AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾದ ಸಾಮುದ್ರಿಕ ಶಾಸ್ತ್ರ: ಪಾದದಲ್ಲಿ ಯಾವ ಸ್ವರೂಪದ ರೇಖೆಗಳಿದ್ದರೆ ನಿಮಗೆ ಎಂತಹ ಅದೃಷ್ಟ ಲಭಿಸುತ್ತದೆ ಎಂಬುದನ್ನು ತಿಳಿಯಿರಿ

Samudrik Shastra: ಪಾದದಲ್ಲಿ ಅದೃಷ್ಟದ ಚಿಹ್ನೆಗಳು ಸಂಕೇತಗಳು: ಪಾದ ಸಾಮುದ್ರಿಕ ಶಾಸ್ತ್ರ ಮತ್ತು ಹಸ್ತ ಸಾಮುದ್ರಿಕ ಶಾಸ್ತ್ರದ ಪ್ರಕಾರ ಕೈಗಳ ರೇಖೆಗಳಲ್ಲಿ ಮಾತ್ರವಲ್ಲದೆ ಪಾದಗಳ ಕೆಳಗಿನ ಚೆಹ್ನೆಗಳೂ ಸಹ ನಿಮ್ಮ ಹಣೆಬರಹವನ್ನು ತಿಳಿಸುತ್ತದೆ. ಕಾಲುಗಳ ಅಡಿಭಾಗದಲ್ಲಿರುವ ರೇಖೆಗಳು ಮತ್ತು ಮಂಗಳಕರ ಚಿಹ್ನೆಗಳ ಬಗ್ಗೆ ತಿಳಿಯೋಣ.

ಪಾದ ಸಾಮುದ್ರಿಕ ಶಾಸ್ತ್ರ: ಪಾದದಲ್ಲಿ ಯಾವ ಸ್ವರೂಪದ ರೇಖೆಗಳಿದ್ದರೆ ನಿಮಗೆ ಎಂತಹ ಅದೃಷ್ಟ ಲಭಿಸುತ್ತದೆ ಎಂಬುದನ್ನು ತಿಳಿಯಿರಿ
ಪಾದ ಸಾಮುದ್ರಿಕ ಶಾಸ್ತ್ರ: ಪಾದದಲ್ಲಿ ಯಾವ ಸ್ವರೂಪದ ರೇಖೆಗಳಿದ್ದರೆ ನಿಮಗೆ ಎಂತಹ ಅದೃಷ್ಟ ಲಭಿಸುತ್ತದೆ ಎಂಬುದನ್ನು ತಿಳಿಯಿರಿ
TV9 Web
| Updated By: ಸಾಧು ಶ್ರೀನಾಥ್​|

Updated on: Jul 02, 2022 | 6:06 AM

Share

ಪಾದದಲ್ಲಿ ಅದೃಷ್ಟದ ಚಿಹ್ನೆಗಳು: ಸಾಮುದ್ರಿಕಾ ಶಾಸ್ತ್ರದಲ್ಲಿ ಪಾದ ಸಾಮುದ್ರಿಕಾ ಕೂಡ ಒಂದು ಭಾಗವಾಗಿದ್ದು, ಕಾಲಿನ ರೇಖೆ, ಆಕಾರವನ್ನು ನೋಡಿ ವ್ಯಕ್ತಿಯ ಗುಣ ವಿಶೇಷತೆಗಳನ್ನು ನೋಡಬಹುದು. ಸಾಮುದ್ರಿಕಾ ಶಾಸ್ತ್ರದಲ್ಲಿ ಮುಖ ಸಾಮುದ್ರಿಕಾ, ಹಸ್ತ ಸಾಮುದ್ರಿಕಾ, ಅಂಗ ಸಾಮುದ್ರಿಕಾ ಹಾಗೂ ಪಾದ ಸಾಮುದ್ರಿಕಾ ಎಂಬ ವಿಭಾಗಗಳಿವೆ. ವ್ಯಕ್ತಿಯ ಭವಿಷ್ಯವು ಅವನ ಕೈಗಳ ರೇಖೆಗಳಲ್ಲಿ ಅಡಗಿದೆ ಎಂದು ಅನೇಕ ಜನರು ನಂಬುತ್ತಾರೆ. ಈ ರೇಖೆಗಳನ್ನು ನೋಡಿದರೆ.. ಯಾವುದೇ ಜ್ಯೋತಿಷಿ ನಿಮ್ಮ ಭೂತಕಾಲದಿಂದ ಭವಿಷ್ಯದವರೆಗಿನ ಎಲ್ಲಾ ಮಾಹಿತಿಯನ್ನು ಒದಗಿಸಬಹುದು.

