ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ವಾರಭವಿಷ್ಯವನ್ನು (Weekly Horoscope) ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಮಾಹಿತಿಯೂ ಇದೆ. ಅಕ್ಟೋಬರ್ 08 ರಿಂದ 14 ರವರೆಗೆ ಯಾವ ರಾಶಿಯವರಿಗೆ ಯಾವ ಫಲ ಇದೆ? ಶುಭ-ಅಶುಭ ಇದೆಯಾ? ಎಂಬಿದ್ಯಾತಿ ಮಾಹಿತಿಯನ್ನು ತಿಳಿದುಕೊಳ್ಳಿ.
ಮೇಷ ರಾಶಿ: ಈ ವಾರ ನೀವು ಸೌಮ್ಯ ಸ್ವಭಾವದವರಂತೆ ತೋರುವಿರಿ. ನಿಮ್ಮ ನಡವಳಿಕೆಯು ಚರ್ಚೆಗೆ ಗ್ರಾಸವಾಗಬಹುದು. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ. ನಿಮ್ಮ ಕಾರ್ಯದಲ್ಲಿ ಶ್ರದ್ಧೆ ಇರಲಿದೆ. ಈ ವಾರ ಕೆಲಸದಲ್ಲಿ ಒತ್ತಡ ಸಾಕಷ್ಟು ಕಡಿಮೆಯಾಗುತ್ತದೆ. ಉದ್ಯೋಗ ಬದಲಾವಣೆಯ ಪ್ರಯತ್ನಗಳ ಬಗ್ಗೆ ಒಳ್ಳೆಯ ಮಾಹಿತಿ ಸಿಗಲಿದೆ. ಆಹಾರ ಮತ್ತು ವಿಹಾರಗಳಲ್ಲಿ ಎಚ್ಚರಿಕೆ ವಹಿಸುವುದು ಉತ್ತಮ. ದೀರ್ಘಕಾಲದಿಂದ ಕೆಲಸಕ್ಕೆ ಸಂಬಂಧಿಸಿದ ಪ್ರಯತ್ನಗಳನ್ನು ಮಾಡುತ್ತಿದ್ದರೆ, ನಿಮ್ಮ ಪ್ರಯತ್ನಗಳನ್ನು ಮತ್ತಷ್ಟು ಚುರುಕುಗೊಳಿಸಿ. ಈ ಸಮಯದಲ್ಲಿ ನೀವು ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ. ಹಣದ ವಿಷಯದಲ್ಲಿ ಈ ದಿನ ಮಿಶ್ರಫಲವಿದೆ. ಇತರರನ್ನು ಬಳ್ಸಿಕೊಳ್ಳುವುದು ಬೇಡ. ಸಂಗಾತಿಯ ಜೊತೆ ಸಂಬಂಧವು ಉತ್ತಮವಾಗಿರುತ್ತದೆ.
ವೃಷಭ ರಾಶಿ: ಈ ವಾರ ನೀವು ಒಳ್ಳೆಯ ಜನರ ಜೊತೆ ಸಂಪರ್ಕವನ್ನು ಸ್ಥಾಪಿಸುವಿರಿ. ಅವರಿಂದ ಕಾರ್ಯದಲ್ಲಿ ಯಶಸ್ಸು ಸಾಧಿಸಲು ನಿಮಗೆ ಸಹಾಯವಾಗುತ್ತದೆ. ನಿಮ್ಮ ಉಜ್ವಲ ಭವಿಷ್ಯಕ್ಕೆ ಹೊಸ ಸ್ನೇಹ ಸಹಕಾರಿಯಾಗಲಿದೆ. ವೃತ್ತಿ ಲಾಭದಾಯಕವಾಗಲಿದೆ. ನೀವು ಹಣಕಾಸಿನ ವ್ಯವಹಾರ ಮಾಡಲು ಇದು ಸೂಕ್ತವಾದ ಸಮಯ. ಎಲ್ಲ ಯೋಚನೆಗಳಿಗೂ ನೀವು ಕುಟುಂಬ ಸದಸ್ಯರ ಬೆಂಬಲವನ್ನು ಪಡೆಯುವಿರಿ. ಕೆಲವು ದಿನಗಳಿಂದ ನೀವು ಹಣಕ್ಕೆ ಸಂಬಂಧಿಸಿದ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ಅದು ಬಗೆಹರಿಯಲಿದೆ. ಕಚೇರಿಯಲ್ಲಿ ನಿಮ್ಮ ಸಹೋದ್ಯೋಗಿಗಳ ಜೊತೆ ಉತ್ತಮ ಬಾಂಧವ್ಯವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಿ.
