Daily Horoscope 16 June: ಇಂದಿನ ರಾಶಿಭವಿಷ್ಯ, ಈ ರಾಶಿಯವರ ಸತ್ಯವಾದ ಮಾತಿನಿಂದ ಸಂಕಟವಾಗಬಹುದು

ಇಂದಿನ (2023 ಜೂನ್​ 16) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

Daily Horoscope 16 June: ಇಂದಿನ ರಾಶಿಭವಿಷ್ಯ, ಈ ರಾಶಿಯವರ ಸತ್ಯವಾದ ಮಾತಿನಿಂದ ಸಂಕಟವಾಗಬಹುದು
ಇಂದಿನ ರಾಶಿಭವಿಷ್ಯImage Credit source: freepik
Follow us
Rakesh Nayak Manchi
|

Updated on: Jun 16, 2023 | 12:01 AM

ಶುಭೋದಯ ಓದುಗ ಮಿತ್ರರೇ.. ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ನೋಡುತ್ತಾರೆ. ಇದರ ಜೊತೆಗೆ ನಿತ್ಯಪಂಚಾಂಗ ಕೂಡ ಓದುತ್ತಾರೆ. ಹಾಗಾದರೆ ಇಂದಿನ (2023 ಜೂನ್​ 15) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ವೃಷಭ ಮಾಸ, ಮಹಾನಕ್ಷತ್ರ: ಮೃಗಶಿರಾ, ಮಾಸ: ಜ್ಯೇಷ್ಠ, ಪಕ್ಷ: ಕೃಷ್ಣ, ವಾರ: ಶುಕ್ರ, ತಿಥಿ: ತ್ರಯೋದಶೀ, ನಿತ್ಯನಕ್ಷತ್ರ: ಕೃತ್ತಿಕಾ, ಯೋಗ: ಸುಕರ್ಮಾ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 04 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 01 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 10:56 ರಿಂದ ಮಧ್ಯಾಹ್ನ 12:33ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 03:47 ರಿಂದ 05:24ರ ವರೆಗೆ, ಗುಳಿಕ ಕಾಲ ಬೆಳಗ್ಗೆ 07:42 ರಿಂದ 09:19ರ ವರೆಗೆ.

ಮೇಷ: ಯಾರ ಮೇಲೂ ಒತ್ತಡವನ್ನು ಹೇರುವುದು ಬೇಡ. ಅವರವರ ಬದುಕು ಅವರವರಿಗೇ ಇರಲಿದೆ. ನೀವು ಅವರನ್ನು ದಾರಿತಪ್ಪಿಸುವ ಅವಶ್ಯಕತೆ ಇಲ್ಲ. ನಿಮ್ಮ ಮಾರ್ಗದ ಬಗ್ಗೆ ನಿಮಗೆ ಸ್ಪಷ್ಟತೆ ಇರಲಿ. ನಿಮ್ಮ ನೆಮ್ಮದಿಯನ್ನು ಕದಡುವ ಸಂದರ್ಭಗಳು ಬಂದರೆ ನೀವು ಇರಬೇಕಾದ ಸ್ಥಿತಿಯಲ್ಲಿ ಇರಿ. ಆರ್ಥಿಕವಾಗಿ ನೀವು ಇಂದು ಅಲ್ಪ ಬಲರು. ಸಹಜ ಬೆಳವಣಿಗೆಗೆ ನಿಮ್ಮ ಒತ್ತು ಹೆಚ್ಚಿರಲಿ‌. ಮಿತ್ರರ ಜೊತೆ ಹೆಚ್ಚು ಕಾಲವನ್ನು ಕಳೆಯುವಿರಿ. ನೀವು ಒಂಟಿಯಾಗೇ ಇರಲು ಇಚ್ಛಿಸುವವರು, ಹಾಗೆಯೇ ಇರುವುದು ಒಳ್ಳೆಯದು.

