ದಿನ ಭವಿಷ್ಯ: ಇಂದು ಈ ರಾಶಿಯವರ ಹೊಸ ಯೋಜನೆಗೆ ಸಹೋದ್ಯೋಗಿಗಳ ಸಹಮತ

ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ಶರತ್ ಋತುವಿನ ಆಶ್ವಯುಜ ಮಾಸದ ಶುಕ್ಲ ಪಕ್ಷದ ತ್ರಯೋದಶೀ ತಿಥಿಯ ಶನಿವಾರದಂದು ವಿಶ್ವಾಸಕ್ಕೆ ಘಾಸಿ, ಪ್ರಚೋದನಕಾರಿ ಮಾತು, ಅಧಿಕಾರದ ದುರುಪಯೋಗ, ಹಳೆಯ ವಸ್ತುಗಳ ಬಳಕೆ, ಯೋಜನೆ, ವಾಗ್ವಾದ, ಮಕ್ಕಳ ಚಿಂತೆ ಇವೆಲ್ಲ ಈ ದಿನದ ಭವಿಷ್ಯ.

ದಿನ ಭವಿಷ್ಯ: ಇಂದು ಈ ರಾಶಿಯವರ ಹೊಸ ಯೋಜನೆಗೆ ಸಹೋದ್ಯೋಗಿಗಳ ಸಹಮತ
ಭವಿಷ್ಯ
Image Credit source: Getty images
Edited By:

Updated on: Oct 24, 2026 | 1:04 AM

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ಶರತ್, ಚಾಂದ್ರಮಾಸ : ಆಶ್ವಯುಜ, ಸೌರ ಮಾಸ : ತುಲಾ, ಮಹಾನಕ್ಷತ್ರ : ಚಿತ್ರಾ, ವಾರ : ಶನಿ, ಪಕ್ಷ : ಶುಕ್ಲ, ತಿಥಿ : ತ್ರಯೋದಶೀ, ನಿತ್ಯನಕ್ಷತ್ರ : ರೇವತೀ, ಯೋಗ : ವ್ಯಾಘಾತ, ಕರಣ : ಗರಜ, ಸೂರ್ಯೋದಯ – 06 – 12 am, ಸೂರ್ಯಾಸ್ತ – 05 – 55 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 09:08 – 10:36, ಯಮಗಂಡ ಕಾಲ 13:32 – 14:59, ಗುಳಿಕ ಕಾಲ 06:12 – 07:40.

ಮೇಷ ರಾಶಿ: ನಿಮ್ಮ ಕಾರ್ಯವು ಆಗಬೇಕಾದರೆ ತಿರುಗಾಟವನ್ನು ಮಾಡುವುದು ಅನಿವಾರ್ಯ. ಸಂಗಾತಿಗೆ ಯಾವುದಾದರೂ ರೀತಿಯಲ್ಲಿ ಸಂತೋಷವಾಗುವಂತೆ ನೋಡಿಕೊಳ್ಳುವಿರಿ. ಇಬ್ಬರ ನಡುವೆ ವಾಗ್ವಾದವೂ ಆಗಲಿದೆ. ನೀವು ಇಂದು ಯಾವ ವಿಚಾರವನ್ನು ಮಾತನಾಡುವುದಿದ್ದರೂ ಎಚ್ಚರಿಕೆಯಿಂದ ಮಾತನಾಡಿ. ಬಂಧುಗಳ ಜೊತೆ ಹೇಳಬೇಕಾದ ವಿಷಯವನ್ನು ಪ್ರಸ್ತಾಪಿಸಲು ಸಂದರ್ಭ ಕೂಡಿಬರದು. ಸೋಲಿನ ಮೆಟ್ಟಿಲು ನಿಮಗೆ ಕಷ್ಟವಾಗದು.

ವೃಷಭ ರಾಶಿ: ಉತ್ತಮ ಸಮಯದ ನಿರೀಕ್ಷೆಯಲ್ಲಿ ಇದ್ದರೂ ನಿಮಗೆ ಸಮಾಧಾನ ಇರದು. ನಿಮ್ಮಲ್ಲಿ ಇರುವ ವಸ್ತುಗಳನ್ನು ನೀವು ಯಾರಿಗಾದರೂ ನೀಡುವಿರಿ. ಸಿಟ್ಟನ್ನು ಮಾಡಬಾರದು ಎಂದುಕೊಂಡರೂ ಸಂದರ್ಭವು ನಿಮ್ಮ ನಿರ್ಧಾರವನ್ನು ಬದಲಿಸುವುದು. ಮಕ್ಕಳಿಂದ ನೆಮ್ಮದಿಯು ಸಿಗುವುದು. ನಿಮ್ಮನ್ನು ಅಲ್ಪಜ್ಞರೆಂದೇ ಭಾವಿಸುವರು. ವ್ಯವಹಾರವನ್ನು ಲಾಭದಾಯಕವನ್ನಾಗಿ ಮಾಡಿಕೊಳ್ಳಲು ನೀವು ಸೋಲಬಹುದು. ನಿಮ್ಮ ಗುರಿಯನ್ನು ತಲುಪಲು ನಿಮಗೆ ವಿಘ್ನಗಳು ಬರಬಹುದು.

