Horoscope Today 14 January: ಇಂದು ಈ ರಾಶಿಯವರ ಖರ್ಚುಗಳಲ್ಲಿ ಇಳಿಕೆ
ಇಂದು ಭೋಗಿ ಹಬ್ಬವನ್ನು ಆಚರಿಸಲಾಗುತ್ತಿದ್ದು, ಇದು ಮಕರ ಸಂಕ್ರಾಂತಿಯ ಮುನ್ನಾ ದಿನದ ಹಬ್ಬವಾಗಿದೆ. ಈ ದಿನ ಮನೆಯಲ್ಲಿನ ಅನುಪಯುಕ್ತ ವಸ್ತುಗಳನ್ನು ದಹಿಸಿ ನಕಾರಾತ್ಮಕ ಶಕ್ತಿಯನ್ನು ದೂರ ಮಾಡುವ ಸಂಪ್ರದಾಯವಿದೆ. ಅಲ್ಲದೆ, ಇಂದು ಮಧ್ಯಾಹ್ನ 3 ಗಂಟೆ 13 ನಿಮಿಷಕ್ಕೆ ರವಿ ಗ್ರಹವು ಧನುಸ್ಸು ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುವುದರೊಂದಿಗೆ ಧನುರ್ಮಾಸ ಪೂಜೆ ಸಂಪನ್ನಗೊಳ್ಳುತ್ತದೆ. ನಾಳೆಯಿಂದ ಉತ್ತರಾಯಣ ಪುಣ್ಯಕಾಲ ಪ್ರಾರಂಭವಾಗಲಿದೆ. ಚಂದ್ರನು ವೃಶ್ಚಿಕ ರಾಶಿಯ ಅನುರಾಧ ನಕ್ಷತ್ರದಲ್ಲಿ ಸಂಚರಿಸಲಿದ್ದಾನೆ ಎಂದು ಡಾ. ಬಸವರಾಜ ಗುರೂಜಿ ಹೇಳಿದ್ದಾರೆ.
ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು 14 ಜನವರಿ 2026 ರ ದ್ವಾದಶ ರಾಶಿಗಳ ಫಲಾಫಲವನ್ನು ಪ್ರಸ್ತುತಪಡಿಸಿದ್ದಾರೆ. ಈ ದಿನವು ಬುಧವಾರವಾಗಿದ್ದು, ವಿಶ್ವಾವಸುನಾಮ ಸಂವತ್ಸರ, ದಕ್ಷಿಣಾಯನ, ಪುಷ್ಯ ಮಾಸ, ಕೃಷ್ಣಪಕ್ಷ, ಏಕಾದಶಿ ಮತ್ತು ಅನುರಾಧ ನಕ್ಷತ್ರದಲ್ಲಿದೆ.