ನಿತ್ಯ ಎದ್ದ ಕೂಡಲೇ ನಿತ್ಯ ಪಂಚಾಂಗ ಮತ್ತು ರಾಶಿಭವಿಷ್ಯ ನೋಡುವ ಅಭ್ಯಾಸ ಕೆಲವರಲ್ಲಿ ಇರುತ್ತದೆ. ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಲಾಭ ಕಾದಿದೆಯಾ? ನಷ್ಟು ಉಂಟಾಗಬಹುದಾ? ಶುಭ, ಅಶುಭ? ಇದೆಯಾ ಎಂಬುದನ್ನು ತಿಳಿದುಕೊಳ್ಳುತ್ತಾರೆ. ಹಾಗಾದರೆ, ಇಂದಿನ (ಡಿಸೆಂಬರ್ 15) ನಿಮ್ಮ ರಾಶಿಭವಿಷ್ಯ (Horoscope) ಹೇಗಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ವೃಶ್ಚಿಕ ಮಾಸ, ಮಹಾನಕ್ಷತ್ರ: ಜ್ಯೇಷ್ಠಾ, ಮಾಸ: ಮಾರ್ಗಶೀರ್ಷ, ಪಕ್ಷ: ಶುಕ್ಲ, ವಾರ: ಶುಕ್ರವಾರ, ತಿಥಿ: ತೃತೀಯಾ, ನಿತ್ಯನಕ್ಷತ್ರ: ಉತ್ತರಾಷಾಢಾ, ಯೋಗ: ವೃದ್ಧಿ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 50 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 04 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 11:03 ರಿಂದ ಮಧ್ಯಾಹ್ನ 12:28ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 03:16 ರಿಂದ 04:40ರ ವರೆಗೆ, ಗುಳಿಕ ಕಾಲ ಬೆಳಗ್ಗೆ 08:15 ರಿಂದ 09:39ರ ವರೆಗೆ.
ಮೇಷ ರಾಶಿ: ಅಧಿಕಾರಿಗಳ ವರ್ತನೆಯಿಂದ ಮೇಲೆ ಕೋಪಗೊಳ್ಳುವಿರಿ. ಯಾವುದೇ ಕೆಲಸವು ತಪ್ಪಾಗಿದ್ದರೆ, ಅನಂತರ ನಿಧಾನವಾಗಿ ವಿವರಿಸಿ. ಯಂತ್ರದ ವ್ಯಾಪಾರವು ಲಾಭದಾಯಕವಾಗುವುದು. ನಿಮ್ಮ ಮಾತಿನಿಂದ ನಿಮಗಾಗದವರು ಹುಟ್ಟಿಕೊಳ್ಳುವರು. ಆಹಾರ ವ್ಯತ್ಯಾಸದಿಂದ ದೇಹ ಬಾಧೆಯು ಕಾಣಿಸಿಕೊಳ್ಳುವುದು. ಮನೆಯ ಕಾರ್ಯದಲ್ಲಿ ಇಂದು ಮಗ್ನರಾಗುವಿರಿ. ನಿಮ್ಮ ಬಗ್ಗಯೇ ನೀವು ಹೇಳಿಕೊಳ್ಳುವುದು ಉಚಿತವಾಗದು. ಸಂಗಾತಿಯ ಜೊತೆ ಆಪ್ತಸಮಾಲೋಚನೆಯನ್ನು ಮಾಡುವಿರಿ. ಇರುವ ಸಂಪತ್ತನ್ನು ಗ್ರಹಿಸಿಕೊಂಡು ಯೋಜನೆಯನ್ನು ರೂಪಿಸಿ. ದಾಂಪತ್ಯದಲ್ಲಿ ಕೆಲವು ವಿಚಾರಗಳಿಗೆ ಮಾತನಾಡದೇ ಸುಮ್ಮನಿರುವುದ ಲೇಸು ಎಂದೆನಿಸಬಹುದು. ಗೆಲುವಿನ ನಿರೀಕ್ಷೆಯು ಸಫಲವಾಗುವುದು.
ವೃಷಭ ರಾಶಿ: ಇಂದು ಧನಾತ್ಮಕ ಶಕ್ತಿಯನ್ನು ಅನುಭವಿಸುವಿರಿ. ಅಂದುಕೊಂಡ ಕಾರ್ಯವು ಆಗಿಲ್ಲವೆಂದು ಒದ್ದಾಡಬಹುದು. ಸಂಗಾತಿಯ ಅಪನಂಬಿಕೆಯನ್ನು ಪ್ರಶ್ನಿಸುವ ಮನಸ್ಸು ಮಾಡುವಿರಿ. ಸ್ನೇಹಿತರನ್ನು ದೂರ ಮಾಡಿಕೊಂಡು ಒಂಟಿಯಾಗಿ ಇರಲು ಇಚ್ಛಿಸುವಿರಿ. ಯಾರ ಮೇಲೂ ಹಗುರಾದ ಮನೋಭಾವ ಬೇಡ. ಕೆಟ್ಟ ಸನ್ನಿವೇಶವನ್ನು ನೀವು ಅನಿವಾರ್ಯವಾಗಿ ಎದುರಿಸಬೇಕಾಗಬಹುದು. ದೀರ್ಘಕಾಲದ ಗೆಳೆತನವು ಮಾತಿನಿಂದ ಒಡೆದುಹೋಗಬಹುದು. ಮನೆಯಲ್ಲಿ ಭಿನ್ನಾಭಿಪ್ರಾಯವು ಬರಬಹುದು. ಸ್ವಂತ ಕೆಲಸಗಳಿಗೆ ಸಮಯ ಹೊಂದಾಣಿಕೆ ಮಾಡುವುದು ಕಷ್ಟ. ವಿದ್ಯಾರ್ಥಿಗಳು ಗೊಂದಲದಲ್ಲಿ ಇರಬಹುದು. ಹೇಳಿಕೊಳ್ಳುವುದು ಸೂಕ್ತ. ಸಂಗಾತಿಯಿಂದ ನಿಮಗೆ ಯಾವ ಬೆಂಬಲವೂ ಸಿಗದು. ಯಾರದೋ ಮಾತು ನಿಮಗೆ ಮನಸ್ಸನ್ನು ಮುಟ್ಟಿ ಪರಿವರ್ತನೆ ಆಗಬಹುದು.
