Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಮಾರ್ಚ್ 24ರ ದಿನಭವಿಷ್ಯ

ಮಾರ್ಚ್ 24ರ ಸಂಖ್ಯಾಶಾಸ್ತ್ರ ದಿನಭವಿಷ್ಯ ಇಲ್ಲಿದೆ. ಜನ್ಮಸಂಖ್ಯೆ 1, 2 ಮತ್ತು 3ರವರು ಇಂದು ಹೇಗೆ ಇರುತ್ತಾರೆ, ಯಾವ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಎಂಬುದರ ಕುರಿತು ವಿವರವಾದ ಮಾಹಿತಿ ನೀಡಲಾಗಿದೆ. ಮಾನಸಿಕ ಶಾಂತಿ ಮತ್ತು ನೆಮ್ಮದಿಗಾಗಿ ಮನೆಯ ಈಶಾನ್ಯ ಮೂಲೆಯಲ್ಲಿ ನೀರು ತುಂಬಿಸಿದ ಪಾತ್ರೆಯನ್ನು ಇರಿಸಲು ಸಲಹೆ ನೀಡಲಾಗಿದೆ. ನಿಮ್ಮ ದಿನವನ್ನು ಉತ್ತಮಗೊಳಿಸಲು ಈ ಭವಿಷ್ಯವನ್ನು ಓದಿ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಮಾರ್ಚ್ 24ರ ದಿನಭವಿಷ್ಯ
ಸಂಖ್ಯಾಶಾಸ್ತ್ರ
Image Credit source: Google
ಸ್ವಾತಿ ಎನ್​ಕೆ Edited By:

Updated on: Mar 24, 2026 | 1:35 AM

ಜನ್ಮಸಂಖ್ಯೆಗೆ 1, 2, 3ರ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆ ಆಧಾರದಲ್ಲಿ ಮಾರ್ಚ್ 24ರ ಮಂಗಳವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ಮಕ್ಕಳ ಆರೋಗ್ಯ, ಶಿಕ್ಷಣ, ವ್ಯಾಪಾರ- ವ್ಯವಹಾರಗಳಿಗೆ ಬೇಕಾದ ಅನುಕೂಲ ಮಾಡಿಕೊಡುವುದಕ್ಕೆ ಹೆಚ್ಚಿನ ಶ್ರಮವನ್ನು ಹಾಕಲಿದ್ದೀರಿ. ಸಮಾಧಾನದಿಂದ ಕೆಲವು ಮುಖ್ಯವಾದ ನಿರ್ಧಾರಗಳನ್ನು ತೆಗೆದುಕೊಳ್ಳಲಿದ್ದೀರಿ. ಈ ದಿನ ನಿಮ್ಮ ಪಾಲಿಗೆ ಹೊಸ ರೀತಿಯಲ್ಲಿ ಇರುತ್ತದೆ. ಇಲ್ಲಿಯ ತನಕ ನೀವು ಮಾಡಿರದ ಕೆಲಸವೊಂದನ್ನು ಆರಂಭಿಸುವ ಅವಕಾಶಗಳು ಕಾಣುತ್ತಿವೆ. ಪ್ರಭಾವಿ ವ್ಯಕ್ತಿಯೊಬ್ಬರ ಪರಿಚಯದಿಂದ ನಿಮ್ಮ ಆದಾಯದಲ್ಲಿ ದೊಡ್ಡ ಮಟ್ಟದ ಏರಿಕೆಯನ್ನು ನಿರೀಕ್ಷೆ ಮಾಡಬಹುದು.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ಪ್ರಯಾಣದಲ್ಲಿ ಶುಭ- ಲಾಭವನ್ನು ಕಾಣಲಿದ್ದೀರಿ. ಯಾವುದೇ ವ್ಯಕ್ತಿ, ವಿಷಯದ ಬಗ್ಗೆ ಪೂರ್ವಗ್ರಹವನ್ನು ಇರಿಸಿಕೊಳ್ಳಬೇಡಿ. ನಿಮಗೆ ಗೊತ್ತಿರುವ ವಿಚಾರವನ್ನು ಹೇಳುವುದಕ್ಕಾಗಲೀ ಮಾತನಾಡುವುದಕ್ಕಾಗಲೀ ಹಿಂಜರಿಕೆ ಮಾಡದಿರುವುದು ಉತ್ತಮ. ಕೆಲ ಸಂದರ್ಭದಲ್ಲಿ ಒತ್ತಡ ಎನಿಸುವಂತೆ ಕೆಲ ಮಾತುಗಳನ್ನು ಕೇಳಿಸಿಕೊಳ್ಳಬೇಕಾಗುತ್ತದೆ. ಆದರೆ ಹಲವು ಬದಲಾವಣೆಗೆ ಈ ದಿನ ನಾಂದಿ ಹಾಡಲಿದೆ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ಸಭ್ಯತೆ ಮೀರಿದ ಕೆಲವು ಪದಗಳನ್ನು ಇತರರು ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ಬಳಸುವ ಸಾಧ‌್ಯತೆ ಇದೆ. ಇದರಿಂದ ಜಗಳ- ಕದನಗಳು ಆಗಬಹುದು. ಸಣ್ಣ- ಪುಟ್ಟ ವಿಚಾರಗಳಿಗಾದರೂ ದಂಪತಿ ಮಧ್ಯೆ ಮನಸ್ತಾಪ ಕಾಣಿಸಿಕೊಳ್ಳಬಹುದು. ಇನ್ನು ಪ್ರೇಮಿಗಳ ಮಧ್ಯೆ ಸಹ ಕಮ್ಯುನಿಕೇಷನ್ ಗ್ಯಾಪ್ ಆಗುವುದರಿಂದ ದೊಡ್ಡ ಜಗಳವೇ ಆಗುವ ಸಾಧ್ಯತೆಗಳಿವೆ. ಎಂಥದ್ದೇ ಸನ್ನಿವೇಶ ಎದುರಾದರೂ ತಾಳ್ಮೆ- ಸಂಯಮದಿಂದ ವರ್ತಿಸಿ.

ಲೇಖನ- ಸ್ವಾತಿ ಎನ್.ಕೆ.

Swathi NK

ಸ್ವಾತಿ ಎನ್.ಕೆ. ಮೂಲತಃ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ನೆಂಪೆ ಎಂಬ ಗ್ರಾಮದವರು. ಜ್ಯೋತಿಷ್ಯ, ಸಂಖ್ಯಾಶಾಸ್ತ್ರ, ಮಲೆನಾಡಿನ ಅಡುಗೆ ಮಾಡುವ ಪದ್ಧತಿ ಇವೆಲ್ಲ ಆಸಕ್ತಿ, ಅಚ್ಚುಮೆಚ್ಚು. ಸಮುದ್ರದ ಪರಿಸರಕ್ಕೆ ಪ್ರವಾಸ ಹೋಗುವುದು, ಹೊಸ ಗ್ಯಾಜೆಟ್ ಗಳ ಬಗ್ಗೆ ತಿಳಿಯುವುದು ತುಂಬ ಇಷ್ವವಾದ ಸಂಗತಿ. ಪಡೆದಿರುವುದು ಕಾಮರ್ಸ್ ಡಿಗ್ರಿ. ಅಲ್ಪ ಕಾಲ ಅಲ್ಲಿಲ್ಲಿ ಕೆಲಸ ಮಾಡಿದ ಅನುಭವ ಜತೆಗಿದೆ. ಉಳಿದಂತೆ ಬೆಂಗಳೂರಲ್ಲಿ ಸದ್ಯದ ವಾಸ.

Follow Us