Daily Horoscope 17 June: ಈ ರಾಶಿಯವರು ಉದ್ಯೋಗವನ್ನು ಬಿಡುವ ಯೋಚನೆಯನ್ನು ಬಿಡುವುದು ಒಳ್ಳೆಯದು
ಇಂದಿನ (2023 ಜೂನ್ 16) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ಶುಭೋದಯ ಓದುಗ ಗೆಳೆಯರೇ! ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ನೋಡುತ್ತಾರೆ. ಇದರ ಜೊತೆಗೆ ನಿತ್ಯಪಂಚಾಂಗ ಕೂಡ ಓದುತ್ತಾರೆ. ಹಾಗಾದರೆ ಇಂದಿನ (2023 ಜೂನ್ 17) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ವೃಷಭ ಮಾಸ, ಮಹಾನಕ್ಷತ್ರ: ಮೃಗಶಿರಾ, ಮಾಸ: ಜ್ಯೇಷ್ಠ, ಪಕ್ಷ: ಕೃಷ್ಣ, ವಾರ: ಶನಿ, ತಿಥಿ: ಚತುರ್ದಶೀ, ನಿತ್ಯನಕ್ಷತ್ರ: ರೋಹಿಣೀ, ಯೋಗ: ಧೃತಿ, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 04 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 01 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 09:19 ರಿಂದ 10:56ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 02:10 ರಿಂದ 03: 47ರ ವರೆಗೆ, ಗುಳಿಕ ಕಾಲ ಬೆಳಗ್ಗೆ 06:05 ರಿಂದ 07:42ರ ವರೆಗೆ.
ಮೇಷ: ಏನೇ ಅಂದರೂ ನಿಮ್ಮ ಮಾತನ್ನು ಕೇಳುವ ಮನಃಸ್ಥಿತಿಯು ಇರುವುದಿಲ್ಲ. ಎಂದಿನಂತೆ ನಿಮ್ಮ ಕೆಲಸದಲ್ಲಿ ನೀವು ಮಗ್ನರಾಗಿರುವಿರಿ. ನಿಮ್ಮದಲ್ಲದ ವಿಚಾರವಾದರೂ ನಿಮ್ಮಲ್ಲಿಗೆ ಅದು ಬರಲಿದೆ. ಸಮಾರಂಭದಲ್ಲಿ ಉತ್ತಮಭೋಜನ ಸಿಗಲಿದೆ. ಮಾನಸಿಕ ಸಂತೋಷವನ್ನು ಹೆಚ್ಚು ಮಾಡಿಕೊಳ್ಳಲು ಏಕಾಂತವನ್ನು ಬಯಸಬಹುದು. ಸ್ನೇಹಿತರನ್ನು ಕಳೆದುಕೊಳ್ಳಲು ನೀವು ಕಷ್ಟಪಡುವಿರಿ. ಶುಭವಾರ್ತೆಯ ನಿರೀಕ್ಷೆಯಲ್ಲಿ ನೀವು ಇರುವಿರಿ. ಪಂಚಮಾಧಿಪತಿಯಾದ ರವಿಯು ತೃತೀಯಸ್ಥಾನವನ್ನು ಪ್ರವೇಶಿಸುವನು.
ವೃಷಭ: ಸೋಲನ್ನು ಒಪ್ಪಿಕೊಳ್ಳಲು ನೀವು ತಯಾರಿರುವುದಿಲ್ಲ. ಸಂಗಾತಿಯನ್ನು ಸಂತೋಷಪಡಿಸಲು ಏನನ್ನಾದರೂ ಮಾಡಲಿದ್ದೀರಿ. ಸ್ನೇಹಿತರ ಸಹವಾಸವು ನಿನಗೆ ಸಾಕೆನಿಸಬಹುದು. ಕೋಪದಲ್ಲಿ ಏನನ್ನಾದರೂ ಹೇಳುವ ಸಾಧ್ಯತೆ ಇದೆ. ಮನೆಯಲ್ಲಿ ಇದ್ದು ಕುಟುಂಬದವರಿಗೆ ಸಹಾಯ ಮಾಡುವ ಮನಸ್ಸಾಗುವುದು. ಕಷ್ಟವಾದರೂ ಇಂದು ಪ್ರಯಾಣವನ್ನು ಮಾಡಲೇ ಬೇಕಾಗಿಬರಲಿದೆ. ಎಲ್ಲರನ್ನೂ ಸಮಾಧಾನ ಮಾಡಲು ನಿಮ್ಮಿಂದ ಆಗದು. ಉದ್ಯೋಗವನ್ನು ಬಿಡುವ ಯೋಚನೆಯನ್ನು ಬಿಡುವುದು ಒಳ್ಳೆಯದು. ಚತುರ್ಥಾಧಿಪತಿಯು ದ್ವಿತೀಯಕ್ಕೆ ಮಾಡುವನು.
