Daily Horoscope 26 June: ಇಂದಿನ ರಾಶಿಭವಿಷ್ಯ, ಈ ರಾಶಿಯವರ ಆದಾಯದ ಮೂಲ ಬದಲಾಗಬಹುದು
ಇಂದಿನ (2023 ಜೂನ್ 26) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ಶುಭೋದಯ ಗೆಳೆಯರೇ.. ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಕೆಲವರು ಪ್ರತಿನಿತ್ಯ ಬೆಳಗ್ಗೆ ಎದ್ದ ಕೂಡಲೇ ತಮ್ಮ ರಾಶಿ ಭವಿಷ್ಯ (Daily horoscope) ನೋಡುವ ಹವ್ಯಾಸವನ್ನು ಇಟ್ಟುಕೊಂಡಿರುತ್ತಾರೆ. ಇಂದಿನ ರಾಶಿ ಭವಿಷ್ಯ ಏನು ಹೇಳುತ್ತದೆ ಅಥವಾ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಇದರ ಜೊತೆಗೆ ನಿತ್ಯಪಂಚಾಂಗ ಕೂಡ ಓದುತ್ತಾರೆ. ಹಾಗಾದರೆ ಇಂದಿನ (2023 ಜೂನ್ 26) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಮಿಥುನ ಮಾಸ, ಮಹಾನಕ್ಷತ್ರ: ಆರ್ದ್ರಾ, ಮಾಸ: ಆಷಾಢ, ಪಕ್ಷ: ಶುಕ್ಲ, ವಾರ: ಸೋಮ, ತಿಥಿ: ಅಷ್ಟಮೀ, ನಿತ್ಯನಕ್ಷತ್ರ: ಹಸ್ತಾ, ಯೋಗ: ಶುಭ, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 06 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 03 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 07:44 ರಿಂದ 09:21ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 10:58 ರಿಂದ ಮಧ್ಯಾಹ್ನ 12:33ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 02:12 ರಿಂದ 03:49ರ ವರೆಗೆ.
ಮೇಷ: ಮಕ್ಕಳ ಜೊತೆ ನೀವು ಹೆಚ್ಚಿನ ಸಮಯವನ್ನು ಕಳೆಯುವಿರಿ. ಯಾರ ಮಾತನ್ನೋ ನಂಬಿ ನಿಮ್ಮವರ ಮೇಲೆ ಅನುಪಡುವಿರಿ. ನೀವು ಇಂದು ಶಾಂತಿದೂತರಾಗಿ ಕಲಹವನ್ನು ನಿಲ್ಲಿಸುವಿರಿ. ಹೊರಗಿನ ಆಹಾರವನ್ನು ತಿನ್ನಲು ನೀವು ಇಚ್ಛಿಸುವಿರಿ. ಸಂಗಾಯಿಂದ ನಿಮಗೆ ಉಡುಗೊರೆಯನ್ನು ಪಡೆಯಿರಿ. ತಪ್ಪಿಗೆ ಪಶ್ಚಾತ್ತಾಪವನ್ನು ಪಡೆಯುವ ದಿನ ಇಂದು. ದೇವರಿಗೆ ಶರಣಾಗಿ ನಿಮಗೆ ಆಗಬೇಕಾದ ಕೆಲಸವನ್ನು ನಿವೇದಿಸಿಕೊಳ್ಳುವಿರಿ. ಮನೋರಂಜನೆಯಲ್ಲಿ ಹೆಚ್ಚಿನ ಸಮಯವನ್ನು ಕಳೆಯುವಿರಿ. ನಿಮ್ಮ ಕೇಳಿಕೊಂಡು ಬಂದವರಿಗೆ ಸಹಾಯವನ್ನು ಮಾಡಲು ಒಪ್ಪಿಕೊಳ್ಳುವಿರಿ.
