Rashi Bhavishya: ಇಂದಿನ ರಾಶಿಭವಿಷ್ಯ, ಸ್ತ್ರೀಯರಿಂದ ಈ ರಾಶಿಯವರಿಗೆ ಕೆಲವು ತೊಂದರೆಗಳು ಆಗಬಹುದು

|

Updated on: Jun 16, 2023 | 12:30 AM

ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಜೂನ್ 16) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Rashi Bhavishya: ಇಂದಿನ ರಾಶಿಭವಿಷ್ಯ, ಸ್ತ್ರೀಯರಿಂದ ಈ ರಾಶಿಯವರಿಗೆ ಕೆಲವು ತೊಂದರೆಗಳು ಆಗಬಹುದು
ಇಂದಿನ ರಾಶಿಭವಿಷ್ಯ
Image Credit source: freepik
Follow us on

ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚೆನ್ನಾಗಿರಬೇಕು. ಹಾಗಾದರೆ 2023 ಜೂನ್ 16 ಶುಕ್ರವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಅಶುಭ ಇದೆಯಾ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರಮ ಉತ್ತರಾಯಣ, ವಸಂತ ಋತು, ವೃಷಭ ಮಾಸ, ಮಹಾನಕ್ಷತ್ರ: ಮೃಗಶಿರಾ, ಮಾಸ: ಜ್ಯೇಷ್ಠ, ಪಕ್ಷ: ಕೃಷ್ಣ, ವಾರ: ಗುರು, ತಿಥಿ: ದ್ವಾದಶೀ, ನಿತ್ಯನಕ್ಷತ್ರ: ಭರಣೀ, ಯೋಗ: ಅತಿಗಂಡ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 04 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆಗೆ, ರಾಹು ಕಾಲ ಮಧ್ಯಾಹ್ನ 02:10 ರಿಂದ 03:47ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 06:05 ರಿಂದ 07:42ರ ವರೆಗೆ, ಗುಳಿಕ ಕಾಲ ಬೆಳಗ್ಗೆ 09:19 ರಿಂದ 10:56ರ ವರೆಗೆ.

ಸಿಂಹ: ಇಂದು ನಿಮ್ಮ ಉತ್ಸಾಹವು ಕಡಿಮೆ‌ ಇರಲಿದೆ. ನಿಮ್ಮ‌ ಪ್ರೀತಿಯನ್ನು ಹಂಚಿಕೊಳ್ಳಲು ಕಷ್ಟಪಡುವಿರಿ. ನಿಮ್ಮ‌ ಸ್ವಾರ್ಥ ಮನೋಭಾವವು ನಿಮ್ಮನ್ನು ಸಣ್ಣವರನ್ನಾಗಿ ಮಾಡಬಹುದು. ಅಧ್ಯಾತ್ಮದ ಕಡೆ ನಿಮ್ಮ‌ ಗಮನ ಸ್ವಲ್ಪ ಹೋಗಬಹುದು. ಅನಿರೀಕ್ಷಿತ ಅತಿಥಿಯ ಆಗಮನವಾಗಲಿದೆ. ನಿಮ್ಮ ಹಣವನ್ನು ಇನ್ನೊಬ್ಬರ ಕೈಯಲ್ಲಿ ಕೊಟ್ಟು ಬಿಡುವಿರಿ. ದುಪ್ಪಟ್ಟು ಹಣವನ್ನು ಕೊಟ್ಟು ನೀವು ಮನೆಗೆ ಬೇಕಾದ ವಸ್ತುಗಳನ್ನು ಖರೀದಿಸುವಿರಿ. ನೀವು ಇಂದು ಹೆಸರಿನ ಬೆನ್ನೇರುವ ಸಾಧ್ಯತೆ ಇದೆ. ನಿಮ್ಮ ನಡೆಯ ಕುರಿತು ಕಛೇರಿಯಲ್ಲಿ ಮಾತುಗಳು ಬರಬಹುದು. ಸಿಕ್ಕ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳುವುದು ಒಳ್ಳೆಯದು.