ಮಿಥುನ ರಾಶಿ: ವೈಯಕ್ತಿಕ‌ ಕೆಲಸಗಳು ಬಹಳಷ್ಟು ಇದ್ದು ಅದನ್ನು ಮಾಡಲು ನಿಮಗೆ ಸಮಯವು ಸಿಗದು. ಮಿತ್ರರ ಸಹಾಯದಿಂದ ನಿಮಗೆ ಉತ್ತಮ‌ ಲಾಭವು ಸಿಗಲಿದೆ. ಎಲ್ಲರೆದುರು ನಿಮಗೆ ಅಪಮಾನವಾಗುವ ಸಂದರ್ಭವು ಬರಬಹುದು. ಇನ್ನೊಬ್ಬರ ನೋವನ್ನು ನೋಡಿ ಸುಮ್ಮನೆ ಇರಲಾಗದು. ನಿಮ್ಮ ಹೇಳಿಕೆಗಳು ಕಾನೂನು ಚೌಕಟ್ಟಿನಲ್ಲಿ ಇರಲಿ. ಯಾರ‌ ಮಾತನ್ನೂ ಕೇಳದೇ ನಿಮ್ಮದೇ ದಾರಿಯಲ್ಲಿ ನಡೆಯುವಿರಿ. ನಿಮ್ಮ ಕಾರ್ಯಕ್ಷೇತ್ರದಲ್ಲಿ ಉತ್ತಮ ಪ್ರಗತಿ ಇರಲಿದೆ.

ಕರ್ಕಾಟಕ ರಾಶಿ: ನಿಮ್ಮ ದೈಹಿಕ‌ ಸಮಸ್ಯೆಯನ್ನು ಮುಚ್ಚಿಟ್ಟು ಪ್ರಯೋಜನವಾಗದು. ಅವಿವಾಹಿತರಿಗೆ ಇಂದು ವಿವಾಹಕ್ಕೆ ಯೋಗ್ಯವಾದ ಮಾತುಗಳು ಕೇಳಿಸಬಹುದು. ವಿದ್ಯಾರ್ಥಿಗಳ ಪ್ರತಿಭೆಯನ್ನು ಹೊರ ಹಾಕಲು ಸೂಕ್ತ ಸ್ಥಳವು ಸಿಗಬಹುದು. ನಿಮಗೆ ಇಷ್ಟವಾದ ವಿಚಾರವನ್ನು ಬೇಗ ಗ್ರಹಿಸುವಿರಿ. ಅಪರಿಚಿತರು ನಿಮ್ಮ ಉದ್ಯೋಗಕ್ಕೆ ಸಂಬಂಧಿಸಿದಂತೆ ಸಲಹೆಯನ್ನು ಕೊಡುವರು. ಪ್ರೀತಿಪಾತ್ರರ ಭೇಟಿಯು ನಿಮಗೆ ನೆಮ್ಮದಿಯನ್ನು ನೀಡಬಹುದು. ಉದ್ಯೋಗದ ಕಾರಣ ಓಡಾಟವು ಇರಬಹುದು.

ಸಿಂಹ ರಾಶಿ: ನಿಮ್ಮ ಬಂಧುಗಳ ಕಡೆಯಿಂದ ವಿವಾಹವು ಏರ್ಪಡಬಹುದು. ಪರಿಶ್ರಮಕ್ಕೆ ತಕ್ಕ ಫಲವನ್ನೂ ನೀವು ಅಪೇಕ್ಷಿಸುವಿರಿ. ನೀವು ಮಾಡುವ ಕಾರ್ಯದಲ್ಲಿ ಗೊಂದಲವಿದ್ದರೆ ಯಾರನ್ನಾದರೂ ಕೇಳಿ. ನಿಮ್ಮ ಅನುಕೂಲತೆಯನ್ನು ನೋಡಿಯೇ ಹೆಜ್ಜೆ ಇಡುವುದು ಉತ್ತಮ. ದುರಭ್ಯಾಸಗಳು ಸಹವಾಸದಿಂದ ಬರಬಹುದು. ಮನೆಗೆ ಇಂದು ವಿಳಂಬವಾಗಿ ಹೋಗುವಿರಿ. ದುರ್ಬಲ ದೇಹವನ್ನು ಊರ್ಜಿತ ಮಾಡಲು ಪ್ರಯತ್ನಿಸುವಿರಿ. ಮನೋರಂಜನೆಗೆ ಹಣವನ್ನು ಖರ್ಚು ಮಾಡುವಿರಿ.