ವೃಷಭ: ಸಿರಿವಂತರಾಗಲು ನೀವು ಆಯ್ಕೆ ಮಾಡಿಕೊಂಡ ದಾರಿ‌ಯು ಸರಿಯಿರದು. ನಿಮ್ಮ ಬಗ್ಗೆಯೇ ನೀವು ಅವಲೋಕನ ಮಾಡಿಕೊಂಡು ನಿರ್ಧಾರವನ್ನು ತೆಗೆದುಕೊಳ್ಳಿ. ನೀವು ಇಂದು ಸ್ವಭಾವವನ್ನು ಬದಲಿಸಿಕೊಳ್ಳುವ ಸಾಧ್ಯತೆ ಇದೆ. ಹಠದ ಸ್ವಭಾವವು ನಿಮಗೆ ಶ್ರೇಯಸ್ಸನ್ನು ತಂದುಕೊಡದು. ನಿಮ್ಮವರ ಮಾತಿಗೆ ಒಪ್ಪಿಗೆ ಸೂಚಿಸುವುದು ಅತ್ಯವಶ್ಯಕ. ಬಂದ ಸಮಸ್ಯಗಳಿಗೆ ಒಂದೇ ಉತ್ತರವಿರದು. ಮಾರ್ಗಗಳನ್ನು ಹುಡುಕಲು ನಿಮಗೆ ಆಸಕ್ತಿ ಕಡಿಮೆ ಇರಲಿದೆ‌. ಮಾತುಗಳು ಬಹಳ ಕಠೋರವಿರಲಿದೆ. ಏನನ್ನಾದರೂ ಸಾಧಿಸಲು ಯೋಚಿಸುವುದು ಒಳ್ಳೆಯದು. ತೊಂದರೆಗಳನ್ನು ಜೀರ್ಣಮಾಡಿಕೊಳ್ಳುವುದು ನಿಮಗೆ ಅಭ್ಯಾಸವಾಗಿದೆ.

ಮಿಥುನ: ಕೇಳಿದ್ದನ್ನು ಸಂಗಾತಿಯಿಂದ ಪಡೆಯಲು ಅಸಾಧ್ಯವಾದೀತು. ವಾಯುವಿಹಾರಕ್ಕೆ ನೀವು ಸಂಗಾತಿಯ ಜೊತೆ ಹೋಗಬಹುದು. ಆರೋಗ್ಯವನ್ನು ನೀವು ಗಮನದಲ್ಲಿಟ್ಟುಕೊಂಡು ಆಹಾರವನ್ನು ಸ್ವೀಕರಿಸಿ. ನಿಮಗೆ ಸಿಗವ ಅಧಿಕಾರಕ್ಕೆ ಯಾರನ್ನೋ ಅಪರಾಧಿಗಳನ್ನಾಗಿ ಮಾಡಬಹುದು. ನಿಮ್ಮ ಸಾಮರ್ಥ್ಯದ ಬಗ್ಗೆ ನಿಮಗೆ ನಂಬಿಕೆ ಇದ್ದರೂ ಅದನ್ನು ಪ್ರದರ್ಶನಕ್ಕೆ ಇಟ್ಟು ಅಪಮಾನಕ್ಕೆ ಒಳಗಾಗುವಿರಿ. ಸುಯೋಗದ ಲಕ್ಷಣವು ಇಂದು ನಿಮಗೆ ಕಾಣಿಸಿಕೊಳ್ಳುವುದು. ಮನೆಯ ಕೆಲಸದ ಅಂದಾಜು ತಪ್ಪಿಹೋಗಬಹುದು‌. ಅಪರೂಪದ ಬಂಧುಗಳನ್ನು ನೀವು ಭೇಟಿಯಾಗುವಿರಿ. ಆಪ್ತ ಸಮಾಲೋಚನೆ ನಡೆಯುವುದು.

