AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rashi Bhavishya: ಮೇಷ, ವೃಷಭ, ಮಿಥುನ, ಕಟಕ ರಾಶಿಗಳ ಇಂದಿನ ಭವಿಷ್ಯ ಹೀಗಿದೆ

ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಜೂನ್ 14) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Rashi Bhavishya: ಮೇಷ, ವೃಷಭ, ಮಿಥುನ, ಕಟಕ ರಾಶಿಗಳ ಇಂದಿನ ಭವಿಷ್ಯ ಹೀಗಿದೆ
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on: Jun 15, 2023 | 12:10 AM

Share

ಶುಭೋದಯ ಓದುಗರೇ ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದರೆ ಇಂದಿನ (2023 ಜೂನ್​ 15) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರಮ ಉತ್ತರಾಯಣ, ವಸಂತ ಋತು, ವೃಷಭ ಮಾಸ, ಮಹಾನಕ್ಷತ್ರ: ಮೃಗಶಿರಾ, ಮಾಸ: ಜ್ಯೇಷ್ಠ, ಪಕ್ಷ: ಕೃಷ್ಣ, ವಾರ: ಗುರು, ತಿಥಿ: ದ್ವಾದಶೀ, ನಿತ್ಯನಕ್ಷತ್ರ: ಭರಣೀ, ಯೋಗ: ಅತಿಗಂಡ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 04 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆಗೆ, ರಾಹು ಕಾಲ ಮಧ್ಯಾಹ್ನ 02:10 ರಿಂದ 03:47ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 06:05 ರಿಂದ 07:42ರ ವರೆಗೆ, ಗುಳಿಕ ಕಾಲ ಬೆಳಗ್ಗೆ 09:19 ರಿಂದ 10:56ರ ವರೆಗೆ.

ಮೇಷ: ನಿಮ್ಮದಾದ ಕೆಲವು ನಿಲುವುಗಳಿಗೆ ನೀವು ಬದ್ಧರಾಗಿರಿ. ಧನವ್ಯವಹಾರದಲ್ಲಿ ನಿಮ್ಮನ್ನು ಯಾರಾದರೂ ವಂಚಿಸಬಹುದು. ಅನಿವಾರ್ಯತೆಯನ್ನು ಹೊರತುಪಡಿಸಿ ಯಾವುದೇ ಕಾರಣಕ್ಕೂ ನೀವು ನಿಮ್ಮ ನಡತೆಯನ್ನು ಬದಲಿಸಿಕೊಳ್ಳಲು ಹೋಗುವುದು ಬೇಡ. ಹಿರಿಯರಿಗೆ ಕೊಡಬೇಕಾದ ಗೌರವವನ್ನು ಕೊಡುವಿರಿ.‌ ಆಪ್ತರು ದೂರವಾಗುವ ಸಂಕಟವನ್ನು ನೀವು ಜೀರ್ಣಿಸಿಕೊಳ್ಳುವ ಅಗತ್ಯವಿದೆ. ಆಪ್ತರಿಂದ ಉಡುಗೊರೆ ಸಿಗಬಹುದು. ನಿಮ್ಮ ಕೆಲಸದಲ್ಲಿ ನೀವು ಮಗ್ನರಾಗುವಿರಿ. ನೆಮ್ಮದಿಯನ್ನು ನೀವು ಪಡೆಯಲು ಪ್ರಯತ್ನಿಸುವಿರಿ.

ವೃಷಭ: ಸ್ಚಂತ ಕಾರ್ಯಗಳಿಗೆ ಸಮಯವನ್ನು ಹೊಂದಿಸಲು ನಿಮಗೆ ಕಷ್ಟವಾದೀತು. ಸಂಗಾತಿಯ ಬೆಂಬಲವನ್ನು ಪಡೆಯಲು ನೀವು ಸೋಲುವಿರಿ. ನಿಮ್ಮ ಹಠದ ಸ್ವಭಾವವು ಹೆಚ್ಚಿನ ಶುಭವನ್ನೇ ಕಳೆದುಕೊಳ್ಳುವಂತೆ ಮಾಡುವುದು. ಯಾರದೋ ಕೋಪವನ್ನು ಮತ್ಯಾರದೋ ಮೇಲೆ ತೀರಿಸಿಕೊಳ್ಳಲು ಹೋಗಬಹುದು. ಒಂದರಮೇಲೊಂದರಂತೆ ನಿಮಗೆ ಕರೆಗಳು ಬರಬಹುದು. ಅದನ್ನು ನಿವಾರಿಸಿಕೊಳ್ಳಲು ನಿಮಗೆ ಕಷ್ಟವಾದೀತು. ನಿಮ್ಮ ಚಿಂತನೆಯನ್ನು ಅರ್ಧಕ್ಕೆ ಕೈ ಬಿಟ್ಟು ಇನ್ನೊಬ್ಬರ ಕೆಲಸದಲ್ಲಿ ಭಾಗಿಯಾಗುವಿರಿ. ಮಹಾಗಣಪತಿಯನ್ನು ಕೆಲಸಕ್ಕೂ ಮೊದಲು ಪ್ರಾರ್ಥಿಸಿ.