ಮಿಥುನ: ನಿಮ್ಮ ಬಳಿ ಕೆಲವರು ಕುಂದುಕೊರತೆಗಳ ಬಗ್ಗೆ ಚರ್ಚೆ ನಡೆಸಲು ಬರಬಹುದು. ಖರ್ಚಿನ ಮೇಲೆ ನೀವು ಹಿಡಿತ ಸಾಧಿಸಲು ಪ್ರಯತ್ನಿಸುವಿರಿ. ಸ್ವಾರಸ್ಯಕರ ಸಂಗತಿಗಳು ನಿಮಗೆ ಸಹಜದಂತೆ ಆಗಬಹುದು. ಶತ್ರುಗಳ ಮುಂದೆ ನಿಮ್ಮ ಉನ್ನತಿಯು ಬಹಳ ಅಸೂಯೆಯನ್ನು ತರಿಸಬಹುದು. ಮಕ್ಕಳ ಮಾತುಗಳು ನಿಮಗೆ ಜೀರ್ಣಿಸಿಕೊಳ್ಳಲು ಕಷ್ಟವಾದೀತು. ಕರ್ತವ್ಯವನ್ನು ಲೋಪವಿಲ್ಲದಂತೆ ಮಾಡಿ. ನಿಮ್ಮದೇ ಸಮಸ್ಯೆಗಳ ನಡುವೆ ಮುಳುಗಿಹೋಗಿದ್ದೀರಿ. ನಿಮಗೆ ಸಹಾಯಹಸ್ತವನ್ನು ನೀಡುವ ಅವಶ್ಯಕತೆ ಇದೆ. ತೃತೀಯಾಧಿಪತಿಯು ನಿಮ್ಮ ಮನೆಗೇ ಬರಲಿದ್ದಾನೆ.
ಕರ್ಕ: ಶಿಕ್ಷಣವನ್ನು ನೀವು ಹೊಸ ರೀತಿಯಲ್ಲಿ ಕೊಡಲು ಪ್ರಾರಂಭಿಸಬಹುದು. ಸಂಗಾತಿಯ ಸಲಹೆಯನ್ನು ನೀವು ಸ್ವೀಕರಿಸುವಿರಿ. ಹೊಸ ಉದ್ಯಮವು ಬಹಳ ಸಂತೋಷದಿಂದ ನಡೆಯಲಿದೆ. ಶತ್ರುಗಳ ವಿಚಾರದಲ್ಲಿ ನಿರ್ಲಕ್ಷ್ಯ ಮಾಡದೇ ತೊಂದರೆಯಾಗದಂತೆ ಸರಿ ಮಾಡಿಕೊಳ್ಳಿ. ಮಕ್ಕಳಿಂದ ಸಂತೋಷವಾರ್ತೆಯನ್ನು ನೀವು ನಿರೀಕ್ಷಿಸಬಹುದು. ನಿಮ್ಮ ವಸ್ತುಗಳನ್ನು ಇನ್ನೊಬ್ಬರಿಗೆ ಕೊಟ್ಟು ಸಂತೋಷಪಡುವಿರಿ. ಕೆಲವು ಸಂದರ್ಭದಲ್ಲಿ ನಿಮ್ಮ ಬುದ್ಧಿಯು ಕೆಲಸಮಾಡದೇ ಇದ್ದೀತು. ಅಂದುಕೊಂಡ ಕಾರ್ಯವು ಸ್ವಲ್ಪ ಪೂರ್ಣವಾಯಿತು ಎಂಬ ಸಂತೃಪ್ತಿ ಇರಲಿದೆ. ದ್ವಿತೀಯಾಧಿಪತಿಯು ದ್ವಾದಶದಲ್ಲಿ ಇರುವನು.