ಕರ್ಕಾಟಕ: ಆತುರದ ವ್ಯವಹಾರದಿಂದ ನಿಮಗೆ ಉತ್ತಮ‌ ಅವಕಾಶಗಳನ್ನು ಕಳೆದುಕೊಳ್ಳಬಹುದು. ನೀವು ಅಂದುಕೊಳ್ಳುವ ವಿಚಾರಗಳು ನಿಮ್ಮದಷ್ಟೇ ಆಗಿರುವುದಿಲ್ಲ. ಶತ್ರುಗಳ ಮೇಲೆ‌ ನಿಮ್ಮ ಗಮನವು ಇರಲಿದೆ. ನಿಮಗೆ ಅನಿವಾರ್ಯ ಕೆಲಸವು ಬಂದಿರುವುದರಿಂದ ನಿಮ್ಮ ಕೆಲಸವನ್ನು ಸ್ನೇಹಿತರಿಗೆ ಮಾಡಲು ಕೊಡುವಿರಿ. ತಿಳಿವಳಿಕೆಯ ಮಟ್ಟವನ್ನು ನೀವೇ ತಿಳಿಯುವಿರಿ. ಸರಿಯಾದ ಸಮಯಕ್ಕೆ ಆಹಾರವನ್ನು ಸೇವಿಸಿ. ವಿವಾಹದ ಮಾತುಕತೆಗಳಿಂದ ನೀವು ಬೇಸರಗೊಳ್ಳಬಹುದು. ಆಹಾರಕ್ಕಾಗಿ ಹಣವನ್ನು ಖರ್ಚುಮಾಡುವಿರಿ. ಎಂದೂ ಸಂಭವಿಸಬಾರದು ಎಂಬ ವಿಚಾರವು ಇಂದು ಸಂಭವಿಸುವುದು.

ಸಿಂಹ: ಇಂದು ನಿಮ್ಮ ಉತ್ಸಾಹವು ಕಡಿಮೆ‌ ಇರಲಿದೆ. ನಿಮ್ಮ‌ ಪ್ರೀತಿಯನ್ನು ಹಂಚಿಕೊಳ್ಳಲು ಕಷ್ಟಪಡುವಿರಿ. ನಿಮ್ಮ‌ ಸ್ವಾರ್ಥ ಮನೋಭಾವವು ನಿಮ್ಮನ್ನು ಸಣ್ಣವರನ್ನಾಗಿ ಮಾಡಬಹುದು. ಅಧ್ಯಾತ್ಮದ ಕಡೆ ನಿಮ್ಮ‌ ಗಮನ ಸ್ವಲ್ಪ ಹೋಗಬಹುದು. ಅನಿರೀಕ್ಷಿತ ಅತಿಥಿಯ ಆಗಮನವಾಗಲಿದೆ. ನಿಮ್ಮ ಹಣವನ್ನು ಇನ್ನೊಬ್ಬರ ಕೈಯಲ್ಲಿ ಕೊಟ್ಟು ಬಿಡುವಿರಿ. ದುಪ್ಪಟ್ಟು ಹಣವನ್ನು ಕೊಟ್ಟು ನೀವು ಮನೆಗೆ ಬೇಕಾದ ವಸ್ತುಗಳನ್ನು ಖರೀದಿಸುವಿರಿ. ನೀವು ಇಂದು ಹೆಸರಿನ ಬೆನ್ನೇರುವ ಸಾಧ್ಯತೆ ಇದೆ. ನಿಮ್ಮ ನಡೆಯ ಕುರಿತು ಕಛೇರಿಯಲ್ಲಿ ಮಾತುಗಳು ಬರಬಹುದು. ಸಿಕ್ಕ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳುವುದು ಒಳ್ಳೆಯದು.

