ರಾಶಿ ಭವಿಷ್ಯ ಪ್ರತಿಯೊಬ್ಬರ ಜೀವನದಲ್ಲಿ ವಿಭಿನ್ನವಾಗಿರುತ್ತದೆ. ಕೆಲವರು ಬೆಳಗ್ಗೆ ಎದ್ದ ಕೂಡಲೇ ರಾಶಿ ಭವಿಷ್ಯ (Daily horoscope) ತಪ್ಪದೇ ನೋಡುತ್ತಾರೆ. ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯದಿಂದ ತಿಳಿದುಕೊಳ್ಳುತ್ತಾರೆ. ಅದರ ಜೊತೆಗೆ ನಿತ್ಯಪಂಚಾಂಗ ಕೂಡ ಓದುತ್ತಾರೆ. ಹಾಗಾದರೆ ಇಂದಿನ (2023 ಜೂನ್ 26) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ?, ಯಾರಿಗೆ ಲಾಭ?, ಯಾರಿಗೆ ನಷ್ಟ?, ಯಾರಿಗೆ ಶುಭ, ಅಶುಭ? ಇಲ್ಲಿ ನೋಡಿ ನಿಮ್ಮ ಭವಿಷ್ಯ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಮಿಥುನ ಮಾಸ, ಮಹಾನಕ್ಷತ್ರ: ಆರ್ದ್ರಾ, ಮಾಸ: ಆಷಾಢ, ಪಕ್ಷ: ಶುಕ್ಲ, ವಾರ: ಸೋಮ, ತಿಥಿ: ಅಷ್ಟಮೀ, ನಿತ್ಯನಕ್ಷತ್ರ: ಹಸ್ತಾ, ಯೋಗ: ಶುಭ, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 06 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 03 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 07:44 ರಿಂದ 09:21ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 10:58 ರಿಂದ ಮಧ್ಯಾಹ್ನ 12:33ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 02:12 ರಿಂದ 03:49ರ ವರೆಗೆ.
ಸಿಂಹ: ಇಂದು ದಂಪತಿಗಳ ನಡುವೆ ಸಣ್ಣ ಕಾರಣಕ್ಕೆ ಆರಂಭವಾಗಿ ದೊಡ್ಡದಾಗಿ ಬೆಳೆದು ವೈಮನಸ್ಯದಲ್ಲಿ ಮುಕ್ತಾಯವಾಗುವುದು. ನಿಶ್ಚಿತ ಕಾರ್ಯಗಳು ಸರಿಯಾಗಿ ಆಗದೇ ಇರುವುದು ಅಸಮಾಧನಕ್ಕೆ ಮುಖ್ಯಕಾರಣವಾಗಿದೆ. ನೂತನ ಗೃಹನಿರ್ಮಾಣದಲ್ಲಿ ನಿಮಗೆ ಗೊಂದಲವಾಗಬಹುದು. ನಿಮ್ಮ ಅನಾರೋಗ್ಯಕ್ಕೆ ಅನೇಕ ವೈದ್ಯರನ್ನು ಸಂಪರ್ಕಿಸಿ ಸೋಲುವಿರಿ. ಸುಳ್ಳಾಡುವ ಸಂದರ್ಭವು ಬರಬಹುದು. ಅಹಂಕಾರದಿಂದ ಕಛೇರಿಯಲ್ಲಿ ಕಲಹವಾಗಬಹುದು. ಸಹೋದ್ಯೋಗಿಗಳನ್ನು ಎದುರುಹಾಕಿಕೊಳ್ಳುವಿರಿ.