ಮಿಥುನ ರಾಶಿ: ಈ ವಾರ ಪರಿಚಯಸ್ಥರು ನಿಮ್ಮ ಆಪ್ತರಾಗುವರು. ಹೊಸ ಯೋಜನೆಯಲ್ಲಿ ಉತ್ಸಾಹದಿಂದ ಕೆಲಸ ಮಾಡುವಿರಿ. ಬುದ್ಧಿವಂತಿಕೆಯಿಂದ ಕೆಲಸ ಮಾಡಿ ಯಶಸ್ಸನ್ನು ಪಡೆಯುವಿರಿ. ಕೈಗೆತ್ತಿಕೊಂಡ ಕಾರ್ಯಗಳು ಯಶಸ್ವಿಯಾಗಿ ಮುಕ್ತಾಯವಾಗುವುದು. ಉದ್ಯೋಗದ ಪ್ರಯತ್ನಗಳು ವೇಗವನ್ನು ಪಡೆಯುತ್ತವೆ. ಪ್ರಯಾಣದಲ್ಲಿ ನಿರೀಕ್ಷಿತ ಫಲಿತಾಂಶ ಸಿಗಲಿದೆ. ಈ ವಾರ ನಿಮ್ಮ ಸಂಗಾತಿಯ ಜೊತೆ ಪ್ರೀತಿಯಿಂದಲೂ ಉತ್ಸಾಹದಿಂದಲೂ ಇರುವಿರಿ. ಉದ್ಯೋಗಸ್ಥರು ತಮ್ಮ ಮೇಲಧಿಕಾರಿಯ ಹೆಚ್ಚು ಸಹಕಾರ ಪಡೆಯುವರು.
ಕರ್ಕ ರಾಶಿ: ಈ ವಾರ ಅದೃಷ್ಟವು ಹೆಚ್ಚು ನಿಮ್ಮ ಕಡೆಗೆ ಇರಲಿದೆ. ವೃತ್ತಿಯ ಸ್ಥಳದಲ್ಲಿ ಉತ್ತಮ ದಿನವನ್ನು ಕಳೆಯುವಿರಿ. ಈ ವಾರ ನಿಮ್ಮ ಮನೆಯಲ್ಲಿ ಅತಿಥಿಗಳೇ ತುಂಬಿರಬಹುದು. ಕುಟುಂಬ ಸದಸ್ಯರಿಂದ ನಿಮಗೆ ಒತ್ತಡವಿರುವುದು. ಮಕ್ಕಳಿಂದ ಶುಭ ಸಮಾಚಾರ ಸಿಗುವುದು. ನಿಮ್ಮ ಸಂಗಾತಿಯ ಮನಃಸ್ಥಿತಿ ಚೆನ್ನಾಗಿರುವುದಿಲ್ಲ. ಹಾಗಾಗಿ ನೀವು ವಿವಾದಾತ್ಮಕ ವಿಷಯವನ್ನು ಚರ್ಚಿಸದಿದ್ದರೆ ಉತ್ತಮ. ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆಯು ಬಲವಾಗುವುದು. ನಿಮ್ಮ ಕಠಿಣ ಪರಿಶ್ರಮ ಮತ್ತು ಸಮರ್ಪಣೆಯ ಆಧಾರದ ಮೇಲೆ ನೀವು ಉತ್ತಮ ಯಶಸ್ಸನ್ನು ಸಾಧಿಸುವಿರಿ. ಆರೋಗ್ಯದ ದೃಷ್ಟಿಯಿಂದ ಈ ವಾರ ಸಾಮಾನ್ಯವಾಗಿ ಇರುವುದು.
