AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Nithya Bhavishya: ಇಂದಿನ ರಾಶಿಭವಿಷ್ಯ, ಈ ರಾಶಿಯವರ ಶಾಂತ ಮನಸ್ಸಿಗೆ ಸಣ್ಣದೊಂದು ಕಲ್ಲು ಬೀಳಬಹುದು

ನೀವು ಧನು, ಮಕರ, ಕುಂಭ, ಮೀನ ರಾಶಿಯವರೇ? ಹಾಗಿದ್ದರೆ ಇಂದಿನ (2023 ಜೂನ್ 16) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Nithya Bhavishya: ಇಂದಿನ ರಾಶಿಭವಿಷ್ಯ, ಈ ರಾಶಿಯವರ ಶಾಂತ ಮನಸ್ಸಿಗೆ ಸಣ್ಣದೊಂದು ಕಲ್ಲು ಬೀಳಬಹುದು
ಇಂದಿನ ರಾಶಿಭವಿಷ್ಯImage Credit source: freepik
Rakesh Nayak Manchi
|

Updated on: Jun 16, 2023 | 12:45 AM

Share

ಶುಭೋದಯ ಓದುಗರೇ ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಎಂಬುದನ್ನು ತಿಳಿಯುವುದರ ಜೊತೆಗೆ ನಿತ್ಯಪಂಚಾಂಗವೂ ನೋಡುತ್ತಾರೆ. ಹಾಗಾದರೆ ಇಂದಿನ (2023 ಜೂನ್​ 16) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರಮ ಉತ್ತರಾಯಣ, ವಸಂತ ಋತು, ವೃಷಭ ಮಾಸ, ಮಹಾನಕ್ಷತ್ರ: ಮೃಗಶಿರಾ, ಮಾಸ: ಜ್ಯೇಷ್ಠ, ಪಕ್ಷ: ಕೃಷ್ಣ, ವಾರ: ಗುರು, ತಿಥಿ: ದ್ವಾದಶೀ, ನಿತ್ಯನಕ್ಷತ್ರ: ಭರಣೀ, ಯೋಗ: ಅತಿಗಂಡ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 04 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆಗೆ, ರಾಹು ಕಾಲ ಮಧ್ಯಾಹ್ನ 02:10 ರಿಂದ 03:47ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 06:05 ರಿಂದ 07:42ರ ವರೆಗೆ, ಗುಳಿಕ ಕಾಲ ಬೆಳಗ್ಗೆ 09:19 ರಿಂದ 10:56ರ ವರೆಗೆ.

ಧನುಸ್ಸು: ಸಾಹಿತ್ಯ ಕ್ಷೇತ್ರದಲ್ಲಿ ನೀವು ಸಾಧಿಸುವ ಕೆಲಸದ ಬಗ್ಗೆ ಇಂದು ಯೋಚಿಸುವಿರಿ. ಉದ್ಯೋಗದಲ್ಲಿ ನಿಮ್ಮ ಶಿಸ್ತಿನ ಕೆಲಸಕ್ಕೆ ಪ್ರಶಂಸೆ ಸಿಗಲಿದೆ. ರಾಜಕಾರಣಿಗಳು ನಿಮಗೆ ಬೇಕಾದ ಸಹಾಯವನ್ನು ಮಾಡುವರು. ಆರ್ಥಿಕತೆಯನ್ನು ಸರಿದೂಗಿಸಲು ನೀವು ಏನಾದರೂ ಹೊಸ ಯೋಜನೆಯನ್ನು ರೂಪಿಸಬಹುದು. ಯಾರೋ ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಲು ನಿಮಗೆ ಸಾಕಾಗುವುದು. ಅನಾರೋಗ್ಯದಿಂದ ನಿಮಗೆ ನಿಮ್ಮ ಕೆಲಸವನ್ನೂ ಮಾಡಿಕೊಳ್ಳಲು ಕಷ್ಟವಾದೀತು. ಧಾರ್ಮಿಕ ಆಚರಣೆಯು ನಿಮಗೆ ನಿಷ್ಪ್ರಯೋಜಕ ಎನಿಸಬಹುದು. ಹೊಸ ಉದ್ಯೋಗದಲ್ಲಿ ಅನೇಕ ಗೊಂದಲಗಳು ಇರಬಹುದು.

ಮಕರ: ಯಾರದೋ ಆಡಿದ ಮಾತಿನಿಂದ ನೀವು ನಿಮ್ಮವರನ್ನು ಕಳೆದುಕೊಳ್ಳಬಹುದು. ನೀವು ಮಾಡಲು ಹೊರಟ ಕೆಲಸಕ್ಕೆ ಹಿತಶತ್ರುಗಳಿಂದಲೇ ತೊಂದರೆಯಾಗಬಹುದು. ವಿದ್ಯಾಭ್ಯಾಸಕ್ಕೆ ತಕ್ಕುದಾದ ಕೆಲಸವನ್ನು ಅನ್ವೇಷಿಸಲು ಹೆಚ್ಚು ಕಷ್ಟ ಬೀಳುವಿರಿ. ಸರ್ಕಾರಿ ಕೆಲಸಕ್ಕೆ ನಿಮಗೆ ಅವಕಾಶಗಳು ಸಿಗದೇ ಹೋಗಬಹುದು. ಉನ್ನತ ವಿದ್ಯಾಭ್ಯಾಸಕ್ಕೆ ಮನೆಯಿಂದ ದೂರವಿರುವಿರಿ. ಸ್ನೇಹಿತರು ನಿಮ್ಮನ್ನು ಅನ್ಯ ಮಾರ್ಗಕ್ಕೆ ಕೊಂಡಯ್ಯಬಹುದು. ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ಸ್ತ್ರೀಯರು ಆದಷ್ಟು ಜಾಗರೂಕತೆಯಿಂದ ಇರುವುದು ಒಳ್ಳೆಯದು. ನಿಮ್ಮ ಬಲವನ್ನು ನೀವು ಕಂಡುಕೊಳ್ಳಲಿದ್ದೀರಿ. ಸ್ವಲ್ಪ ಧನಲಾಭವೂ ಆಗಲಿದೆ.

