್ಕೆ ಬಲ ನೀಡುತ್ತದೆ. ಕುಟುಂಬದಲ್ಲಿ ಸಲಹೆ ಕೇಳುವವರು ಹೆಚ್ಚಾಗುತ್ತಾರೆ. ಪ್ರೀತಿ ಜೀವನದಲ್ಲಿ ನೇರವಂತಿಕೆ ವಿಶ್ವಾಸವನ್ನು ಗಟ್ಟಿ ಮಾಡುತ್ತದೆ.
ಲೇಖನ- ಸ್ವಾತಿ ಎನ್.ಕೆ.