ಸಿಂಹ ರಾಶಿ: ಈ ವಾರ ವ್ಯಾಪಾರದಲ್ಲಿ ಆದಾಯವು ಅನಿರೀಕ್ಷಿತವಾಗಿ ಹೆಚ್ಚಾಗಿರುತ್ತದೆ. ಬರುವ ಸಮಸ್ಯೆಯನ್ನು ಜಾಣ್ಮೆಯಿಂದ ನಿಭಾಯಿಸುವಿರಿ. ನೀವು ಉತ್ತಮ ಆರ್ಥಿಕ ಲಾಭವನ್ನು ಪಡೆಯುವ ಸಾಧ್ಯತೆಯಿದೆ. ಉದ್ಯೋಗಸ್ಥರು ತಮ್ಮ ಶ್ರಮದ ಫಲವನ್ನು ಪಡೆಯುತ್ತಾರೆ. ಖರ್ಚು ಮಾಡುವಾಗ ನಿಮಗೆ ವಿವೇಕವಿರಲಿ. ಸಹೋದರರ ವಿಚಾರದಲ್ಲಿ ನಿಮಗೆ ಅಸಮಾಧಾನ ಇರುವುದು. ವಿದೇಶಕ್ಕೆ ಹೋಗುವ ತುಡಿತ ಇರಲಿದೆ. ವಾಹನ ಖರೀದಿಗೆ ನೀವು ಜೋತು ಬೀಳುವಿರಿ. ಕೆಲಸದ ಸ್ಥಳದಲ್ಲಿ ನಿಮ್ಮ ಗೌರವ ಮತ್ತು ಗೌರವ ಹೆಚ್ಚಾಗುತ್ತದೆ. ಮೇಲಧಿಕಾರಿಗಳು ಈ ವಾರ ನಿಮ್ಮವರಂತೆ ಕಾಣಿಸುವರು.
ಕನ್ಯಾ ರಾಶಿ: ಈ ವಾರ ಹಿರಿಯರನ್ನು ಹೆಚ್ಚು ಗೌರವದಿಂದ ನೋಡುವಿರಿ. ಪ್ರೇಮ ಸಂಬಂಧಗಳಲ್ಲಿ ಸೂಕ್ಷ್ಮತೆಯು ಇರಲಿದೆ. ಈ ವಾರ ನಿಮ್ಮ ಆರೋಗ್ಯವು ಸ್ಥಿರವಾಗಿರುತ್ತದೆ. ಅನಿರೀಕ್ಷಿತ ಖರ್ಚುಗಳು ಹೆಚ್ಚಾಗುವ ಸಾಧ್ಯತೆ ಇದೆ. ನೀವು ಅಂದುಕೊಂಡಿದ್ದ ಪ್ರಮುಖ ಕಾರ್ಯಗಳು ಸಕಾಲದಲ್ಲಿ ಪೂರ್ಣಗೊಳ್ಳುವುವು. ಸಂಗಾತಿಯ ಜೊತೆ ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸಿ. ಈ ವಾರ ನಿಮ್ಮ ಕಾರ್ಯದಲ್ಲಿ ಆಸಕ್ತಿಯು ಕಡಿಮೆ ಇರುವುದು. ನಿಮ್ಮ ಸಮಯವನ್ನು ಸದುಪಯೋಗಪಡಿಸಿಕೊಳ್ಳಿ. ತಂದೆ ನಿಮ್ಮ ಮೇಲೆ ಕೋಪಗೊಳ್ಳಬಹುದು. ನಿಯತಕಾಲಿಕ ಉದ್ಯೋಗದಲ್ಲಿ ಇದ್ದರೆ ನಿಮಗೆ ತೊಂದರೆ ಎನಿಸಬಹುದು.