ಕುಂಭ: ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ಆಲಸ್ಯತನವನ್ನು ತೋರಿಸುವರು. ನಿಮ್ಮ ಆಲೋಚನೆಗಳು ನಕಾರಾತ್ಮಕವಾಗಿ ಇರಲಿದೆ. ನೀವು ಇಂದು ಕುಲದೇವರ ದರ್ಶನಕ್ಕೆ ತೆರಳಲಿದ್ದೀರಿ. ನಿಮ್ಮ ಆಸಕ್ತಿಯ ಕೆಲಸವನ್ನು ಇಂದು ಮಾಡಲಾಗದೇ ಇದ್ದೀತು. ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ನೀವು ಸಶಕ್ತರಾಗಬಲ್ಲಿರಿ. ನಿಮ್ಮ ಹೆಜ್ಜೆಗಳನ್ನು ದೃಢವಾಗಿ ಮೂಡಿಸಲು ನೀವು ಹೊಸ ಯತ್ನವನ್ನು ಮಾಡುವಿರಿ. ಅಧಿಕಾರದ ದುರುಪಯೋಗವಾಗಬಹುದು. ನಿಮ್ಮನ್ನು ನಂಬಿದವರಿಗೆ ಸಹಾಯವನ್ನು ಮಾಡಲು ಇಚ್ಛಿಸುವಿರಿ. ಪ್ರಶಾಂತ ಮನಸ್ಸಿಗೆ ಸಣ್ಣದೊಂದು ಕಲ್ಲು ಬೀಳಬಹುದು.

ಮೀನ: ನೀವು ಇಂದು ಶುಭಸುದ್ದಿಯ ನಿರೀಕ್ಷೆಯಲ್ಲಿ ಇರುವಿರಿ. ಮಕ್ಕಳ‌ ಬಗ್ಗೆ ಅತಿಯಾದ ಕಾಳಜಿ ಇರಲಿದೆ. ನಿಮ್ಮದಾದ ಕೆಲಸಗಳನ್ನು ಇಂದು ಬಾಕಿ ಉಳಿಸಿಕೊಳ್ಳುವುದು ಬೇಡ. ಉದ್ಯಮಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ನೀವು ಒಬ್ಬರೇ ತೆಗೆದುಕೊಳ್ಳಬೇಡಿ. ಹಳೆಯ ನೋವುಗಳು ಕಾಣಿಸಿಕೊಳ್ಳಬಹುದು. ಸೂಕ್ತ ಚಿಕಿತ್ಸೆ ಅವಶ್ಯಕ. ನೂತನ ವಧೂ-ವರರು ಹೊಸ ಕನಸನ್ನು ಕಟ್ಟಿಕೊಳ್ಳುವರು. ನಿಮ್ಮ ವರ್ತನೆಯಿಂದ ನಿಮ್ಮನ್ನು ನೋಡುವ ವ್ಯಕ್ತಿತ್ವ ಬದಲಾಗಬಹುದು. ತೆರೆಮರೆಯಲ್ಲಿ ಇದ್ದರೆ, ಇಂದು ಹೊರಾಂಗಣಕ್ಕೆ ಬರಬಹುದು. ನೀವಾಡುವ ಸತ್ಯವಾದ ಮಾತಿನಿಂದ ಸಂಕಟವಾಗಬಹುದು.

-ಲೋಹಿತಶರ್ಮಾ ಇಡುವಾಣಿ

5NB,6,4,6,6,4.. ಗ್ರೇಸ್ ಹ್ಯಾರಿಸ್ ಸಿಡಿಲಬ್ಬರದ ಅರ್ಧಶತಕ
5NB,6,4,6,6,4.. ಗ್ರೇಸ್ ಹ್ಯಾರಿಸ್ ಸಿಡಿಲಬ್ಬರದ ಅರ್ಧಶತಕ
ಟಾಕ್ಸಿಕ್ ಟೀಸರ್ ಟೀಕಿಸಿದವರ ಗೂಗಲ್ ಸರ್ಚ್ ಹಿಸ್ಟರಿ ನೋಡಿ: ವಿನಯ್ ಗೌಡ
ಟಾಕ್ಸಿಕ್ ಟೀಸರ್ ಟೀಕಿಸಿದವರ ಗೂಗಲ್ ಸರ್ಚ್ ಹಿಸ್ಟರಿ ನೋಡಿ: ವಿನಯ್ ಗೌಡ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