ಕನ್ಯಾ: ದೊಡ್ಡ ಕಲ್ಪನೆಯನ್ನು ನೀವು ಇಟ್ಟುಕೊಂಡು ಮುಂದವರಿಯುವಿರಿ. ವಿದ್ಯಾರ್ಥಿಗಳು ಅಲ್ಪ ಯಶಸ್ಸಿಗೆ ಸಂತೋಷಪಡಬೇಕಾದೀತು. ನಿಮಗೆ ಉಂಟಾದ ಮಾನಸಿಕ ನೋವನ್ನು ಹೇಗಾದರೂ ಮಾಡಿ ಕಳೆದುಕೊಳ್ಳಲು ಪ್ರಯತ್ನಿಸುವಿರಿ. ವಿದೇಶದಲ್ಲಿ ಇರುವವರಿಗೆ ಅಶುಭವಾರ್ತೆಯು ಬರಬಹುದು. ಇನ್ನೊಬ್ಬರಿಗೆ ಸಹಾಯ ಮಾಡಲು ಹೋಗಿ ನೀವೇ ಅಪತ್ತಿಗೆ ಸಿಲುಕಿಕೊಳ್ಳುವ ಸಾಧ್ಯತೆ ಇದೆ‌. ನೀವು ಇಂದು ಅಪ್ರಾಮಾಣಿಕರಾಗಿ ಗುರುತಿಸಿಕೊಳ್ಳುವಿರಿ. ನಿಮಗೆ ಮನೆಯವರಿಂದ ಅಪಮಾನವೂ ಆಗಬಹುದು. ದುಃಖಸುವ ಬದಲು ಮಾಡಬೇಕಾದುದರ ಬಗ್ಗೆ ಗಮನವಿರುವುದು ಒಳ್ಳೆಯದು.

ತುಲಾ: ಸಜ್ಜನರ ಸಹವಾಸ ಸಿಗಲಿದೆ. ನಿಮ್ಮನ್ನು ಗೌರವಿಸಬಹುದು. ಅನಾರೋಗ್ಯದ ಕಾರಣ ನೀವು ಸಾಲವನ್ನು ಮಾಡಬೇಕಾಗಬಹುದು. ನಿಮ್ಮ ಕೂಡಿಟ್ಟ ಹಣವು ಆಪತ್ಕಾಲದಲ್ಲಿ ಸಿಗುವುದು ಕಷ್ಟವಾದೀತು. ಇಂದಿನ ನಿಮ್ಮ ಏಕಾಂತವು ನಿಮಗೆ ಖುಷಿ ಕೊಟ್ಟೀತು. ಧಾರ್ಮಿಕ ಕಾರ್ಯಕ್ರಮವು ಸಾಂಗವಾಗಿ ನಡೆದು ಮನಸ್ಸು ನೆಮ್ಮದಿಯನ್ನು ಹೊಂದುವುದು. ಕಾಲವನ್ನು ಕಾಯಲು ನಿಮಗೆ ಕಷ್ಟವಾದೀತು. ಆದರೆ ಇದು ಅನಿವಾರ್ಯವಾಗುವುದು. ದೊಡ್ಡ ವಾಹನವನ್ನು ಚಲಾಯಿಸುವಾಗ ಎಚ್ಚರಿಕೆ ಇರಲಿ. ಭೂಮಿಯ ಖರೀದಿಯು ನಿಮಗೆ ಅನಿವಾರ್ಯವಾಗಲಿದೆ‌.

ವೃಶ್ಚಿಕ: ನಿಮ್ಮ ಬಂಧುಮಿತ್ರರು ನಿಮಗೆ ಸಲ್ಲದ್ದನ್ನು ಮಾಡುವರು. ಅವರ ಜೊತೆ ಕಲಹವಾಗುವ ಸಾಧ್ಯತೆ ಇದೆ. ಆಸ್ತಿಯ ವಿಚಾರದಲ್ಲಿ ನಿಮಗೆ ಸಮಪಾಲ ಸಿಗದೇ ಹೋಗಬಹುದು. ಅನ್ಯರನ್ನು ನಿಂದಿಸುವುದು ನಿಮಗೆ ಸಹಜವಾಗಿರಬಹುದು. ತಾಳ್ಮೆಯನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ವ್ಯಾಪಾರದಲ್ಲಿ ನಿಮಗೆ ನಷ್ಟವಾಗಬಹುದು. ಸ್ತ್ರೀಯರಿಂದ ನಿಮಗೆ ಕೆಲವು ತೊಂದರೆಗಳು ಆಗಬಹುದು. ದಾಂಪತ್ಯದ ಸಮಸ್ಯೆಯನ್ನು ಕುಳಿತು ಬಗೆಹರಿಸಿಕೊಳ್ಳುವುದು ಉತ್ತಮ. ಅನುಮಾನವು ನಿಮ್ಮ ಸಂಬಂಧಗಳನ್ನು ದೂರಮಾಡಬಹುದು.