ತುಲಾ ರಾಶಿ: ನಿಮ್ಮ ಬುದ್ಧಿವಂತಿಕೆಯಿಂದ ಕಾರ್ಯಗಳನ್ನು ಸುಲಭವಾಗಿ ಪೂರ್ಣ ಮಾಡಿಕೊಳ್ಳುವಿರಿ. ಮಾತಿನ ಮಾಧುರ್ಯದಿಂದ ಸ್ನೇಹಿತರನ್ನು ಸಂಪಾದಿಸಿಕೊಳ್ಳುವಿರಿ. ನಿಮ್ಮ ಮನೆಯಲ್ಲಿ ಶುಭ ಕಾರ್ಯಗಳು ನಡೆಯಲಿವೆ. ವೃತ್ತಿಜೀವನವು ಶಾಂತಿಯುತವಾಗಿರುತ್ತದೆ. ಹೊಸ ಅವಕಾಶಗಳನ್ನು ನೀವು ಅನ್ವೇಷಿಸುವಿರಿ. ನಿಮ್ಮ ಮನಸ್ಸಿನಲ್ಲಿ ಹಲವಾರು ರೀತಿಯ ಆಲೋಚನೆಗಳು ಬರುತ್ತವೆ, ನೀವು ಮಾನಸಿಕವಾಗಿ ತೊಂದರೆಗೊಳಗಾಗುತ್ತೀರಿ. ನಿಮ್ಮ ಭಾವನೆಗಳನ್ನು ನಿಮ್ಮ ಹತ್ತಿರವಿರುವ ಜೊತೆ ಮುಕ್ತವಾಗಿ ಹಂಚಿಕೊಳ್ಳಿ. ಪ್ರಯತ್ನಿಸಿದರೆ ನಿಮ್ಮ ಪ್ರಶ್ನೆಗಳಿಗೆ ನೀವೇ ಉತ್ತರಗಳನ್ನು ಕಂಡುಕೊಳ್ಳುವಿರಿ. ನಿಮ್ಮ ಆರ್ಥಿಕ ಸ್ಥಿತಿ ಸಾಮಾನ್ಯವಾಗಿರುತ್ತದೆ. ನೀವು ಕೆಲಸಕ್ಕೆ ಸಂಬಂಧಿಸಿದ ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯುವಿರಿ.
ವೃಶ್ಚಿಕ ರಾಶಿ: ಈ ವಾರ ನೀವು ಕೈಗೆತ್ತಿಕೊಳ್ಳುವ ಯಶಸ್ಸನ್ನು ಸಾಧಿಸುವಿರಿ. ಇತರರ ಜೊತೆ ಸೇರಿ ಮಾಡುವ ಕೆಲಸದಲ್ಲಿ ಲಾಭ ದೊರೆಯುತ್ತದೆ. ನ್ಯಾಯಾಲಯಕ್ಕೆ ಸಂಬಂಧಿಸಿದ ಸಮಸ್ಯೆಯಿದ್ದರೆ, ನೀವು ಅವುಗಳಲ್ಲಿ ಪರಿಹಾರ ಮಾಡಿಕೊಳ್ಳಬೇಕಾದೀತು. ಇತರರಿಗೆ ಹಣಕಾಸಿನ ನೆರವು ಕೊಡುವುದು ಬಹಳ ಸಮಸ್ಯೆಯನ್ನು ಕೊಟ್ಟೀತು. ನಿಮ್ಮ ಅತಿಯಾದ ಔದಾರ್ಯದಿಂದ ಸಮಸ್ಯೆ ಆಗುವುದು. ನಿಮಗೆ ಸ್ನೇಹಿತರಿಂದ ನಷ್ಟವಾಗುವುದು. ನಿಮ್ಮ ಸಂಬಂಧದಲ್ಲಿ ಹೊಸತನವನ್ನು ಅನುಭವಿಸುವಿರಿ. ಹಣದ ವಿಷಯದಲ್ಲಿ ನೀವು ಅದೃಷ್ಟಶಾಲಿಯಾಗುತ್ತೀರಿ. ಇಂದು ನೀವು ಕೆಲವು ದೊಡ್ಡ ಆರ್ಥಿಕ ಲಾಭವನ್ನು ಪಡೆಯಬಹುದು. ನೀವು ಕಚೇರಿಯಲ್ಲಿ ಉನ್ನತ ಅಧಿಕಾರಿಗಳಿಂದ ಬೆಂಬಲವನ್ನು ಪಡೆಯುತ್ತೀರಿ. ನೀವು ಪ್ರತಿಕೂಲ ಪರಿಸ್ಥಿತಿಗಳಲ್ಲಿಯೂ ಸುಲಭವಾಗಿ ಕಾರ್ಯವನ್ನು ಮಾಡುವಿರಿ.