ವೃಷಭ: ಇಂದು ನಿಮ್ಮನ್ನು ಅಪರಿಚಿತರು ವಶ ಮಾಡಿಕೊಳ್ಳಲು ಪ್ರಯತ್ನಿಸುವರು. ಉದ್ಯೋಗದ ಸ್ಥಳವನ್ನು ಸದ್ಯ ಅನ್ವೇಷಿಸುವುದು ಬೇಡ. ಅದು ಸಿಗುವುದು ಕಷ್ಟ. ಯಾರಮೇಲಾದರೂ ಅಪವಾದವನ್ನು ಮಾಡುವ ಮೊದಲು ಆಲೋಚಿಸಿ. ಆಪ್ತರ ಮಾತನ್ನು ಕೇಳದೇ ಬೇಸರಿಸುವ ಸಂದರ್ಭವು ಬರಬಹುದು. ಪರೀಕ್ಷೆಯ ವಿಚಾರದಲ್ಲಿ ನೀವು ಆಲಾಸ್ಯವನ್ನು ತೋರುವುದು ಬೇಡ. ಮಾತುಗಳನ್ನು ಕಡಿಮೆ ಮಾಡಿ. ಕೆಲಸ ಬಗ್ಗೆ ಹೆಚ್ಚಿನ ಗಮನವಿರಲಿದೆ. ಮೇಲಧಿಕಾರಿಗಳ ನಡುವೆ ಚರ್ಚೆ ಮಾಡಲಿದ್ದೀರಿ.
ಮಿಥುನ: ಇಂದು ನೀವು ಎಲ್ಲವನ್ನೂ ಮಾಡಬಲ್ಲವರು ಎಂಬ ಅಭಿಮಾನ ಉಂಟಾಗಲಿದೆ. ಆಪ್ತರೇ ನಿಮಗೆ ನಂಬಿಕೆಗೆ ದ್ರೋಹ ಬಗೆಯಬಹುದು. ಬಹಳ ದಿನಗಳಿಂದ ಉದ್ಯೋಗವು ಸಿಗದೇ ಮಾನಸಿಕವಾಗಿ ಕುಗ್ಗುವಿರಿ. ಮಕ್ಕಳು ಕೇಳಿದ್ದನ್ನು ಕೊಡಿಸಿ ಅವರನ್ನು ಸಂತೋಷಪಡಿಸುವಿರಿ. ವಿದೇಶ ಪ್ರಯಾಣದ ಕನಸನ್ನು ನನಸು ಮಾಡಿಕೊಳ್ಳಲು ಪ್ರಯತ್ನಿಸಿ. ಊಹಿಸದ ವಾರ್ತೆಯೊಂದು ಬಂದು ಸಂತೋಷವಾಗಿ ಇಡುವುದು. ಸ್ನೇಹಿತ ಜೊತೆ ಆಹಾರವನ್ನು ಸೇವಿಸುತ್ತ ಇಂದಿನ ದಿನವನ್ನು ಕೊನೆ ಮಾಡುವಿರಿ. ನಿಮ್ಮ ವಸ್ತುವು ನಿಮಗೆ ಸಿಗಲಿದೆ.
ಕಟಕ: ಹೊಸ ಕೆಲಸವನ್ನೇನಾದರೂ ಆರಂಭಿಸಿದರೆ ಅದನ್ನು ನಿಮ್ಮ ಶತ್ರುಗಳು ನಿಲ್ಲಿಸುವರು. ನಿಮ್ಮ ಗೌಪ್ಯ ವಿಚಾರಗಳು ಕೆಲವರಿಗೆ ತಿಳಿದು ಹಾಸ್ಯ ಮಾಡಬಹುದು. ನೆರೆಯವರನ್ನು ಪ್ರೀತಿಯಿಂದ ಮಾತನಾಡಿಸುವುದು ಅನಿವಾರ್ಯವಾಗಲಿದೆ. ಹೊರಗಿನ ಆಹಾರದಿಂದ ನಿಮಗೆ ತೊಂದರೆಯಾಗಬಹುದು. ಸಂಗಾತಿಯ ಜೊತೆ ವಾದಕ್ಕಿಳಿದು ಸೋಲಬೇಕಾಗುವುದು. ಹೊಂದಾಣಿಕೆಯನ್ನು ನೀವು ಬೆಳೆಸಿಕೊಳ್ಳಬೇಕಾಗಬಹುದು. ಎತ್ತರ ಪ್ರದೇಶದಲ್ಲಿ ಓಡಾಡುವಾಗ ಜಾಗರೂಕರಾಗಿರಿ. ಸ್ನೇಹಿತರು ವಂಚಿಸುವ ಸಾಧ್ಯತೆ ಇದೆ.