ಧನುಸ್ಸು: ಸಾಹಿತ್ಯ ಕ್ಷೇತ್ರದಲ್ಲಿ ನೀವು ಸಾಧಿಸುವ ಕೆಲಸದ ಬಗ್ಗೆ ಇಂದು ಯೋಚಿಸುವಿರಿ. ಉದ್ಯೋಗದಲ್ಲಿ ನಿಮ್ಮ ಶಿಸ್ತಿನ ಕೆಲಸಕ್ಕೆ ಪ್ರಶಂಸೆ ಸಿಗಲಿದೆ. ರಾಜಕಾರಣಿಗಳು ನಿಮಗೆ ಬೇಕಾದ ಸಹಾಯವನ್ನು ಮಾಡುವರು. ಆರ್ಥಿಕತೆಯನ್ನು ಸರಿದೂಗಿಸಲು ನೀವು ಏನಾದರೂ ಹೊಸ ಯೋಜನೆಯನ್ನು ರೂಪಿಸಬಹುದು. ಯಾರೋ ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಲು ನಿಮಗೆ ಸಾಕಾಗುವುದು. ಅನಾರೋಗ್ಯದಿಂದ ನಿಮಗೆ ನಿಮ್ಮ ಕೆಲಸವನ್ನೂ ಮಾಡಿಕೊಳ್ಳಲು ಕಷ್ಟವಾದೀತು. ಧಾರ್ಮಿಕ ಆಚರಣೆಯು ನಿಮಗೆ ನಿಷ್ಪ್ರಯೋಜಕ ಎನಿಸಬಹುದು. ಹೊಸ ಉದ್ಯೋಗದಲ್ಲಿ ಅನೇಕ ಗೊಂದಲಗಳು ಇರಬಹುದು.

ಮಕರ: ಯಾರದೋ ಆಡಿದ ಮಾತಿನಿಂದ ನೀವು ನಿಮ್ಮವರನ್ನು ಕಳೆದುಕೊಳ್ಳಬಹುದು. ನೀವು ಮಾಡಲು ಹೊರಟ ಕೆಲಸಕ್ಕೆ ಹಿತಶತ್ರುಗಳಿಂದಲೇ ತೊಂದರೆಯಾಗಬಹುದು. ವಿದ್ಯಾಭ್ಯಾಸಕ್ಕೆ ತಕ್ಕುದಾದ ಕೆಲಸವನ್ನು ಅನ್ವೇಷಿಸಲು ಹೆಚ್ಚು ಕಷ್ಟ ಬೀಳುವಿರಿ. ಸರ್ಕಾರಿ ಕೆಲಸಕ್ಕೆ ನಿಮಗೆ ಅವಕಾಶಗಳು ಸಿಗದೇ ಹೋಗಬಹುದು. ಉನ್ನತ ವಿದ್ಯಾಭ್ಯಾಸಕ್ಕೆ ಮನೆಯಿಂದ ದೂರವಿರುವಿರಿ. ಸ್ನೇಹಿತರು ನಿಮ್ಮನ್ನು ಅನ್ಯ ಮಾರ್ಗಕ್ಕೆ ಕೊಂಡಯ್ಯಬಹುದು. ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ಸ್ತ್ರೀಯರು ಆದಷ್ಟು ಜಾಗರೂಕತೆಯಿಂದ ಇರುವುದು ಒಳ್ಳೆಯದು. ನಿಮ್ಮ ಬಲವನ್ನು ನೀವು ಕಂಡುಕೊಳ್ಳಲಿದ್ದೀರಿ. ಸ್ವಲ್ಪ ಧನಲಾಭವೂ ಆಗಲಿದೆ.