ಧನು ರಾಶಿ: ನೀವು ನಿಮ್ಮ ಪ್ರತಿಯೊಂದು ಕೆಲಸವನ್ನು ಚಾಣಾಕ್ಷತೆಯಿಂದ ಅತ್ಯಂತ ಸುಲಭವಾಗಿ ಪೂರ್ಣಗೊಳಿಸುವಿರಿ. ಈ ವಾರದ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಯಶಸ್ಸು ಪಡೆಯುತ್ತಾರೆ. ಸಹೋದ್ಯೋಗಿಗಳ ನೆರವಿನಿಂದ ಹೊಸತನ್ನು ಈ ವಾರ ಕಲಿತುಕೊಳ್ಳುವಿರಿ. ಸ್ನೇಹವೂ ಇಬ್ಬರ ನಡುವೆ ಆರಂಭವಾಗುವುದು. ಸ್ವಂತ ಕೆಲಸದಲ್ಲಿ ಹೆಚ್ಚು ಗಮನ ಹರಿಸುವುದು ಒಳ್ಳೆಯದು. ಇತರರಿಗೆ ಸಹಾಯ ಮಾಡಲು ಸಾಕಷ್ಟು ಸಮಯವನ್ನು ಕೊಡುವಿರಿ. ನೀವು ಈ ವಾರ ಅತಿಯಾದ ಕೋಪ ಮಾಡಿಕೊಳ್ಳದೇ ಆರಾಮವಾಗಿರಿ. ನಿಮ್ಮ ವೈಯಕ್ತಿಕ ಹಾಗೂ ವೃತ್ತಿಪರ ಜೀವನದ ನಡುವೆ ಸಮತೋಲನವನ್ನು ಕಾಪಾಡಿಕೊಳ್ಳುವಲ್ಲಿ ಸಾಹಸ ಪಡುವಿರಿ. ನಿಮ್ಮ ತಂದೆಯಿಂದ ಕೆಲವು ಪ್ರಮುಖ ಸಲಹೆಗಳನ್ನು ನೀವು ಪಡೆಯುವಿರಿ.
ಮಕರ ರಾಶಿ: ಈ ವಾರ ಶತ್ರುಗಳು ನಿಮ್ಮ ಮೇಲೆ ಪ್ರಾಬಲ್ಯ ಸಾಧಿಸಲು ನೀವು ಬಿಡುವುದಿಲ್ಲ. ಅದೃಷ್ಟ ನಿಮ್ಮ ಜೊತೆ ಇರುವುದು. ಕುಟುಂಬದ ಜೊತೆ ಹೊರಗೆ ಹೋಗುವಿರಿ. ನೀವು ಅಂದುಕೊಂಡ ಕೆಲಸಗಳು ಅಂದುಕೊಂಡಂತೆ ಆಗುತ್ತದೆ. ಈ ವಾರ ನಿಮ್ಮ ಹಣಕಾಸಿನ ಪರಿಸ್ಥಿತಿಯು ಹೆಚ್ಚು ಅನುಕೂಲಕರವಾಗಿ ಇರಲಿದೆ. ನಿಮ್ಮ ಸಂಗಾತಿಯನ್ನು ಅನಗತ್ಯವಾಗಿ ಅನುಮಾನಿಸುವ ಅಭ್ಯಾಸದಿಂದ ಮತ್ತಷ್ಟು ಸಮಸ್ಯೆ ಎದುರಾದೀತು. ನಿಮ್ಮ ಪ್ರೀತಿಪಾತ್ರರಲ್ಲಿ ನಿಮ್ಮ ನಂಬಿಕೆಯನ್ನು ಬಲಪಡಿಸಿಕೊಳ್ಳಿ. ಹಣದ ಬಗ್ಗೆ ಹೇಳುವುದಾದರೆ, ಇಂದು ನೀವು ಆರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಗುತ್ತದೆ. ಇದೆಲ್ಲವೂ ನಿಮ್ಮ ದುಂದುವೆಚ್ಚದ ಫಲವಾಗಿರುವುದು.
