ಜ್ಯೋತಿಷ್ಯ ಶಾಸ್ತ್ರದ ಒಂದು ಭಾಗವಾಗಿರುವ ಹಸ್ತಸಾಮುದ್ರಿಕ ಶಾಸ್ತ್ರದಲ್ಲಿ(Palmistry) ಪಾಮ್ ಲೈನ್, ಸೂರ್ಯ, ಪರ್ವತ ಮತ್ತು ವಿಶೇಷ ರೀತಿಯ ಚಿಹ್ನೆಗಳನ್ನು ಅಧ್ಯಯನ ಮಾಡಲಾಗುತ್ತದೆ. ಈ ಚಿಹ್ನೆಗಳ ಸಹಾಯದಿಂದಲೇ ವ್ಯಕ್ತಿಯ ಮುಂದಿನ ಭವಿಷ್ಯ, ಜೀವನ, ಯಶಸ್ಸು ಎಲ್ಲವನ್ನೂ ತಿಳಿಯಬಹುದಾಗಿದೆ. ವ್ಯಕ್ತಿಯ ಅಂಗೈ ನೋಡಿ ಅದರಲ್ಲಿ ಕಾಣಿಸುವ ಅನೇಕ ರೀತಿಯ ಗುರುತುಗಳು ಮತ್ತು ರೇಖೆಗಳ ಮೂಲಕ ಜಾತಕ ಹೇಳಲಾಗುತ್ತೆ. ಹಸ್ತಸಾಮುದ್ರಿಕ ಶಾಸ್ತ್ರ ಬಲ್ಲವರು ಸುಲಭವಾಗಿ ಚಿಹ್ನೆಗಳನ್ನು ಗುರುತಿಸುತ್ತಾರೆ.
ಇನ್ನು ಈ ಪರ್ವತ ಚಿಹ್ನೆಯಲ್ಲಿ ಸೂರ್ಯ, ಬುಧ, ಗುರು ಮತ್ತು ಚಂದ್ರರಿರುವುದು ವಿಶೇಷ. ಒಬ್ಬ ವ್ಯಕ್ತಿಯು ಜೀವನದಲ್ಲಿ ಎಷ್ಟು ಗೌರವ ಮತ್ತು ಖ್ಯಾತಿಯನ್ನು ಪಡೆಯುತ್ತಾನೆ ಎಂದು ಅಂಗೈಯಲ್ಲಿರುವ ಸೂರ್ಯ ಪರ್ವತದ ಆಕಾರ ಮತ್ತು ವಿನ್ಯಾಸದಿಂದ ತಿಳಿಯಬಹುದು. ಇದಲ್ಲದೆ, ಸೂರ್ಯ, ಪರ್ವತ ಚಿಹ್ನೆಗಳನ್ನು ವಿಶ್ಲೇಷಿಸುವ ಮೂಲಕ, ವ್ಯಕ್ತಿಯು ಸರ್ಕಾರಿ ಉದ್ಯೋಗವನ್ನು ಪಡೆಯುವ ಸಾಧ್ಯತೆಯಿದೆಯೇ ಅಥವಾ ಇಲ್ಲವೇ ಎಂಬುದನ್ನು ಸಹ ಹೇಳಬಹುದು. ಹಸ್ತಸಾಮುದ್ರಿಕ ಶಾಸ್ತ್ರದಲ್ಲಿ ಸೂರ್ಯ, ಪರ್ವತ ಚಿಹ್ನೆಗೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ.
ಇದನ್ನೂ ಓದಿ: ನಿಮ್ಮ ಮದುವೆ ಯಾವಾಗ? ವೈವಾಹಿಕ ಜೀವನ ಹೇಗಿರುತ್ತೆ.. ವಿವಾಹ ರೇಖೆಯ ಮೂಲಕ ತಿಳಿಯಬಹುದು ಮದುವೆ ರಹಸ್ಯ
ಅಂಗೈಯಲ್ಲಿ ಸೂರ್ಯ, ಪರ್ವತದ ಸ್ಥಾನವು ಉಂಗುರದ ಬೆರಳಿನ ಕೆಳಭಾಗದಲ್ಲಿದೆ. ಅಂಗೈಯಲ್ಲಿರುವ ಈ ಚಿಹ್ನೆಯ ಮೂಲಕ ವ್ಯಕ್ತಿಯ ಗೌರವ, ಸ್ಥಾನಮಾನ ಮತ್ತು ನಾಯಕತ್ವದ ಸಾಮರ್ಥ್ಯದ ಬಗ್ಗೆ ವಿಶ್ಲೇಷಣೆ ಮಾಡಲಾಗುತ್ತದೆ. ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ತಮ್ಮ ಅಂಗೈಯಲ್ಲಿ ಸೂರ್ಯನ ರೇಖೆಯಿಂದ ಬೇರೆ ಯಾವುದೇ ರೇಖೆಯು ಹೊರಹೊಮ್ಮಿ ಗುರು ಪರ್ವತವನ್ನು ತಲುಪಿದರೆ, ಅಂತಹ ವ್ಯಕ್ತಿಯು ತುಂಬಾ ಅದೃಷ್ಟಶಾಲಿ. ಜೊತೆಗೆ ಜೀವನದಲ್ಲಿ ಸರ್ಕಾರಿ ಹುದ್ದೆಯೂ ಸಿಗುತ್ತದೆ ಎನ್ನಲಾಗಿದೆ. ಈ ವ್ಯಕ್ತಿಗೆ ಸಮಾಜದಲ್ಲಿ ಒಳ್ಳೆಯ ಹೆಸರು ಬರುತ್ತದೆ.
ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ ಬುಧದ ಪರ್ವತದಲ್ಲಿರುವ ತ್ರಿಕೋನ ಶುಭ ಎನ್ನಲಾಗಿದೆ. ಯಾರ ಕೈಯಲ್ಲಿ ಮೇಲೆ ತ್ರಿಕೋನ ಚಿಹ್ನೆ ಇದ್ದು, ಚಿಹ್ನೆಗಳು ಬುಧದ ಪರ್ವತದ ಮೇಲಿನ ರೇಖೆಗಳನ್ನು ಸೇರಿದರೆ ಅಂತವರು ಆಡಳಿತ ಕ್ಷೇತ್ರದಲ್ಲಿ ಉನ್ನತ ಸ್ಥಾನಮಾನಕ್ಕೆ ಹೋಗುತ್ತಾರೆ ಎನ್ನಲಾಗಿದೆ. ಹಾಗೂ ಯಾರ ಆರೋಗ್ಯ ರೇಖೆಯು ಮೆದುಳಿಗೆ ಮತ್ತು ಅಂಗೈಯಲ್ಲಿ ಅದೃಷ್ಟ ರೇಖೆಗೆ ಸೀಮಿತವಾಗಿದೆಯೋ ಅಂತಹ ಜನರು ಆರೋಗ್ಯವಾಗಿರುತ್ತಾರೆ.
ಇದನ್ನೂ ಓದಿ: ಪಾದ ಸಾಮುದ್ರಿಕ ಶಾಸ್ತ್ರ: ಪಾದದಲ್ಲಿ ಯಾವ ಸ್ವರೂಪದ ರೇಖೆಗಳಿದ್ದರೆ ನಿಮಗೆ ಎಂತಹ ಅದೃಷ್ಟ ಲಭಿಸುತ್ತದೆ ಎಂಬುದನ್ನು ತಿಳಿಯಿರಿ
ಹಸ್ತ ಸಾಮುದ್ರಿಕ ಶಾಸ್ತ್ರದಲ್ಲಿ ಹೇಳಿರುವ ಪ್ರಕಾರ ಒಬ್ಬ ವ್ಯಕ್ತಿಯು ಸುಂದರವಾದ ಮತ್ತು ಬಲವಾದ ಹೆಬ್ಬೆರಳು ಹಾಗೂ ಉತ್ತಮ ತಲೆ ರೇಖೆಯನ್ನು ಹೊಂದಿದ್ದರೆ ಆತ ಒಳ್ಳೆಯ ಕೆಲಸವನ್ನು ಪಡೆಯುತ್ತಾನೆ ಎಂದು ಹೇಳಲಾಗಿದೆ. ಇವರು ಉದ್ಯೋಗದಲ್ಲಿ ಸಾಕಷ್ಟು ಪ್ರಗತಿ ಪಡೆಯುವುದಲ್ಲದೆ ಮಹತ್ತರ ಸ್ಥಾನಕ್ಕೆ ಹೋಗುತ್ತಾನಂತೆ. ಅಂಗೈಯಲ್ಲಿರುವ ಚಕ್ರದ ಗುರುತು ಬಹಳ ಮಂಗಳಕರವೆಂದು ಪರಿಗಣಿಸಲಾಗಿದೆ. ಅಂತಹ ಜನರನ್ನು ಶ್ರೀಮಂತ ಮತ್ತು ಅದೃಷ್ಟ ಎಂದು ಪರಿಗಣಿಸಲಾಗುತ್ತದೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