ಸಿಂಹ: ಮನೆಗೆ ಜಾಗವನ್ನು ಖರೀದಿಸಲು ನೀವು ಇಂದು ಕೂಡಿಟ್ಟ ಹಣವನ್ನು ಖರ್ಚುಮಾಡಬಹುದು. ನಿಮ್ಮ ಮಾತುಗಳು ವರ್ಷದ ವಾದವನ್ನು ಹುಟ್ಟಿಸುವಂತೆ ಮಾಡಬಹುದು. ಇಂದು ನೀವು ಉದ್ಯೋಗವನ್ನು ಹುಡುಕುವ ಪ್ರಯತ್ನ ಮಾಡಿದರೆ ವ್ಯರ್ಥವಾಗಬಹುದು. ನಿಮ್ಮ ನಂಬಿಕೆಗಳು ಗುಸಿಯಾಗಬಹುದು. ಅಪರಿಚಿತರ ಜೊತೆ ಸಲ್ಲದ ಮಾತುಗಳನ್ನು ಆಡುವಿರಿ. ನಿಮ್ಮ ಮನಸ್ಸನ್ನು ಸುಮ್ಮನೆ ಖಾಲಿ ಬಿಡುವುದು ಬೇಡ. ವಿದ್ಯಾರ್ಥಿಗಳು ಅಭ್ಯಾಸವನ್ನು ಅರ್ಧಕ್ಕೇ ನಿಲ್ಲಸಬೇಕಾಗಿಬರಬಹುದು. ಈ ರಾಶ್ಯಧಿಪತಿಯಾದ ಸೂರ್ಯನು ಏಕಾದಶಕ್ಕೆ ಬರಲಿದ್ದಾನೆ.
ಕನ್ಯಾ: ನಿಮ್ಮ ಕೆಲಸವು ನಿಮಗೆ ಆತ್ಮಸಂತೋಷವನ್ನು ತರಬಹುದು. ಪಂಡಿತರಿಗೆ ಸಣ್ಣ ಮಟ್ಟದ ಗೌರವ ಪ್ರಾಪ್ತವಾಗಲಿದೆ. ಪಾಲುದಾರಿಕೆಯನ್ನು ನೀವು ಅನುಮಾನದಿಂದ ಕಾಣುವಿರಿ. ಜನರ ಜೊತೆ ಬರೆಯಲು ನೀವು ಇಂದು ಕಷ್ಟಪಡುವಿರಿ. ಸಂಬಂಧಗಳನ್ನು ನೀವು ಸಡಿಲಗೊಳಿಸಿಕೊಳ್ಳುವಿರಿ. ಕುಟುಂಬದ ಆರೋಗ್ಯವು ನಿಮಗೆ ಬಹಳ ಮುಖ್ಯವಾಗಬಹುದು. ನಿಮಗೆ ತಿಳಿವಳಿಕೆಯ ಕಿವಿ ಮಾತು ಮರೆತುಹೋಗಬಹುದು. ಕಷ್ಟವಾದರೂ ನೀವು ಇಂದು ಕೆಲಸವನ್ನು ಮಾಡುವಿರಿ. ನಿಮ್ಮ ಆಲೋಚನೆಗಳು ಬಾಲಿಶ ಎನಿಸಬಹುದು.
ತುಲಾ: ನೀವು ಬರಹಗಾರರಾಗಿದ್ದರೆ ನಿಮ್ಮ ಸಾಹಿತ್ಯಕ್ಕೆ ಯಶಸ್ಸು ಬರಬಹುದು. ಕೃಷಿ ಉತ್ಪನ್ನ ಮಾರಾಟಗಾರರು ಹೆಚ್ಚಿನ ಲಾಭವನ್ನು ಗಳಿಸಬಹುದು. ನಿಮ್ಮ ಮಾತುಗಳು ಕೆಲವರಿಗೆ ಬೇಸರವನ್ನು ತರಿಸಬಹುದು. ನೋಡಿ ಮಾತನಾಡಿ. ನಿಮ್ಮ ಉತ್ತಮ ಚಿಂತನೆಯು ನಿಮ್ಮ ಉನ್ನತಾಧಿಕಾರಕ್ಕೆ ಪೂರಕವಾಗಬಹುದು. ಸರ್ಕಾರದ ಉದ್ಯೋಗಿಗಳಿಗೆ ಶುಭವಾರ್ತೆಯು ಬರಲಿದೆ. ಅನ್ಯರ ಮಾತುಗಳನ್ನು ನೀವು ಖಂಡಿಸಲಿದ್ದೀರಿ. ಹಣದ ಬಗ್ಗೆ ಅತಿಯಾದ ಮೋಹವನ್ನು ನೀವು ಇಂದು ಹೊಂದುವ ಸಂಭವವಿದೆ.
