Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಜನವರಿ 15ರ ದಿನಭವಿಷ್ಯ
ಜನ್ಮಸಂಖ್ಯೆಗೆ 1, 2, 3ರ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆ ಆಧಾರದಲ್ಲಿ ಜನವರಿ 15ರ ಗುರುವಾರದ ದಿನ ಭವಿಷ್ಯ ಹೇಗಿದೆ ಎಂಬ ಸವಿಸ್ತಾರ ಮಾಹಿತಿ ಇಲ್ಲಿದೆ. ಜನ್ಮಸಂಖ್ಯೆ 1ಕ್ಕೆ ವೃತ್ತಿ ಪ್ರಗತಿ, ಹೊಸ ಆದಾಯದ ಮೂಲ, ಸಾಮಾಜಿಕ ಗೌರವ ಸೂಚಿಸಿದರೆ, ಜನ್ಮಸಂಖ್ಯೆ 2ಕ್ಕೆ ಸೃಜನಶೀಲತೆ, ಹಣಕಾಸಿನಲ್ಲಿ ಎಚ್ಚರಿಕೆ ಅಗತ್ಯ. ಜನ್ಮಸಂಖ್ಯೆ 3 ವೈಯಕ್ತಿಕ, ವೃತ್ತಿ ಜೀವನದಲ್ಲಿ ಸಮತೋಲನ, ಆರ್ಥಿಕ ಸ್ಥಿರತೆ ತರುವ ಬಗ್ಗೆ ಮಾಹಿತಿ ನೀಡುತ್ತದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1):
ಇಂದು ಮನೆಗೆ ಬರುವ ಸಂಬಂಧಿಗಳು ಹರ್ಷ ತುಂಬಿದ ವಾತಾವರಣಕ್ಕೆ ಕಾರಣ ಆಗುತ್ತಾರೆ. ವಿದ್ಯಾರ್ಥಿಗಳು ಗಮನ ಕೇಂದ್ರೀಕರಿಸುವುದರಿಂದ ಪರೀಕ್ಷಾ ಸಿದ್ಧತೆ ಸರಿಯಾದ ದಾರಿಗೆ ಬರುತ್ತದೆ. ಉದ್ಯೋಗದಲ್ಲಿ ಇರುವವರಿಗೆ ಕಾರ್ಯವಿಧಾನ ಬದಲಾವಣೆ ಹೊಸ ಅವಕಾಶ ತರುತ್ತದೆ, ಮೇಲಧಿಕಾರಿಗಳ ನಿರೀಕ್ಷೆ ಪೂರೈಸಲು ಸ್ಪಷ್ಟ ಸಂವಹನ ಅಗತ್ಯ. ವ್ಯವಹಾರ ನಡೆಸುವವರಿಗೆ ಗ್ರಾಹಕರಿಂದ ಬಂದ ಪ್ರತಿಕ್ರಿಯೆ ಮುಂದಿನ ಯೋಜನೆಗೆ ಮಾರ್ಗದರ್ಶಿ ಆಗುತ್ತದೆ. ಫ್ರೀಲಾನ್ಸರ್‌ಗಳಿಗೆ ಹೊಸ ಪ್ರಾಜೆಕ್ಟ್‌ಗಳ ವಿಚಾರಣೆ ಆತ್ಮವಿಶ್ವಾಸ ಹೆಚ್ಚಿಸುತ್ತದೆ.
ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2):
ಈ ದಿನ ಹೊಸ ಅವಕಾಶಗಳು ನಿಮ್ಮನ್ನು ಹುಡುಕಿ ಬರುತ್ತವೆ. ಉದ್ಯೋಗಸ್ಥರು ತಮ್ಮ ಕೆಲಸದಲ್ಲಿ ಹೊಸ ಪ್ರಯತ್ನಗಳಿಂದ ಮೆಚ್ಚುಗೆಯನ್ನು ಪಡೆಯುತ್ತಾರೆ. ವ್ಯವಹಾರಸ್ಥರಿಗೆ ಹೊಸ ಗ್ರಾಹಕರು ಹಾಗೂ ಒಪ್ಪಂದಗಳಿಂದ ಲಾಭ ಕಾಣಲಿದೆ. ವಿದ್ಯಾರ್ಥಿಗಳು ಹೊಸ ಪಾಠವನ್ನು ಅರ್ಥ ಮಾಡಿಕೊಳ್ಳಲು ಸುಲಭವಾಗುತ್ತದೆ. ಫ್ರೀಲಾನ್ಸರ್‌ಗಳಿಗೆ ಸೃಜನಾತ್ಮಕ ಯೋಜನೆಗಳಲ್ಲಿ ಯಶಸ್ಸು ಸಿಗುತ್ತದೆ. ಕುಟುಂಬದಲ್ಲಿ ಸಂಬಂಧಗಳು ಬಲಗೊಳ್ಳುತ್ತವೆ, ಹಿರಿಯರ ಮಾರ್ಗದರ್ಶನ ಉಪಯುಕ್ತವಾಗಲಿದೆ. ಪ್ರೀತಿಯ ಸಂಬಂಧಗಳಲ್ಲಿ ಪರಸ್ಪರ ನಂಬಿಕೆಯಿಂದ ವಿಶ್ವಾಸವನ್ನು ಗಟ್ಟಿ ಆಗುತ್ತದೆ.
ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3):
ಈ ದಿನ ನಿಮ್ಮ ತೀಕ್ಷ್ಣ ಅಭಿಪ್ರಾಯ ಮತ್ತು ವಿಶ್ಲೇಷಣಾ ಶಕ್ತಿಯು ವಿವಿಧ ಕ್ಷೇತ್ರದಲ್ಲಿ ಪ್ರಮುಖ ಅವಕಾಶಗಳನ್ನು ತರುತ್ತದೆ. ಉದ್ಯೋಗಸ್ಥರು ಹೊಸ ಯೋಜನೆಗಳೊಂದಿಗೆ ಮೆಚ್ಚುಗೆಯನ್ನು ಪಡೆಯುತ್ತಾರೆ. ವ್ಯವಹಾರಸ್ಥರು ಹೊಸ ಒಪ್ಪಂದಗಳು ಮತ್ತು ಗ್ರಾಹಕರ ವಿಶ್ವಾಸದಿಂದ ಹೆಚ್ಚಿನ ಆದಾಯದ ಮೂಲ ಹಾಗೂ ಲಾಭ ಪಡೆಯುತ್ತಾರೆ. ವಿದ್ಯಾರ್ಥಿಗಳು ಹೊಸ ವಿಷಯಗಳನ್ನು ಅರ್ಥ ಮಾಡಿಕೊಳ್ಳಲು ಸುಲಭವಾಗುತ್ತದೆ. ಫ್ರೀಲಾನ್ಸರ್‌ಗಳು ಕಠಿಣ- ಸವಾಲು ಎನಿಸಿದ ಪ್ರಾಜೆಕ್ಟ್‌ಗಳಲ್ಲಿ ಯಶಸ್ಸು ಪಡೆಯುತ್ತಾರೆ. ಕುಟುಂಬದಲ್ಲಿ ಹಿರಿಯರ ಮಾರ್ಗದರ್ಶನದಿಂದ ಸಮಸ್ಯೆಗಳು ಪರಿಹಾರವಾಗುತ್ತವೆ.
ಲೇಖನ- ಸ್ವಾತಿ ಎನ್.ಕೆ.