ಕನ್ಯಾ ರಾಶಿ: ನಿಮ್ಮ ಉದ್ಯಮದಲ್ಲಿ ಆದ ನಷ್ಟದಿಂದ ಮನಸಿನೊಳಗೆ ಸಂಕಟಪಡುವಿರಿ. ಸುಲಭ ಮಾರ್ಗದಲ್ಲಿ ಆದಾಯವನ್ನು ಪಡೆಯುವ ಯೋಜನೆಯು ಯಶಸ್ವಿಯಾಗದು. ಸರ್ಕಾರಿ ಕೆಲಸಗಳು ಒತ್ತಡದಿಂದಾಗಿ ಮುಂದುವರಿಯುವುದು. ಇಂದಿನ ನಿಮ್ಮ ಕಾರ್ಯವು ನಿಮಗೆ ತೃಪ್ತಿಕೊಡದು. ವಾಹನಕ್ಕೆ ಸಂಬಂಧಿಸಿದ ವಿಚಾರದಲ್ಲಿ ಜಾಗರೂಕತೆ ಇರಲಿ. ಒಂದು ತೀರ್ಮಾನಕ್ಕೆ ಬರಲು ಹತ್ತು ಬಾರಿ ಯೋಚಿಸಿ. ಮಕ್ಕಳು ನಿಮ್ಮನ್ನು ಪ್ರೀತಿಸುವರು.

ತುಲಾ ರಾಶಿ: ನಿಮ್ಮ ಕಾರ್ಯದಕ್ಷತೆಗೆ ಜವಾಬ್ದಾರಿಗಳು ಬದಲಾಗಲಿವೆ. ಸ್ವಲ್ಪಮಟ್ಟಿಗೆ ಸಾಲವು ಮುಕ್ತಾಯವಾಗಿದ್ದರಿಂದ ಕುಟುಂಬದಲ್ಲಿ ಸೌಖ್ಯವು ಇರಲಿದೆ. ಎಲ್ಲ ಕೆಲಸಗಳೂ ಅಪೂರ್ಣವಾಗಿರುವುದು ನಿಮಗೆ ಕಿರಿಕಿರಿ ಆಗಲಿದೆ. ನಿಮ್ಮ ಕಾರ್ಯದ ಉದ್ದೇಶವು ಭಂಗವಾಗಬಹುದು. ಇಷ್ಟು ದಿನ‌ ಮನೆಯಿಂದಲೇ ಕೆಲಸ ಮಾಡುತ್ತಿದ್ದ ನಿಮಗೆ ಇಂದು ಕಛೇರಿಗೆ ಕರೆಯುವರು. ನಿಮ್ಮ ತುರ್ತು ಕಾರ್ಯಗಳನ್ನು ನೀವು ಬಿಡಬೇಕಾದೀತು. ಹಿರಿಯರ ಮಾತುಗಳೂ ನಿಮಗೆ ಸಿಟ್ಟು ತರಿಸಬಹುದು.

ವೃಶ್ಚಿಕ ರಾಶಿ: ನಿಮಗೆ ಸಿಗುವ ಸಾಮಾಜಿಕವಾಗಿ ಮನ್ನಣೆಯು ಅಧಿಕ ಕಾರ್ಯವನ್ನು ಮಾಡುವಂತೆ ಮಾಡುತ್ತದೆ. ಇಂದಿನ‌‌ ಎಲ್ಲ‌ ಕಾರ್ಯವನ್ನೂ ಒತ್ತಡದಿಂದಲೇ ಮಾಡಬೇಕಾದೀತು. ನೀವು ಏನಾದರೂ ಬದಲಾವಣೆಯನ್ನು ನಿಮ್ಮವರಿಂದ ನಿರೀಕ್ಷಿಸುವಿರಿ. ದೇಹ ಪೀಡೆಯು ಹೆಚ್ಚಾಗಲಿದ್ದು ಕಛೇರಿಗೆ ಹೋಗುವವರು ವಿರಾಮವನ್ನು ತೆಗೆದುಕೊಳ್ಳುವುದು ಉತ್ತಮ. ಮೌಕಿಕವಾಗಿ ನೀವು ಗೆಲ್ಲಬಹುದು, ಪ್ರಾಯೋಗಿಕವಾಗಿ ಇದು ಸುಲಭವಲ್ಲ. ನಿಮ್ಮ‌ ಸಾಮರ್ಥ್ಯಕ್ಕೆ ಕೊಟ್ಟ ಜವಾಬ್ದಾರಿಯು ಸಣ್ಣದಾಗಿರುವುದು.