ವೃಶ್ಚಿಕ: ಸಂಸಾರದಲ್ಲಿ ಹೆಚ್ಚಿನ ಸುಖವನ್ನು ಪಡೆಯಲು ಇಚ್ಛಿಸುವಿರಿ. ಆರ್ಥಿಕತೆಯೂ ಅಭಿವೃದ್ಧಿಯತ್ತ ಹೊರಳಬಹುದು. ಸಹೋದರಿಯರು ನಿಮ್ಮ ಸಂಕಷ್ಟಕ್ಕೆ ಸಹಾಯಮಾಡುವರು. ಸಂಗಾತಿಯಿಂದ ನಿಮಗೆ ಅಪಮಾನವೂ ಆಗಬಹುದು. ನೀವು ಸಮಯಕ್ಕಾಗಿ ಕಾಯುವಿರಿ. ಇಂದು ಕೆಕಸದ ಒತ್ತಡವಿರಲಿದ್ದು ಯಾರ ಜೊತೆಯೂ ಮಾತನಾಡಲು ಹೋಗಬೇಡಿ. ನಿಮ್ಮನ್ನು ತಮಾಷೆ ಮಾಡಬಹುದು. ಸ್ವಾರ್ಥದಿಂದ ನೀವು ಬಹಳ ವಿಷಯವನ್ನು ಕಳೆದುಕೊಳ್ಳುವಿರಿ. ನಿಮ್ಮ ಬಗ್ಗೆ ಅಸಮಾಧಾನವೂ ಕೆಲವರಿಗೆ ಇರಲಿದೆ. ನಿಮ್ಮ ಮುಂಗೋಪಕ್ಕೆ ಹೆದರಿ ನಿಮಗೆ ಸಹಾಯವನ್ನು ಮಾಡಲು ಯಾರೂ ಬರುವುದಿಲ್ಲ. ದಶಮಾಧಿಪಿಯಾದ ಸೂರ್ಯನು ಅಷ್ಟಮಸ್ಥಾನಕ್ಕೆ ಬರಲಿದ್ದಾನೆ.
ಧನುಸ್ಸು: ನೀವು ಸ್ನೇಹಿತರ ಜೊತೆ ಹೊಸ ಉದ್ಯಮವನ್ನು ನಡೆಸಲು ಚಿಂತನೆ ನಡೆಸುವಿರಿ. ಅಧ್ಯಾತ್ಮದಲ್ಲಿ ಒಲವು ಇರಲಿದೆ. ಮಕ್ಕಳ ವರ್ತನೆಯನ್ನು ಕಂಡು ಆಶ್ಚರ್ಯಪಡುವಿರಿ. ನಿಮ್ಮ ವ್ಯಾಪಾರವು ಸಂಜೆಯ ಅನಂತರ ಚೆನ್ನಾಗಿ ನಡೆಯಲಿದೆ. ನಿಮ್ಮದು ಪ್ರೇಮವಿವಾಹವಾದರೂ ಸಣ್ಣ ವಿಚಾರಗಳಿಗೂ ಕಲಹವು ಆಗಬಹುದು. ಅನಗತ್ಯ ಸುತ್ತಾಟದಿಂದ ನೀವು ಬೇಸತ್ತುಹೋಗಬಹುದು. ನಿಮ್ಮ ಉತ್ಸಾಹವೂ ಕುಗ್ಗಬಹುದು. ಭೂಮಿಯ ವ್ಯವಹಾರವನ್ನು ಬಹಳ ಜೋಪಾನದಿಂದ ಮಾಡಬೇಕಿದೆ. ಸಂಬಂಧಗಳನ್ನು ನೀವು ಆದಷ್ಟು ದೂರ ಇರಿಸುವಿರಿ. ನವಮಾಧಿಪತಿಯು ಸಪ್ತಮಕ್ಕೆ ಪ್ರವೇಶವನ್ನು ಪಡೆಯುವನು.