ಸಿಂಹ: ಇಂದು ದಂಪತಿಗಳ ನಡುವೆ ಸಣ್ಣ ಕಾರಣಕ್ಕೆ ಆರಂಭವಾಗಿ ದೊಡ್ಡದಾಗಿ ಬೆಳೆದು ವೈಮನಸ್ಯದಲ್ಲಿ ಮುಕ್ತಾಯವಾಗುವುದು. ನಿಶ್ಚಿತ ಕಾರ್ಯಗಳು ಸರಿಯಾಗಿ ಆಗದೇ ಇರುವುದು ಅಸಮಾಧನಕ್ಕೆ ಮುಖ್ಯಕಾರಣವಾಗಿದೆ. ನೂತನ ಗೃಹನಿರ್ಮಾಣದಲ್ಲಿ ನಿಮಗೆ ಗೊಂದಲವಾಗಬಹುದು. ನಿಮ್ಮ ಅನಾರೋಗ್ಯಕ್ಕೆ ಅನೇಕ ವೈದ್ಯರನ್ನು ಸಂಪರ್ಕಿಸಿ ಸೋಲುವಿರಿ. ಸುಳ್ಳಾಡುವ ಸಂದರ್ಭವು ಬರಬಹುದು. ಅಹಂಕಾರದಿಂದ ಕಛೇರಿಯಲ್ಲಿ ಕಲಹವಾಗಬಹುದು. ಸಹೋದ್ಯೋಗಿಗಳನ್ನು ಎದುರುಹಾಕಿಕೊಳ್ಳುವಿರಿ.
ಕನ್ಯಾ: ಇಂದು ನಿಮ್ಮ ಸೇವೆಗೆ ಗೌರವವು ಸಿಗಬೇಕಾದರೂ ಸಿಗದೇ ಹೋದೀತು. ಪ್ರಭಾವಿ ವ್ಯಕ್ತಿಗಳ ಜೊತೆ ಸೆಣಸುವ ಸನ್ನಿವೇಶಗಳು ಬರಬಹುದು. ನಿಮ್ಮ ಅಂತರಂಗವು ನಕಾರಾತ್ಮಕವಾಗಿ ಏನನ್ನಾದರೂ ಹೇಳುತ್ತಿದ್ದರೆ ಅದನ್ನು ವ್ಯಕ್ತಪಡಿಸಲು ಹೋಗಬೇಡಿ. ಸ್ವಲ್ಪ ಸಮಾಧಾನದಿಂದ ಇರಿ. ಉದ್ಯೋಗದಲ್ಲಿ ಬದಲಾವಣೆ ಆಗಬಹುದು. ಅದು ಬಂದಂತೆ ಸದ್ಯ ಮುಂದುವರಿಯಿರಿ. ಪುರುಷಪ್ರಯತ್ನವು ಈಗ ಬೇಡ. ಅಪ್ರಯೋಜಕವಾಗಲಿದೆ. ಆದಷ್ಟು ಸಮಯ ತಾಳ್ಮೆಯಿಂದ ಇರಬೇಕಾಗಿದೆ.
ತುಲಾ: ಆಕಸ್ಮಿಕವಾಗಿ ಬರುವ ಸುದ್ದಿಯಿಂದ ನಿಮಗೆ ಸಂತೋಷವಾಗಲಿದೆ. ಸರ್ಕಾರಿ ಉದ್ಯೋಗಕ್ಕೆ ಅರ್ಜಿ ಹಾಕಿದ್ದರೆ ನಿಮಗರ ಸಿಗಬಹುದು. ಮನೆಯ ವಾತಾವರಣ ನಿಮಗೆ ಹಿತಕರವೆನಿಸದೇ ಹೋದೀತು. ವಿದ್ಯಾಭ್ಯಾಸವನ್ನು ಬಹಳ ಆಸಕ್ತಿಯಿಂದ ವಿದ್ಯಾರ್ಥಿಗಳು ಮಾಡುವರು. ಬಂಧುಗಳ ಸಲಹೆಯನ್ನು ನೀವು ಸ್ವೀಕರಿಸಿ ಬಿಡುವಿರಿ. ಉದ್ಯೋಗಕ್ಕೆ ಹೊಸ ವಾಹನವನ್ನು ಖರೀದಿಸುವಿರಿ. ಹಲವು ವರ್ಷಗಳ ಯೋಚನೆ ಸಫಲವಾಗುವುದು. ದಂಪತಿಗಳು ಜೊತೆಯಾಗಿ ಪುಣ್ಯಸ್ಥಳಗಳಿಗೆ ಹೋಗುವಿರಿ. ನಿಮಗೆ ಸಾಧಿಸುವ ಛಲವು ಬರಬಹುದು.
