Rashi Bhavishya: ಇಂದಿನ ರಾಶಿಭವಿಷ್ಯ, ಈ ರಾಶಿಯವರಿಗೆ ಹಣದ ವಿಚಾರದಲ್ಲಿ ಕೆಲವು ವ್ಯತ್ಯಾಸಗಳು ಆಗಲಿವೆ

ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಜೂನ್ 4) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Rashi Bhavishya: ಇಂದಿನ ರಾಶಿಭವಿಷ್ಯ, ಈ ರಾಶಿಯವರಿಗೆ ಹಣದ ವಿಚಾರದಲ್ಲಿ ಕೆಲವು ವ್ಯತ್ಯಾಸಗಳು ಆಗಲಿವೆ
ಇಂದಿನ ರಾಶಿಭವಿಷ್ಯ
Follow us
Rakesh Nayak Manchi
|

Updated on: Jun 04, 2023 | 12:30 AM

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಜೂನ್ 4 ಭಾನುವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ವೃಷಭ ಮಾಸ, ಮಹಾನಕ್ಷತ್ರ: ರೋಹಿಣೀ, ಮಾಸ: ಜ್ಯೇಷ್ಠ, ಪಕ್ಷ: ಶುಕ್ಲ, ವಾರ: ಭಾನು, ತಿಥಿ: ಹುಣ್ಣಿಮೆ, ನಿತ್ಯನಕ್ಷತ್ರ: ಜ್ಯೇಷ್ಠಾ, ಯೋಗ: ಧೃತಿ, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 03 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 57 ನಿಮಿಷಕ್ಕೆ, ರಾಹು ಕಾಲ ಸಂಜೆ 05:21 ರಿಂದ 06:58ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:31 ರಿಂದ 02:07ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:44 ರಿಂದ 05:21ರ ವರೆಗೆ.

ಸಿಂಹ: ಅನ್ಯ ಕಾರ್ಯಗಳಿಂದ ನಿಮ್ಮ ಸಮಯವು ವ್ಯರ್ಥವಾಗಿ ನಿಮ್ಮ ಕೆಲಸಕ್ಕೆ ಸಮಯದ ಅಭಾವವಾದೀತು. ಇಂದು ನೀವು ಮಾತು ಕಡಿಮೆ ಮಾಡಿದಷ್ಟೂ ನಿಮಗೆ ಅನುಕೂಲವಿದೆ. ಅವಿವಾಹಿತರು ವಿವಾಹಕ್ಕೆ ಮಾಂಗಲ್ಯ ಭಾಗ್ಯ ಬರಲಿದೆ. ಕ್ರೀಡೆಯಲ್ಲಿ ಉತ್ಸಾಹದಿಂದ ನೀವು ಭಾಗವಹಿಸುವಿರಿ. ಕೆಲಸಗಳು ನೀವಂದುಕೊಂಡ ವೇಗವನ್ನು ಪಡೆದುಕೊಳ್ಳದೇ ಹೋಗಬಹುದು. ವ್ಯಾಪಾರವು ಅಧಿಕ ಲಾಭವನ್ನು ಗಳಿಸಬಹುದು. ಸಮಯಕ್ಕೆ ಅನುಸಾರವಾಗಿ ನೀವು ಕೆಲಸಗಳನ್ನು ಮಾಡಿ. ಆಪದ್ಧನವನ್ನು ಕೂಡಿಡಿ. ವೃತ್ತಿಯನ್ನು ನೀವು ಇಷ್ಟಪಡುವಿರಿ. ಆದರೆ ಅದು ಸಂಕೀರ್ಣತೆಯಿಂದ ಕೂಡಿದ್ದು ಗೊತ್ತಾಗುತ್ತದೆ. ಕುಟುಂಬದವರ ಜೊತೆ ಕಾಲವನ್ನು ಕಳೆಯುವಿರಿ.

