
ಶತಭಿಷ ನಕ್ಷತ್ರವು ರಾಹುವಿನ ಸ್ವಂತ ನಕ್ಷತ್ರವಾದ್ದರಿಂದ, ಇಲ್ಲಿ ರಾಹುವಿನ ಸಂಚಾರವು ಕೆಲವು ರಾಶಿಗಳಿಗೆ ಅದೃಷ್ಟ, ಇನ್ನು ಕೆಲವು ರಾಶಿಗಳಿಗೆ ಸವಾಲುಗಳನ್ನು ನೀಡುತ್ತದೆ. ಶುಭ ಮತ್ತು ಅಶುಭ ಫಲಗಳನ್ನು ಇಲ್ಲಿ ನೋಡಬಹುದು.
ಅತ್ಯಂತ ಶುಭ ಫಲ ಪಡೆಯುವ ರಾಶಿಗಳು
ಈ ರಾಶಿಯವರಿಗೆ ರಾಹು ಯಶಸ್ಸು ಮತ್ತು ಆರ್ಥಿಕ ಲಾಭವನ್ನು ತಂದುಕೊಡುತ್ತಾನೆ.
ಮೇಷ ರಾಶಿ:
ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಅನಿರೀಕ್ಷಿತ ಧನಲಾಭ ಮತ್ತು ವಿದೇಶಿ ವ್ಯವಹಾರಗಳಿಂದ ಲಾಭವಾಗಲಿದೆ.
ಮಿಥುನ ರಾಶಿ:
ಅದೃಷ್ಟ ನಿಮ್ಮ ಪರ ಇರಲಿದೆ. ಸ್ಥಗಿತಗೊಂಡ ಕೆಲಸಗಳು ಪುನಾರಂಭವಾಗುತ್ತವೆ. ತೀರ್ಥಯಾತ್ರೆ ಅಥವಾ ದೂರದ ಪ್ರಯಾಣದ ಯೋಗವಿದೆ.
ಕನ್ಯಾ ರಾಶಿ:
ವೃತ್ತಿಜೀವನದಲ್ಲಿ ಅತ್ಯುತ್ತಮ ಪ್ರಗತಿ ಇರಲಿದೆ. ಶತ್ರುಗಳ ಮೇಲೆ ಜಯ ಸಿಗುತ್ತದೆ ಮತ್ತು ನ್ಯಾಯಾಲಯದ ವ್ಯವಹಾರಗಳಲ್ಲಿ ಯಶಸ್ಸು ನಿಮ್ಮದಾಗುತ್ತದೆ.
ಧನು ರಾಶಿ:
ನಿಮ್ಮ ಸಾಹಸ ಮತ್ತು ಧೈರ್ಯ ಹೆಚ್ಚಾಗುತ್ತದೆ. ಕೈ ಹಾಕಿದ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ. ಸಮಾಜದಲ್ಲಿ ಗೌರವ ಹೆಚ್ಚುತ್ತದೆ.
ಅಶುಭ ಫಲ
ಈ ರಾಶಿಯವರು ಈ ಸಮಯದಲ್ಲಿ ಸ್ವಲ್ಪ ಜಾಗರೂಕರಾಗಿರುವುದು ಒಳಿತು.
ಕುಂಭ ರಾಶಿ:
ರಾಹು ನಿಮ್ಮದೇ ರಾಶಿಯಲ್ಲಿ ಸಂಚರಿಸುವುದರಿಂದ ಮಾನಸಿಕ ಗೊಂದಲಗಳು ಉಂಟಾಗಬಹುದು. ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಇರುತ್ತದೆ
ಮೀನ ರಾಶಿ:
ಖರ್ಚುಗಳು ನಿಮ್ಮ ಆದಾಯಕ್ಕಿಂತ ಹೆಚ್ಚಾಗಬಹುದು. ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ, ವಿಶೇಷವಾಗಿ ನಿದ್ರೆಯ ಸಮಸ್ಯೆ ಕಾಡಬಹುದು.
ಕರ್ಕಾಟಕ ರಾಶಿ:
ಅಷ್ಟಮ ರಾಹುವಿನ ಪ್ರಭಾವವಿರುವುದರಿಂದ ಹಠಾತ್ ಸಂಕಷ್ಟಗಳು ಬರಬಹುದು. ವಾಹನ ಚಾಲನೆ ಮಾಡುವಾಗ ಮತ್ತು ಹಣ ಹೂಡಿಕೆ ಮಾಡುವಾಗ ಜಾಗ್ರತೆ ವಹಿಸಿ.
ಸಿಂಹ ರಾಶಿ:
ದಾಂಪತ್ಯ ಜೀವನದಲ್ಲಿ ಅಥವಾ ಪಾಲುದಾರಿಕೆ ವ್ಯವಹಾರದಲ್ಲಿ ಘರ್ಷಣೆಗಳು ಉಂಟಾಗಬಹುದು. ಸಂಗಾತಿಯೊಂದಿಗೆ ಸಮಾಧಾನದಿಂದ ವರ್ತಿಸಿ.
ಅಶುಭವು ನ್ಯೂನವಾಗಲು ಪರಿಹಾರಗಳಿವು. ಒಂದು ವೇಳೆ ನಿಮಗೆ ಅಶುಭ ಫಲಗಳಿದ್ದರೆ, ಈ ಸರಳ ಕ್ರಮಗಳನ್ನು ಅನುಸರಿಸಬಹುದು. ದುರ್ಗಾ ದೇವಿಯ ಆರಾಧನೆ, ಪ್ರತಿದಿನ ಅಥವಾ ಶುಕ್ರವಾರ ದುರ್ಗಾ ಚಾಲೀಸಾ ಪಠಿಸುವುದು ಶ್ರೇಯಸ್ಕರ. ರಾಹುವಿನ ದೋಷ ನಿವಾರಣೆಗೆ ನಾಗರಿಗೆ ಅಭಿಷೇಕ ಮಾಡಿ.
- ಲೋಹಿತ ಹೆಬ್ಬಾರ್