ವೃಶ್ಚಿಕ: ಇಂದು ನೀವು ಕಲಿತ ವಿದ್ಯೆಯು ಉಪಯೋಗಕ್ಕೆ ಬರಲಿದೆ. ನೀವು ಇಂದು ಮನೆಗಾಗಿ ಏನನ್ನಾದರೂ ಕೊಡಲಿದ್ದೀರಿ. ಒಳ್ಳೆಯ ವ್ಯಕ್ತಿಯನ್ನು ನೀವು ದೂರಮಾಡಿಕೊಳ್ಳುವಿರಿ. ನಿಮ್ಮಕೆಲಸಗಳು ಕೆಲವು ನಿಷ್ಪ್ರಯೋಜಕವೂ ಆಗಬಹುದು. ಯಾರದೋ ಮೇಲಿನ ಸಿಟ್ಟನ್ನು ನೀವು ತೀರಿಸಿಕೊಳ್ಳುವ ಭರದಲ್ಲಿ ನಿಮಗೆ ಸರಿ ತಪ್ಪುಗಳ ನಿರ್ಣಯ ಕಷ್ಟವಾದೀತು. ನೀವಿಂದು ಯಾರನ್ನಾದರೂ ಅನುಸರಣ ವ್ಯಕ್ತಿತ್ವವನ್ನು ಆಯ್ಕೆ ಮಾಡಿಕೊಳ್ಳುವಿರಿ. ನಿಮ್ಮದಾದ ಕೆಲಸಗಳು ಹಾಗೆಯೇ ಉಳಿದುಕೊಳ್ಳಬಹುದು. ಸಮಯ ಸ್ಫೂರ್ತಿಯಿಂದ ಕೆಲಸ ಮಾಡಿ.
ಧನು: ಸಮಯವನ್ನು ನೋಡಿ ನೀವು ಮಾತನಾಡುವುದು ಒಳ್ಳೆಯದು. ಎಲ್ಲ ಸಂದರ್ಭದಲ್ಲಿ ನಿಮಗೆ ಗೌರವವು ಸಿಗುತ್ತದೆ ಎಂದು ನಂಬ ಬೇಡಿ. ನಿಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ಬಹಳ ಶ್ರಮಪಡುವಿರಿ. ಹೊಸ ವಿಚಾರಗಳನ್ನು ಕಲಿಯು ಆಸೆ ನಿಮಗಿರಲಿದೆ. ಆದಾಯದ ಮೂಲವು ಬದಲಾಗಬಹುದು. ದಿನನಿತ್ಯದ ಕೆಲಸದಲ್ಲಿ ವ್ಯತ್ಯಾಸವನ್ನು ಕಾಣುವಿರಿ. ಕಛೇರಿಯಲ್ಲಿ ನಿಮ್ಮ ಬಗ್ಗೆ ಸಲ್ಲದ ಮಾತುಗಳು ಬರಬಹುದು. ಸಮಯದಲ್ಲಿ ಮುಗಿಸುವ ಕೆಲಸವನ್ನೂ ಮುಗಸಿ ಮುಂದಿನ ಆಲೋಚನೆಯನ್ನು ಮಾಡಿ. ನೀವು ಅನುಸರಿಸುವ ಕ್ರಮದಲ್ಲಿ ವ್ಯತ್ಯಾಸ ಇರಬಹುದು.
ಮಕರ: ನಿಮ್ಮ ಇಂದಿನ ಕೆಲಸವು ನಿಮ್ಮ ಸಹೋದ್ಯೋಗಿಗಳಿಂದ ಹಾಳಾಗುವುದು. ಮಕ್ಕಳಿಗೆ ಇಂದು ಸ್ವಲ್ಪ ಹಣವನ್ನು ಖರ್ಚುಮಾಡಬೇಕಾದೀತು. ಓಡಾಟಕ್ಕೆ ವಾಹನದ ಅವಶ್ಯಕತೆ ಬೇಕೆನಿಸಬಹುದು. ನೀವು ಅನೇಕ ದಿನಗಳ ಅನಂತರ ಮಕ್ಕಳನ್ನು ಭೇಟಿಯಾಗಿ ಸಂತೋಷಗೊಳ್ಳುವಿರಿ. ಹೆಚ್ಚು ಮಾತನಾಡಲು ನಿಮಗೆ ಸಮಯದ ಅಭಾವ ಇರುವುದು. ಕೃಷಿಯಲ್ಲಿ ಲಾಭ ಗಳಿಸುವ ಉಪಾಯವನ್ನು ಮಾಡುವಿರಿ. ನಿಮ್ಮ ಹಳೆಯ ಸಂಬಂಧವು ಮತ್ತೆ ಚಿಗುರೊಡೆಯಬಹುದು. ಹಿಂದಿನ ಶ್ರಮವು ಸಾರ್ಥಕವಾದೀತು. ಆಸ್ತಿಯ ಖರೀದಿಯನ್ನು ಮುಂದಕ್ಕೆ ಹಾಕಿ. ಶುಭಸಮಾಚಾರವನ್ನು ಇಂದು ನೀವು ಕೇಳುವಿರಿ.
