Nithya Bhavishya: ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರ ಇಂದಿನ ಭವಿಷ್ಯ

| Updated By: ಗಂಗಾಧರ​ ಬ. ಸಾಬೋಜಿ

Updated on: Jun 17, 2023 | 12:20 AM

ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಜೂನ್ 17) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Nithya Bhavishya: ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರ ಇಂದಿನ ಭವಿಷ್ಯ
ಪ್ರಾತಿನಿಧಿಕ ಚಿತ್ರ
Follow us on

ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚೆನ್ನಾಗಿರಬೇಕು. ಹಾಗಾದರೆ 2023 ಜೂನ್ 17 ಶನಿವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಅಶುಭ ಇದೆಯಾ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ವೃಷಭ ಮಾಸ, ಮಹಾನಕ್ಷತ್ರ: ಮೃಗಶಿರಾ, ಮಾಸ: ಜ್ಯೇಷ್ಠ, ಪಕ್ಷ: ಕೃಷ್ಣ, ವಾರ: ಶನಿ, ತಿಥಿ: ಚತುರ್ದಶೀ, ನಿತ್ಯನಕ್ಷತ್ರ: ರೋಹಿಣೀ, ಯೋಗ: ಧೃತಿ, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 04 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 01 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 09:19 ರಿಂದ 10:56ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 02:10 ರಿಂದ 03: 47ರ ವರೆಗೆ, ಗುಳಿಕ ಕಾಲ ಬೆಳಗ್ಗೆ 06:05 ರಿಂದ 07:42ರ ವರೆಗೆ.

ಸಿಂಹ: ಮನೆಗೆ ಜಾಗವನ್ನು ಖರೀದಿಸಲು ನೀವು ಇಂದು ಕೂಡಿಟ್ಟ ಹಣವನ್ನು ಖರ್ಚುಮಾಡಬಹುದು. ನಿಮ್ಮ ಮಾತುಗಳು ವರ್ಷದ ವಾದವನ್ನು ಹುಟ್ಟಿಸುವಂತೆ ಮಾಡಬಹುದು. ಇಂದು ನೀವು ಉದ್ಯೋಗವನ್ನು ಹುಡುಕುವ ಪ್ರಯತ್ನ ಮಾಡಿದರೆ ವ್ಯರ್ಥವಾಗಬಹುದು. ನಿಮ್ಮ ನಂಬಿಕೆಗಳು ಗುಸಿಯಾಗಬಹುದು. ‌ಅಪರಿಚಿತರ ಜೊತೆ ಸಲ್ಲದ ಮಾತುಗಳನ್ನು ಆಡುವಿರಿ. ನಿಮ್ಮ ಮನಸ್ಸನ್ನು ಸುಮ್ಮನೆ ಖಾಲಿ ಬಿಡುವುದು ಬೇಡ. ವಿದ್ಯಾರ್ಥಿಗಳು ಅಭ್ಯಾಸವನ್ನು ಅರ್ಧಕ್ಕೇ ನಿಲ್ಲಸಬೇಕಾಗಿಬರಬಹುದು. ಈ ರಾಶ್ಯಧಿಪತಿಯಾದ ಸೂರ್ಯನು ಏಕಾದಶಕ್ಕೆ ಬರಲಿದ್ದಾನೆ.

ಕನ್ಯಾ: ನಿಮ್ಮ ಕೆಲಸವು ನಿಮಗೆ ಆತ್ಮಸಂತೋಷವನ್ನು ತರಬಹುದು. ಪಂಡಿತರಿಗೆ ಸಣ್ಣ ಮಟ್ಟದ ಗೌರವ ಪ್ರಾಪ್ತವಾಗಲಿದೆ. ಪಾಲುದಾರಿಕೆಯನ್ನು ನೀವು ಅನುಮಾನದಿಂದ ಕಾಣುವಿರಿ. ಜನರ ಜೊತೆ ಬರೆಯಲು ನೀವು ಇಂದು ಕಷ್ಟಪಡುವಿರಿ. ಸಂಬಂಧಗಳನ್ನು ನೀವು ಸಡಿಲಗೊಳಿಸಿಕೊಳ್ಳುವಿರಿ. ಕುಟುಂಬದ ಆರೋಗ್ಯವು ನಿಮಗೆ ಬಹಳ ಮುಖ್ಯವಾಗಬಹುದು. ನಿಮಗೆ ತಿಳಿವಳಿಕೆಯ ಕಿವಿ ಮಾತು ಮರೆತುಹೋಗಬಹುದು. ಕಷ್ಟವಾದರೂ ನೀವು ಇಂದು ಕೆಲಸವನ್ನು ಮಾಡುವಿರಿ. ನಿಮ್ಮ ಆಲೋಚನೆಗಳು ಬಾಲಿಶ ಎನಿಸಬಹುದು.