ಮಿಥುನ ರಾಶಿ: ಉದ್ಯೋಗವನ್ನು ಬದಲಾಯಿಸಲು ಬಯಸಿದರೆ, ಅವರಿಗೆ ಇಂದು ಉತ್ತಮ ದಿನವಲ್ಲ. ವ್ಯಾಪಾರದಲ್ಲಿ ನಿಮಗೆ ಋಣಾತ್ಮಕ ಹೇಳಿಕೆಗಳು ಕೇಳಿಬರಬಹದು. ಹಣಕಾಸಿನ ವ್ಯವಹಾರವನ್ನು ಬಹಳ ಜಾಗರೂಕತೆಯಿಂದ ಮಾಡಿಕೊಳ್ಳಿ. ಸಾಲವನ್ನು ಹಿಂದಿರುಗಿಸಲು ನಿಮ್ಮ ಹೂಡಿಕೆಯನ್ನು ತೆಗೆಯಬೇಕಾಗುವುದು. ಕೆಲವು ವ್ಯವಹಾರದಲ್ಲಿ ನೀವು ಹಿಂದುಳಿದಂತೆ ನಿಮಗೆ ಅರಿವಾಗುವುದು. ಕಛೇರಿಯಲ್ಲಿ ಇಂದು ಹೇಳಿದ್ದಷ್ಟನ್ನು ಮಾತ್ರ ಮಾಡಿ. ಸಮಾರಂಭಗಳಿಗೆ ಆಹ್ವಾನ ಬರಬಹುದು. ಸಂಗಾತಿಯ ವರ್ತನೆಯು ಹಿಡಿಸದೇ ಇದ್ದೀತು. ಯಾರ ಬಳಿಯೋ ಹಣವನ್ನು ಹೊಂದಿಸಿ ಮಿತ್ರರಿಗೆ ಕೊಡುವಿರಿ. ಒಂದೇರೀತಿಯ ಕೆಲಸವು ನಿಮಗೆ ಬೇಸರ ತರಿಸಬಹುದು.
ಕರ್ಕ ರಾಶಿ: ಇಂದು ಉದ್ಯೋಗದಲ್ಲಿರುವ ನಿಮಗೆ ತಾಳ್ಮೆಯು ಅತ್ಯವಶ್ಯಕ. ಅನ್ಯರ ಪಿತೂರಿಯಿಂದ ನಿಮ್ಮ ಉದ್ಯೋಗವು ಹಾಳಾಗುವುದು. ಮನಸ್ಸಿಗೆ ನೆಮ್ಮದಿಯು ಬೇಕೆಂದು ಅನ್ನಿಸುವುದು. ಎಲ್ಲಿಗಾದರೂ ದೂರ ಪ್ರಯಾಣವನ್ನು ಮಾಡುವಿರಿ. ಉನ್ನತವಾದ ವಿದ್ಯಾಭ್ಯಾಸದ ಕನಸನ್ನು ನೀವು ನನಸು ಮಾಡಿಕೊಳ್ಳುವಿರಿ. ಕೆಲವು ಸವಾಲುಗಳನ್ನು ನೀವು ಎದುರಿಸುವುದು ಅನಿವಾರ್ಯವಾದೀತು. ಮಕ್ಕಳಿಗಾಗಿ ಹಣವನ್ನು ಖರ್ಚು ಮಾಡುವಿರಿ. ಆಲಸ್ಯದಿಂದ ಈ ದಿನವನ್ನು ಕಳೆಯುವಿರಿ. ಉನ್ನತಸ್ಥಾನಕ್ಕೆ ಏರಲು ನಿಮಗೆ ಎಲ್ಲ ಮಾರ್ಗಗಳೂ ಮುಚ್ಚಿದಂತೆ ಕಾಣಿಸುವುದು. ಸಣ್ಣ ವಿಚಾರಗಳಿಗೂ ಸಿಟ್ಟಾಗುವುದನ್ನು ಕಡಿಮೆ ಮಾಡಿಕೊಳ್ಳಿ. ನಿಮಗೆ ಬೇಕಾದ ಹಣವು ಸರಿಯಾದ ಸಮಯಕ್ಕೆ ಸಿಗದೆ ಆಂತಕವಾಗುವುದು. ಅಪರಿಚಿತರು ನಿಮ್ಮ ಬಗ್ಗೆ ನಕಾರಾತ್ಮಕವಾಗಿ ಮಾತನಾಡುವರು.