ಕನ್ಯಾ: ಸ್ನೇಹಿತರು ಸರಿಯಾಗಿ ಪ್ರತಿಕ್ರಯಿಸಿಲ್ಲ ಎಂಬ ಕಾರಣಕ್ಕಾಗಿ ನೀವು ಬೇಸರಗೊಳ್ಳುವಿರಿ. ನಿಮ್ಮ ಮಾತುಗಳು ಇತರರಿಗೆ ಬಹಳ ಬಾಲಿಶ ಎನಿಸಬಹುದು. ನೀವು ಇಂದು ಬದಲಾಗಲು ಯೋಚಿಸುತ್ತಿದ್ದರೆ ನಿಮ್ಮವರು ಅದನ್ನು ಬಿಟ್ಟುಕೊಡರು. ವಿದ್ಯಾರ್ಥಿಗಳು ಓದಿನ‌ಕಡೆಗೆ ಗಮನ ಕೊಡಲು ಕಷ್ಟವಾದೀತು. ಧ್ಯಾನ ಯೋಗಗಳನ್ನು ಮಾಡುವುದು ಯೋಗ್ಯವಿದೆ. ಎಂದೋ ಮಾಡಲ್ಪಟ್ಟ ಸಹಕಾರಕ್ಕೆ ಇಂದು ಫಲವು ಸಿಗಲಿದೆ. ನೀವು ಇಂದು ಆಗದಿರುವ ಕೆಲಸಗಳಿಗೆ ಬೇಸರಪಡುವುದು ಬೇಡ. ನಿಮ್ಮ ವಿವಾಹವು ದೈವದ ಇಚ್ಛೆಯಂತೆ ಆಗಿದ್ದು ಅದನ್ನು ನಂಬಿ ನಡೆಯಿರಿ.

ತುಲಾ: ಅಪರಿಚಿತರಿಂದ‌ ನೀವು ಬೈಗುಳ ತಿನ್ನಬೇಕಾಗಬಹುದು. ಇನ್ನೊಬ್ಬರಿಗೆ ಬಗ್ಗೆ ಮಾತನಾಡುವಾಗ ಪೂರ್ವಾಪರ ಆಲೋಚನೆ ಇರಲಿ. ಉದ್ಯೋಗದ ಸ್ಥಳದಿಂದ ನಿಮ್ಮನ್ನು ಹೊರ ಹಾಕಿಯಾರು. ನೀವು ಇನ್ನೊಬ್ಬರ ಜೀವನವನ್ನು ಕಂಡು ಅವರಂತೆ ಇರಲು ಬಯಸಬಹುದು. ದಾಂಪತ್ಯದಲ್ಲಿ ಕೆಲವು ಮಾರ್ಪಾಡುಗಳನ್ನು ನೀವು ಮಾಡಿಕೊಳ್ಳಲಿದ್ದೀರಿ. ವ್ಯಾಪಾರವು ಇಂದು ಚೆನ್ನಾಗಿ ಆಗಲಿದೆ. ಆಪ್ತರೊಂದಿಗೆ ಹೊಸ ಉದ್ಯೋಗವನ್ನು ಆರಂಭಿಸುವ ಆಲೋಚನೆ ಮಾಡಿಕೊಳ್ಳುವುದು ಉತ್ತಮ. ಆದರೆ ಪಾಲುದಾರಿಕೆಯನ್ನು ಮಾಡುವಾಗ ಹಲವು ಬಾರಿ ಯೋಚಿಸಿ. ರಮಣೀಯ ಸ್ಥಳಕ್ಕೆ ನೀವು ಹೋಗಲಿದ್ದೀರಿ.

ವೃಶ್ಚಿಕ: ನಿಮ್ಮ ಗುರಿಗಳು ಸ್ಪಷ್ಟವಾಗಿ ಇದ್ದರೂ ಇನ್ನೊಬ್ಬರ ಪ್ರೋತ್ಸಾಹವನ್ನು ನೀವು ಬಯಸುವಿರಿ. ಪ್ರಯಾಣವು‌ ಇಂದು ನಿಮಗೆ ಇಷ್ಟವಾಗದೇ ಹೋಗುವುದು. ಹಣದ ವಿಚಾರದಲ್ಲಿ ಕೆಲವು ವ್ಯತ್ಯಾಸಗಳು ಆಗಲಿದೆ. ನೀವು ಇಂದು ಹೆಚ್ಚು ಕೆಲಸವನ್ನೂ ಕಡಿಮೆ ಮಾತುಗಳನ್ನೂ ಆಡುವುದು ಮುಖ್ಯ. ಪ್ರಮುಖ ಜನರ ಭೇಟಿಯಿಂದ ಉದ್ಯೋಗಕ್ಕೆ ಹೊಸ ಬಲವೂ ಬರಲಿದೆ. ಕುಟುಂಬದ ಹಿರಿಯರು ನಿಮ್ಮ ಜೊತೆ ಸಮಯವನ್ನು ಕಳೆಯಲು ಇಷ್ಟಪಡುವರು. ನಿಮ್ಮ ಗೆಳತಿಯ ಜೊತೆ ಅಸಭ್ಯವಾಗಿ ನಡೆದುಕೊಂಡು ಅವರಿಂದ ದೂರವೂ ಆಗಬಹುದು. ವಾಹನ ಖರೀದಿಗೆ ನಿಮಗೆ ಸಮಯವಿದೆ. ಆತುರ ಬೇಡ.

-ಲೋಹಿತಶರ್ಮಾ ಇಡುವಾಣಿ

ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