ಆದರೆ, ಹಸ್ತಸಾಮುದ್ರಿಕ ಶಾಸ್ತ್ರ ಮತ್ತು ಪಾದ ಸಾಮುದ್ರಿಕ ಶಾಸ್ತ್ರದಲ್ಲಿ, ಪಾದದ ಭಾಗದಲ್ಲಿರುವ ಗೆರೆಗಳ ಅರ್ಥಗಳು ಮನುಷ್ಯನ ಜೀವನ ವಿಧಾನವನ್ನು ಸಹ ಸೂಚಿಸುತ್ತವೆ. ಹಸ್ತಸಾಮುದ್ರಿಕ ಶಾಸ್ತ್ರ ಮತ್ತು ಪಾದ ಸಾಮುದ್ರಿಕ ಶಾಸ್ತ್ರದಲ್ಲಿ ವಿಷ್ಣುವಿನ ಪಾದಗಳ ಮೇಲಿನ ರೇಖೆಗಳು ಮತ್ತು ಚಿಹ್ನೆಗಳನ್ನು ಪ್ರತಿನಿಧಿಸುವ ಪಾದಗಳ ಅಡಿಭಾಗದಲ್ಲಿರುವ ರೇಖೆಗಳನ್ನು ಬಹಳ ಪವಿತ್ರವೆಂದು ವಿವರಿಸಲಾಗಿದೆ. ವ್ಯಕ್ತಿಯ ಕಾಲಿನ ಅಡಿಭಾಗದಲ್ಲಿರುವ ಕೆಲವು ಗೆರೆಗಳು ಅವನನ್ನು ಅದೃಷ್ಟವಂತರನ್ನಾಗಿ ಮಾಡುತ್ತದೆ ಎಂದು ನಂಬಲಾಗಿದೆ. ಇಂದು ಕಾಲುಗಳ ಅಡಿಭಾಗದಲ್ಲಿರುವ ರೇಖೆಗಳು ಮತ್ತು ಮಂಗಳಕರ ಚಿಹ್ನೆಗಳ ಬಗ್ಗೆ ತಿಳಿಯೋಣ.