ತುಲಾ: ನೀವು ಬರಹಗಾರರಾಗಿದ್ದರೆ ನಿಮ್ಮ ಸಾಹಿತ್ಯಕ್ಕೆ ಯಶಸ್ಸು ಬರಬಹುದು. ಕೃಷಿ ಉತ್ಪನ್ನ ಮಾರಾಟಗಾರರು ಹೆಚ್ಚಿನ ಲಾಭವನ್ನು ಗಳಿಸಬಹುದು. ನಿಮ್ಮ ಮಾತುಗಳು ಕೆಲವರಿಗೆ ಬೇಸರವನ್ನು ತರಿಸಬಹುದು. ನೋಡಿ ಮಾತನಾಡಿ. ನಿಮ್ಮ ಉತ್ತಮ ಚಿಂತನೆಯು ನಿಮ್ಮ ಉನ್ನತಾಧಿಕಾರಕ್ಕೆ ಪೂರಕವಾಗಬಹುದು. ಸರ್ಕಾರದ ಉದ್ಯೋಗಿಗಳಿಗೆ ಶುಭವಾರ್ತೆಯು ಬರಲಿದೆ. ಅನ್ಯರ ಮಾತುಗಳನ್ನು ನೀವು ಖಂಡಿಸಲಿದ್ದೀರಿ. ಹಣದ ಬಗ್ಗೆ ಅತಿಯಾದ ಮೋಹವನ್ನು ನೀವು ಇಂದು ಹೊಂದುವ ಸಂಭವವಿದೆ.

ವೃಶ್ಚಿಕ: ಸಂಸಾರದಲ್ಲಿ ಹೆಚ್ಚಿನ ಸುಖವನ್ನು ಪಡೆಯಲು ಇಚ್ಛಿಸುವಿರಿ. ಆರ್ಥಿಕತೆಯೂ ಅಭಿವೃದ್ಧಿಯತ್ತ ಹೊರಳಬಹುದು. ಸಹೋದರಿಯರು ನಿಮ್ಮ ಸಂಕಷ್ಟಕ್ಕೆ ಸಹಾಯಮಾಡುವರು. ಸಂಗಾತಿಯಿಂದ ನಿಮಗೆ ಅಪಮಾನವೂ ಆಗಬಹುದು. ನೀವು ಸಮಯಕ್ಕಾಗಿ ಕಾಯುವಿರಿ. ಇಂದು ಕೆಕಸದ ಒತ್ತಡವಿರಲಿದ್ದು ಯಾರ ಜೊತೆಯೂ ಮಾತನಾಡಲು ಹೋಗಬೇಡಿ. ನಿಮ್ಮನ್ನು ತಮಾಷೆ ಮಾಡಬಹುದು. ಸ್ವಾರ್ಥದಿಂದ ನೀವು ಬಹಳ ವಿಷಯವನ್ನು ಕಳೆದುಕೊಳ್ಳುವಿರಿ. ನಿಮ್ಮ ಬಗ್ಗೆ ಅಸಮಾಧಾನವೂ ಕೆಲವರಿಗೆ ಇರಲಿದೆ. ನಿಮ್ಮ ಮುಂಗೋಪಕ್ಕೆ ಹೆದರಿ ನಿಮಗೆ ಸಹಾಯವನ್ನು ಮಾಡಲು ಯಾರೂ ಬರುವುದಿಲ್ಲ. ದಶಮಾಧಿಪಿಯಾದ ಸೂರ್ಯನು ಅಷ್ಟಮಸ್ಥಾನಕ್ಕೆ ಬರಲಿದ್ದಾನೆ.