ಧನು ರಾಶಿ: ಅನುಕಂಪದಿಂದ‌ ಕೊಡುವ ಯೋಚನೆಯನ್ನು ಮಾಡುವಿರಿ. ಆದರೆ ಅವರಿಂದ ಪಡೆಯಬೇಕಾದುದನ್ನು ಪಡೆಯಿರಿ. ಇಂದು ನಿಮ್ಮ ದಾಂಪತ್ಯದ ಬಿರುಕು ನ್ಯಾಯಾಲಯದ ಮೆಟ್ಟಿಲೇರಿಸುವುದು. ಸ್ಪರ್ಧೆಯಲ್ಲಿ ಗೆಲುವಿಗಾಗಿ ನಿಮ್ಮ ಶ್ರಮವು ವ್ಯರ್ಥವಾದೀತು. ಧಾರ್ಮಿಕ ವಿಷಯದಲ್ಲಿ ನಿಮಗೆ ಆಸಕ್ತಿಯು ಕಡಿಮೆ ಇರುವುದು. ನಿಮ್ಮ ಗೌರವಕ್ಕೆ ತೊಂದರೆಯಾಗುವ ಕಡೆ ನೀವು ಹೀಗುವುದು ಬೇಡ.‌ ಜನಸಾಮಾನ್ಯರ ಜೊತೆ ಬೆರೆಯುವುದು ನಿಮಗೆ‌ ಆಗದು.

ಮಕರ ರಾಶಿ: ನಿಮ್ಮ ಬೆನ್ನನ್ನೇ ನೀವು ತಟ್ಟಿಕೊಳ್ಳುವುದು ಔಚಿತ್ಯವಿಲ್ಲ. ಬೇಕಾದ ವಸ್ತುಗಳನ್ನು ಖರೀದಿಸುವ ಉತ್ಸಾಹದಲ್ಲಿ ಅನಗತ್ಯ ವಸ್ತುಗಳನ್ನು ಖರೀದಿಸುವಿರಿ. ಕಲಾವಿದರು ಹೆಚ್ಚಿನ ಪ್ರಶಂಸೆಗೆ ಪಾತ್ರರಾಗುವರು. ಯಾರೋ‌ ಮಾಡಬೇಕಾದ ಕೆಲಸವನ್ನು ನೀವು ಮಾಡುವಿರಿ. ನಿಮ್ಮ ಬೆನ್ನನ್ನು ನೋಡಲಾಗದಿದ್ದರೂ ಕಲ್ಪಿಸಿಕೊಳ್ಳಬಹುದು. ಕೆಲಸದ ಒತ್ತಡದಿಂದ ನಿಮಗೆ ಇಂದು ಆಯಾಸವಾಗಬಹುದು. ನಿಮ್ಮ ಖಾಸಗಿ ತನಕ್ಕೆ ತೊಂದರೆಯಾಗಲಿದೆ.

ಕುಂಭ ರಾಶಿ: ಸಜ್ಜನರ ಭೇಟಿಯಾಗುವ ಸಾಧ್ಯತೆ ಇದೆ. ಹೇಳಬೇಕಾದ‌ ವಿಚಾರವನ್ನು ನೀವು ಸರಿಯಾಗಿ ಹೇಳಿ.‌ ಬೇರೆಯವರನ್ನು ಗೊಂದಲಕ್ಕೆ ನೀವು ಸಿಕ್ಕಿಹಾಕಿಸುವುದು ಬೇಡ. ನಿಮ್ಮ ಕಾರ್ಯದಲ್ಲಿ ಮಗ್ನತೆಯು ಎಲ್ಲಿರಿಗೂ ಇಷ್ಟವಾಗುವುದು. ಸರಳವಾದ ಕೆಲಸಗಳನ್ನು ಮಾಡುವಿರಿ. ವಿರೋಧಿಗಳ ಮನಸ್ಸನ್ನು ವಶದಲ್ಲಿ ತಂದುಕೊಳ್ಳುವಿರಿ. ಆದಾಯಕ್ಕೆ ನಾನಾ ಮೂಲವನ್ನು ಆಯ್ಕೆ ಮಾಡಿಕೊಳ್ಳುವಿರಿ. ಮಾರಾಟದ ವಿಷಯದಲ್ಲಿ ಹಿನ್ನಡೆಯಾಗಲಿದೆ.