ಮಿಥುನ: ಮನೆಯವರ ಪ್ರೀತಿಯನ್ನು ನೀವು ಕಳೆದುಕೊಳ್ಳುವಿರಿ. ನಿಮ್ಮ ಮಾತು ಅವರಿಗೆ ಬೇಸರವನ್ನು ತರಿಸೀತು. ಉದ್ಯೋಗದಲ್ಲಿ ಹೆಚ್ಚು ಒತ್ತಡ ಇರಲಿದೆ. ಸಹೋದ್ಯೋಗಿಗಳ ಸಹಾಯವನ್ನೂ ನೀವು ಪಡೆಯಬಹುದಾಗಿದೆ. ಹಿತಶತ್ರುವು ಬೆಂಬಲಿಸಿದಂತೆ ತೋರಲಿದೆ. ಸಮಾರಂಭಗಳಿಗೆ ನೀವು ಭಾಗವಹಿಸಲಿದ್ದೀರಿ. ತುರ್ತು ಪ್ರಯಾಣ ಮಾಡುವ ಅನಿವಾರ್ಯತೆ ಎದುರಾಗಬಹುದು. ನಿಮಗೆ ಇಂದು ಅಶುಭವಾರ್ತೆಯು ಕೇಳಿಬರಬಹುದು. ಕೆಲಸವನ್ನು ಮುಕ್ತಾಯಗೊಳಿಸದೇ ಇರಲು ನಾನಾ ಕಾರಣಗಳು ದೊರೆಯಬಹುದು.

ಕರ್ಕ: ಸಾಮಾಜಿಕ ಕಾರ್ಯವು ನಿಮ್ಮ‌ ಯಶಸ್ಸನ್ನು ತಂದುಕೊಡಬಹುದು. ಕೊರತೆಗಳನ್ನು ನೀಗಲು ನೀವು ಸ್ನೇಹಿತರಿಂದ ಸಹಾಯವನ್ನು ಪಡೆಯುವಿರಿ. ವಿಷಯದ ಸರಿಯಾದ ಆಯ್ಕೆ ಮಾಡಲು ನಿಮಗೆ ಕಷ್ಟವಾದೀತು.‌ ಶಿಕ್ಷಕವೃತ್ತಿಯಲ್ಲಿ‌ ನೀವು ಇದ್ದರೆ ವಿದ್ಯಾರ್ಥಿಗಳಿಂದ ಸಮ್ಮಾನವು ಸಿಗಲಿದೆ. ಅಸಹಜ ಬೆಳವಣಿಗೆಗೆ ನೀವು ಕಾರಣರಾಗುವಿರಿ. ಅನಾರೋಗ್ಯವು ಹೆಚ್ಚಾಗಬಹುದು. ವಾಹನಕ್ಕಾಗಿ ನೀವು ಹಣವನ್ನು ವ್ಯಯಿಸುವಿರಿ. ನೂತನ‌ ಉದ್ಯೋಗಕ್ಕೆ ನೀವು ಪ್ರಯತ್ನಶೀಲರಾಗುವಿರಿ. ಅಲ್ಪಾವಧಿಯಲ್ಲಿ ಲಾಭವನ್ನು ಗಳಿಸಲು ಹೋಗಿ ಮುಗ್ಗರಿಸುವಿರಿ. ಸಣ್ಣ ಅಪಮಾನವೂ ನಿನಗರ ದೊಡ್ಡದಾಗಿ ತೋರುವುದು.

ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್