  1. ಪಾದಗಳಲ್ಲಿ ಶುಭ ಚಿಹ್ನೆಗಳು, ರೇಖೆಗಳು: ಯಾರಿಗಾದರೂ ಪಾದದಲ್ಲಿ ತ್ರಿಶೂಲವಿದ್ದರೆ.. ಅವರು ತುಂಬಾ ಅದೃಷ್ಟವಂತರು. ತ್ರಿಶೂಲವು ಶಿವನ ಆಯುಧವಾಗಿದೆ. ಅಂತಹ ಜನರು ಸಾರ್ವಜನಿಕ ವಲಯದಲ್ಲಿ ಅಥವಾ ಸರ್ಕಾರಕ್ಕೆ ಸಂಬಂಧಿಸಿದ ಯಾವುದೇ ಕ್ಷೇತ್ರದಲ್ಲಿ ದೊಡ್ಡ ಅಧಿಕಾರಿಯಾಗುತ್ತಾರೆ ಎಂದು ನಂಬುತ್ತಾರೆ. ನೀವು ಎಲ್ಲಿಯೇ ವಾಸಿಸುತ್ತಿದ್ದರೂ.. ವೈಭವದಿಂದ ಬದುಕು ಸಾಗಿಸುತ್ತೀರಿ. ಜೀವನದ ಎಲ್ಲಾ ಸಂತೋಷಗಳನ್ನು ಆನಂದಿಸುವಿರಿ.
  2. ಪಾದಗಳ ಅಡಿಭಾಗದ ಮಧ್ಯದಿಂದ ಮಧ್ಯದ ಬೆರಳಿನವರೆಗೆ ಅರ್ಧಚಂದ್ರಾರ್ಕ ರೀತಿಯಲ್ಲಿ ಚಿಹ್ನೆ ಹೋಗಿದ್ದರೆ.. ಅಂತಹ ಜನರು ಸ್ವಭಾವತಃ ಸಾಧು ಸ್ವಭಾವದವರಾಗಿರುತ್ತಾರೆ. ತುಂಬಾ ಸಂತೋಷದ ಜೀವನವನ್ನು ಹೊಂದಿರುತ್ತಾರೆ. ಎಲ್ಲವನ್ನೂ ತುಂಬಾ ಸಲೀಸಾಗಿ, ಸುಲಭವಾಗಿ ಗಳಿಸುತ್ತಾರೆ.
  3. ಹಿಮ್ಮಡಿಯ ಮಧ್ಯದಿಂದ ಪಾದದ ಅಡಿಭಾಗದ ಅಂಚಿನವರೆಗೆ ಅರ್ಧಚಂದ್ರಾಕಾರದ ರೇಖೆಗಳಿದ್ದರೆ, ಅಂತಹ ವ್ಯಕ್ತಿಯು ನೈಜವಾಗಿ ಒಳ್ಳೆಯ ಸ್ವಭಾವದವನಾಗಿರುತ್ತಾನೆ. ಹಣ, ಗೌರವ ಮತ್ತು ಖ್ಯಾತಿ ಗಳಿಸುತ್ತಾರೆ. ಯಾರ ಜೊತೆಯೂ ಜಗಳವಾಡುವುದಿಲ್ಲ. ದೇವರನ್ನು ತುಂಬಾ ನಂಬುತ್ತಾರೆ.
  4. ತಮ್ಮ ಪಾದದ ಅಡಿಭಾಗದಲ್ಲಿ ಸ್ವಸ್ತಿಕ್ ಮತ್ತು ಧ್ವಜವನ್ನು ಹೊಂದಿರುವ ಜನರು ರಾಜನಂತೆ ಬದುಕುತ್ತಾರೆ. ಮಹಾಪುರುಷರು ಮತ್ತು ಲೋಕೋಪಕಾರಿಗಳು ಆಗಿರುತ್ತಾರೆ. ಆಧ್ಯಾತ್ಮಿಕವಾಗಿ ಬದುಕಲು ಇಷ್ಟಪಡುತ್ತಾರೆ. ಜೀವನದಲ್ಲಿ ಅನೇಕ ಬಾರಿ ಒಬ್ಬ ಪರಿಪೂರ್ಣ ಮನುಷ್ಯನಾಗುತ್ತಾನೆ.
  5. ಇಂಗ್ಲಿಷಿನ ಟಿ ಅಕ್ಷರದ ಆಕಾರ ಹಿಮ್ಮಡಿಯ ಮೇಲೆ ಸ್ವಲ್ಪ ಕಾಣಿಸಿಕೊಂಡರೆ ಅಂತಹವರು ಉದ್ಯಮಿಗಳಾಗಿ ಬೆಳೆಯುವ ಸಾಧ್ಯತೆ ಇದೆ ಎಂದರ್ಥ. ಇಂತವರು ಬ್ಯುಸಿನೆಸ್ ಶುರು ಮಾಡಿದರೆ.. ಅವರು ಯಶಸ್ವಿಯಾಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಸಾಕಷ್ಟು ಹಣ ಮತ್ತು ಗೌರವವನ್ನು ಗಳಿಸುತ್ತಾರೆ.
  6. ಪಾದದ ಅಡಿಭಾಗದ ಮಧ್ಯದಲ್ಲಿ ವೃತ್ತಾಕಾರದ ರೇಖೆಗಳಿದ್ದರೆ.. ಈ ಗೆರೆಗಳಿಗೆ ಅಕ್ಷಯ ಧನ ರೇಖಾ ಎನ್ನುತ್ತಾರೆ. ಈ ಜನರು ಹಣ ಸಂಪಾದಿಸಲು ಕಷ್ಟಪಡಬೇಕಾಗುತ್ತದೆ. ಕಠಿಣ ಪರಿಶ್ರಮವಿಲ್ಲದೆ ಅವರಿಗೆ ಏನೂ ಸಿಗುವುದಿಲ್ಲ. ಆದರೆ ಕಠಿಣ ಪರಿಶ್ರಮ ಖಂಡಿತವಾಗಿಯೂ ಫಲ ನೀಡುತ್ತದೆ. ಇಂತಹ ಪರಿಸ್ಥಿತಿಯಲ್ಲಿ.. ಇವರು ಕಷ್ಟಪಟ್ಟು ತಮ್ಮ ಹಣೆಬರಹವನ್ನೇ ಬದಲಿಸಿಕೊಳ್ಳಬಹುದು.

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