ಮೀನ ರಾಶಿ: ನೌಕರರ ಬಗ್ಗೆ ನಿಮಗೆ ಕಾಳಜಿ‌ ಇರುವುದು. ವ್ಯಾಪಾರವನ್ನು ಅಚ್ಚುಕಟ್ಟಾಗಿ ಮಾಡುವ ಕೌಶಲವು ನಿಮ್ಮದಾಗಲಿದೆ. ರಪ್ತು ವ್ಯವಹಾರವು ನಿಮಗೆ ಲಾಭದಾಯಕವಾಗಲಿದೆ. ಉದ್ಯಮಕ್ಕಾಗಿ ಅನುಭವಿ ಉದ್ಯಮಿಗಳನ್ನು ಇಂದು ಭೇಟಿಯಾಗಿ. ಭೂಮಿಯ ಖರೀದಿಗೆ ಸೂಕ್ತ ಸಮಯವು ಇದಾಗಿದೆ. ನಿಮ್ಮ ಬಗ್ಗೆ ಅತಿಯಾದ ಆತ್ಮವಿಶ್ವಾಸವು ಇರಲಿದ್ದು ಕೆಲವು ಕೆಲಸಗಳಿಗೆ ಇದು ತೊಡಕನ್ನು ತಂದೀತು. ಜೀವನದ ಹಾದಿಯಲ್ಲಿ ಹೆಚ್ಚು ಏರಿಳಿತಗಳು ಇರದೇ ಆರಾಮಾಗಿ ಹೋಗುವಿರಿ.

ಲೋಹಿತ್ ಹೆಬ್ಬಾರ್ – 8762924271 (what’s app only)

ಲೋಹಿತ ಹೆಬ್ಬಾರ್​, ಇಡುವಾಣಿ

ವಿದ್ವಾನ್​ ಲೋಹಿತ ಶರ್ಮಾ. ಸಾಗರ ಮೂಲದ ಇಡುವಾಣಿ ಗ್ರಾಮ. ವೇದ ಹಾಗೂ ಸಂಸ್ಕೃತ ಅಧ್ಯಯನ, ಜ್ಯೋತಿಷ್ಯದಲ್ಲಿ ವಿದ್ವತ್ತನ್ನು ಸಂಪಾದಿಸಿರುತ್ತಾರೆ. ಹಸ್ತಪ್ರತಿಶಾಸ್ತ್ರದಲ್ಲಿ ಡಿಪ್ಲೋಮಾ ಮಾಡಿರುತ್ತಾರೆ. ಜ್ಞಾನ-ವಿಜ್ಞಾನ ಅಧ್ಯಯನ ಕೇಂದ್ರ ಬೆಂಗಳೂರಿನಲ್ಲಿ ಸಂಶೋಧಕರಾಗಿ ಮೌಲ್ಯಶಿಕ್ಷಣ ಎನ್ನುವ ಪಠ್ಯವನ್ನು ಒಂದರಿಂದ ಹತ್ತನೇ ತರಗತಿಯ ಮಕ್ಕಳಿಗೆ ರಚಿಸಿದ್ದಾರೆ. ಧರ್ಮಭಾರತೀ, ತ್ರಿವಿಕ್ರಮ ಮುಂತಾದ ಮಾಸಪತ್ರಿಕೆಯಲ್ಲಿ ಸಂಪಾದಕನಾಗಿ ಕಾರ್ಯ ಮಾಡಿರುತ್ತಾರೆ. ಹಿತೋಪದೇಶ, ಸಂತಗೋರಕ್ಷನಾಥ, ಮಹರ್ಷಿ ಶಂಖಲಿಖಿತ ಗ್ರಂಥಗಳನ್ನು ಬರೆದಿದ್ದಾರೆ. ಅನೇಕ ಲೇಖನಗಳು, ಕಥೆಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಆಸಕ್ತಿಯ ವಿಷಯ ಸಂಗೀತ, ನಾಟಕ, ಓದು, ಬರಹ, ಚಾರಣ, ಡಿಜಿಟಲ್ ವಿನ್ಯಾಸ. ಸದ್ಯ ಶಿಕ್ಷಕನಾಗಿ ಕಾರ್ಯ.

Read More
Loading...
Unable to load recommendations.
Follow Us