ಮಕರ: ತಾಯಿಯ ಕಡೆಯಿಂದ ನಿಮಗೆ ಆರ್ಥಿಕ ಸಹಾಯವು ದೊರೆಯಬಹುದು. ನಿಮ್ಮ ತೀರ್ಮಾನಗಳು ನಿಮಗೆ ಸಂತೃಪ್ತಿಯನ್ನು ಕೊಡಬಹುದು. ಆರೋಗ್ಯವನ್ನು ನಿರ್ಲಕ್ಷಿಸುವುದು ಬೇಡ. ಭವಿಷ್ಯವು ನಿಮ್ಮನ್ನು ಅತಿಯಾಗಿ ಕಾಡಬಹುದು. ಹೊಸ ಸಂಬಂಧವನ್ನು ಬೆಳೆಸಲು ನೀವು ಸಜ್ಜಾಗಿರುವಿರಿ. ನಿಮ್ಮ ನಿರ್ಧಾರವನ್ನು ಬದಲಿಸಿದ್ದಕ್ಕೆ ನಿಮಗೆ ಕೋಪ ಉಂಟಾಗಬಹುದು. ನಿಮ್ಮ ಸಂತೋಷವನ್ನು ಕಿತ್ತುಕೊಳ್ಳಲು ನಿಮ್ಮ ಹಿತಶತ್ರುಗಳು ಪ್ರಯತ್ನಿಸಬಹುದು. ಸ್ತ್ರೀಯ ಸೌಂದರ್ಯಕ್ಕೆ ಮನಸೋಲುವ ಸಾಧ್ಯತೆ ಇದೆ. ನಿಮ್ಮ ಆರೋಪಗಳನ್ನು ನೀವು ತಳ್ಳಿಹಾಕುವಿರಿ. ಅಷ್ಟಮಾಧಿಪತಿಯಾದ ಸೂರ್ಯನು ಷಷ್ಠಕ್ಕೆ ಬರಲಿದ್ದಾನೆ.
ಕುಂಭ: ಮನೆಯವರ ಮಾತುಗಳು ನಿಮಗೆ ಅತ್ಯಂತ ಆಘಾತವನ್ನು ಉಂಟುಮಾಡಬಹುದು. ಹೊಸವಸ್ತುಗಳೇ ಆಗಿದ್ದರೂ ಅವುಗಳಿಂದ ನಷ್ಟವನ್ನು ಪಡೆಯುವಿರಿ. ತಂದೆ ತಾಯಿಗಳ ಆಶೀರ್ವಾದವು ನಿಮ್ಮ ಮೇಲಿರಲಿದೆ. ಹಣದ ಆಮಿಷಕ್ಕೆ ಬಲಿಯಾಗುವ ಸಾಧ್ಯತೆ ಇದೆ. ನಿಮ್ಮ ಪತ್ನಿಯ ಮನಃಸ್ಥಿತಿಯನ್ನು ಅರಿತುಕೊಳ್ಳುವುದು ಕಷ್ಡವಾದೀತು. ನಿಮ್ಮ ಸಲಹೆಗಳನ್ನು ಸ್ವೀಕರಿಸದೇ ಇರುವುದು ನಿಮಗೆ ಬೇಸರವಾದೀತು. ಗಲಭೆಯಲ್ಲಿ ನೀವು ಇಂದು ಭಾಗವಹಿಸುವವರಿದ್ದೀರಿ. ಸಂಗಾತಿಗಳು ಮನಸ್ತಾಪಗಳನ್ನು ಸರಿ ಮಾಡಿಕೊಳ್ಳುವರು.
ಮೀನ: ಇಂದು ನೀವು ಗೃಹನಿರ್ಮಾಣದ ಕಾರ್ಯವನ್ನು ಆರಂಭಿಸುವ ಯೋಚನೆ ಇದ್ದರೆ ಅದನ್ನು ಕೈಬಿಡುವುದು ಒಳ್ಳೆಯದು. ನಿನ್ನ ಕೋರಿಕೆಗಳು ಕೆಲವು ಈಡೇರಬಹುದು. ಉದ್ಯೋಗವು ಅನ್ಯರ ಪಿತೂರಿಯಿಂದ ನಾಶವಾಗಬಹುದು. ಪಿತ್ರಾರ್ಜಿತ ಆಸ್ತಿಯಲ್ಲಿ ಪಡೆಯಲು ನೀವು ಇಂದು ಸಫಲರಾಗುವಿರಿ. ಅಧಿಕಾರಿಗಳನ್ನು ಮೆಚ್ಚಿಸಲು ಹೋಗಿ ನಿಮ್ಮ ಸಮಯವು ವ್ಯರ್ಥವಾಗಬಹುದು. ಕಳೆದು ಹೋದ ವಿಚಾರವು ಮತ್ತೆ ನಿಮ್ಮ ನೆನಪಿನ ಅಂಗಳಕ್ಕೆ ಬರಬಹುದು. ನಿಮ್ಮ ಕೆಲಸಗಳನ್ನು ನೀವೇ ಹೊಗಳುತ್ತ ಆತ್ಮಪ್ರಶಂಸೆ ಮಾಡುಕೊಳ್ಳುವಿರಿ. ಷಷ್ಠದ ಸೂರ್ಯನು ಚತುರ್ಥಕ್ಕೆ ಪ್ರವೇಶದ ಮಾಡಲಿದ್ದಾನೆ.
ಲೋಹಿತಶರ್ಮಾ – 8762924271 (what’s app only)