Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಮಾರ್ಚ್ 5ರ ದಿನಭವಿಷ್ಯ

|

Updated on: Mar 05, 2023 | 5:03 AM

ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಮಾರ್ಚ್ 5ರ ಭಾನುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಮಾರ್ಚ್ 5ರ ದಿನಭವಿಷ್ಯ
ಪ್ರಾತಿನಿಧಿಕ ಚಿತ್ರ
Image Credit source: istockphoto.com
Follow us on

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಮಾರ್ಚ್ 5ರ ಭಾನುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ಪಾರ್ಟಿ ಅಥವಾ ಔತಣ ಕೂಟಗಳಿಗೆ ಆಹ್ವಾನ ಬರುವ ಸಾಧ್ಯತೆ ಇದೆ. ಬಹಳ ಜನ ಇರುವ ಕಡೆ ನೀವಿದ್ದೀರಿ ಅಂತಾದರೆ ನಿಮಗೆ ಗೊತ್ತಿಲ್ಲದ ಅಥವಾ ಅರೆಬರೆ ಮಾಹಿತಿ ಇರುವ ಸಂಗತಿಗಳ ಬಗ್ಗೆ ಮಾತನಾಡಬೇಡಿ. ಇನ್ನು ಗ್ಯಾಜೆಟ್, ಮೊಬೈಲ್ ಅಥವಾ ಲ್ಯಾಪ್ ಟಾಪ್ ರಿಪೇರಿಗಾಗಿ ಖರ್ಚು ಮಾಡಬೇಕಾಗುತ್ತದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಒತ್ತಡದಿಂದ ಕೂಡಿರುವಂಥ ದಿನ ಇದಾಗಿರಲಿದೆ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ಈ ದಿನ ನಿಮಗೆ ಬಹಳ ಮೂಡ್‌ ಸ್ವಿಂಗ್‌ಗಳಿರುತ್ತವೆ. ಒಂದು ವೇಳೆ ಈಗಾಗಲೇ ಮಾನಸಿಕ ಸಮಸ್ಯೆಗಳು ಇದ್ದಲ್ಲಿ ಪರಿಸ್ಥಿತಿ ಉಲ್ಬಣಿಸುವ ಸಾಧ್ಯತೆಗಳಿರುತ್ತವೆ. ಯಾವುದಾದರೂ ನಿಯಮಿತವಾದ ಔಷಧಗಳನ್ನು ತೆಗೆದುಕೊಳ್ಳುತ್ತಿದ್ದಲ್ಲಿ ಅದನ್ನು ಯಾವ ಕಾರಣಕ್ಕೂ ಮರೆಯದಿರಿ. ಒಂದು ವೇಳೆ ಈಗಿನ ವೈದ್ಯರಿಗಿಂತ ಬೇರೆಯವರಲ್ಲಿ ತೆರಳಬೇಕು ಎಂದಾದಲ್ಲಿ ಒಂದಕ್ಕೆ ಎರಡು ಬಾರಿ ಆಲೋಚನೆ ಮಾಡಿ. ಪ್ರಯತ್ನಪಟ್ಟಾದರೂ ಸ್ವಲ್ಪ ಸಮಯ ಧ್ಯಾನ ಮಾಡಿ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ನಿಮ್ಮ ತಾಳ್ಮೆಗೆ ಈ ದಿನ ಪರೀಕ್ಷೆ ಇರಲಿದೆ. ಹೇಳಿದ್ದನ್ನೇ ಅದೆಷ್ಟು ಸಲ, ಅದೆಷ್ಟು ಜನರ ಮುಂದೆ ಹೇಳಬೇಕು ಎಂದು ಸಿಟ್ಟಾಗಬೇಡಿ. ಇದು ನಿಮ್ಮ ಸಾಮರ್ಥ್ಯದ ಪರೀಕ್ಷೆ ಅಲ್ಲ, ಅದೃಷ್ಟದ ಪರೀಕ್ಷೆ. ಆದ್ದರಿಂದ ತಾಳ್ಮೆ ಇರಲಿ. ಮನೆಯ ದುರಸ್ತಿ ಮಾಡುವ ಸಲುವಾಗಿ ಸಂಬಂಧಪಟ್ಟವರನ್ನು ಕರೆಸಿ, ಮಾತನಾಡುವ ಅವಕಾಶಗಳಿವೆ. ಈ ದಿನ ನಿಮ್ಮ ವಾಟ್ಸಾಪ್ ಡಿಪಿಯಲ್ಲಾಗಲೀ ಅಥವಾ ಸ್ಕ್ರೀನ್ ಸೇವರ್ ಆಗಿಯಾಗಲೀ ವೆಂಕಟೇಶ್ವರನ ಚಿತ್ರವನ್ನು ಹಾಕಿಕೊಳ್ಳಿ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ಸೈಟು, ಮನೆ ಖರೀದಿ ಮಾಡಬೇಕು ಎಂದು ಬಹಳ ಸಮಯದಿಂದ ಪ್ರಯತ್ನ ಮಾಡುತ್ತಿರುವವರಿಗೆ ಈಗ ಮನಸ್ಸಿಗೆ ಹಿಡಿಸುವಂಥ ಸ್ಥಳ ಅಥವಾ ಮನೆ ಕಂಡುಬರಲಿದೆ. ದೈಹಿಕ ಆಯಾಸ ಹೆಚ್ಚಾಗಲಿದೆ, ಲಾಭದ ಪ್ರಮಾಣದಲ್ಲೂ ಕಡಿಮೆ ಆಗುವ ಸಾಧ್ಯತೆಗಳಿವೆ. ವೃತ್ತಿನಿರರಿಗೆ ಹೆಚ್ಚುವರಿ ಆದಾಯ ಮೂಲಗಳು ದೊರೆಯಲಿವೆ. ಪಿತ್ರಾರ್ಜಿತ ಆಸ್ತಿ ವ್ಯಾಜ್ಯಗಳು ಇದ್ದಲ್ಲಿ ಸಂಧಾನದ ಮೂಲಕ ಬಗೆಹರಿಸಿಕೊಳ್ಳುವುದಕ್ಕೆ ಅವಕಾಶ ಸಿಗಲಿದೆ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ಈ ದಿನ ನಿಮ್ಮಂತೆ ನೀವಿದ್ದರೆ ಸಾಕು. ಏನೋ ಮಹತ್ತರವಾದದ್ದು ಸಂಭವಿಸಲಿದೆ. ಅದು ಕೂಡ ಸಂಬಂಧದ ವಿಷಯದಲ್ಲಿ. ಇದರಿಂದ ನಿಮ್ಮ ಮನಸ್ಸಿಗೂ ಸಂತೋಷ ಆಗಲಿದೆ. ಗೊಂದಲಗಳು ಪರಿಹಾರ ಆಗುತ್ತದೆ. ಪ್ರೀತಿ- ಸ್ನೇಹ ಇನ್ನಷ್ಟು ಗಟ್ಟಿ ಆಗುತ್ತದೆ. ನೀವು ಮಾಡಬೇಕಾದ್ದೆಲ್ಲ ಇಷ್ಟೇ, ಬಿಗುಮಾನ ಬಿಡಿ, ಮುಕ್ತ ಮನಸ್ಸಿನಿಂದ ಇರಿ. ಮನರಂಜನೆಗಾಗಿ, ರೆಸ್ಟೋರೆಂಟ್ ಇಂಥವುಗಳಿಗಾಗಿ ಖರ್ಚು ಮಾಡಲಿದ್ದೀರಿ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ಮನರಂಜನೆ, ರೆಸ್ಟೋರೆಂಟ್, ಹೋಟೆಲ್, ಪ್ರವಾಸ ಇಂಥದ್ದಕ್ಕೆ ಹೆಚ್ಚಿನ ಖರ್ಚು ಆಗಲಿದೆ. ಸ್ನೇಹಿತರು, ಸಂಬಂಧಿಗಳ ವಾಹನವನ್ನು ಬಳಸುವ ಆಲೋಚನೆ ಇದ್ದಲ್ಲಿ ಈ ದಿನ ಮಾಡದಿರುವುದು ಉತ್ತಮ. ಪ್ರೇಮಿಗಳಿಗೆ ಈ ದಿನ ಸವಾಲಿನಿಂದ ಕೂಡಿರುತ್ತದೆ. ಮನೆಯಲ್ಲಿ ನಿಮ್ಮ ಪ್ರೀತಿ ವಿಷಯ ಮೂರನೇ ವ್ಯಕ್ತಿಗಳಿಂದ ಗೊತ್ತಾಗಿ, ಕೂಗಾಟ- ಕಿರುಚಾಟಕ್ಕೆ ಕಾರಣ ಆಗಬಹುದು. ಅಲರ್ಜಿ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ಈ ದಿನ ಪಾರ್ಟಿಗಳಲ್ಲಿ ಭಾಗೀ ಆಗುವುದಕ್ಕೆ ನಿಮ್ಮನ್ನು ಕರೆಯಲಿದ್ದಾರೆ. ಪರಿಚಯಗಳು, ಹೊಸ ಹೊಸ ಜನರ ಸಂಪರ್ಕ ನಿಮ್ಮ ಪಾಲಿಗೆ ಒದಗಿ ಬರಲಿದೆ. ವಿದೇಶಗಳಿಗೆ ಯಾವುದಾದರೂ ಟ್ರಾನ್ಸಿಷನ್‌ಗೆ ಹೋಗಬೇಕೆಂದಿರುವವರಿಗೆ ಒಂದಿಲ್ಲೊಂದು ನಿರಾಶೆ ಆಗುವಂಥ ವರ್ತಮಾನ ಬರಬಹುದು. ಆದರೆ ಇದು ತಾತ್ಕಾಲಿಕ ಗೊಂದಲ ಅಷ್ಟೇ ಆಗಿರುತ್ತದೆ. ಯಾರ ಮೇಲೂ ಸಿಟ್ಟಾಗಬೇಡಿ. ಕಣ್ಣಿನ ಸಮಸ್ಯೆಗಳು ಕಾಡಬಹುದು.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ಈ ದಿನ ಎಲ್ಲರ ಮೇಲೂ ನಂಬಿಕೆ ಕಳೆದುಕೊಳ್ಳುವಂಥ ಸನ್ನಿವೇಶ ಎದುರಾಗುತ್ತದೆ. ಏಕಾಂಗಿ ಆಗಿಬಿಟ್ಟಿರೇನೋ ಎಂದು ಬಲವಾಗಿ ಅನಿಸಿಕೆ ಮೂಡುತ್ತದೆ. ಕ್ರಿಯೇಟಿವ್ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಪದೋನ್ನತಿಯ ಸೂಚನೆ ದೊರೆಯಲಿದೆ. ಹೊಸದಾಗಿ ಕೆಲಸಗಳನ್ನು ನೀಡುತ್ತಿದ್ದಾರೆ ಎಂಬ ಕಾರಣಕ್ಕೆ ಸಿಟ್ಟನ್ನು ಮಾಡಿಕೊಳ್ಳದಿರಿ, ಏಕೆಂದರೆ ಭವಿಷ್ಯದಲ್ಲಿ ಇದರಿಂದ ನಿಮಗೆ ಅನುಕೂಲ ಇದೆ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ನೀವು ಯಾರನ್ನೋ ಸ್ಪರ್ಧಿ ಅಂತ ಅಂದುಕೊಂಡು ಬಿಟ್ಟಿದ್ದರೆ ಅದನ್ನು ತಲೆಯಿಂದ ತೆಗೆದು ಹಾಕಬೇಕಾದ ದಿನ ಇದು. ಏಕೆಂದರೆ, ದೊಡ್ಡ ಅವಕಾಶ ನಿಮ್ಮೆದುರು ಕಾಯುತ್ತಾ ಇದೆ. ಆ ಕಡೆಗೆ ಲಕ್ಷ್ಯ ನೀಡಬೇಕು. ಸಣ್ಣ- ಪುಟ್ಟ ವಿಚಾರಗಳು, ಅನುಮಾನಗಳು, ಕೀಳರಿಮೆ ನಿಮ್ಮ ಅವಕಾಶದಿಂದ ದೂರಕ್ಕೆ ತಳ್ಳಬಾರದು. ಈ ದಿನ ವಿಷ್ಣು ಸಹಸ್ರನಾಮ ಶ್ರವಣ ಅಥವಾ ಪಠಣ ಮಾಡಿ, ಇದರಿಂದ ಮನಸ್ಸಿಗೆ ನೆಮ್ಮದಿ ದೊರೆಯಲಿದೆ.

ಲೇಖನ- ಎನ್‌.ಕೆ.ಸ್ವಾತಿ