ಕುಂಭ: ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ಆಲಸ್ಯತನವನ್ನು ತೋರಿಸುವರು. ನಿಮ್ಮ ಆಲೋಚನೆಗಳು ನಕಾರಾತ್ಮಕವಾಗಿ ಇರಲಿದೆ. ನೀವು ಇಂದು ಕುಲದೇವರ ದರ್ಶನಕ್ಕೆ ತೆರಳಲಿದ್ದೀರಿ. ನಿಮ್ಮ ಆಸಕ್ತಿಯ ಕೆಲಸವನ್ನು ಇಂದು ಮಾಡಲಾಗದೇ ಇದ್ದೀತು. ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ನೀವು ಸಶಕ್ತರಾಗಬಲ್ಲಿರಿ. ನಿಮ್ಮ ಹೆಜ್ಜೆಗಳನ್ನು ದೃಢವಾಗಿ ಮೂಡಿಸಲು ನೀವು ಹೊಸ ಯತ್ನವನ್ನು ಮಾಡುವಿರಿ. ಅಧಿಕಾರದ ದುರುಪಯೋಗವಾಗಬಹುದು. ನಿಮ್ಮನ್ನು ನಂಬಿದವರಿಗೆ ಸಹಾಯವನ್ನು ಮಾಡಲು ಇಚ್ಛಿಸುವಿರಿ. ಪ್ರಶಾಂತ ಮನಸ್ಸಿಗೆ ಸಣ್ಣದೊಂದು ಕಲ್ಲು ಬೀಳಬಹುದು.

ಮೀನ: ನೀವು ಇಂದು ಶುಭಸುದ್ದಿಯ ನಿರೀಕ್ಷೆಯಲ್ಲಿ ಇರುವಿರಿ. ಮಕ್ಕಳ‌ ಬಗ್ಗೆ ಅತಿಯಾದ ಕಾಳಜಿ ಇರಲಿದೆ. ನಿಮ್ಮದಾದ ಕೆಲಸಗಳನ್ನು ಇಂದು ಬಾಕಿ ಉಳಿಸಿಕೊಳ್ಳುವುದು ಬೇಡ. ಉದ್ಯಮಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ನೀವು ಒಬ್ಬರೇ ತೆಗೆದುಕೊಳ್ಳಬೇಡಿ. ಹಳೆಯ ನೋವುಗಳು ಕಾಣಿಸಿಕೊಳ್ಳಬಹುದು. ಸೂಕ್ತ ಚಿಕಿತ್ಸೆ ಅವಶ್ಯಕ. ನೂತನ ವಧೂ-ವರರು ಹೊಸ ಕನಸನ್ನು ಕಟ್ಟಿಕೊಳ್ಳುವರು. ನಿಮ್ಮ ವರ್ತನೆಯಿಂದ ನಿಮ್ಮನ್ನು ನೋಡುವ ವ್ಯಕ್ತಿತ್ವ ಬದಲಾಗಬಹುದು. ತೆರೆಮರೆಯಲ್ಲಿ ಇದ್ದರೆ, ಇಂದು ಹೊರಾಂಗಣಕ್ಕೆ ಬರಬಹುದು. ನೀವಾಡುವ ಸತ್ಯವಾದ ಮಾತಿನಿಂದ ಸಂಕಟವಾಗಬಹುದು.

-ಲೋಹಿತಶರ್ಮಾ ಇಡುವಾಣಿ (ವಾಟ್ಸ್​ಆ್ಯಪ್ 8762924271)

‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