ಕುಂಭ: ಇಂದು ನೀವು ನಿಮಗೆ ವಹಿಸಿದ ಕೆಲಸವನ್ನು ಬಿಟ್ಟು ಬೇರೆ ಕೆಲಸದಲ್ಲಿ ಮಗ್ನರಾಗುವಿರಿ. ಮೇಲಧಿಕರಿಗಳಿಂದ ನಿಮಗೆ ಸೂಚನೆ ಬರಬಹುದು. ಸ್ವೇಚ್ಛಾಚಾರದ ವರ್ತನೆಯು ನಿಮ್ಮವರಿಗೆ ಇಷ್ಟವಾಗದು. ಅದನ್ನು ಬೇರೆ ರೀತಿಯಲ್ಲಿ ಹೇಳುವರು. ಹಣವನ್ನು ಕೊಟ್ಟು ವಸ್ತುವು ಸಿಗದೇ ಮೋಸ ಹೋಗುವಿರಿ. ಕಛೇರಿಯ ಕೆಲಸದ ಕಾರಣ ನೀವು ಓಡಾಟ ಮಾಡಬೇಕಾದೀತು. ಪ್ರಯೋಜನವಾಗದೇ ಬೇಸರವಾದೀತು. ದೈಹಿಕವಾಗಿ ಶ್ರಮಿಸುವವರಿಗೆ ಲಾಭವಿದೆ. ತಾಯಿಯ ಮಾತನ್ನು ನೀವು ಕೇಳುವಿರಿ. ಮೌಲನದಿಂದ ಇರಲು ಪ್ರಯತ್ನಿಸುವಿರಿ. ಸ್ತ್ರೀಯರಿಂದ ತೊಂದರೆಯಾಗಲಿದೆ.
ಮೀನ: ನಿಮಗೆ ಸ್ವಂತ ಉದ್ಯೋಗದ ಮೇಲೆ ಇರಬೇಕಾದ ಕಾಳಜಿಯು ಅನ್ಯ ಕಾರಣದಿಂದ ಕಡಿಮೆಯಾಗಿ ನಷ್ಟವನ್ನು ಅನುಭವಿಸಬೇಕಾದೀತು. ನೀವು ವೃತ್ತಿಪರರಾಗಿದ್ದರೆ ಕಛೇರಿಯಲ್ಲಿ ನಿಮಗೆ ಇಂದು ಅಶುಭವಾರ್ತೆಯು ಬರಬಹುದು. ಧೈರ್ಯವನ್ನು ತಂದುಕೊಳ್ಳುವುದು ಮುಖ್ಯ. ಕಳೆದುಕೊಂಡ ಸಂಗಾತಿಯ ನೆನಪು ನಿಮಗೆ ಅತಿಯಾಗಿ ಕಾಡಬಹುದು. ಮಾನಸಿಕವಾಗಿ ನೀವು ಕುಗ್ಗುವಿರಿ. ಮನೆಯಲ್ಲಿ ಸರಳ ಸಮಾರಂಭದಲ್ಲಿ ಏರ್ಪಡಿಸಿ ಔತಣಕೂಟವನ್ನು ಮಾಡುವಿರಿ. ಅಪರೂಪದ ಸ್ನೇಹಿತರನ್ನು ಮನೆಗೆ ಕರೆದು ಸಂತೋಷಪಡುವಿರಿ.
-ಲೋಹಿತಶರ್ಮಾ ಇಡುವಾಣಿ (ವಾಟ್ಸ್ಆ್ಯಪ್- 8762924271)