ಕನ್ಯಾ: ದೊಡ್ಡ ಕಲ್ಪನೆಯನ್ನು ನೀವು ಇಟ್ಟುಕೊಂಡು ಮುಂದವರಿಯುವಿರಿ. ವಿದ್ಯಾರ್ಥಿಗಳು ಅಲ್ಪ ಯಶಸ್ಸಿಗೆ ಸಂತೋಷಪಡಬೇಕಾದೀತು. ನಿಮಗೆ ಉಂಟಾದ ಮಾನಸಿಕ ನೋವನ್ನು ಹೇಗಾದರೂ ಮಾಡಿ ಕಳೆದುಕೊಳ್ಳಲು ಪ್ರಯತ್ನಿಸುವಿರಿ. ವಿದೇಶದಲ್ಲಿ ಇರುವವರಿಗೆ ಅಶುಭವಾರ್ತೆಯು ಬರಬಹುದು. ಇನ್ನೊಬ್ಬರಿಗೆ ಸಹಾಯ ಮಾಡಲು ಹೋಗಿ ನೀವೇ ಅಪತ್ತಿಗೆ ಸಿಲುಕಿಕೊಳ್ಳುವ ಸಾಧ್ಯತೆ ಇದೆ‌. ನೀವು ಇಂದು ಅಪ್ರಾಮಾಣಿಕರಾಗಿ ಗುರುತಿಸಿಕೊಳ್ಳುವಿರಿ. ನಿಮಗೆ ಮನೆಯವರಿಂದ ಅಪಮಾನವೂ ಆಗಬಹುದು. ದುಃಖಸುವ ಬದಲು ಮಾಡಬೇಕಾದುದರ ಬಗ್ಗೆ ಗಮನವಿರುವುದು ಒಳ್ಳೆಯದು.

ತುಲಾ: ಸಜ್ಜನರ ಸಹವಾಸ ಸಿಗಲಿದೆ. ನಿಮ್ಮನ್ನು ಗೌರವಿಸಬಹುದು. ಅನಾರೋಗ್ಯದ ಕಾರಣ ನೀವು ಸಾಲವನ್ನು ಮಾಡಬೇಕಾಗಬಹುದು. ನಿಮ್ಮ ಕೂಡಿಟ್ಟ ಹಣವು ಆಪತ್ಕಾಲದಲ್ಲಿ ಸಿಗುವುದು ಕಷ್ಟವಾದೀತು. ಇಂದಿನ ನಿಮ್ಮ ಏಕಾಂತವು ನಿಮಗೆ ಖುಷಿ ಕೊಟ್ಟೀತು. ಧಾರ್ಮಿಕ ಕಾರ್ಯಕ್ರಮವು ಸಾಂಗವಾಗಿ ನಡೆದು ಮನಸ್ಸು ನೆಮ್ಮದಿಯನ್ನು ಹೊಂದುವುದು. ಕಾಲವನ್ನು ಕಾಯಲು ನಿಮಗೆ ಕಷ್ಟವಾದೀತು. ಆದರೆ ಇದು ಅನಿವಾರ್ಯವಾಗುವುದು. ದೊಡ್ಡ ವಾಹನವನ್ನು ಚಲಾಯಿಸುವಾಗ ಎಚ್ಚರಿಕೆ ಇರಲಿ. ಭೂಮಿಯ ಖರೀದಿಯು ನಿಮಗೆ ಅನಿವಾರ್ಯವಾಗಲಿದೆ‌.

ವೃಶ್ಚಿಕ: ನಿಮ್ಮ ಬಂಧುಮಿತ್ರರು ನಿಮಗೆ ಸಲ್ಲದ್ದನ್ನು ಮಾಡುವರು. ಅವರ ಜೊತೆ ಕಲಹವಾಗುವ ಸಾಧ್ಯತೆ ಇದೆ. ಆಸ್ತಿಯ ವಿಚಾರದಲ್ಲಿ ನಿಮಗೆ ಸಮಪಾಲ ಸಿಗದೇ ಹೋಗಬಹುದು. ಅನ್ಯರನ್ನು ನಿಂದಿಸುವುದು ನಿಮಗೆ ಸಹಜವಾಗಿರಬಹುದು. ತಾಳ್ಮೆಯನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ವ್ಯಾಪಾರದಲ್ಲಿ ನಿಮಗೆ ನಷ್ಟವಾಗಬಹುದು. ಸ್ತ್ರೀಯರಿಂದ ನಿಮಗೆ ಕೆಲವು ತೊಂದರೆಗಳು ಆಗಬಹುದು. ದಾಂಪತ್ಯದ ಸಮಸ್ಯೆಯನ್ನು ಕುಳಿತು ಬಗೆಹರಿಸಿಕೊಳ್ಳುವುದು ಉತ್ತಮ. ಅನುಮಾನವು ನಿಮ್ಮ ಸಂಬಂಧಗಳನ್ನು ದೂರಮಾಡಬಹುದು.

-ಲೋಹಿತಶರ್ಮಾ ಇಡುವಾಣಿ