ಕನ್ಯಾ: ಇಂದು ನಿಮ್ಮ ಸೇವೆಗೆ ಗೌರವವು ಸಿಗಬೇಕಾದರೂ ಸಿಗದೇ ಹೋದೀತು. ಪ್ರಭಾವಿ ವ್ಯಕ್ತಿಗಳ ಜೊತೆ ಸೆಣಸುವ ಸನ್ನಿವೇಶಗಳು ಬರಬಹುದು. ನಿಮ್ಮ ಅಂತರಂಗವು ನಕಾರಾತ್ಮಕವಾಗಿ ಏನನ್ನಾದರೂ ಹೇಳುತ್ತಿದ್ದರೆ ಅದನ್ನು ವ್ಯಕ್ತಪಡಿಸಲು ಹೋಗಬೇಡಿ. ಸ್ವಲ್ಪ ಸಮಾಧಾನದಿಂದ ಇರಿ. ಉದ್ಯೋಗದಲ್ಲಿ ಬದಲಾವಣೆ ಆಗಬಹುದು. ಅದು ಬಂದಂತೆ ಸದ್ಯ ಮುಂದುವರಿಯಿರಿ. ಪುರುಷಪ್ರಯತ್ನವು ಈಗ ಬೇಡ. ಅಪ್ರಯೋಜಕವಾಗಲಿದೆ. ಆದಷ್ಟು ಸಮಯ ತಾಳ್ಮೆಯಿಂದ ಇರಬೇಕಾಗಿದೆ.
ತುಲಾ: ಆಕಸ್ಮಿಕವಾಗಿ ಬರುವ ಸುದ್ದಿಯಿಂದ ನಿಮಗೆ ಸಂತೋಷವಾಗಲಿದೆ. ಸರ್ಕಾರಿ ಉದ್ಯೋಗಕ್ಕೆ ಅರ್ಜಿ ಹಾಕಿದ್ದರೆ ನಿಮಗೆ ಸಿಗಬಹುದು. ಮನೆಯ ವಾತಾವರಣ ನಿಮಗೆ ಹಿತಕರವೆನಿಸದೇ ಹೋದೀತು. ವಿದ್ಯಾಭ್ಯಾಸವನ್ನು ಬಹಳ ಆಸಕ್ತಿಯಿಂದ ವಿದ್ಯಾರ್ಥಿಗಳು ಮಾಡುವರು. ಬಂಧುಗಳ ಸಲಹೆಯನ್ನು ನೀವು ಸ್ವೀಕರಿಸಿ ಬಿಡುವಿರಿ. ಉದ್ಯೋಗಕ್ಕೆ ಹೊಸ ವಾಹನವನ್ನು ಖರೀದಿಸುವಿರಿ. ಹಲವು ವರ್ಷಗಳ ಯೋಚನೆ ಸಫಲವಾಗುವುದು. ದಂಪತಿಗಳು ಜೊತೆಯಾಗಿ ಪುಣ್ಯಸ್ಥಳಗಳಿಗೆ ಹೋಗುವಿರಿ. ನಿಮಗೆ ಸಾಧಿಸುವ ಛಲವು ಬರಬಹುದು.
ವೃಶ್ಚಿಕ: ಇಂದು ನೀವು ಕಲಿತ ವಿದ್ಯೆಯು ಉಪಯೋಗಕ್ಕೆ ಬರಲಿದೆ. ನೀವು ಇಂದು ಮನೆಗಾಗಿ ಏನನ್ನಾದರೂ ಕೊಡಲಿದ್ದೀರಿ. ಒಳ್ಳೆಯ ವ್ಯಕ್ತಿಯನ್ನು ನೀವು ದೂರಮಾಡಿಕೊಳ್ಳುವಿರಿ. ನಿಮ್ಮಕೆಲಸಗಳು ಕೆಲವು ನಿಷ್ಪ್ರಯೋಜಕವೂ ಆಗಬಹುದು. ಯಾರದೋ ಮೇಲಿನ ಸಿಟ್ಟನ್ನು ನೀವು ತೀರಿಸಿಕೊಳ್ಳುವ ಭರದಲ್ಲಿ ನಿಮಗೆ ಸರಿ ತಪ್ಪುಗಳ ನಿರ್ಣಯ ಕಷ್ಟವಾದೀತು. ನೀವಿಂದು ಯಾರನ್ನಾದರೂ ಅನುಸರಣ ವ್ಯಕ್ತಿತ್ವವನ್ನು ಆಯ್ಕೆ ಮಾಡಿಕೊಳ್ಳುವಿರಿ. ನಿಮ್ಮದಾದ ಕೆಲಸಗಳು ಹಾಗೆಯೇ ಉಳಿದುಕೊಳ್ಳಬಹುದು. ಸಮಯ ಸ್ಫೂರ್ತಿಯಿಂದ ಕೆಲಸ ಮಾಡಿ.
-ಲೋಹಿತಶರ್ಮಾ ಇಡುವಾಣಿ