ಕುಂಭ ರಾಶಿ: ಸ್ನೇಹಿತರ ಸಹಕಾರದಿಂದ ನಿಮ್ಮ ಯೋಜನೆಯು ನಿರೀಕ್ಷಿತ ಯಶಸ್ಸನ್ನು ಪಡೆಯುವುದು. ಹಣಕಾಸಿನ ಸ್ಥಿತಿಯು ಉತ್ತಮವಾಗಿದ್ದರೂ ಇದ್ದಕ್ಕಿದ್ದಂತೆ ಖರ್ಚುಗಳು ಹೆಚ್ಚಾಗಿರುವುದು. ಬಂಧುಗಳ ಜೊತೆಗಿನ ಆಸ್ತಿ ವಿವಾದ ಬಗೆಹರಿಸಿಕೊಳ್ಳುವಿರಿ. ಮಾತಿನ ಮೇಲೆ ಹಿಡಿತವಿಟ್ಟುಕೊಂಡೂ ಬೇಕಾದುದನ್ನು ಸಾಧಿಸಿಕೊಳ್ಳುವಿರಿ. ಉದ್ಯೋಗದಲ್ಲಿ ಯಾವ ಬದಲಾವಣೆಯನ್ನೂ ಮಾಡಿಕೊಳ್ಳಲು ಹೋಗುವುದು ಬೇಡ. ದೈನಂದಿನ ಖರ್ಚು ಕಡಿಮೆಯಿದ್ದರೂ ವಾರಕ್ಕೆ ಹೋಲಿಸಿದರೆ ಹೆಚ್ಚಾಗಿರುವುದು. ಈ ವಾರ ನೀವು ಸ್ನಾಯು ಸಂಬಂಧಿತ ಸಮಸ್ಯೆಯಿಂದ ಬಳಲುವಿರಿ. ಭಾರದ ವಸ್ತುಗಳನ್ನು ಒಯ್ಯುವುದು ಬೇಡ.
ಮೀನ ರಾಶಿ: ಈ ವಾರ ಯಾರೊಂದಿಗಾದರೂ ಅನವಶ್ಯಕ ವಿವಾದ ಮಾಡುವಿರಿ. ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ. ಬಹಳ ಚಟುವಟಿಕೆಯಿಂದ ಇರುವಿರಿ. ಉದ್ಯೋಗದಲ್ಲಿ ಉತ್ತಮ ಯಶಸ್ಸನ್ನು ಪಡೆಯುತ್ತೀರಿ. ಈ ವಾರ ಕಾರ್ಯಕ್ಷೇತ್ರದಲ್ಲಿ ಪ್ರಯೋಜನಕಾರಿಯಾಗಿದೆ. ಉದ್ಯೋಗದಲ್ಲಿ ನಿಮಗೆ ಬಡ್ತಿ ದೊರೆಯುವ ಸಾಧ್ಯತೆ ಇದೆ. ಸಹೋದ್ಯೋಗಿಗಳಿಂದ ಬೆಂಬಲ ದೊರೆತು, ಇದರಿಂದ ವ್ಯವಹಾರದಲ್ಲಿ ಲಾಭವಾಗುತ್ತದೆ. ವಿದ್ಯಾರ್ಥಿಗಳಿಗೆ ಬಹಳ ಒಳ್ಳೆಯ ವಾರವಾಗಲಿದೆ. ಆರ್ಥಿಕ ಸ್ಥಿತಿ ಸಾಮಾನ್ಯಕ್ಕಿಂತ ಉತ್ತಮವಾಗಿರುತ್ತದೆ. ಎಷ್ಟು ಸಾಧ್ಯವೋ ಅಷ್ಟು ಉಳಿತಾಯದತ್ತ ಗಮನ ಹರಿಸಿ. ಉದ್ಯೋಗಸ್ಥರು ತಮ್ಮ ಬಡ್ತಿಗಾಗಿ ಕಾಯುತ್ತಿದ್ದರೆ, ಇನ್ನೂ ಸ್ವಲ್ಪ ಸಮಯ ಕಾಯಬೇಕಾಗಬಹುದು.
-ಲೋಹಿತಶರ್ಮಾ – 8762924271 (what’s app only)